ಹೈಕೋರ್ಟ್‌ ಮೆಟ್ಟಿಲೇರಿದ ʼಐಶ್ವರ್ಯಾ ಪುತ್ರಿ..! ಬಚ್ಚನ್‌ ವಂಶ ಕುಡಿಗೆ ಆಗಿದ್ದೇನು..

Aishwarya Rai Daughter : ಬಾಲಿವುಡ್‌ ನಟ ಅಭಿಷೇಕ್ ಮತ್ತು ಮಾಜಿ ವಿಶ್ವ ಸುಂದರಿ ಐಶ್ವರ್ಯಾ ಮಗಳ ಆರೋಗ್ಯ ವಿಚಾರವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಟ್ರೋಲ್‌ಗಳು ಹರಿದಾಡುತ್ತಿವೆ. ಇದೀಗ ಇದೇ ವಿಚಾರವಾಗಿ ಈ ಸ್ಟಾರ್‌ ದಂಪತಿಗಳು ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.  

Written by - Krishna N K | Last Updated : Apr 20, 2023, 01:48 PM IST
  • ಬಚ್ಚನ್‌ ವಂಶ ಕುಡಿ ಆರೋಗ್ಯದ ಬಗ್ಗೆ ಟ್ರೋಲ್‌.
  • ಹೈಕೋರ್ಟ್‌ ಮೆಟ್ಟಿಲೇರಿದ ಐಶ್ವರ್ಯ, ಅಭಿಷೇಕ್‌ ಬಚ್ಚನ್‌.
  • ಯೂಟ್ಯೂಬ್‌ ಚಾನೆಲ್‌ಗಳ ವಿರುದ್ದ ಕಠಿಣ ನಿರ್ಧಾರ ಕೈಗೊಂಡ ಹೈಕೋರ್ಟ್‌.
ಹೈಕೋರ್ಟ್‌ ಮೆಟ್ಟಿಲೇರಿದ ʼಐಶ್ವರ್ಯಾ ಪುತ್ರಿ..! ಬಚ್ಚನ್‌ ವಂಶ ಕುಡಿಗೆ ಆಗಿದ್ದೇನು.. title=

Aaradhya Bachchan : ಇತ್ತೀಚಿಗೆ ಸೋಷಿಯಲ್‌ ಮೀಡಿಯಾದಲ್ಲಿ ಟ್ರೋಲರ್‌ಗಳ ಹಾವಳಿ ಹೆಚ್ಚಾಗಿದೆ. ಸ್ಪಷ್ಟ ಮಾಹಿತಿ, ವಿಚಾರದ ಅರಿವೇ ಇಲ್ಲದೆ ಟ್ರೋಲ್‌ ಮಾಡುವ ಮೂಲಕ ನಟ, ನಟಿಯರ ಮಾನಹಾನಿಗೆ ಮುಂದಾಗಿದ್ದಾರೆ. ನಾಯಕಿಯರೇ ಹೆಚ್ಚಾಗಿ ಟ್ರೋಲ್ ಆಗುತ್ತಿದ್ದಾರೆ. ಅವರ ಮಾತುಗಳು, ಧರಿಸುವ ಬಟ್ಟೆಯಿಂದ ಹಿಡಿದು ಪ್ರತಿಯೊಂದು ಅಂಶದಲ್ಲೂ ಟ್ರೋಲಿಂಗ್‌ಗೆ ಒಳಗಾಗುತ್ತಿದ್ದಾರೆ. ಕೆಲವೊಮ್ಮೆ ತಮ್ಮನ್ನು ಟ್ರೋಲ್‌ ಮಾಡಿದ್ರೂ ಸಹ ತಲೆಕೆಡಿಸಿಕೊಳ್ಳದ ಸ್ಟಾರ್‌ಗಳು ತಮ್ಮ ಕುಟುಂಬದ ವಿಚಾರಕ್ಕೆ ಬಂದಾಗ ವಾರ್ನಿಂಗ್‌ ನೀಡಿದ ಉದಾರಹಣೆಗಳು ಇವೆ.

ಇದೀಗ ಬಾಲಿವುಡ್‌ ನಟ ಅಭಿಷೇಕ್ ಮತ್ತು ಮಾಜಿ ವಿಶ್ವ ಸುಂದರಿ ಐಶ್ವರ್ಯಾ ಕೂಡ ಅದೇ ಪರಿಸ್ಥಿತಿಯಲ್ಲಿದ್ದಾರೆ. ಇದುವರೆಗೂ ಅಭಿಷೇಕ್ ಬಚ್ಚನ್ ತಮ್ಮ ಮೇಲೆ ಟ್ರೋಲ್ ಮಾಡಿ ನೆಗೆಟಿವ್ ಕಾಮೆಂಟ್ ಮಾಡೋರಿಗೆ ಧೈರ್ಯವಿದ್ದರೆ ಮುಂದೆ ಬನ್ನಿ ಅಂತ ಹೇಳುವ ಮೂಲಕ ಟ್ರೋಲರ್‌ಗಳಿಗೆ ಕೌಂಟರ್ ಕೊಟ್ಟಿದ್ದರು. ಆದರೆ, ಇದೀಗ ಟ್ರೋಲರ್‌ಗಳು ಏಕಾಎಕಿ ಅವರ ಮಗುವಿನ ಆರೋಗ್ಯದ ವಿಚಾರವಾಗಿ ನೆಗಟಿವ್‌ ಕಾಮೆಂಟ್‌ಗಳನ್ನು ಮಾಡಿದ್ದು, ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಅಭಿಷೇಕ್‌ ಕೇಸ್ ದಾಖಲಿಸಿದ್ದಾರೆ.

ಇದನ್ನೂ ಓದಿ: ಬ್ಲಾಕ್ಬಸ್ಟರ್ ʼದಸರಾʼ ಸಿನಿಮಾ ಓಟಿಟಿ ರಿಲೀಸ್‌..! ಎಲ್ಲಿ, ಯಾವಾಗ, ಇಲಿದೆ ನೋಡಿ ಡಿಟೈಲ್ಸ್‌

ಆರಾಧ್ಯ ಬಚ್ಚನ್ ಅವರ ಆರೋಗ್ಯದ ಬಗ್ಗೆ ಯಾವಾಗಲೂ ಕೆಲವು ಸುಳ್ಳು ಸುದ್ದಿಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಈಗಾಗಲೇ ಇಂತಹ ಗಾಸಿಫ್‌ ಎಬ್ಬಿಸಿದವರ ವಿರುದ್ಧ ಅಭಿಷೇಕ್ ಬಚ್ಚನ್ ವಾರ್ನಿಂಗ್ ನೀಡಿರುವುದು ಗೊತ್ತೇ ಇದೆ. ಈಗ ಈ ಪ್ರಕರಣ ವಿಚಾರಣೆಗೆ ಬಂದಿದ್ದು, ಅದಕ್ಕಾಗಿಯೇ ಆರಾಧ್ಯ ದೆಹಲಿ ಹೈಕೋರ್ಟ್ ಮೆಟ್ಟಿಲು ಹತ್ತಿದರಂತೆ. ಇಂತಹ ಸುಳ್ಳು ಸುದ್ದಿ ಬರೆದಿರುವ ಬಗ್ಗೆ ಇಂದು ವಿಚಾರಣೆ ನಡೆಸಿದ್ದು, 11 ವರ್ಷದ ಆರಾಧ್ಯ ಬಚ್ಚನ್ ಅವರ ಆರೋಗ್ಯದ ಕುರಿತು ವೀಡಿಯೊಗಳನ್ನು ಹಂಚಿಕೊಳ್ಳದಂತೆ ಯೂಟ್ಯೂಬ್ ಚಾನೆಲ್‌ಗಳನ್ನು ದೆಹಲಿ ಹೈಕೋರ್ಟ್ ಇಂದು ನಿರ್ಬಂಧಿಸಿದೆ. 

ಒಟ್ಟಾರೆಯಾಗಿ ತಮ್ಮ ಬೆಳೆ ಬೆಯಿಸಿಕೊಳ್ಳಲು ಟ್ರೋಲರ್‌ಗಳು ಸತ್ಯವನ್ನು ಅರಿಯದೇ ಟ್ರೋಲ್‌ ಮಾಡುವುದರಿಂದ ಅನೇಕರು ಹಲವು ರೀತಿಯಲ್ಲಿ ನೊಂದಿದ್ದಾರೆ. ಅದರಲ್ಲೂ ನಾಯಕಿಯರ ವಿಷಯದಲ್ಲಿ ಈ ಟ್ರೋಲಿಂಗ್ ಮತ್ತು ನೆಗೆಟಿವ್ ಕಾಮೆಂಟ್ ಗಳು ಹೆಚ್ಚು ಬರುತ್ತವೆ. ಕೆಲವೇ ಜನರು ಅವುಗಳನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಪ್ರಕರಣಗಳು ಸಹ ದಾಖಲಿಸುತ್ತಾರೆ. ಇನ್ನು ಕೆಲವರು ಟ್ರೋಲ್‌ಗಳನ್ನು ಲಘುವಾಗಿ ತೆಗೆದುಕೊಳ್ಳುತ್ತಾರೆ. ಆದರೆ ಸೆಲೆಬ್ರಿಟಿಗಳ ಮಕ್ಕಳ ವಿಚಾರವಾಗಿ ಸುಳ್ಳು ಸುದ್ದಿಯನ್ನು ಟ್ರೋಲ್ ಮಾಡುವುದು ಸರಿಯಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News