Oscars 2023 ನಲ್ಲಿ RRR ತಂಡಕ್ಕಿರಲಿಲ್ಲ ಉಚಿತ ಟಿಕೆಟ್‌ ! ಶೋಗಾಗಿ ಕೋಟಿ ಕೋಟಿ ಖರ್ಚು ಮಾಡಿದ ರಾಜಮೌಳಿ?

RRR Team in Oscars 2023 : ಆರ್‌ಆರ್‌ಆರ್ ಚಿತ್ರದಲ್ಲಿನ ನಾಟು ನಾಟು ಹಾಡಿಗೆ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಬಂದಿರುವುದು ಚಿತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಿತು. ಆದರೆ ಇದೀಗ ಒಂದು ವಿಚಾರ ಹೊರಬಿದ್ದಿದೆ. ರಾಜಮೌಳಿ ಮತ್ತು ಅವರ ತಂಡಕ್ಕೆ ಉಚಿತ ಟಿಕೆಟ್ ನೀಡಿಲ್ಲ ಎಂಬ ಸುದ್ದಿ ಹರಿದಾಡುತ್ತಿದೆ.   

Written by - Chetana Devarmani | Last Updated : Mar 19, 2023, 08:00 AM IST
  • ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ
  • ಆಸ್ಕರ್‌ ಸಮಾರಂಭದಲ್ಲಿ RRR ತಂಡಕ್ಕಿರಲಿಲ್ಲ ಉಚಿತ ಟಿಕೆಟ್‌!
  • ಕೋಟಿ ಕೋಟಿ ಖರ್ಚು ಮಾಡಿ ಟಿಕೆಟ್‌ ಖರೀದಿಸಿದ ರಾಜಮೌಳಿ?
Oscars 2023 ನಲ್ಲಿ RRR ತಂಡಕ್ಕಿರಲಿಲ್ಲ ಉಚಿತ ಟಿಕೆಟ್‌ ! ಶೋಗಾಗಿ ಕೋಟಿ ಕೋಟಿ ಖರ್ಚು ಮಾಡಿದ ರಾಜಮೌಳಿ? title=
RRR Team in Oscars 2023

Oscars 2023 RRR : ಎಸ್‌ಎಸ್ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಲನಚಿತ್ರವು ಬಿಡುಗಡೆಯಾದಾಗಿನಿಂದ, ಪ್ರಪಂಚದಾದ್ಯಂತ ಅದ್ಭುತ ಪ್ರತಿಕ್ರಿಯೆಯನ್ನು ಪಡೆದಿದೆ ಮಾತ್ರವಲ್ಲದೆ ಗೋಲ್ಡನ್ ಗ್ಲೋಬ್ ಮತ್ತು ಆಸ್ಕರ್‌ನಂತಹ ಪ್ರಶಸ್ತಿಗಳನ್ನು ಸಹ ಗೆದ್ದು ಬೀಗಿದೆ. ಇದು ವಿಶ್ವಾದ್ಯಂತ ಚಲನಚಿತ್ರೋದ್ಯಮದಿಂದ ಅತ್ಯಂತ ಪ್ರತಿಷ್ಠಿತವೆಂದು ಪರಿಗಣಿಸಲ್ಪಟ್ಟಿದೆ. ಆರ್‌ಆರ್‌ಆರ್ ಚಿತ್ರದಲ್ಲಿನ ನಾಟು ನಾಟು ಹಾಡಿಗೆ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಬಂದಿರುವುದು ಚಿತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಿತು. ಆದರೆ ಪ್ರತಿಷ್ಠಿತ 95ನೇ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಳ್ಳಲು ರಾಜಮೌಳಿ ಮತ್ತು ಅವರ ತಂಡಕ್ಕೆ ಉಚಿತ ಟಿಕೆಟ್ ನೀಡಿಲ್ಲ ಎಂಬುದು ನಿಮಗೆ ತಿಳಿದಿದೆಯೇ?

ಹೌದು, ನ್ಯೂಸ್ 18 ಪ್ರಕಟಿಸಿದ ಲೇಖನದ ಪ್ರಕಾರ ನಾಟು ನಾಟುಗೆ ರಾಗ ಸಂಯೋಜಿಸಿದ ಎಂಎಂ ಕೀರವಾಣಿ, ಹಾಡು ಬರೆದ ಗೀತರಚನೆಕಾರ ಚಂದ್ರಬೋಸ್ ಮತ್ತು ಅವರಿಬ್ಬರ ಪತ್ನಿಗೆ ಮಾತ್ರ ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೆ ಉಚಿತ ಪ್ರವೇಶ ಸಿಕ್ಕಿದ್ದು. ಆಸ್ಕರ್ ಆಯೋಜಕರಿಂದ ಉಚಿತ ಪ್ರವೇಶ ಪಾಸ್‌ಗಳನ್ನು ಸ್ವೀಕರಿಸದ ಕಾರಣ ರಾಜಮೌಳಿ ಅವರು ತಮ್ಮ ಕುಟುಂಬಕ್ಕೆ ಮತ್ತು ಅವರೊಂದಿಗೆ ಕರೆದೊಯ್ದಿದ್ದ ಎಲ್ಲರಿಗೂ ಟಿಕೆಟ್‌ಗಳನ್ನು ಖರೀದಿಸಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಇದನ್ನೂ ಓದಿ : ಆಸ್ಕರ್‌ನಲ್ಲಿ ʻನಾಟು ನಾಟುʼ ಪ್ರದರ್ಶನ ನೀಡದಿರಲು ಅಸಲಿ ಕಾರಣ ಬಿಚ್ಚಿಟ್ಟ ರಾಮ್ ಚರಣ್!

ಆಸ್ಕರ್ ಪ್ರಶಸ್ತಿ ಪ್ರೆಸೆಂಟೇಶನ್ ಶೋವನ್ನು ಲೈವ್ ಆಗಿ ವೀಕ್ಷಿಸಲು ರಾಜಮೌಳಿ ಖರೀದಿಸಿದ ಪ್ರತಿ ಟಿಕೆಟ್ $25,000 ಮೌಲ್ಯದ್ದಾಗಿದೆ. ಅಂದರೆ ಭಾರತೀಯ ಕರೆನ್ಸಿಯಲ್ಲಿ ಒಟ್ಟು 1 ಕೋಟಿ 44 ಲಕ್ಷ ರೂಪಾಯಿ ಖರ್ಚು ಮಾಡಿ ಈ ಟಿಕೆಟ್ ಗಳನ್ನು ಪಡೆದುಕೊಂಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಈ ಸುದ್ದಿಗೆ ಚಿತ್ರತಂಡದ ಸದಸ್ಯರು ಪ್ರತಿಕ್ರಿಯಿಸಿದರೆ ಮಾತ್ರ ನಿಜವಾಗಿ ಏನಾಯಿತು ಎಂದು ತಿಳಿಯುವ ಅವಕಾಶವಿರುತ್ತದೆ. 

ಎಸ್‌ಎಸ್ ರಾಜಮೌಳಿ ಅವರೊಂದಿಗೆ ಅವರ ಪತ್ನಿ ರಮಾ ರಾಜಮೌಳಿ, ಅವರ ಮಗ ಕಾರ್ತಿಕೇಯ ಮತ್ತು ಸೊಸೆ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಅದ್ಧೂರಿ ಸಮಾರಂಭದಲ್ಲಿ RRR ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ಯಂಗ್ ಟೈಗರ್ ಜೂ. ಎನ್‌ಟಿಆರ್‌ ಕೂಡ ಭಾಗವಹಿಸಿದ್ದರು.

ಇದನ್ನೂ ಓದಿ : Shruti Haasan: ಶೃತಿಗೆ ʼAre You Virgin..ʼ? ಎಂದು ಕೇಳಿದ ಯವಕ..! ನಟಿ ಕೊಟ್ಟ ಉತ್ತರ ಸೂಪರ್‌

ಆಸ್ಕರ್ ಶೋಗೆ ರಾಜಮೌಳಿ ಮತ್ತವರ ತಂಡ ಟಿಕೆಟ್ ಖರೀದಿಸಬೇಕಿತ್ತು ಎಂಬ ಸುದ್ದಿ ಒಂದೆಡೆಯಾದರೆ, ಪ್ರಶಸ್ತಿ ಕಾರ್ಯಕ್ರಮದ ಆಯೋಜಕರು ರಾಜಮೌಳಿ ಮತ್ತವರ ತಂಡಕ್ಕೆ ಕೊನೆಯ ಸಾಲಿನಲ್ಲಿ ಸೀಟು ಹಂಚಿಕೆ ಮಾಡಿ ಭಾರತೀಯ ಚಿತ್ರರಂಗಕ್ಕೆ ಅವಮಾನ ಮಾಡಿದ್ದಾರೆ ಎಂಬ ಟೀಕೆಗೂ ಗುರಿಯಾಗಿದ್ದೂ ಗೊತ್ತೇ ಇದೆ. ಕಾರ್ಯಕ್ರಮದ Exit ಸಮೀಪದಲ್ಲಿ ಆರ್‌ಆರ್‌ಆರ್ ತಂಡ ಕುಳಿತಿರುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆದ ನಂತರ, ನೆಟಿಜನ್‌ಗಳು ಪ್ರಶಸ್ತಿ ಕಾರ್ಯಕ್ರಮದ ಆಯೋಜಕರ ವಿರುದ್ಧ ಟೀಕೆಗಳನ್ನು ಮಾಡಿದರು. ಇದರ ಜೊತೆಗೆ ಮೂಲ ಉಚಿತ ಟಿಕೆಟ್‌ಗಳು ಸಿಕ್ಕಿಲ್ಲ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬಿರುಸಿನಿಂದ ಹರಿದಾಡುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News