Jyothi Rai : ಪ್ರಿಯಕರನಿಗಾಗಿ ಹೆಸರು ಬದಲಿಸಿಕೊಂಡ ಕಿರುತೆರೆ ನಟಿ..ಗುಟ್ಟಾಗಿ 2ನೇ ಮದುವೆಯಾದ್ರಾ ಜ್ಯೋತಿ ರೈ..?

Jyothi Rai Changed her name : ಕೆಲವು ದಿನಗಳಿಂದ ವೈಯಕ್ತಿಕ ವಿಚಾರವಾಗಿ ಕಿರುತೆರೆ ನಟಿ ಜ್ಯೋತಿ ರೈ ಬಹಳ ಸುದ್ದಿಯಲ್ಲಿದ್ದಾರೆ. ಈಗಾಗಲೇ ಮದುವೆಯಾಗಿ ಒಂದು ಮಗು ಇರುವ ನಟಿ ಸದ್ಯ ತೆಲುಗಿನ ಯುವ ನಿರ್ದೇಶಕ ಸುಕು ಪುರ್ವಜ್ ಅವರ ಜೊತೆ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಇದೀಗ ನಟಿ ಜ್ಯೋತಿ ಪೂರ್ವಜ್ ಹೆಸರಿನಲ್ಲಿ ಟ್ವಿಟ್ಟರ್ ಅಕೌಂಟ್ ಓಪನ್ ಮಾಡಿದ್ದು, ಇಬ್ಬರು ಗುಟ್ಟಾಗಿ ಮದುವೆ ಆಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

Written by - Savita M B | Last Updated : Jul 30, 2023, 01:35 PM IST
  • ಜ್ಯೋತಿ ರೈ 'ಬಂದೇ ಬರುತಾವ ಕಾಲ' ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು
  • ಜೋಗುಳ ಹಾಗೂ ಕಿನ್ನರಿ ಸಿರೀಯಲ್‌ಗಳು ನಟಿಗೆ ಹೆಚ್ಚು ಜನಪ್ರಿಯತೆಯನ್ನು ತಂದುಕೊಟ್ಟವು.
  • ಸದ್ಯ ಜ್ಯೋತಿ ಅವರು ಟ್ವಿಟ್ಟರ್‌ನಲ್ಲಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.
Jyothi Rai : ಪ್ರಿಯಕರನಿಗಾಗಿ ಹೆಸರು ಬದಲಿಸಿಕೊಂಡ ಕಿರುತೆರೆ ನಟಿ..ಗುಟ್ಟಾಗಿ 2ನೇ ಮದುವೆಯಾದ್ರಾ ಜ್ಯೋತಿ ರೈ..?  title=

Jyothi Rai : ನಟಿಯಾಗಲು ಬೆಂಗಳೂರಿಗೆ ಬಂದ ಜ್ಯೋತಿ ರೈ  'ಬಂದೇ ಬರುತಾವ ಕಾಲ' ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಬಳಿಕ ಜೋಗುಳ, ಕಿನ್ನರಿ, ಗೆಜ್ಜೆ ಪೂಜೆ, ಮೂರುಗಂಟು, ಲವಲವಿಕೆ, ಅನುರಾಗ ಸಂಗಮ, ಕನ್ಯಾದಾನ, ಪ್ರೇರಣ, ಕಸ್ತೂರಿ ನಿವಾಸ ಹೀಗೆ ಸಾಲು ಸಾಲು ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು. ಇದರಲ್ಲಿ ಜೋಗುಳ ಹಾಗೂ ಕಿನ್ನರಿ ಸಿರೀಯಲ್‌ಗಳು ನಟಿಗೆ ಹೆಚ್ಚು ಜನಪ್ರಿಯತೆಯನ್ನು ತಂದುಕೊಟ್ಟವು.

ಬಹಳ ಹಿಂದೆಯೇ ಜ್ಯೋತಿ ರೈ ಪದ್ಮನಾಭ್ ಎಂಬುವವರನ್ನು ಮದುವೆ ಆಗಿದ್ದರು. ಆದರೆ ಇದೀಗ ನಿರ್ದೇಶಕ ಸುಕು ಪೂರ್ವಜ್ ಜೊತೆ ಸುಕು ಪುರ್ವಜ್ ಜೊತೆ ಸಹಜೀವನ ನಡೆಸುತ್ತಿದ್ದಾರೆ ಊಹಾಪೋಹ ಕೇಳಿಬರುತ್ತಿದೆ. ಸದ್ಯ ಜ್ಯೋತಿ ಅವರು ಟ್ವಿಟ್ಟರ್‌ನಲ್ಲಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಇದರಿಂದ ಜ್ಯೋತಿ ರೈ ಮೊದಲ ಪತಿಯಿಂದ ವಿಚ್ಚೇಧನ ಪಡೆದಿದ್ದಾರೆ ಎನ್ನುವ ವದಂತಿ ಸೋಷಿಯಲ್‌ ಮಿಡಿಯಾದ ತುಂಬೆಲ್ಲಾ ಹರಿದಾಡುತ್ತಿದೆ.

ಇದನ್ನೂ ಓದಿ-Darshan : ಫ್ರೆಂಡ್ಸ್ ಜೊತೆ ದಾಸನ ಜಾಲಿ ಟ್ರಿಪ್..ಬ್ರಿಟನ್‌ನಲ್ಲಿ ದರ್ಶನ್‌ ಮೋಜು ಮಸ್ತಿ..ಪೋಟೋಸ್‌ ವೈರಲ್‌

ಕೆಲವು ದಿನಗಳ ಹಿಂದೆ ನಟಿ ಜ್ಯೋತಿ ರೈ ಸೋಷಿಯಲ್ ಮೀಡಿಯಾದಲ್ಲಿ ಸುಕು ಪುರ್ವಜ್ ಜೊತೆಗಿನ ಫೋಟೊಗಳನ್ನು ಶೇರ್‌ ಮಾಡಿಕೊಂಡಿದ್ದರು. ಆ ಪೋಟೋಗಳಿಗೆ ಜ್ಯೋತಿಪೂರ್ವಜ್ ಎನ್ನುವ ಹ್ಯಾಷ್‌ಟ್ಯಾಗ್ ಬಳಸಿದ್ದರು. ಇದೀಗ ಜ್ಯೋತಿ ಪೂರ್ವಜ್ ಹೆಸರಿನಲ್ಲಿ ಟ್ವಿಟ್ಟರ್ ಅಕೌಂಟ್ ಓಪನ್ ಮಾಡಿ, ಇನ್ನು ಮುಂದೆ ನನ್ನನ್ನು ನೀವು ಟ್ವಿಟ್ಟರ್‌ನಲ್ಲೂ ಫಾಲೋ ಮಾಡಬಹುದು ಎಂದು ಬರೆದುಕೊಂಡಿದ್ದಾರೆ.

ಇನ್ನು ನಟಿ ಜ್ಯೋತಿ ರೈ  ಟ್ವಿಟ್ಟರ್ ಅಕೌಂಟ್ ನಲ್ಲಿ ತಮ್ಮ ಹೆಸರಿನ ಜೊತೆ ಪ್ರಿಯಕರನ ಹೆಸರನ್ನು ಬರೆದುಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ. ಇವರಿಬ್ಬರು ಗುಟ್ಟಾಗಿ ಮದುವೆಯಾಗಿದ್ದಾರಾ..? ಅಥವಾ ಮದುವೆಯಾಗಲಿದ್ದಾರಾ..? ಎನ್ನುವ ಪ್ರಶ್ನೆಗಳು ಮೂಡುತ್ತಿವೆ. ಒಟ್ಟಿನಲ್ಲಿ ಜ್ಯೋತಿ ರೈ ತಮ್ಮಿಬ್ಬರ ರಿಲೇಷನ್‌ಶಿಪ್‌ ಸಂಗತಿಯನ್ನು ಪರೋಕ್ಷವಾಗಿ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. 

ಇದನ್ನೂ ಓದಿ-ನಟಿ ರೇಖಾ ಜೀವನದ ಕಣ್ಣೀರ ಕಥೆ.. ಚಪ್ಪಲಿಯಿಂದ ಹೊಡೆಯಲು ಬಂದ ಅತ್ತೆ, ಪತಿ ಆತ್ಮಹತ್ಯೆ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News