ಕಟ್ಟಿಕೊಂಡ ಮೂಗು ಮತ್ತು ಗಂಟಲು ನೋವಿಗೆ ಶೀಘ್ರ ಪರಿಹಾರ ಈ ಮನೆ ಮದ್ದು

 ತಣ್ಣನೆಯ ಗಾಳಿ ಶೀತ ಕೆಮ್ಮು, ಮೂಗು ಕಟ್ಟುವುದು, ಗಂಟಲು ನೋವು ಇತ್ಯಾದಿ ಆರೋಗ್ಯ ಸಮಸ್ಯೆಗಳನ್ನು ತರುತ್ತದೆ.  ಹೀಗಾದಾಗ ಉಸಿರಾಟಕ್ಕೆ ತೊಂದರೆಯಾಗುತ್ತದೆ.  ರಾತ್ರಿ ವೇಳೆ ನಿದ್ದೆಗೂ ಇದು ಅಡ್ಡಿಯುಂಟು ಮಾಡುತ್ತದೆ. 

Written by - Ranjitha R K | Last Updated : Dec 28, 2022, 01:13 PM IST
  • ಚಳಿಗಾಲದಲ್ಲಿ ಕಾಣಿಸಿಕೊಳ್ಳುತ್ತದೆ ಆರೋಗ್ಯ ಸಮಸ್ಯೆ
  • ರಾತ್ರಿ ವೇಳೆ ನಿದ್ದೆಗೂ ಇದು ಅಡ್ಡಿಯುಂಟು ಮಾಡುತ್ತದೆ
  • ಶೀತ ಕೆಮ್ಮು, ಮೂಗು ಕಟ್ಟುವುದು, ಗಂಟಲು ನೋವು ಸಮಸ್ಯೆ ಕಾಣಿಸಿಕೊಳ್ಳುತ್ತದೆ
ಕಟ್ಟಿಕೊಂಡ ಮೂಗು ಮತ್ತು ಗಂಟಲು ನೋವಿಗೆ ಶೀಘ್ರ ಪರಿಹಾರ ಈ ಮನೆ ಮದ್ದು title=
Cold Home remedies

ಬೆಂಗಳೂರು : ಚಳಿಗಾಲದಲ್ಲಿ ಸಾಮಾನ್ಯವಾಗಿ ಎಲ್ಲರ ಆರೋಗ್ಯವೂ ಕೆಡುತ್ತದೆ. ಈ ಋತುವಿನಲ್ಲಿ ಬೀಸುವ ತಣ್ಣನೆಯ ಗಾಳಿ ಶೀತ ಕೆಮ್ಮು, ಮೂಗು  ಕಟ್ಟುವುದು, ಗಂಟಲು ನೋವು ಇತ್ಯಾದಿ ಆರೋಗ್ಯ ಸಮಸ್ಯೆಗಳನ್ನು ತರುತ್ತದೆ.  ಹೀಗಾದಾಗ ಉಸಿರಾಟಕ್ಕೆ ತೊಂದರೆಯಾಗುತ್ತದೆ.  ರಾತ್ರಿ ವೇಳೆ ನಿದ್ದೆಗೂ ಇದು ಅಡ್ಡಿಯುಂಟು ಮಾಡುತ್ತದೆ.  ಕೆಲವೊಂದು ಮನೆಮದ್ದು ಅನುಸರಿಸುವ ಮೂಲಕ  ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಕಷಾಯ :
ಉಸಿರುಕಟ್ಟುವುದು, ಗಂಟಲು ನೋವು,  ಮೂಗು ಕಟ್ಟಿಕೊಳ್ಳುವುದು ಈ ಸಮಸ್ಯೆಗಳನ್ನು ಗುಣಪಡಿಸಲು ಮನೆಯಲ್ಲಿಯೇ ಇರುವ ಮಸಾಲೆಗಳಿಂದ ತಯಾರಿಸಿದ ಕಷಾಯವನ್ನು ಸೇವಿಸಬಹುದು. ಇದು ಚಳಿಗಾಲದಲ್ಲಿ ತಲೆದೋರುವ ಈ ಸಮಸ್ಯೆಗಳ ವಿರುದ್ದ ಹೋರಾಡುತ್ತದೆ. ತುಳಸಿ, ಕರಿಮೆಣಸು, ಒಣ ಶುಂಠಿ ಮತ್ತು  ಚಕ್ಕೆಯನ್ನು ಒಟ್ಟಿಗೆ ಕುದಿಸಿ  ಕಷಾಯ ಮಾಡಿಕೊಳ್ಳಿ. ಇದಕ್ಕೆ ಬೆಲ್ಲ ಮತ್ತು ನಿಂಬೆ ರಸವನ್ನು ಕೂಡಾ ಸೇರಿಸಿ.  ಇದನ್ನೂ ಕುಡಿದರೆ ಮೇಲೆ ಹೇಳಿದಅ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. 

ಇದನ್ನೂ ಓದಿ : Black Pepper: ಕರಿಮೆಣಸು ಹೀಗೆ ಸೇವಿಸಿದರೆ ಈ ರೋಗಗಳು ದೂರವಾಗುತ್ತವೆ

ಮೂಗಿನಲ್ಲಿ ಎಣ್ಣೆ ಹಾಕಿಕೊಳ್ಳುವುದು : 
ಕಟ್ಟಿದ ಮೂಗನ್ನು ತೆರೆಯಲು ಮೂಗಿನೊಳಗೆ ಎಣ್ಣೆ ಹಾಕುವಂತೆ ಹೇಳಲಾಗುತ್ತದೆ. ಬೆಳಿಗ್ಗೆ 1-2 ಹನಿ ಎಳ್ಳು ಅಥವಾ ತೆಂಗಿನ ಎಣ್ಣೆಯನ್ನು ಮೂಗಿಗೆ ಹಾಕಬೇಕು. ಹೀಗೆ ಮಾಡಿದರೆ ತಕ್ಷಣವೇ ಕಟ್ಟಿದ ಮೂಗಿನಿಂದ ಪರಿಹಾರ ಸಿಗುತ್ತದೆ ಎಂದು ಹೇಳಲಾಗುತ್ತದೆ.  

ಲವಂಗ ಮತ್ತು ಜೇನುತುಪ್ಪ :
ಲವಂಗ ಮತ್ತು ಜೇನುತುಪ್ಪದಲ್ಲಿರುವ ಔಷಧೀಯ ಗುಣಗಳು ಶೀತ ಮತ್ತು ಜ್ವರದ ಸಮಯದಲ್ಲಿ ಪರಿಹಾರ ನೀಡುತ್ತದೆ. ಲವಂಗದ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ತಿನ್ನುವುದರಿಂದ ಸಮಸ್ಯೆ ಪರಿಹಾರವಾಗುತ್ತದೆ.  ದಿನಕ್ಕೆ 2-3 ಬಾರಿ ಹೀಗೆ ಮಾಡುತ್ತಾ ಬಂದರೆ  ಕಟ್ಟಿದ ಮೂಗೂ ಮತ್ತು ಗಂಟಲು ನೋವಿನಿಂದ ಪರಿಹಾರ ಸಿಗುತ್ತದೆ. 

ಇದನ್ನೂ ಓದಿ : Corona Prevention : ಈ ಆಹಾರಗಳನ್ನು ಸೇವಿಸಿದರೆ ಕೊರೊನಾಗೆ ಆಹ್ವಾನ ನೀಡಿದಂತೆ

ಗಾರ್ಗ್ಲಿಂಗ್ : 
ಚಳಿ ಹೆಚ್ಚಾಗುತ್ತಿರುವ ಕಾರಣ ಗಂಟಲಿನಲ್ಲಿ ಕಫ ಸಂಗ್ರಹವಾಗುತ್ತದೆ. ಈ ನೋವಿನಿಂದಾಗಿ ಗಂಟಲು ಉರಿಯುವಂತೆಯೂ ಆಗುತ್ತದೆ. ಎಳ್ಳು ಅಥವಾ ತೆಂಗಿನೆಣ್ಣೆಯನ್ನು ಬಿಸಿ ನೀರಿನಲ್ಲಿ ಬೆರೆಸಿ ಗಾರ್ಗ್ಲಿಂಗ್ ಮಾಡಿದರೆ ಗಂಟಲು ನೋವು ಮತ್ತು  ಕಟ್ಟಿದ ನೋವಿನ ಸಮಯೇ ನಿವಾರಣೆಯಾಗುತ್ತದೆ. 

 

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News