ಲೈಂಗಿಕ ಕಿರುಕುಳ ಆರೋಪ.. ಖ್ಯಾತ ಧಾರಾವಾಹಿ ನಿರ್ಮಾಪಕನ ವಿರುದ್ಧ FIR

FIR against Producer Asit Modi: ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354 ಮತ್ತು 509 ಅಡಿಯಲ್ಲಿ ಖ್ಯಾತ ಧಾರಾವಾಹಿ ನಿರ್ಮಾಪಕನ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.  

Written by - Chetana Devarmani | Last Updated : Jun 20, 2023, 01:29 PM IST
  • ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆ
  • ಖ್ಯಾತ ಧಾರಾವಾಹಿ ನಿರ್ಮಾಪಕನ ವಿರುದ್ಧ FIR
  • ಐಪಿಸಿ ಸೆಕ್ಷನ್ 354 ಮತ್ತು 509 ಅಡಿ ದೂರು ದಾಖಲು
ಲೈಂಗಿಕ ಕಿರುಕುಳ ಆರೋಪ.. ಖ್ಯಾತ ಧಾರಾವಾಹಿ ನಿರ್ಮಾಪಕನ ವಿರುದ್ಧ FIR  title=
Producer Asit Modi

ಖ್ಯಾತ ಧಾರಾವಾಹಿ ನಿರ್ಮಾಪಕನ ವಿರುದ್ಧ ಎಫ್‌ಐಆರ್‌: ಧಾರಾವಾಹಿಯ ನಟಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಮುಂಬೈ ಪೊಲೀಸರುಝಖ್ಯಾತ ಧಾರಾವಹಿಯ ನಿರ್ಮಾಪಕ ಅಸಿತ್ ಮೋದಿ ಮತ್ತು ಆಪರೇಷನ್ ಹೆಡ್ ಸೊಹೈಲ್ ರಮಣಿ ಮತ್ತು ಕಾರ್ಯನಿರ್ವಾಹಕ ನಿರ್ಮಾಪಕ ಜತಿನ್ ಬಜಾಜ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 354 ಮತ್ತು 509 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆದರೆ, ಪೊಲೀಸರು ಇನ್ನೂ ಯಾರನ್ನೂ ಬಂಧಿಸಿಲ್ಲ. 

ಕಳೆದ ತಿಂಗಳು ಖ್ಯಾತ ಹಿಂದಿ ಧಾರಾವಾಹಿ ತಾರಕ್‌ ಮೆಹ್ತಾ ಕಾ ಉಲ್ಟಾ ಚಷ್ಮಾ ನಿರ್ಮಾಪಕ ಅಸಿತ್ ಕುಮಾರ್ ಮೋದಿ ಮತ್ತು ಇತರ ಇಬ್ಬರು ಸಿಬ್ಬಂದಿ ವಿರುದ್ಧ ನಟಿಯೊಬ್ಬರು ದೂರು ದಾಖಲಿಸಿದ್ದರು. ಸಿರೀಯಲ್‌ನ ನಿರ್ಮಾಪಕ ಅಸಿತ್ ಕುಮಾರ್ ಮೋದಿ ಮತ್ತು ಇಬ್ಬರ ವಿರುದ್ಧ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ಅದೇ ಧಾರಾವಾಹಿಯಲ್ಲಿ ಕೆಲಸ ಮಾಡುತ್ತಿದ್ದ ನಟಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. 

ಇದನ್ನೂ ಓದಿ: ನಿರ್ಮಾಪಕ ನೀಡ್ತಿದ್ದ ಚಿತ್ರಹಿಂಸೆ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿದ್ದರಂತೆ ಈ ನಟಿ!!

ತಮ್ಮ ಮೇಲಿನ ಈ ಆರೋಪವನ್ನು ನಿರ್ಮಾಪಕ ಅಸಿತ್ ಮೋದಿ ನಿರಾಕರಿಸಿದ್ದಾರೆ. "ಅವಳು ನನ್ನನ್ನು ಮತ್ತು ಸಿರೀಯಲ್‌ ಎರಡನ್ನೂ ದೂಷಿಸಲು ಪ್ರಯತ್ನಿಸುತ್ತಿರುವುದರಿಂದ ನಾವು ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ನಾವು ಅವರ ಜೊತೆ ಇನ್ನು ಮುಂದೆ ಕೆಲಸ ಮಾಡುವುದಿಲ್ಲ. ಅವರನ್ನು ಸಿರೀಯಲ್‌ನಿಂದ ಕೈ ಬಿಟ್ಟಿದ್ದಕ್ಕೆ ಹೀಗೆ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ" ಎಂದು ಅಸಿತ್ ಮೋದಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸೊಹೈಲ್ ಮತ್ತು ಜತಿನ್ ಕೂಡ ಈ ಆರೋಪಗಳನ್ನು ಅಲ್ಲಗಳೆದಿದ್ದಾರೆ. 

ಚಿತ್ರೀಕರಣದ ಸಮಯದಲ್ಲಿ ನಟಿಯ ಕೆಟ್ಟ ನಡವಳಿಕೆ ಮತ್ತು ಅಶಿಸ್ತಿನಿಂದಾಗಿ ನಾವು ಅವರ ಜೊತೆಗಿನ ಒಪ್ಪಂದವನ್ನು ಕೊನೆಗೊಳಿಸಬೇಕಾಯಿತು. ಈ ಘಟನೆಯ ಸಂದರ್ಭದಲ್ಲಿ ಅಸಿತ್ ಮೋದಿ ಜಿ ಅಮೆರಿಕದಲ್ಲಿದ್ದರು. ಇದೀಗ ಆಧಾರ ರಹಿತ ಆರೋಪ ಮಾಡುವ ಮೂಲಕ ನಮ್ಮ ಹಾಗೂ ಕಾರ್ಯಕ್ರಮದ ಮಾನಹಾನಿ ಮಾಡಲು ಆ ನಟಿ ಯತ್ನಿಸುತ್ತಿದ್ದಾರೆ. ಈ ಆಧಾರರಹಿತ ಆರೋಪಗಳ ವಿರುದ್ಧ ನಾವು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದೇವೆ ಎಂದು ಉಳಿದ ಇಬ್ಬರು ತಮ್ಮ ಹೇಳಿದ್ದರು.

ಇದನ್ನೂ ಓದಿ: ಕಪಿಲ್ ಶರ್ಮಾ, ಜಾನಿ ಲಿವರ್ ಅಲ್ಲ.. ಭಾರತದ ಶ್ರೀಮಂತ ಕಾಮಿಡಿಯನ್‌ ದಕ್ಷಿಣ ಭಾರತದ ಈ ಹಾಸ್ಯ ನಟ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News