Parineeti Chopra : ಈ ನಟಿಗೆ ಮಕ್ಕಳು ಬೇಕಂತೆ.. ಹುಡುಗನನ್ನು ಹುಡುಕಿ ಕೊಡಬೇಕಂತೆ

Parineeti Chopra : 2023 ರ ಆರಂಭದಲ್ಲಿಯೇ ಅನೇಕ ತಾರೆಯರು ಹಸೆಮಣೆ ಏರಿದ್ದಾರೆ. ಇನ್ನೂ ಅನೇಕ ಜನರು ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ಇದರ ಬಿಟೌನ್‌ನ ಮೋಸ್ಟ್ ಎಲಿಜಿಬಲ್‌ ಬ್ಯಾಚುಲರ್‌ಗಳ ಮದುವೆ ಯಾವಾಗ ಎಂದು ಅಭಿಮಾನಿಗಳು ಕಾದುಕುಳಿತಿದ್ದಾರೆ. 

Written by - Chetana Devarmani | Last Updated : Feb 28, 2023, 09:45 AM IST
  • ಈ ನಟಿಗೆ ಮಕ್ಕಳು ಬೇಕಂತೆ
  • ಹುಡುಗನನ್ನು ಹುಡುಕಿ ಕೊಡಬೇಕಂತೆ
  • ಸಂಗಾತಿಯನ್ನು ಹುಡುಕಿ ಎಂದ ಪರಿಣಿತಿ
Parineeti Chopra : ಈ ನಟಿಗೆ ಮಕ್ಕಳು ಬೇಕಂತೆ.. ಹುಡುಗನನ್ನು ಹುಡುಕಿ ಕೊಡಬೇಕಂತೆ  title=
Parineeti Chopra

Parineeti Chopra : 2023 ರ ಆರಂಭದಲ್ಲಿಯೇ ಅನೇಕ ತಾರೆಯರು ಹಸೆಮಣೆ ಏರಿದ್ದಾರೆ. ಇನ್ನೂ ಅನೇಕ ಜನರು ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ಇದರ ಬಿಟೌನ್‌ನ ಮೋಸ್ಟ್ ಎಲಿಜಿಬಲ್‌ ಬ್ಯಾಚುಲರ್‌ಗಳ ಮದುವೆ ಯಾವಾಗ ಎಂದು ಅಭಿಮಾನಿಗಳು ಕಾದುಕುಳಿತಿದ್ದಾರೆ. ಪರಿಣಿತಿ ಚೋಪ್ರಾ ಕೂಡ ಇದೀಗ ಮದುವೆಯಾಗಲು ಉತ್ಸುಕರಾಗಿದ್ದಾರೆ, ಆದರೆ ಸರಿಯಾದ ವ್ಯಕ್ತಿ ಬೇಕಂತೆ. 

ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ನಟಿ ಪರಿಣಿತಿ ಚೋಪ್ರಾ, ಸರಿಯಾದ ಜೋಡಿಯನ್ನು ಕಂಡುಕೊಳ್ಳಲು ಬಯಸುವುದಾಗಿ ಹೇಳಿದ್ದಾರೆ. "ನನಗೆ ಹುಡುಗನನ್ನು ಹುಡುಕಿ" ಎಂದು ಹೇಳಿದ್ದಾರೆ. ನಾನು ಮದುವೆಯಾಗಲು ಮತ್ತು ಮಕ್ಕಳನ್ನು ಹೊಂದಲು ಇಷ್ಟಪಡುತ್ತೇನೆ. ಉತ್ತಮ ಆರೋಗ್ಯ, ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂತೋಷವನ್ನು ಹಂಚಿಕೊಳ್ಳಲು ಹಾಗೂ ಸಮತೋಲಿತ ವೃತ್ತಿಜೀವನವನ್ನು ಬಯಸುತ್ತೇನೆ ಎಂದು ಪರಿಣಿತಿ ಹೇಳಿದ್ದಾರೆ. 

ಇದನ್ನೂ ಓದಿ : Hrithik Roshan : ಎಲ್ಲರೆದುರೇ ಹೃತಿಕ್ - ಸಬಾ ಲಿಪ್ ಲಾಕ್, ವಿಡಿಯೋ ವೈರಲ್

ಇತ್ತೀಚೆಗಿನ ಬಾಲಿವುಡ್ ಮದುವೆಗಳ ಬಗ್ಗೆ ಮಾತನಾಡಿದ ಪರಿಣಿತಿ, ತನ್ನ ಸ್ನೇಹಿತರು ಲೀಪ್ ತೆಗೆದುಕೊಳ್ಳುವುದನ್ನು ನೋಡಲು ನನಗೆ ಸಂತೋಷವಾಗಿದೆ ಎಂದು ಹೇಳಿದರು. "ನಾನು ನನ್ನ ವ್ಯಕ್ತಿಯನ್ನು ಕಂಡುಕೊಂಡ ದಿನ ಮತ್ತು ನನ್ನ ವ್ಯಕ್ತಿಯನ್ನು ನಾನು ಪ್ರೀತಿಸುವ ದಿನ, ನಾನು ಅವನನ್ನು ಮದುವೆಯಾಗಲು ಬಯಸುತ್ತೇನೆ" ಎಂದು ಅವರು ಹೇಳಿದರು.

ಪ್ರಿಯಾಂಕಾ ಚೋಪ್ರಾ ಮತ್ತು ಅವರ ಮಗಳು ಮಾಲ್ತಿ ಮೇರಿ ಬಗ್ಗೆ ಸಹ ಮಾತನಾಡಿದ್ದಾರೆ. ಚೋಪ್ರಾ ಕುಟುಂಬದಲ್ಲಿ ಮೊದಲ ಮಗು ಮಾಲ್ತಿ. "ಅವಳು ಅತ್ಯಂತ ಸುಂದರವಾದ ಚಿಕ್ಕ ವಿಷಯ ಮತ್ತು ಆಶೀರ್ವಾದ" ಎಂದು ಪರಿಣಿತಿ ಹೇಳಿದರು. ಪರಿಣಿತಿ ಶೀಘ್ರದಲ್ಲೇ ಇಮ್ತಿಯಾಜ್ ಅಲಿ ಅವರ ಚಮ್ಕಿಲಾದಲ್ಲಿ ದಿಲ್ಜಿತ್ ದೋಸಾಂಜ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಅವರು ಅಕ್ಷಯ್ ಕುಮಾರ್ ಅವರೊಂದಿಗೆ ಟಿನು ಸುರೇಶ್ ದೇಸಾಯಿ ಅವರ 'ಕ್ಯಾಪ್ಸುಲ್ ಗಿಲ್' ನ ಭಾಗವಾಗಿದ್ದಾರೆ.

ಇದನ್ನೂ ಓದಿ : Kareena Kapoor ಲುಕ್ ಟೆಸ್ಟ್‌ ಫೋಟೋ ವೈರಲ್.!‌ 14 ವರ್ಷಗಳ ಹಿಂದೆ ಹೇಗಿದ್ರು ನೋಡಿ ಬಾಲಿವುಡ್‌ ಬೇಬೋ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News