ಮತಗಟ್ಟೆ ಧ್ವಂಸ ಕೇಸ್: 46 ಮಂದಿ ಬಂಧಿತರಿಗೆ ಜಾಮೀನು ಕೊಡಿಸಿದ ಬಿಜೆಪಿ ಮುಖಂಡ

ಮೂಲಸೌಕರ್ಯಕ್ಕಾಗಿ ಆಗ್ರಹಿಸಿ ಮತದಾನ ಬಹಿಷ್ಕಾರ ಮಾಡಿದ್ದ ಇಲ್ಲಿನ ಜನರು ಬಳಿಕ ಮತಗಟ್ಟೆ ಧ್ವಂಸ ಮಾಡಿದ್ದರು. ಘಟನೆಯಿಂದ 46 ಮಂದಿ ನ್ಯಾಯಾಂಗ ಬಂಧನಕ್ಕೊಳಗಾಗಿದ್ದರು. ಇಷ್ಟೆಲ್ಲಾ ಆದರೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಸೌಜನ್ಯಕ್ಕೂ ಇತ್ತ ಭೇಟಿ ನೀಡಿಲ್ಲ, ಶಾಸಕ ಮಂಜುನಾಥ್ ಅವರೂ ಇತ್ತ ತಲೆ ಹಾಕದರಿವುದು ಪಕ್ಷಾತೀತವಾಗಿ ಆಕ್ರೋಶಕ್ಕೆ ಕಾರಣವಾಗಿದೆ.

Written by - Yashaswini V | Last Updated : May 20, 2024, 12:43 PM IST
  • ಇಂಡಿಗನತ್ತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಜನಧ್ವನಿ ಬಿ ವೆಂಕಟೇಶ್
  • ಇಂಡಿಗನತ್ತ ಮತಗಟ್ಟೆ ಧ್ವಂಸ ಪ್ರಕರಣ ಉದ್ದೇಶಪೂರ್ವಕವಾಗಿ ನಡೆದಿಲ್ಲ
  • ಗ್ರಾಮಸ್ಥರು ಅಮಾಯಕರು ಹಾಗೂ ಮುಗ್ಧರಾಗಿದ್ದಾರೆ.
ಮತಗಟ್ಟೆ ಧ್ವಂಸ ಕೇಸ್: 46 ಮಂದಿ ಬಂಧಿತರಿಗೆ ಜಾಮೀನು ಕೊಡಿಸಿದ ಬಿಜೆಪಿ ಮುಖಂಡ title=

ಚಾಮರಾಜನಗರ: ಮೂಲಸೌಕರ್ಯಕ್ಕೆ ಆಗ್ರಹಿಸಿ ಮತಗಟ್ಟೆ ಧ್ವಂಸ ಮಾಡಿದ್ದ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮ ದೇಶದ ಗಮನ ಸೆಳೆದರೂ ಸ್ಥಳೀಯ ಜನಪ್ರತಿನಿಧಿಗಳ ಗಮನ ಸೆಳೆಯದಿರುವುದು ವಿಪರ್ಯಾಸವಾಗಿದೆ.

ಹೌದು..., ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ಕಾಡೊಳಗಿನ ಗ್ರಾಮಗಳಾದ ಇಂಡಿಗನತ್ತ, ಮೆಂದಾರೆ ಗ್ರಾಮಗಳತ್ತ ಶಾಸಕ ಮಂಜುನಾಥ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಘಟನೆ‌ ಪ್ರದೇಶದತ್ತ ಮುಖ ಮಾಡದಿರುವುದು ಇಲ್ಲಿನ ಜನರಿಗೆ ಮೂಲಸೌಕರ್ಯ ದೂರದ ಬೆಟ್ಟದಂತೆ ಗೋಚರಿಸುತ್ತಿದೆ.

ಮೂಲಸೌಕರ್ಯಕ್ಕಾಗಿ ಆಗ್ರಹಿಸಿ ಮತದಾನ ಬಹಿಷ್ಕಾರ ಮಾಡಿದ್ದ ಇಲ್ಲಿನ ಜನರು ಬಳಿಕ ಮತಗಟ್ಟೆ ಧ್ವಂಸ ಮಾಡಿದ್ದರು. ಘಟನೆಯಿಂದ 46 ಮಂದಿ ನ್ಯಾಯಾಂಗ ಬಂಧನಕ್ಕೊಳಗಾಗಿದ್ದರು. ಇಷ್ಟೆಲ್ಲಾ ಆದರೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಸೌಜನ್ಯಕ್ಕೂ ಇತ್ತ ಭೇಟಿ ನೀಡಿಲ್ಲ, ಶಾಸಕ ಮಂಜುನಾಥ್ ಅವರೂ ಇತ್ತ ತಲೆ ಹಾಕದರಿವುದು ಪಕ್ಷಾತೀತವಾಗಿ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ- 5 ಲಕ್ಷ ಲಂಚಕ್ಕೆ ಬೇಡಿಕೆ; ರೆಡ್‌ಹ್ಯಾಂಡ್ ಆಗಿ ʼಲೋಕಾʼ ಬಲೆಗೆ ಬಿದ್ದ PSI & ಪೇದೆ..!

ಬಿಜೆಪಿ ಮುಖಂಡನ ನೆರವು: 
ಮತಗಟ್ಟೆ ಧ್ವಂಸ ಪ್ರಕರಣದಲ್ಲಿ ಬಂಧಿತರಾಗಿದ್ದ 46 ಮಂದಿಯನ್ನು ಜಾಮೀನಿನ ಮೇಲೆ ಹನೂರು ಬಿಜೆಪಿ ಮುಖಂಡ ಜನಧ್ವನಿ ವೆಂಕಟೇಶ್ ಬಿಡುಗಡೆ ಮಾಡಿಸಿ ಕರೆತಂದಿದ್ದಾರೆ. ಕನಿಷ್ಠ ಮೂಲಸೌಕರ್ಯ ಕಲ್ಪಿಸಿಕೊಡಲು ತಾನೂ ಕೂಡ ನಿಮ್ಮೊಂದಿಗೆ ಧ್ವನಿ ಎತ್ತಲಿದ್ದು, ಮಕ್ಕಳ ಶಿಕ್ಷಣದ ವೆಚ್ಚ ವಹಿಸಿಕೊಳ್ಳುವ ಭರವಸೆ ಕೊಟ್ಟಿದ್ದಾರೆ.

ಇಂಡಿಗನತ್ತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಜನಧ್ವನಿ ಬಿ ವೆಂಕಟೇಶ್, ಇಂಡಿಗನತ್ತ ಮತಗಟ್ಟೆ ಧ್ವಂಸ ಪ್ರಕರಣ ಉದ್ದೇಶಪೂರ್ವಕವಾಗಿ ನಡೆದಿಲ್ಲ, ಗ್ರಾಮಸ್ಥರು ಅಮಾಯಕರು ಹಾಗೂ ಮುಗ್ಧರಾಗಿದ್ದಾರೆ. ಪ್ರಕರಣ ಸಂಬಂಧ ಈಗಾಗಲೇ 46 ಜನರ ಮೇಲೆ ಪ್ರಕರಣ ದಾಖಲಾಗಿ ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾರೆ. ಇವರಿಗೆ ನಾನು ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ.  ಕೆಲವು ನಿರಪರಾಧಿಗಳನ್ನು ಸಹ ಈ ಪ್ರಕರಣದಲ್ಲಿ ಸೇರಿಸಲಾಗಿದೆ ಇವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಮೊದಲಿಗನಾಗಿರುತ್ತೇನೆ ಎಂದರು. 

ಇದೇ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ನಿಮ್ಮ ವಿದ್ಯಾರ್ಥಿಗಳ ಶಾಲಾ ಶುಲ್ಕವನ್ನು ನಾನೇ ಭರಿಸುತ್ತೇನೆ. ನಿಮಗೆ ಯಾವುದೇ ಸಂದರ್ಭದಲ್ಲಿ ಯಾವುದೇ ರೀತಿಯ ಸೌಲಭ್ಯಗಳು ಬೇಕಿದ್ದರೂ ನನ್ನನ್ನು ನೇರವಾಗಿ ಸಂಪರ್ಕಿಸಿ ನಿಮ್ಮ ಧ್ವನಿಯಾಗಿರುತ್ತೇನೆ ಎಂದವರು ಭರವಸೆ ನೀಡಿದ್ದಾರೆ. 

ಇದನ್ನೂ ಓದಿ- ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ಬೆಳ್ಳಂಬೆಳಿಗ್ಗೆ ಗುಂಡಿನ ಸದ್ದು: ಬಂಧನದ ವೇಳೆ ಆರೋಪಿ ಕಾಲಿಗೆ ಗುಂಡೇಟು

ಇಂಡಿಗನತ್ತ ಹಾಗೂ ಮೆಂದಾರೆ ಗ್ರಾಮದವರು ಕಾರೆಯ್ಯ ಬಿಲ್ಲಯ್ಯರಂತೆ ಅಣ್ಣ ತಮ್ಮಂದಿರಂತೆ ಇದುವರೆಗೂ ಜೀವನ ಮಾಡಿಕೊಂಡು ಬಂದಿದ್ದೀರಿ,  ಮುಂದಿನ ದಿನಗಳಲ್ಲಿಯೂ ನೀವು ಅದೇ ರೀತಿ ಹೊಂದಾಣಿಕೆಯಿಂದ ಶಾಂತಿ ಸಹ ಬಾಳ್ವೆಯಿಂದ ಜೀವನ ನಡೆಸಬೇಕು. ಅವರು ನೀಡಿರುವ ದೂರನ್ನು ವಾಪಸು ತೆಗೆಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈ ಸಂಬಂಧ ಆದಿವಾಸಿ ಜನಾಂಗದ ಮುಖಂಡರುಗಳು ಹಾಗೂ ಗ್ರಾಮದ ಮುಖಂಡರುಗಳನ್ನು ಮನವಿ ಮಾಡುತ್ತೇನೆ.   ಈ ಸಮಸ್ಯೆಯನ್ನು  ಮರೆತು ಒಂದಾಗಿ ಬಾಳಿ ಎಂದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News