Puttakkana Makkalu : ಉರಿಯುವ ಬೆಂಕಿಗೆ ತುಪ್ಪ ಸುರಿಯಲು ಬಂದ ರಾಜೀಗೆ ತಕ್ಕ ಪಾಠ ಕಲಿಸ್ತಾಳಾ ಸ್ನೇಹಾ..?

Kanti Sneha Fight : ಪುಟ್ಟಕ್ಕನ ಮಕ್ಕಳು ಧಾರವಾಹಿ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ. ನೋಡುಗರ ಗಮನ ಸೆಳೆಯುತ್ತಿದೆ. ಇದೀಗ ಸಿರೀಯಲ್‌ನಲ್ಲಿ ತಿರುವು ಎದುರಾಗಿದ್ದು, ಸ್ನೇಹಾ ಕೊರಳಿಗೆ ತಾಳಿ ಕಟ್ಟಿದ ಕಂಠಿ ಪುಟಕ್ಕನ ಮನೆಗೆ ಬರುತ್ತಾನೆ. ಈ ವಿಚಾರವಾಗಿ ಸ್ನೇಹಾ ಕೋಪಗೊಂಡು ಕೂಗಾಡಿದರು ಸಹ ಅಲ್ಲಾಡದೇ ಇರುವ ಕಂಠಿಯನ್ನು ಕಂಡ ಸ್ನೇಹಾ ಸಾಯುವ ಮಾತನಾಡುತ್ತಾಳೆ.   

Written by - Savita M B | Last Updated : Jul 6, 2023, 02:06 PM IST
  • ಕಂಠಿ ಹೇಳಿರುವ ಸುಳ್ಳುಗಳು ಅವನಿಗೆ ಮುಳ್ಳಾಗುತ್ತಿವೆ
  • ರಾಜೇಶ್ವರಿ ಮಾತಿಗೆ ತಕ್ಕ ಉತ್ತರ ನೀಡಿದ ಸ್ನೇಹಾ
  • ನಂಜಮ್ಮ ಹಾಗೂ ಬಂಗಾರಮ್ಮನ ವಾರ್‌ ಹೀಗಿರಲಿದೆ
Puttakkana Makkalu : ಉರಿಯುವ ಬೆಂಕಿಗೆ ತುಪ್ಪ ಸುರಿಯಲು ಬಂದ ರಾಜೀಗೆ ತಕ್ಕ ಪಾಠ ಕಲಿಸ್ತಾಳಾ ಸ್ನೇಹಾ..?  title=

Puttakkana Makkalu : ಇನ್ನು ಇದೆಲ್ಲವನ್ನು ಕಂಡ ಕಂಠಿ ಅಲ್ಲಿಂದ ಹೊರಡಲು ಸಿದ್ದವಾಗುತ್ತಾನೆ. ಹಲವಾರು ಬಾರೀ ಕಂಠಿ ಸ್ನೇಹಾಳ ಮನವೊಲಿಸಲು ಪ್ರಯತ್ನ ಮಾಡುತ್ತಾನೆ ಆದರೆ ಸ್ನೇಹಾ ಅದ್ಯಾವುದಕ್ಕೂ ಸ್ಪಂದಿಸುವುದಿಲ್ಲ. ಇನ್ನು ಮೇಳೆ ಈ ಮನೆ ಮತ್ತು ಮೆಸ್‌ ಬಳಿ ನಿಮ್ಮ ನೆರಳು ಸುಳಿಯಬಾರದೆಂದು ಹೇಳುತ್ತಾಳೆ. 

ಕಂಠಿ ಪುಟ್ಟಕ್ಕನ ಮನೆಯಿಂದ ಹೊರಟ ಬಳಿಕ ಅಲ್ಲಿಯೇ ಮರೆಯಲ್ಲಿ ನಂಜಮ್ಮ ಎಲ್ಲವನ್ನು ನಿಂತು ನೋಡುತ್ತಿರುತ್ತಾಳೆ. ಕಂಠಿ ಪುಟ್ಟಕ್ಕನ ಮನೆಯಿಂದ ಹೋದ ಬಳಿಕ ನಂಜಮ್ಮ ಮನೆಯೊಳಗೆ ಹೋಗುತ್ತಾಳೆ ಆದರೆ ಆಕೆಗೆ ಏನು ಮಾಡಬೇಕು ಎಂದು ತಿಳಿಯದೇ ಸುಮ್ಮನಾಗುತ್ತಾಳೆ ಸ್ನೇಹಾ ಬಳಿ ಮಾತನಾಡಿದಾಗ ಪುಟ್ಟಕ್ಕ ನಂಜಮ್ಮ ಬಳಿ ಹೇಳುತ್ತಾಳೆ. ಆಗ ನಂಜಮ್ಮ ಇದರ ಬಗ್ಗೆ ನೀನೇನು ಹೇಳಬೇಡ ಎಂದು ಪುಟ್ಟಕ್ಕನ ಬಾಯಿ ಮುಚ್ಚಿಸುತ್ತಾಳೆ.

ಪುಟ್ಟಕ್ಕ ನೀನು ಮತ್ತು ಬಂಗಾರಮ್ಮ ಸೇರಿಕೊಂಡು ಈ ಆಟ ಆಡಿದಿರಿ. ಇದನ್ನೆಲ್ಲಾ ಮೊದಲೇ ಯೋಚನೆ ಮಾಡಬೇಕಿತ್ತು. ಇಷ್ಟೊತ್ತಿಗೆ ಅದ್ದೂರಿಯಾಗಿ ಸ್ನೇಹಾಳ ಮದುವೆಯಾಗುತ್ತಿತ್ತು ಎಂದಾಗ ಸ್ನೇಹಾ ನಾನು ಈ ಮದುವೆ ಆಗುತ್ತಿರಲಿಲ್ಲ, ಇನ್ನು ಆತ ಯಾರು ಎಂದು ನನಗೆ ತಿಳಿದಿಲ್ಲ ಎಂದು ಕಿರುಚುತ್ತಾಳೆ. ಆಗ ನಂಜಮ್ಮ ಈ ರೀತಿ ಹೇಳುತ್ತಾಳೆ. 

ಇದನ್ನೂ ಓದಿ-Kiccha Sudeep: ʻಕಿಚ್ಚʼನಿಗೆ ʻಜುಲೈ 6ʼ ಸಖತ್ ಸ್ಪೆಷಲ್.. ʻಐರನ್‌ ಲೆಗ್‌ʼ ಎಂದವರಿಗೆ ಮುಟ್ಟಿ ನೋಡುವಂತೆ ಉತ್ತರ ಕೊಟ್ಟ ದಿನ!

"ಆತ ಯಾರು ಅಂತ ನಿನಗೆ ಗೊತ್ತಿಲ್ಲ ಎಂದು ಹೇಳುತ್ತಿದ್ದೀಯಾ ಈಗ ಅವನು ಕಟ್ಟಿರೋ ತಾಳಿ ನಿನ್ನ ಕೊರಳಲ್ಲಿದೆ" ಎಂದು ಹೇಳಿದಾಗ ಸ್ನೇಹಾ ಮಾತು ಬಾರದವಳಂತೆ ನಿಂತು ಬಿಡುತ್ತಾಳೆ. ಇನ್ನೇನು ನಂಜಮ್ಮ ತಾನು ಪುಟ್ಟಕ್ಕನ ಮನೆಯಿಂದ ಹೊರಡಬೇಕು ಎನ್ನುವಷ್ಟರಲ್ಲಿ ಮನೆಯ ಮುಂದೆ ರಾಜೇಶ್ವರಿ ಆಗಮಿಸುತ್ತಾಳೆ.  ಇದಕ್ಕಿಂತ ಮುಂಚೆ ನಂಜಮ್ಮ ಪುಟ್ಟಕ್ಕನ ಮನೆಗೆ ಬರುವ ಮೊದಲು ಬಂಗಾರಮ್ಮನಿಗೆ ಕರೆ ಮಾಡಿರುತ್ತಾಳೆ ಆದರೆ ಆಕೆಗೆ ನಂಜಮ್ಮನೇ ಕರೆ ಮಾಡಿದ್ದಾಳೆ ಎಂದು ಮೊದಲಿಗೆ ತಿಳಿಯುವುದಿಲ್ಲ. 

ಇನ್ನು ಇದಾದ ನಂತರ ಬಂಗಾರಮ್ಮನಿಗೆ ನಂಜಮ್ಮನ ಧ್ವನಿ ಎಂದು ಗೊತ್ತಾಗುತ್ತದೆ. ಬಂಗಾರಮ್ಮ ಮೊದಲೇ ಕೋಪಿತಳಾಗಿರುತ್ತಾಳೆ ಹೀಗಿರುವಾಗಲೇ ನಂಜಮ್ಮ ಕರೆ ಮಾಡಿದ್ದು, ಉರಿಯುವ ಬೆಂಕಿಗೆ ತುಪ್ಪ ಸುರಿದಹಾಗಾಗುತ್ತದೆ. ಮೊದಲೇ ಕೋಪದಲ್ಲಿರುವ ಬಂಗಾರಮ್ಮನಿಗೆ ನಂಜಮ್ಮ ಇನ್ನಷ್ಟು ಕೆರಳಿಸಿದ್ದಾಳೆ. ಇದೇ ವೇಳೆ ರಾಜೇಶ್ವರಿ ಪುಟ್ಟಕ್ಕನ ಮನೆಮುಂದೆ ಬಂದು ಗಲಾಟೆ ಮಾಡುತ್ತಾಳೆ. ಸ್ನೇಹಾ ಪರಿಸ್ಥತಿ ಕಂಡು ನಗಾಡುತ್ತಿರುತ್ತಾಳೆ. ಇನ್ನು ಮನೆಮುಂದೆ ರಾಜೀ ಆಡಿದ ಮಾತುಗಳು ಸ್ನೇಹಾಳನ್ನು ಕೆಂಡಕಾರುವಂತೆ ಮಾಡಿವೆ. ಹಾಗಾದ್ರೆ ರಾಜೀಯ ಮಾತುಗಳಿಗೆ ಉತ್ತರ ನೀಡುತ್ತಾಳಾ ಸ್ನೇಹಾ ಎನ್ನುವುದನ್ನು ಕಾದು ನೋಡಬೇಕು. 

ಇದನ್ನೂ ಓದಿ-#22YearsForHuccha: ಉಪೇಂದ್ರ, ಶಿವಣ್ಣ ರಿಜೆಕ್ಟ್ ಮಾಡಿದ್ದ ʻಹುಚ್ಚʼ.. ಸುದೀಪ್‌ಗೆ ಕೊಡ್ತು ದೊಡ್ಡ ಸಕ್ಸಸ್!

 

 Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=38l6m8543Vk

Trending News