ನಟರನ್ನೂ ಮೀರಿಸಿದ ಕಿಸ್ ಬೆಡಗಿಯ ಸಂಭಾವನೆ, ಗಂಟೆಗೆ ಲಕ್ಷ ಲಕ್ಷ ಶುಲ್ಕ ಪಡೆಯುವ ಶ್ರೀಲೀಲಾ!

Sreeleela Remuneration Increased : ತಮ್ಮ ಅಭಿನಯದಿಂದ ಪ್ರೇಕ್ಷಕರ ಹೃದಯವನ್ನು ಗೆದ್ದಿದ್ದಾರೆ. ಭಗವಂತ ಕೇಸರಿ ಚಿತ್ರದ ಯಶಸ್ಸಿನ ನಂತರ ಶ್ರೀಲೀಲಾ ಸಂಭಾವನೆಯನ್ನು ಹೆಚ್ಚಿಸಿದ್ದಾರೆ.

Written by - Chetana Devarmani | Last Updated : Nov 4, 2023, 09:55 AM IST
  • ಶ್ರೀಲೀಲಾ ಸಂಭಾವನೆಯಲ್ಲಿ ಹೆಚ್ಚಳ
  • ಭಗವಂತ ಕೇಸರಿ ಚಿತ್ರದಲ್ಲಿ ನಟಿಸಿದ ಶ್ರೀಲೀಲಾ
  • ಗಂಟೆಗೆ ಲಕ್ಷ ಲಕ್ಷ ಶುಲ್ಕ ಪಡೆಯುವ ಕಿಸ್‌ ಬೆಡಗಿ
ನಟರನ್ನೂ ಮೀರಿಸಿದ ಕಿಸ್ ಬೆಡಗಿಯ ಸಂಭಾವನೆ, ಗಂಟೆಗೆ ಲಕ್ಷ ಲಕ್ಷ ಶುಲ್ಕ ಪಡೆಯುವ ಶ್ರೀಲೀಲಾ!  title=
Sreeleela Remuneration

Sreeleela Remuneration : ಮಾಸ್ ಎಂಟರ್‌ಟೈನರ್ ನಂದಮೂರಿ ಬಾಲಕೃಷ್ಣ ನಟಿಸಿರುವ ಭಗವಂತ ಕೇಸರಿ ಸಿನಿಮಾದಲ್ಲಿ ಅವಕಾಶ ಸಿಕ್ಕ ಬಳಿಕ ನಟಿ ಶ್ರೀಲೀಲಾ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ಈ ಚಿತ್ರದಲ್ಲಿ ಕಾಜಲ್ ಅಗರ್ವಾಲ್ ಮತ್ತು ಶ್ರೀಲೀಲಾ ಇಬ್ಬರು ನಾಯಕಿಯರಾಗಿ ನಟಿಸಿದ್ದಾರೆ. ಪ್ರಸ್ತುತ ಚಿತ್ರರಂಗದ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವ ಶ್ರೀಲೀಲಾ, ಚಿತ್ರದಲ್ಲಿ ನಂದಮೂರಿ ಬಾಲಕೃಷ್ಣ ಅವರ ಸೊಸೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ತಮ್ಮ ಅಭಿನಯದಿಂದ ಪ್ರೇಕ್ಷಕರ ಹೃದಯವನ್ನು ಗೆದ್ದಿದ್ದಾರೆ. ಭಗವಂತ ಕೇಸರಿ ಚಿತ್ರದ ಯಶಸ್ಸಿನ ನಂತರ ಶ್ರೀಲೀಲಾ ಸಂಭಾವನೆಯನ್ನು ಹೆಚ್ಚಿಸಿದ್ದಾರೆ.

ಶ್ರೀಲೀಲಾ ಧಮಾಕಾ ಸಿನಿಮಾ ತೆರೆಕಂಡಾಗಿನಿಂದಲೂ ಸಾಲು ಸಾಲು ಚಿತ್ರಗಳಿಗೆ ಸಹಿ ಹಾಕುತ್ತಲೇ ಇದ್ದಾರೆ. ಇಂಡಸ್ಟ್ರಿಯಲ್ಲಿ ಅತ್ಯಂತ ಬ್ಯುಸಿ ನಟಿಯರಲ್ಲಿ ಒಬ್ಬರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗಂಟೆಗೆ 4 ಲಕ್ಷ ರೂಪಾಯಿ ಸಂಭಾವನೆ ಶ್ರೀಲೀಲಾ ಅವರಿಗೆ ಸಲ್ಲುತ್ತಿದೆ. ಇದು ಸೂಪರ್‌ ಸ್ಟಾರ್‌ ನಟರ ವೇತನಕ್ಕೆ ಸಮನಾಗಿದೆ. 

ಇದನ್ನೂ ಓದಿ : ಐಶ್ವರ್ಯಾ ರೈ ಜತೆ ರೊಮ್ಯಾನ್ಸ್ ಮಾಡಿದ್ದ ಈ ಕನ್ನಡ ನಟ ತುತ್ತು ಅನ್ನಕ್ಕಾಗಿ ಶೌಚಾಲಯ ತೊಳೆದರು ! 

ಇತ್ತೀಚಿನ ವರದಿಗಳ ಪ್ರಕಾರ, ಭಗವಂತ ಕೇಸರಿಯಲ್ಲಿ ಶ್ರೀಲೀಲಾ ಅವರಿಗೆ ಸಂಭಾವನೆಯಾಗಿ 1.5 ಕೋಟಿ ರೂ. ಆಗಿದೆ. ಈಗ ಈ ಸಿನಿಮಾದ ಯಶಸ್ಸಿನ ನಂತರ ಆಕೆ 3 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗಿದೆ. ಈ ಸುದ್ದಿಗೆ ಸಂಬಂಧಿಸಿದಂತೆ ಯಾವುದೇ ದೃಢೀಕರಣ ಬಂದಿಲ್ಲ.

ಶ್ರೀಲೀಲಾ 2019 ರಲ್ಲಿ ಕಿಸ್ ಚಲನಚಿತ್ರದೊಂದಿಗೆ ಬಣ್ಣದ ಲೋಕಕ್ಕೆ ಕಾಲಿಟ್ಟರು. ಇದು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗಿದೆ. 2021 ರಲ್ಲಿ ಅವರುಪೆಲ್ಲಿ ಸಂದಡಿ ಸಿನಿಮಾದಲ್ಲಿ ನಟಿಸಿದರು. ಇದು ಅವರು ನಟಿಸಿದ ಮೊದಲ ತೆಲುಗು ಚಲನಚಿತ್ರ ಆಗಿದೆ. 

ವರದಿಗಳ ಪ್ರಕಾರ, ಸದ್ಯ ಶ್ರೀಲೀಲಾ ಒಂಬತ್ತು ತೆಲುಗು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಹೀಗಾಗಿ ಅಗ್ರ ನಟಿಯರಲ್ಲಿ ಒಬ್ಬರಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.  

ಇದನ್ನೂ ಓದಿ : ವರುಣ್ ತೇಜ್ ಮದುವೆಯಲ್ಲಿ ರಾಮ್ ಚರಣ್ ಧರಿಸಿದ್ದ ವಾಚ್ ಬೆಲೆ ಎಷ್ಟು ಗೊತ್ತೆ..? ಶಾಕ್‌ ಆಗ್ತೀರಾ..! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News