Turmeric: ಚಳಿಗಾಲದಲ್ಲಿ ಕಾಡುವ ಕೆಮ್ಮು ಕಫಕ್ಕೆ ರಾಮಬಾಣ ಈ ಮಸಾಲೆ

Turmeric Benefits: ಹವಾಮಾನದಲ್ಲಿನ ಬದಲಾವಣೆ ಮತ್ತು ಮಾಲಿನ್ಯದಿಂದ ಅನೇಕ ಜನರು ಶೀತ, ಕೆಮ್ಮು ಮತ್ತು ಕಫದಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇಂತಹ ಸಮಸ್ಯೆಗಳನ್ನು ಮನೆಮದ್ದುಗಳಿಂದ ಗುಣಪಡಿಸಬಹುದು.  

Written by - Chetana Devarmani | Last Updated : Dec 21, 2023, 02:48 PM IST
  • ಚಳಿಗಾಲದಲ್ಲಿ ಕಾಡುವ ಕಫ ಸಮಸ್ಯೆ
  • ಶೀತಕ್ಕೆ ಅಡುಗೆ ಮನೆಯಲ್ಲಿದೆ ಮದ್ದು
  • ಕಫಕ್ಕೆ ರಾಮಬಾಣ ಈ ಮಸಾಲೆ
Turmeric: ಚಳಿಗಾಲದಲ್ಲಿ ಕಾಡುವ ಕೆಮ್ಮು ಕಫಕ್ಕೆ ರಾಮಬಾಣ ಈ ಮಸಾಲೆ  title=

Turmeric Benefits: ಹವಾಮಾನ ಬದಲಾವಣೆ ಮತ್ತು ಮಾಲಿನ್ಯದಿಂದ ಅನೇಕ ಜನರು ಶೀತ, ಕೆಮ್ಮು ಮತ್ತು ಕಫದಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಯುವಕರಿಂದ ಹಿಡಿದು ವಯಸ್ಸಾದವರ ವರೆಗೂ ಎಲ್ಲರೂ ಈ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇಂತಹ ಸಮಸ್ಯೆಗಳನ್ನು ಮನೆಮದ್ದುಗಳಿಂದ ಗುಣಪಡಿಸಬಹುದು.

ಕಫ: ಚಳಿಗಾಲದಲ್ಲಿ ಅನೇಕ ಜನರು ಕಫದ ಸಮಸ್ಯೆಯಿಂದ ಬಳಲುತ್ತಾರೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಒಂದು ಬಟ್ಟಲಿನಲ್ಲಿ ಒಂದು ಚಮಚ ಜೇನುತುಪ್ಪಕ್ಕೆ ಅರ್ಧ ಚಮಚ ಅರಿಶಿನ ಸೇರಿಸಿ ಪೇಸ್ಟ್ ಮಾಡಿ. ಅದನ್ನು ನಾಲಿಗೆಯ ಮೇಲೆ ಇಟ್ಟು ನೆಕ್ಕಬೇಕು. ಹೀಗೆ ಮಾಡುವುದರಿಂದ ಗಂಟಲಿನಲ್ಲಿರುವ ವೈರಸ್ ಮತ್ತು ಬ್ಯಾಕ್ಟೀರಿಯಾಗಳನ್ನು ಹೋಗಲಾಡಿಸುವುದು. 

ಕಾಳು ಮೆಣಸು: ಕೆಮ್ಮಿನ ಸಮಸ್ಯೆಯಿಂದ ಬಳಲುತ್ತಿದ್ದರೆ, ಎರಡು ಕಾಳುಮೆಣಸನ್ನು ಬಾಯಿಗೆ ಹಾಕಿಕೊಂಡು ಜಗಿದು ರಸವನ್ನು ನುಂಗಬೇಕು. ಹೀಗೆ ಮಾಡುವುದರಿಂದ ಕೆಮ್ಮು ಕಡಿಮೆಯಾಗುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. 

ಇದನ್ನೂ ಓದಿ: Curd with Banana: ಮೊಸರಿನ ಜೊತೆ ಬಾಳೆಹಣ್ಣು ತಿಂದರೆ ದೇಹಕ್ಕೆ ಸಿಗುವುದು ಈ ಎಲ್ಲ ಪ್ರಯೋಜನ

ಶುಂಠಿ ಚಹಾ: ಕೆಮ್ಮು ಮತ್ತು ಶೀತವನ್ನು ನಿವಾರಿಸಲು ಶುಂಠಿ ಚಹಾ ಒಳ್ಳೆಯದು. ಶುಂಠಿಯ ಚಹಾ ಕುಡಿಯುವುದರಿಂದ ಕಫ ಬಿಡುಗಡೆಯಾಗುತ್ತದೆ. ನಿಮಗೆ ಉಸಿರಾಡಲು ಕಷ್ಟವಾಗಿದ್ದರೆ, ಸ್ವಲ್ಪ ಶುಂಠಿ ಚಹಾವನ್ನು ಕುಡಿಯಿರಿ.

ಬೆಳ್ಳುಳ್ಳಿ: ಚಳಿಗಾಲದಲ್ಲಿ ಆರೋಗ್ಯ ಸಮಸ್ಯೆಗಳನ್ನು ಬೆಳ್ಳುಳ್ಳಿಯಿಂದ ಪರಿಹರಿಸಬಹುದು. ಕಫ ಹೊರ ಬರದಿದ್ದರೆ ಬೆಳ್ಳುಳ್ಳಿ ತಿನ್ನಿ. ಹಸಿ ಬೆಳ್ಳುಳ್ಳಿ ತಿಂದು ನೀರು ಕುಡಿಯುವುದರಿಂದ ಕಫ ಕರಗುತ್ತದೆ.

ಏಲಕ್ಕಿ: ಏಲಕ್ಕಿ ಚಳಿಗಾಲದಲ್ಲಿ ನೆಗಡಿ ಮತ್ತು ಕೆಮ್ಮಿಗೆ ಒಳ್ಳೆಯದು. ಏಲಕ್ಕಿಯನ್ನು ಬಿಸಿನೀರಿನಲ್ಲಿ ಹಾಕಿ ಕುಡಿಯುವುದರಿಂದ ಕಫ ಸಮಸ್ಯೆ ನಿವಾರಣೆಯಾಗುತ್ತದೆ.

ಪುದೀನ: ಪುದೀನ ಎಲೆಗಳು ಕಫವನ್ನು ಕರಗಿಸಲು ಸಹಾಯ ಮಾಡುತ್ತದೆ. ಪುದೀನಾ ಎಲೆಗಳನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ಕುದಿಸಿ ಅದಕ್ಕೆ ನಿಂಬೆರಸ ಸೇರಿಸಿ ಕುಡಿಯಿರಿ.

ಇದನ್ನೂ ಓದಿ: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಈ ಬಿಳಿ ಕಾಳುಗಳು ನಿಮ್ಮ ಆಹಾರದಲ್ಲಿರಲಿ! 

ಸೂಚನೆ: ಆತ್ಮೀಯ ಓದುಗರೇ, ನಮ್ಮ ಸುದ್ದಿ ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News