‘ಅಪ್ಪು’ ನೆನೆದು ಚಿಯಾನ್ ವಿಕ್ರಮ್ ಭಾವುಕ: ಸ್ನೇಹಿತನ ನೆನಪಿನಲ್ಲಿ ಕಾಲಿವುಡ್ ಸ್ಟಾರ್

ಡಾ.ರಾಜ್‌ ಕುಮಾರ್ ಕುಟುಂಬದ ಜೊತೆಗಿನ ಒಡನಾಟ ನೆನೆಪಿಸಿಕೊಂಡ ಸ್ಟಾರ್ ನಟ ಚಿಯಾನ್ ವಿಕ್ರಮ್, ‘ಅಪ್ಪು’ ನೆನೆದು ಭಾವುಕರಾದರು.

Written by - Malathesha M | Edited by - Puttaraj K Alur | Last Updated : Aug 28, 2022, 12:33 PM IST
  • ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನೆನೆದು ಭಾವುಕರಾದ ಕಾಲಿವುಡ್ ಸ್ಟಾರ್
  • ‘ಅಪ್ಪು’ ಜೊತೆಗಿನ ಒಡನಾಟ ಹಂಚಿಕೊಂಡ ತಮಿಳು ನಟ ಚಿಯಾನ್ ವಿಕ್ರಮ್
  • 'ಕೋಬ್ರಾ' ಸಿನಿಮಾ ಪ್ರಚಾರದ ವೇಳೆ ಅಗಲಿದ ಕರ್ನಾಟಕ ರತ್ನಕ್ಕೆ ವಿಕ್ರಮ್ ಗೌರವ
‘ಅಪ್ಪು’ ನೆನೆದು ಚಿಯಾನ್ ವಿಕ್ರಮ್ ಭಾವುಕ: ಸ್ನೇಹಿತನ ನೆನಪಿನಲ್ಲಿ ಕಾಲಿವುಡ್ ಸ್ಟಾರ್ title=
‘ಅಪ್ಪು’ ನೆನೆದು ಭಾವುಕರಾದ ಚಿಯಾನ್ ವಿಕ್ರಮ್

ಬೆಂಗಳೂರು: ಪವರ್‌ ಸ್ಟಾರ್‌ ಹೆಸರಲ್ಲೇ ಪವರ್‌ ಇದೆ… ಇನ್ನು ಪವರ್‌ ಸ್ಟಾರ್‌ ಪ್ರೀತಿಯಲ್ಲಿ ಎಲ್ಲವನ್ನೂ ಮರೆಸೋ ಶಕ್ತಿಯಿದೆ. ಹೀಗೆ ಭಾರತೀಯ ಚಿತ್ರರಂಗದಲ್ಲಿ ಪ್ರೀತಿ-ವಿಶ್ವಾಸದ ಮೂಲಕವೇ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಸಾವಿರಾರು ಸ್ನೇಹ ಜೀವಿಗಳನ್ನು ಸಂಪಾದಿಸಿದ್ದಾರೆ. ಆದರೆ ಇಂದು ‘ಅಪ್ಪು’ ನಮ್ಮ ಜೊತೆಗಿಲ್ಲ, ಆದರೂ ಅವರ ನೆನಪುಗಳ ಜೊತೆಗೆ ಬದುಕುತ್ತಿದೆ ಭಾರತೀಯ ಸಿನಿಮಾ ರಂಗ. ಹೀಗೆ ಕಾಲಿವುಡ್‌ ಸ್ಟಾರ್‌ & ತಮಿಳು ನಟ ವಿಕ್ರಮ್ ಕೂಡ ‘ಅಪ್ಪು’ ನೆನೆದು ಭಾವುಕರಾಗಿದ್ದಾರೆ.

ಚಿಯಾನ್ ವಿಕ್ರಮ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ ‘ಕೋಬ್ರಾ’ ರಿಲೀಸ್‌ಗೆ ಸಜ್ಜಾಗಿದೆ. ಕನ್ನಡತಿ ಶ್ರೀನಿಧಿ ಶೆಟ್ಟಿ ‘ಕೆಜಿಎಫ್‌' ಬಳಿಕ 'ಕೋಬ್ರಾ' ಚಿತ್ರಕ್ಕಾಗಿ ಬಣ್ಣ ಹಚ್ಚಿರುವುದು ಸಿಕ್ಕಾಪಟ್ಟೆ ಹೈಪ್‌ ಕ್ರಿಯೇಟ್‌ ಮಾಡಿದೆ. ಇದೇ ಕಾರಣಕ್ಕೆ ಸಿನಿಮಾ ತಂಡ ಭರ್ಜರಿ ಪ್ರಚಾರ ನಡೆಸುತ್ತಿದೆ. ಇನ್ನು 'ಕೋಬ್ರಾ' ಪ್ರಮೋಷನ್‌ ಪ್ರಯುಕ್ತ ರಾಜ್ಯ ರಾಜಧಾನಿ ಬೆಂಗಳೂರಿಗೆ ಬಂದಿದ್ರು ನಟ ಚಿಯಾನ್ ವಿಕ್ರಮ್. ಈ ವೇಳೆ ಕರ್ನಾಟಕ ರತ್ನ ‘ಅಪ್ಪು’‌ ಅವರನ್ನು ನೆನಪು ಮಾಡಿಕೊಂಡು ನಟ ವಿಕ್ರಮ್ ಭಾವುಕರಾಗಿದ್ದಾರೆ.

ಇದನ್ನೂ ಓದಿ: ಅಮ್ಮನ ಹುಟ್ಟುಹಬ್ಬಕ್ಕೆ ಮಗನ ಸಿನಿಮಾದ ಸ್ಪೆಷಲ್ ಪೋಸ್ಟರ್‌ ರಿಲೀಸ್..!‌‌

‘ಅಪ್ಪು’ ಅನುಬಂಧ

ತಮಿಳು ಚಿತ್ರರಂಗದ ತಾರೆ ಚಿಯಾನ್ ವಿಕ್ರಮ್ ಎಲ್ಲರ ಜೊತೆಗೆ ಬೆರೆಯುತ್ತಾರೆ. ಇದೇ ಕಾರಣಕ್ಕೆ ಅವರಿಗೆ ಇಂಡಿಯನ್‌ ಸಿನಿಮಾ ಇಂಡಸ್ಟ್ರಿಯಲ್ಲಿ ಉತ್ತಮ ಸ್ನೇಹವಿದೆ. ಹಾಗೇ ಕರ್ನಾಟಕ ರತ್ನ ಡಾ.ಪುನೀತ್‌ ರಾಜ್‌ಕುಮಾರ್‌ ಜೊತೆಗೂ ವಿಕ್ರಮ್‍ಗೆ ಆತ್ಮೀಯ ಸಂಬಂಧವಿತ್ತು. ಅದ್ರಲ್ಲೂ ವಿಕ್ರಮ್ ಅವರ 'ಐ' ಚಿತ್ರಕ್ಕಾಗಿ ‘ಅಪ್ಪು’ ಸಖತ್‌ ಸಪೋರ್ಟ್‌ ಮಾಡಿದ್ದರು. 2015ರಲ್ಲೇ ಹಾಲಿವುಡ್‌ ಲೆಜೆಂಡ್‌ ಅರ್ನಾಲ್ಡ್ ಅವರನ್ನು ಕರೆಸಿ 'ಐ' ಚಿತ್ರದ ಆಡಿಯೋ ಲಾಂಚ್‌ ಮಾಡಲಾಗಿತ್ತು. ಇದೇ ಕಾರ್ಯಕ್ರಮದಲ್ಲಿ ನಮ್ಮ ‘ಅಪ್ಪು’ 'ಐ' ಸಿನಿಮಾ ವೇದಿಕೆಯಲ್ಲಿ ಮಿಂಚು ಹರಿಸಿದ್ದರು. ಹೀಗೆ ಇವರಿಬ್ಬರ ಸ್ನೇಹ ಹಲವು ದಶಕಗಳಿಂದ ಗಟ್ಟಿಯಾಗಿತ್ತು. ಆದರೆ ದುರಾದೃಷ್ಟ ಎಂಬಂತೆ ಪುನೀತ್ ನಮ್ಮನ್ನು ಬಿಟ್ಟು ಅಗಲಿದ್ದಾರೆ. ಆದರೆ ಅವರ ಸ್ನೇಹ ನೆನೆದು ಚಿತ್ರರಂಗದ ಸ್ಟಾರ್‌ಗಳು ಕಂಬನಿ ಮಿಡಿಯುತ್ತಿದ್ದಾರೆ.

ಮರೆಯದ ಬಂಧ

'ಕೋಬ್ರಾ' ರಿಲೀಸ್‌ ಕುರಿತು ಮಾತನಾಡುವಾಗ ‘ಅಪ್ಪು’ ಅವರ ವಿಚಾರ ಬಂತು. ಈ ವೇಳೆ ಡಾ.ರಾಜ್‌ ಕುಮಾರ್ ಕುಟುಂಬದ ಜೊತೆಗಿನ ಒಡನಾಟವನ್ನು ನೆನೆಪಿಸಿಕೊಂಡ ಚಿಯಾನ್ ವಿಕ್ರಮ್, ‘ಅಪ್ಪು’ ನೆನೆದು ಭಾವುಕರಾದರು. ತಮ್ಮ ಸಿನಿಮಾಗಳಿಗೆ ಈ ಹಿಂದೆ ‘ಅಪ್ಪು’ ಕೊಟ್ಟಿದ್ದ ಬೆಂಬಲವನ್ನೂ ವಿಕ್ರಮ್ ನೆನಪಿಸಿದರು. ‘ಪುನೀತ್ ಅವರನ್ನು ಕಳೆದುಕೊಂಡಿದ್ದರಿಂದ ಇಂಡಸ್ಟ್ರಿಗೆ ಬಹಳ ನಷ್ಟವಾಗಿದೆ’ ಎಂದು ಇದೇ ವೇಳೆ ವಿಕ್ರಮ್ ತಿಳಿಸಿದರು. ಅವರ ಈ ಮಾತುಗಳು ಕಾರ್ಯಕ್ರಮದಲ್ಲಿ ನೆರೆದಿದ್ದ ಅಭಿಮಾನಿಗಳನ್ನು ಭಾವುಕರನ್ನಾಗಿಸಿತು.

ಇದನ್ನೂ ಓದಿ: IMDBಯಲ್ಲಿ 'ಲೈಗರ್‌'ಗೆ 10ಕ್ಕೆ 1.6 ರೇಂಟಿಗ್: ಕೆಜಿಎಫ್-2‌ & ‌RRRಗೆ ಎಷ್ಟಿತ್ತು ಗೊತ್ತಾ..?

ಒಟ್ನಲ್ಲಿ ‘ಅಪ್ಪು’ ಅವರ ನೆನಪು ಕೋಟಿ ಕೋಟಿ ಜನರನ್ನು ಕಾಡುತ್ತಿದೆ. ಕನ್ನಡ ನೆಲದ ಮಕ್ಕಳು ಮಾತ್ರವಲ್ಲ, ಇಡೀ ಭಾರತವೇ ‘ಅಪ್ಪು’ ಅವರನ್ನು ದೇವರಂತೆ ಕಾಣುತ್ತಿದೆ. ಆದರೆ ಅವರ ಗೈರು ಸಿನಿಮಾ ರಂಗಕ್ಕೆ ತುಂಬಲಾಗದ ನಷ್ಟದಂತೆ. ಇದೀಗ ವಿಕ್ರಮ್ ಕೂಡ ‘ಅಪ್ಪು’ ಅವರನ್ನು ನೆನೆದು ಭಾವುಕರಾಗಿದ್ದಾರೆ. ಜೊತೆಗೆ ಪುನೀತ್ ಬದುಕಿದ್ದಾಗ ರಾಜ್ಯದ ಗಡಿ ಲೆಕ್ಕಿಸದೆ‌, ಸಿನಿಮಾ ಮಂದಿಗೆ ಎಷ್ಟೆಲ್ಲಾ ಬೆಂಬಲ ನೀಡುತ್ತಿದ್ದರು ಎಂಬ ಸತ್ಯವನ್ನೂ ಜಗತ್ತಿಗೆ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News