Nishvika Naidu : ʼಲಿಯೋʼ ಅಗಲಿಕೆಯ ನೋವಲ್ಲಿ ಹುಟ್ಟು ಹಬ್ಬ ಆಚರಿಸಿಕೊಳ್ಳದಿರಲು ನಿಶ್ಚಿಕಾ ನಿರ್ಧಾರ..!

Nishvika Naidu : ನಾಳೆ ಸ್ಯಾಂಡಲ್‌ವುಡ್‌ ಸುಂದರಿ ನಿಶ್ವಿಕಾ ನಾಯ್ಡು ಹುಟ್ಟು ಹಬ್ಬ. ಅವರ ಅಭಿಮಾನಿಗಳು ಗ್ರ್ಯಾಂಡ್‌ ಆಗಿ ಬರ್ತ್‌ಡೇ ಸೆಲೆಬ್ರೆಷನ್‌ ಮಾಡಲು ನಿರ್ಧರಿಸಿದ್ದರು. ಆದರೆ ಇದೀಗ ಅವರಿಗೆ ನಿರಾಸೆಯಾಗಿದೆ. ಇದಕ್ಕೆ ಕಾರಣ.. ಇಲ್ಲಿದೆ

Written by - Krishna N K | Last Updated : May 18, 2024, 10:37 AM IST
    • ನಾಳೆ ಸ್ಯಾಂಡಲ್‌ವುಡ್‌ ಬ್ಯೂಟಿ ಕ್ವೀನ್‌ ನಿಶ್ವಿಕಾ ನಾಯ್ಡು ತಮ್ಮ ಹುಟ್ಟು ಹಬ್ಬ
    • ಪೋಸ್ಟ್‌ ಹಾಕಿ ತಮ್ಮ ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ್ದಾರೆ ನಿಶ್ವಿಕಾ
    • ನಾಳೆ ಅಂದ್ರೆ ಮೇ 19 ರವಿವಾರದಂದು ನಿಶ್ವಿಕಾ ನಾಯ್ಡು ಹುಟ್ಟು ಹಬ್ಬ.
Nishvika Naidu : ʼಲಿಯೋʼ ಅಗಲಿಕೆಯ ನೋವಲ್ಲಿ ಹುಟ್ಟು ಹಬ್ಬ ಆಚರಿಸಿಕೊಳ್ಳದಿರಲು ನಿಶ್ಚಿಕಾ ನಿರ್ಧಾರ..! title=

Nishvika Naidu Birthday : ಸ್ಯಾಂಡಲ್‌ವುಡ್‌ ಬ್ಯೂಟಿ ಕ್ವೀನ್‌ ನಿಶ್ವಿಕಾ ನಾಯ್ಡು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಾಕಿ ತಮ್ಮ ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ್ದಾರೆ. ಅಲ್ಲದೆ, ಯಾರೂ ಸಹ ತಮ್ಮ ಮನೆಯ ಹತ್ತಿರ ಬಾರದಂತೆ ತಿಳಿಸಿದ್ದಾರೆ.

ಹೌದು.. ನಾಳೆ ಅಂದ್ರೆ ಮೇ 19 ನಿಶ್ವಿಕಾ ಹುಟ್ಟು ಹಬ್ಬ. ಅವರ ಅಭಿಮಾನಿಗಳು ಗ್ರ್ಯಾಂಡ್‌ ಆಗಿ ಬರ್ತ್‌ಡೇ ಸೆಲೆಬ್ರೆಷನ್‌ ಮಾಡಲು ನಿರ್ಧರಿಸಿದ್ದರು. ಆದರೆ ಇದೀಗ ಅವರಿಗೆ ನಿರಾಸೆಯಾಗಿದೆ. ಇದಕ್ಕೆ ಕಾರಣ ನಿಶ್ವಿಕಾ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿರುವುದು..

ಇದನ್ನೂ ಓದಿ:ಮದುವೆಗೆ ಸಜ್ಜಾಗುತ್ತಿರುವ ನಟಿ ಅನುಷ್ಕಾ ಶೆಟ್ಟಿ ನಿಜವಾದ ವಯಸ್ಸೆಷ್ಟು ಗೊತ್ತೇ !

ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮೂಲಕ ತಮ್ಮ ಫ್ಯಾನ್ಸ್‌ಗೆ, "ಈ ವರ್ಷ ನನ್ನ ವೈಯಕ್ತಿಕ ಜೀವನದಲ್ಲಿ ಭಾವನಾತ್ಮಕವಾಗಿ ಕೆಲವು ಏರು ಪೆರುಗಳು ಆಗಿವೆ, ನನ್ನ ಪ್ರೀತಿಯ ಲಿಯೋ ಇತ್ತೀಚೆಗೆ ನಮ್ಮನ್ನೆಲ್ಲ ಬಿಟ್ಟು ಹೋದ .ಈ ಆಕಸ್ಮಿಕ ಘಟನೆ ನನ್ನ ಜೀವನಕ್ಕೆ ಮತ್ತು ಮನಸಿಗೆ ತುಂಬಾ ಆಳವಾದ ನೋವನ್ನುಂಟು ಮಾಡಿದೆ.

 
 
 
 

 
 
 
 
 
 
 
 
 
 
 

A post shared by Nishvika Naidu (@nishvika_)

ಅದರಿಂದ ಈ ವರ್ಷ ನನ್ನ ಜನ್ಮದಿನವನ್ನು ಆಚರಿಸದಿರಲು ನಾನು ನಿರ್ಧರಿಸಿದ್ದೇನೆ. ಲಿಯೋ ನಮ್ಮ ಕುಟುಂಬದಲ್ಲಿ ಒಬ್ಬನ್ನಾಗಿದ್ದ, ಮತ್ತು ಅವನ ಅನುಪಸ್ಥಿತಿಯು ನಮ್ಮ ಕುಟುಂಬದ ಮನಸುಗಳ ಮೇಲೆ ಬಹಳ ದೊಡ್ಡ ಗಾಯ ಮಾಡಿದೆ, ದಯವಿಟ್ಟು ನನ್ನ ಭಾವನೆಗಳಿಗೆ ಬೆಲೆ ಕೊಟ್ಟು ಈ ಬಾರಿ ನನ್ನ ಹುಟ್ಟುಹಬ್ಬದ ದಿನದಂದು ಯಾರೂ ಕೂಡ ನನ್ನನ್ನು ಭೇಟಿ ಮಾಡಲು ಬರಬೇಡಿ ಅಥವಾ ಉಡುಗೊರೆಗಳನ್ನು ತರಬೇಡಿ ಎಂದು ಇ ಮೂಲಕ ಕೇಳಿಕೊಳ್ಳುತ್ತೇನೆ..

ಇದನ್ನೂ ಓದಿ:ಅವಕಾಶ ಬೇಕು ಅಂದ್ರೆ ನಿರ್ದೇಶಕರ ಜತೆ ಸಂಪರ್ಕದಲ್ಲಿರಬೇಕು... ತಪ್ಪೇನಲ್ಲ..! ನೇಹಾ ಶೆಟ್ಟಿ ಶಾಕಿಂಗ್‌ ಹೇಳಿಕೆ

ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಎಂದಿಗೂ ಚಿರಋಣಿಯಾಗಿ ಇರುತ್ತೆನೆ. ಈ ಕಷ್ಟದ ಸಮಯದಲ್ಲಿ, ನಾನು ಒಂಟಿಯಾಗಿ ಇರಲು ಬಯಸಿದ್ದು ನನ್ನ ಈ ನಿರ್ಧಾರಕ್ಕೆ ನೀವೆಲ್ಲರು ಒಪ್ಪಿ, ನೀವು ಇರುವ ಜಾಗದಿಂದಲೇ ನನ್ನ ಹುಟ್ಟುಹಬ್ಬಕ್ಕೆ ನನ್ನನ್ನು ಹರಸಿ ಆಶಿರ್ವಾದಿಸಿ.. ನಿಮ್ಮ ಪ್ರೀತಿಯ ನಿಶ್ವಿಕಾ ಅಂತ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News