Green tea Benefits :ಗ್ರೀನ್ ಟೀ ಆರೋಗ್ಯ ಪ್ರಯೋಜನ ಸಿಗಬೇಕಾದರೆ ಈ ಹೊತ್ತಿನಲ್ಲಿಯೇ ಸೇವಿಸಬೇಕು! ತಪ್ಪಿದರೆ ಇದರ ಲಾಭ ಶೂನ್ಯ

Best time to drink green tea for health benefits :ಗ್ರೀನ್ ಟೀ ಸೇವಿಸುವುದಕ್ಕೂ ನಿರ್ದಿಷ್ಟ ಸಮಯ ಎನ್ನುವುದಿದೆ. ಈ ಸಮಯದಲ್ಲಿ ಗ್ರೀನ್ ಟೀ ಸೇವಿಸಿದರೆ ಅನೇಕ ರೋಗಗಳ ವಿರುದ್ದ ಹೋರಾಡಲು ಸಹಾಯ ಮಾಡುತ್ತದೆ. 

Written by - Ranjitha R K | Last Updated : Mar 5, 2024, 01:42 PM IST
  • ಗ್ರೀನ್ ಟೀಯನ್ನು ಆರೋಗ್ಯದ ಗಣಿ ಎಂದು ಕರೆಯಲಾಗುತ್ತದೆ.
  • ಗ್ರೀನ್ ಟೀ ಸೇವಿಸುವುದರಿಂದ ಆರೋಗ್ಯ ಸಮಸ್ಯೆಗಳು ಬಗೆಹರಿಯುತ್ತವೆ.
  • ಗ್ರೀನ್ ಟೀ ಸೇವಿಸುವುದಕ್ಕೂ ನಿರ್ದಿಷ್ಟ ಸಮಯ ಇದೆ
Green tea Benefits :ಗ್ರೀನ್ ಟೀ ಆರೋಗ್ಯ ಪ್ರಯೋಜನ ಸಿಗಬೇಕಾದರೆ ಈ ಹೊತ್ತಿನಲ್ಲಿಯೇ ಸೇವಿಸಬೇಕು! ತಪ್ಪಿದರೆ ಇದರ ಲಾಭ ಶೂನ್ಯ  title=

Right Time To Drink Green Tea : ಗ್ರೀನ್ ಟೀಯನ್ನು ಆರೋಗ್ಯದ ಗಣಿ ಎಂದು ಕರೆಯಲಾಗುತ್ತದೆ. ಗ್ರೀನ್ ಟೀ ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಬಗೆಹರಿಯುತ್ತವೆ. ಇತ್ತೀಚಿನ ದಿನಗಳಲ್ಲಿ ಗ್ರೀನ್ ಟೀ ಕ್ರೇಜ್ ಕೂಡಾ ಹೆಚ್ಚಾಗುತ್ತಿದೆ. ಸಾಮಾನ್ಯ ಚಹಾ ಸೇವಿಸುವುದಕ್ಕಿಂತ ಗ್ರೀನ್ ಟೀ  ಸೇವಿಸುವವರ ಸಂಖ್ಯೆ ಹೆಚ್ಚುತ್ತಿದೆ. ಆರೋಗ್ಯ ತಜ್ಞರು ಕೂಡಾ ಸಾಮಾನ್ಯ ಚಹಾದ ಬದಲು ಗ್ರೀನ್ ಟೀಯನ್ನೇ ಸೇವಿಸುವ ಬಗ್ಗೆ ಶಿಫಾರಸು ಮಾಡುತ್ತಾರೆ. ಗ್ರೀನ್ ಟೀ ಕುಡಿಯಬೇಕು ಎನ್ನುವ ಅರ್ಥ ಯಾವಾಗ ಬೇಕೋ ಆ ಸಂದರ್ಭದಲ್ಲಿ ಗ್ರೀನ್ ಟೀ ಸೇವಿಸುವುದಲ್ಲ. ಗ್ರೀನ್ ಟೀ ಸೇವಿಸುವುದಕ್ಕೂ ನಿರ್ದಿಷ್ಟ ಸಮಯ ಎನ್ನುವುದಿದೆ. ಈ ಸಮಯದಲ್ಲಿ ಗ್ರೀನ್ ಟೀ ಸೇವಿಸಿದರೆ ಅನೇಕ ರೋಗಗಳ ವಿರುದ್ದ ಹೋರಾಡಲು ಸಹಾಯ ಮಾಡುತ್ತದೆ. ಹೊತ್ತಲ್ಲದ ಹೊತ್ತಿನಲ್ಲಿ ಗ್ರೀನ್ ಟೀ ಸೇವಿಸಿದರೆ ಇದರ ಆರೋಗ್ಯ ಲಾಭ ಶೂನ್ಯ ಎಂದೇ ಹೇಳಲಾಗುತ್ತದೆ.  

ಗ್ರೀನ್ ಟೀ ಸೇವನೆಯ ಪ್ರಯೋಜನಗಳು : 
1.ಕ್ಯಾನ್ಸರ್ ವಿರುದ್ದ ಹೋರಾಟ : 

ಕ್ಯಾನ್ಸರ್ ಬಹಳ ಗಂಭೀರವಾದ ಕಾಯಿಲೆಯಾಗಿದೆ. ಗ್ರೀನ್ ಟೀ ಸೇವನೆಯಿಂದ ಕ್ಯಾನ್ಸರ್ ಅಪಾಯವನ್ನು ದೂರ ಇಡಬಹುದು. ಗ್ರೀನ್ ಟೀಯಲ್ಲಿರುವ ಪಾಲಿಫಿನಾಲ್ ಗಳು ಟ್ಯುಮರ್ ಮತ್ತು ಕ್ಯಾನ್ಸರ್ ಕೋಶಗಳನ್ನು ತಡೆಯಲು ಸಹಾಯ ಮಾಡುತ್ತದೆ. ವಿಶೇಷವಾಗಿ ಇದು ಸ್ತನ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ದೂರ ಮಾಡುತ್ತದೆ. 

ಇದನ್ನೂ ಓದಿ : Black Coffee Health Benefits: ಬ್ಲ್ಯಾಕ್‌ ಕಾಫಿ ಸೇವನೆಯಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ

2.ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ : 
ಗ್ರೀನ್ ಟೀಯನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದು ರಕ್ತನಾಳಗಳಲ್ಲಿನ  ಬ್ಲಾಕೆಜ್ ಅನ್ನು ಕಡಿಮೆ ಮಾಡುತ್ತದೆ. ಇದರಿಂದ ಹೃದ್ರೋಗದಿಂದಲೂ ಅಂತರ ಕಾಯ್ದುಕೊಳ್ಳಬಹುದು. 

3.ಚರ್ಮದ ಸೋಂಕಿನಿಂದ ರಕ್ಷಣೆ : 
ಚರ್ಮವು ಹಾನಿಗೊಳಗಾದಾಗ ಮತ್ತು ಜೀವಕೋಶಗಳನ್ನು ಅಥವಾ ಸ್ಕಿನ್ ಸೆಲ್ಸ್ ಗಳನ್ನು ಮರುಪೂರಣಗೊಳಿಸಬೇಕಾದರೆ, ಗ್ರೀನ್ ಟೀ ಸೇವನೆ ಸಹಾಯ ಮಾಡುತ್ತದೆ.   ಇದು ಚರ್ಮದ ಸೋಂಕಿನ ವಿರುದ್ಧ ಹೋರಾಡುವುದರೊಂದಿಗೆ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೊಡವೆಗಳನ್ನು  ಕಡಿಮೆ ಮಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. 

ಇದನ್ನೂ ಓದಿ : Blood Sugar control tips : ಈ ಎಲೆ ಒಣಗಿದ ಮೇಲೆ ಹೀಗೆ ಬಳಸಿದರೆ ಬ್ಲಡ್ ಶುಗರ್ ನಿಯಂತ್ರಣಕ್ಕೆ ಬರುವುದು ಮಾತ್ರವಲ್ಲ ಎಂದೂ ಹೆಚ್ಚಾಗುವುದಿಲ್ಲ !

4. ತೂಕ ನಷ್ಟದಲ್ಲಿ ಪರಿಣಾಮಕಾರಿ :
ಗ್ರೀನ್ ಟೀಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಚಯಾಪಚಯವನ್ನು ಹೆಚ್ಚಿಸುತ್ತವೆ. ಇದನ್ನು ಕುಡಿಯುವುದರಿಂದ ದೇಹದ ಕೊಬ್ಬಿನ ಕ್ರಮೇಣ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಆದರೆ, ವ್ಯಾಯಾಮಕ್ಕೆ ಮೊದಲು ಗ್ರೀನ್ ಟೀಯನ್ನು ಕುಡಿಯುವುದು ಉತ್ತಮ. 

ಯಾವಾಗ ಗ್ರೀನ್ ಟೀ ಕುಡಿಯಬಾರದು? : 
ಊಟಕ್ಕೆ ಸುಮಾರು ಒಂದು ಗಂಟೆ ಮೊದಲು ಗ್ರೀನ್ ಟೀ ಕುಡಿಯುವುದು ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದು ಟ್ಯಾನಿನ್‌ಗಳನ್ನು ಹೊಂದಿರುತ್ತದೆ. ಹಾಗಾಗಿ ವಾಕರಿಕೆ, ಮಲಬದ್ಧತೆ ಮತ್ತು ಹೊಟ್ಟೆ ನೋವನ್ನು ಉಂಟುಮಾಡುವ ಕಾರಣ ಆಹಾರ ಸೇವನೆ ತಕ್ಷಣ ಅದನ್ನು ಸೇವಿಸಬಾರದು. ಖಾಲಿ ಹೊಟ್ಟೆಯಲ್ಲಿ ಕೂಡಾ ಗ್ರೀನ್ ಟೀಯನ್ನು ಎಂದಿಗೂ ಸೇವಿಸಬಾರದು. ಹಾಗೆಯೇ ರಾತ್ರಿ ಮಲಗುವ ಮುನ್ನ ಕೂಡಾ ಇದನ್ನು ಕುಡಿಯಬಾರದು. ರಾತ್ರಿ ಮಲಗುವ ಮುನ್ನ ಗ್ರೀನ್ ಟೀ ಕುಡಿದರೆ ನಿರ್ಜಲೀಕರಣ ಸಮಸ್ಯೆ ಉಂಟಾಗುತ್ತದೆ. ಅಲ್ಲದೆ ದಿನಕ್ಕೆ 3 ಕಪ್‌ಗಿಂತ ಹೆಚ್ಚು ಗ್ರೀನ್ ಟೀ ಕುಡಿಯಲೇ ಬಾರದು. ದಿನಕ್ಕೆ 3 ಕಪ್ ಗಿಂತ ಹೆಚ್ಚು ಗ್ರೀನ್ ಟೀ ಸೇವಿಸಿದರೆ ಅದು ನಮ್ಮ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ. 

(ಸೂಚನೆ : ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee Kannada News ಅದನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News