ಒಣಕೆಮ್ಮು ಟೆನ್ಶನ್ ಬಿಡಿ. ಟ್ರೈ ಮಾಡಿ ನೋಡಿ ಈ ಐದು ಮನೆಮದ್ದು.

ಸಿಂಪಲ್ ಮನೆಮದ್ದು ಬಳಸಿ ಒಣಕೆಮ್ಮು ನಿವಾರಿಸಿಕೊಳ್ಳಬಹುದು. ಇಲ್ಲಿದೆ ಆ ಸಿಂಪಲ್ ಮನೆ ಮದ್ದು. ಟ್ರೈ ಮಾಡಿ ನೋಡಬಹುದು.   

Written by - Ranjitha R K | Last Updated : Apr 18, 2021, 10:34 AM IST
  • ಕರೊನಾ ಕಾಲದಲ್ಲಿ ಒಣಕೆಮ್ಮು ಕೂಡಾ ಗಾಬರಿ ಹುಟ್ಟಿಸುತ್ತದೆ
  • ಸಿಂಪಲ್ ಮನೆ ಮದ್ದಿನ ಮೂಲಕ ಒಣಕೆಮ್ಮು ನಿವಾರಿಸಿಕೊಳ್ಳಬಹುದು
  • ಆ ಸಿಂಪಲ್ ಮನೆ ಮದ್ದಿನ ವಿವರ ಇಲ್ಲಿದೆ ಓದಿ..!
ಒಣಕೆಮ್ಮು ಟೆನ್ಶನ್ ಬಿಡಿ. ಟ್ರೈ ಮಾಡಿ ನೋಡಿ ಈ ಐದು ಮನೆಮದ್ದು.  title=
ಸಿಂಪಲ್ ಮನೆ ಮದ್ದಿನ ಮೂಲಕ ಒಣಕೆಮ್ಮು ನಿವಾರಿಸಿಕೊಳ್ಳಬಹುದು (file photo)

ನವದೆಹಲಿ : ವಾತಾವರಣ ಬದಲಾದಾಗ ಒಣಕೆಮ್ಮು (Dry cough) ವಕ್ಕರಿಸಿಕೊಳ್ಳುವುದು ಒಂದು ಸಹಜ ಪ್ರಕ್ರಿಯೆ. ಆದರೆ ಕರೋನಾ (Coronavirus) ಕಾಲದಲ್ಲಿ ಒಣಕೆಮ್ಮು ಕೂಡಾ ಗಾಬರಿ ಹುಟ್ಟಿಸುತ್ತದೆ. ಯಾಕೆಂದರೆ, ಒಣಕೆಮ್ಮು ಕೂಡಾ ಕರೋನಾ ಮಹಾಮಾರಿಯ ಲಕ್ಷಣಗಳಲ್ಲಿ ಒಂದು.  ಆದರೆ, ಒಣಕೆಮ್ಮು ಬಗ್ಗೆ ಗಾಬರಿಯಾಗಬೇಕಿಲ್ಲ. ಸಿಂಪಲ್ ಮನೆಮದ್ದು (Home remedy) ಬಳಸಿ ಒಣಕೆಮ್ಮು ನಿವಾರಿಸಿಕೊಳ್ಳಬಹುದು. ಇಲ್ಲಿದೆ ಆ ಸಿಂಪಲ್ ಮನೆ ಮದ್ದು. ಟ್ರೈ ಮಾಡಿ ನೋಡಬಹುದು. 

1.ಶುಂಠಿ ಸೇವಿಸಿ :
ಒಣಕೆಮ್ಮು (Dry Cough) ನಿವಾರಿಸುವಲ್ಲಿ ಶುಂಠಿ (Ginger) ಪ್ರಮುಖ ಪಾತ್ರ ವಹಿಸುತ್ತದೆ.  ಇದೇ ಕಾರಣಕ್ಕೆ ಜನ ಶುಂಠಿ ಟೀ ಕುಡಿಯುತ್ತಾರೆ. ಚಹಾದಲ್ಲಿ ಶುಂಠಿ ಮತ್ತು ಜೇನು (Honey) ಮಿಕ್ಸ್ ಮಾಡಿ ಕುಡಿದರೆ ಇದರಿಂದ ಒಣಕೆಮ್ಮು ಮಂಗಮಾಯವಾಗುತ್ತದೆ.  ಆದರೆ, ಎಚ್ಚರವಿರಲಿ, ಅಗತ್ಯಕ್ಕಿಂತ ಹೆಚ್ಚು ಶುಂಠಿ ತಿಂದರೆ ಹೊಟ್ಟೆ ಕೆಡುತ್ತದೆ.

ಇದನ್ನೂ ಓದಿ : Benefits of Radish: ಮೂಲಂಗಿ ಮತ್ತು ಅದರ ಎಲೆಗಳಲ್ಲಿದೆ ನಿಮ್ಮ ಕುಟುಂಬದವರ ಆರೋಗ್ಯ!

2.ಜೇನು ತುಪ್ಪ :
ಒಣಕೆಮ್ಮಿಗೆ ಜೇನು ತುಪ್ಪ (Honey) ರಾಮಬಾಣ. ಜೇನಿನಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣ ಒಣಕೆಮ್ಮಿನ ವಿರುದ್ಧ ಹೋರಾಡುವಲ್ಲಿ ನೆರವಾಗುತ್ತದೆ. ಅಲ್ಲದೆ ಗಂಟಲಿನ ಕಿಚಿಕಿಚಿ ಕೂಡಾ ನಿವಾರಿಸುತ್ತದೆ.  ಹರ್ಬಲ್ ಟೀ (Herbal tea) ಅಥವಾ ಲಿಂಬೆ  ನೀರಿಗೆ ಎರಡು ಚಮಚ ಜೇನು ಸೇರಿಸಿ ಕುಡಿದರೆ ಒಣಕೆಮ್ಮು ಜಾಗ ಖಾಲಿ ಮಾಡುತ್ತದೆ.

3.ಪೆಪ್ಪರ್ ಮಿಂಟ್ :
ಒಣಕೆಮ್ಮು ನಿವಾರಿಸುವಲ್ಲಿ ಪೆಪ್ಪರ್ ಮಿಂಟ್ ತುಂಬಾ ಕೆಲಸಕ್ಕೆ ಬರುತ್ತದೆ. ಯಾಕೆಂದರೆ ಇದರಲ್ಲಿ ಮೆಂಥಾಲ್ ಕಂಪೌಂಡ್ ಇರುತ್ತದೆ. ಇದು ಗಂಟಲಲ್ಲಿ ರಿಲ್ಯಾಕ್ಸ್ ಅನುಭವ ನೀಡುತ್ತದೆ. ಗಂಟಲಿನ ಉರಿ, ನೋವು ಕಡಿಮೆ ಮಾಡುತ್ತದೆ. ದಿನಕ್ಕೆ ಮೂರು ಅಥವಾ ನಾಲ್ಕು ಸಲ ಪೆಪ್ಪರ್ ಮೆಂಟ್ (Pepper Mint) ತಿಂದರೆ ಒಣಕೆಮ್ಮು ಛೂಮಂತರ್ ಆಗಿಬಿಡುತ್ತದೆ. 

ಇದನ್ನೂ ಓದಿ : Peepal Leaf Benefits: ಅಶ್ವತ್ಥಮರದ ಎಲೆಗಳ ರಸವು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಗೊತ್ತಾ?

4.ಉಪ್ಪು ನೀರಿನಲ್ಲಿ ಗಾರ್ಗಲ್ ಮಾಡಿ :
ಬಿಸಿ ನೀರಿಗೆ (Hot water) ಸ್ಪಲ್ಪ  ಉಪ್ಪು ಹಾಕಿ ಮಿಕ್ಸ್ ಮಾಡಿ. ಅದನ್ನು ಗಂಟಲಿಗೆ ಸುರಿದುಕೊಂಡು ಗಾರ್ಗಲ್ ಮಾಡಿ. ಇದರಿಂದ ಗಂಟಲಿನ ಕಿಚ್ ಕಿಚ್ ದೂರವಾಗಿಬಿಡುತ್ತದೆ. ಜೊತೆಗೆ ಶ್ವಾಸಕೋಸದಲ್ಲಿ ಜಮೆಯಾಗಿರುವ ಕಫ ಕೂಡಾ ನಿವಾರಣೆಯಾಗಿ ಬಿಡುತ್ತದೆ.  ಉಪ್ಪು ನೀರು (Salt water) ಬಿಸಿ ಮಾಡಿ ಕುಡಿದರೆ ಗಂಟಲಿನಲ್ಲಿ ಆಗುವ ಟಾನ್ಸಿಲ್ ಕೂಡಾ ಕಡಿಮೆಯಾಗುತ್ತದೆ. 

5.ನೀಲಗಿರಿ ಎಣ್ಣೆ :
ನೀಲಗಿರಿ ಎಣ್ಣೆಯಿಂದ  ಶ್ವಾಸನಾಳ ಸ್ವಚ್ಛವಾಗುತ್ತದೆಯಂತೆ.  ಹಾಗಾಗಿ, ತೆಂಗಿನೆಣ್ಣೆ (Coconut Oil)ಅಥವಾ ಅಲಿವ್ ಎಣ್ಣೆಗೆ ಸ್ವಲ್ಪ ನೀಲಗಿರಿ ಎಣ್ಣೆ ಸೇರಿಸಿ ನೆತ್ತಿಗೆ ಹಾಕಿಸಿಕೊಂಡು ಮಾಲಿಶ್ ಮಾಡಿಸಿಕೊಳ್ಳಬಹುದು. ಇದಲ್ಲದೆ, ಬಿಸಿನೀರಿಗೆ ಎರಡು ಡ್ರಾಪ್ ನೀಲಗಿರಿ ಎಣ್ಣೆ ಹಾಕಿ ಅದರ ಸ್ಟೀಮ್ ಪಡೆಯಬಹುದು. ಇದರಿಂದ ಶ್ವಾಸಕೋಶ ಶುದ್ದವಾಗುತ್ತದೆ. ಒಣಕೆಮ್ಮು ನಿವಾರಣೆಯಾಗುತ್ತದೆ.

ಇದನ್ನೂ ಓದಿ : Mango Peel Benefits: ಬೇಸಿಗೆಯಲ್ಲಿ ಮಾವಿನ ಹಣ್ಣಿನ ಸಿಪ್ಪೆ ಬಳಸಿ ಈ ರೀತಿ ಪ್ರಯೋಜನ ಪಡೆಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News