Bahubali Movie: ‘ಬಾಹುಬಲಿ’ ಮಾಡಲು ಎಸ್ ಎಸ್ ರಾಜಮೌಳಿ ಇಷ್ಟು ದೊಡ್ಡ ಬಡ್ಡಿಗೆ 400 ಕೋಟಿ ಸಾಲ ಮಾಡಿದ್ದರು!

Bahubali Facts: ನಟ ರಾಣಾ ದಗ್ಗುಬಾಟಿ ಇತ್ತೀಚೆಗೆ ಈವೆಂಟ್‌ವೊಂದರಲ್ಲಿ ಬಾಹುಬಲಿ ಚಿತ್ರಕ್ಕಾಗಿ ದೊಡ್ಡ ಮೊತ್ತದ ಬಡ್ಡಿಗೆ 300-400 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ ಎಂದು ಬಹಿರಂಗಪಡಿಸಿದರು.  

Written by - Chetana Devarmani | Last Updated : Jun 3, 2023, 05:07 PM IST
  • ‘ಬಾಹುಬಲಿ’ ಸಿನಿಮಾ ನಿರ್ದೇಶಕ ಎಸ್ ಎಸ್ ರಾಜಮೌಳಿ
  • ಬಾಹುಬಲಿ ಚಿತ್ರಕ್ಕಾಗಿ ದೊಡ್ಡ ಮೊತ್ತದ ಬಡ್ಡಿಗೆ ಸಾಲ
  • ಇಷ್ಟು ದೊಡ್ಡ ಬಡ್ಡಿಗೆ 400 ಕೋಟಿ ಸಾಲ ಮಾಡಿದ್ದರು!
Bahubali Movie: ‘ಬಾಹುಬಲಿ’ ಮಾಡಲು ಎಸ್ ಎಸ್ ರಾಜಮೌಳಿ ಇಷ್ಟು ದೊಡ್ಡ ಬಡ್ಡಿಗೆ 400 ಕೋಟಿ ಸಾಲ ಮಾಡಿದ್ದರು! title=
SS Rajamouli

SS Rajamouli Movies: ಬಾಹುಬಲಿ ಚಿತ್ರದ ಬಗ್ಗೆ ಆಘಾತಕಾರಿ ಸಂಗತಿಯೊಂದು ಹೊರಬಿದ್ದಿದ್ದು, ನಂತರ ಅಭಿಮಾನಿಗಳು ರಾಜಮೌಳಿ ಅವರ ಫ್ಯಾನ್‌ ಆಗಿದ್ದಾರೆ. ಹೌದು... ಇತ್ತೀಚೆಗೆ ಬಾಹುಬಲಿ ನಟ ರಾಣಾ ದಗ್ಗುಬಾಟಿ ಈವೆಂಟ್‌ವೊಂದರಲ್ಲಿ ಎಸ್‌ಎಸ್ ರಾಜಮೌಳಿ ಚಿತ್ರಕ್ಕಾಗಿ 400 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ ಎಂದು ಹೇಳಿದ್ದಾರೆ. ಸಂದರ್ಶನದಲ್ಲಿ ಮಾತನಾಡಿದ ರಾಣಾ ದಗ್ಗುಬಾಟಿ, ಚಿತ್ರಕ್ಕಾಗಿ ಶೇಕಡಾ 24 ರ ಬಡ್ಡಿಗೆ ಐದೂವರೆ ವರ್ಷಗಳವರೆಗೆ ಹಣವನ್ನು ಸಾಲ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. 

ಇದನ್ನೂ ಓದಿ: ಅಭಿ ಕೈ ಮೇಲೆ ಮೂಡಿತು ತುತ್ತು ಕೊಟ್ಟವಳ, ಮುತ್ತು ಕೊಡುವವಳ ಹೆಸರು; ಜೂ. ರೆಬೆಲ್‌ ಮದುವೆ ಸಂಭ್ರಮ

ಬಾಹುಬಲಿ ಚಿತ್ರದಲ್ಲಿ ನೆಗೆಟಿವ್ ಪಾತ್ರದಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದ ನಟ ರಾಣಾ ದಗ್ಗುಬಾಟಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸಿನಿಮಾದ ಬಗ್ಗೆ ಹಲವು ವಿಷಯಗಳನ್ನು ಹೇಳಿದ್ದಾರೆ. ಬಾಹುಬಲಿ ಕುರಿತು ಮಾತನಾಡಿದ ರಾಣಾ ದಗ್ಗುಬಾಟಿ, 3-4 ವರ್ಷಗಳ ಹಿಂದೆ ಚಿತ್ರ ನಿರ್ಮಾಪಕರು ತಮ್ಮ ಮನೆ ಮತ್ತು ಆಸ್ತಿಯನ್ನು ಅಡಮಾನವಿಟ್ಟು ಸಿನಿಮಾ ಮಾಡಲು ಬ್ಯಾಂಕ್‌ಗಳಿಂದ ಹಣವನ್ನು ತೆಗೆದುಕೊಳ್ಳುತ್ತಿದ್ದರು. ನಾವು 24 ಶೇ ರಿಂದ 28 ಶೇ ರಷ್ಟು ಬಡ್ಡಿಗೆ ಸಾಲ ಪಡೆಯುತ್ತಿದ್ದೆವು, ಈ ದರದಲ್ಲಿ ಚಿತ್ರಗಳಿಗೆ ಹಣ ಲಭ್ಯವಿದೆ ಎಂದರು.

24 ಪರ್ಸೆಂಟ್ ಬಡ್ಡಿಗೆ ಹಣ ತೆಗೆದುಕೊಳ್ಳಲಾಗಿದೆ, ಈ ಚಿತ್ರ ಕೆಲಸ ಮಾಡದಿದ್ದರೆ ಏನಾಗುತ್ತದೆ ಎಂದು ನಮಗೆ ತಿಳಿದಿಲ್ಲ. ಜನರು ಹೇಳಿದಂತೆ ಈ ಚಿತ್ರಕ್ಕೆ ಹೊಡೆತ ಬೀಳುತ್ತದೆ ಎಂದು ತನಗೂ ಅನ್ನಿಸಿತ್ತು. ಹಾಗಾಗಿ ನಮ್ಮನ್ನು ನಂಬಿಕೊಂಡು ನಮ್ಮ ಜೊತೆಯಲ್ಲಿ ಸಾಗುತ್ತಿರುವ ಆ ವ್ಯಕ್ತಿಗೆ (ಎಸ್‌ಎಸ್‌ ರಾಜಮೌಳಿ) ಏನಾಗಬಹುದು ಎಂದು ರಾಣಾ ದಗ್ಗುಬಾಟಿ ಹೇಳಿದ್ದಾರೆ.  

ಇದನ್ನೂ ಓದಿ: ಗರ್ಭಿಣಿ ಇಲಿಯಾನಾ ಎಂಗೇಜ್ಮೆಂಟ್‌ ಆಗಿದ್ದು ಯಾರ ಜೊತೆ!? ಫೋಟೋದಲ್ಲಿರೋದು ಮಗುವಿನ ತಂದೆನಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News