World Liver Day 2024: ಯಕೃತ್ ಆರೋಗ್ಯಕ್ಕಾಗಿ ಮನೆಯಲ್ಲಿಯೇ ತಯಾರಿಸಬಹುದಾದ ಪಾನೀಯಗಳು

World Liver Day 2024: ವಿಶ್ವ ಯಕೃತ್ತಿನ ದಿನದ ಸಂದರ್ಭದಲ್ಲಿ ಯಕೃತ್ ಅನ್ನು ಆರೋಗ್ಯವಾಗಿರಿಸಲು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದಾದ ಪಾನೀಯಗಳ ಬಗ್ಗೆ ತಿಳಿಯೋಣ... 

Written by - Yashaswini V | Last Updated : Apr 19, 2024, 01:06 PM IST
  • ಕಳಪೆ ಜೀವನಶೈಲಿಯಿಂದಾಗಿ ಯಕೃತ್ ಕೂಡ ಹಾನಿಗೊಳಗಾಗುತ್ತದೆ.
  • ಇದು ಯಕೃತ್ತಿನ ಕ್ಯಾನ್ಸರ್, ಯಕೃತ್ ವೈಫಲ್ಯ, ಫ್ಯಾಟಿ ಲಿವರ್ ಸೇರಿದಂತೆ ಹಲವು ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.
  • ಆರೋಗ್ಯ ತಜ್ಞರ ಪ್ರಕಾರ, ತಪ್ಪಾದ ಆಹಾರ ಪದ್ದತಿ, ಅತಿಯಾದ ತೂಕ ಸೇರಿದಂತೆ ಯಕೃತ್ ಹಾನಿಗೊಳಗಾಗಲು ಹಲವು ಕಾರಣಗಳಿವೆ.
World Liver Day 2024: ಯಕೃತ್ ಆರೋಗ್ಯಕ್ಕಾಗಿ ಮನೆಯಲ್ಲಿಯೇ ತಯಾರಿಸಬಹುದಾದ ಪಾನೀಯಗಳು  title=

World Liver Day 2024: ಯಕೃತ್ ಎಂದರೆ ಲಿವರ್ ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದು. ಈ ಬದಲಾದ ಕಳಪೆ ಜೀವನಶೈಲಿಯಿಂದಾಗಿ ಯಕೃತ್ ಕೂಡ ಹಾನಿಗೊಳಗಾಗುತ್ತದೆ. ಇದು ಯಕೃತ್ತಿನ ಕ್ಯಾನ್ಸರ್, ಯಕೃತ್ ವೈಫಲ್ಯ, ಫ್ಯಾಟಿ ಲಿವರ್ ಸೇರಿದಂತೆ ಹಲವು ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಆರೋಗ್ಯ ತಜ್ಞರ ಪ್ರಕಾರ, ತಪ್ಪಾದ ಆಹಾರ ಪದ್ದತಿ, ಅತಿಯಾದ ತೂಕ ಸೇರಿದಂತೆ ಯಕೃತ್ ಸಮಸ್ಯೆಗೆ ಹಲವು ಕಾರಣಗಳಿವೆ. ಆದರೆ, ಕೆಲವು ಸುಲಭವಾಗಿ ತಯಾರಿಸಬಹುದಾದ ಪಾನೀಯಗಳ ಸಹಾಯದಿಂದ ಯಕೃತ್ ಅನ್ನು ಆರೋಗ್ಯವಾಗಿರಿಸಬಹುದು. ಅಂತಹ ಪಾನೀಯಗಳು ಯಾವುವು ಎಂದು ತಿಳಿಯೋಣ... 

ಆರೋಗ್ಯಕರ ಯಕೃತ್'ಗಾಗಿ ನಿಮ್ಮ ಮನೆಯಲ್ಲಿ ತಯಾರಿಸಿ ಸೇವಿಸಬಹುದಾದ ಪಾನೀಯಗಳೆಂದರೆ:- 
ನಿಂಬೆಹಣ್ಣಿನ ಜ್ಯೂಸ್: 

ನಿಂಬೆಹಣ್ಣಿನಲ್ಲಿರುವ ಸಿಟ್ರಿಕ್ ಆಮ್ಲ ಪಿತ್ತರಸದ ರಚನೆಯನ್ನು ಉತ್ತೇಜಿಸುತ್ತದೆ. ಹಾಗಾಗಿ, ನಿತ್ಯ ನಿಂಬೆಹಣ್ಣಿನ ಜ್ಯೂಸ್ (Lemon Juice) ಕುಡಿಯುವುದು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. 

ಅರಿಶಿನ ಚಹಾ: 
ಅರಿಶಿನದಲ್ಲಿರುವ ಉರಿಯೂತದ ಗುಣಲಕ್ಷಣಗಳು ಯಕೃತ್ ನ ಆರೋಗ್ಯ (Liver Health) ಸಮಸ್ಯೆಗಳಿಂದ ರಕ್ಷಿಸುತ್ತದೆ. ಇದಕ್ಕಾಗಿ ಅರಿಹಿನದ ಚಹಾ ಸೇವನೆ ಪ್ರಯೋಜನಕಾರಿ ಎಂದು ಕೆಲವು ಅಧ್ಯಯನಗಳಿಂದ ತಿಳಿದುಬಂದಿದೆ. 

ಇದನ್ನೂ ಓದಿ- ಈ ಒಂದು ತರಕಾರಿ ಸಾಕು ಮಧುಮೇಹಿಗಳ ಶುಗರ್ ನಾರ್ಮಲ್ ಮಾಡಲು ! ತಿನ್ನುವ ವಿಧಾನ ಮಾತ್ರ ಹೀಗೆಯೇ ಇರಬೇಕು

ಆಪಲ್ ಸೈಡರ್ ವಿನೆಗರ್: 
ಆಪಲ್ ಸೈಡರ್ ವಿನೆಗರ್  ಅನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಇದು ಯಕೃತ್ತನ್ನು (Liver) ಆರೋಗ್ಯವಾಗಿರಿಸಲು ತುಂಬಾ ಪ್ರಯೋಜನಕಾರಿ ಆಗಿದೆ. 

ಸೌತೆಕಾಯಿ ಜ್ಯೂಸ್: 
ಸೌತೆಕಾಯಿ ಜ್ಯೂಸ್ ನಲ್ಲಿ ಪುದೀನಾ ಎಲೆಗಳನ್ನು ನೆನೆಸಿಟ್ಟು ನಿಯಮಿತವಾಗಿ ಈ ನೀರನ್ನು ಕುಡಿಯುತ್ತಾ ಬಂದರೆ ಇದು ದೇಹವನ್ನು ಶುದ್ಧೀಕರಿಸಿ ಯಕೃತ್ತನ್ನು ನೈಸರ್ಗಿಕವಾಗಿ ನಿರ್ವಿಶೀಕರಣಗೊಳಿಸಲು ಇದು ತುಂಬಾ ಸಹಾಯಕವಾಗಿದೆ. 

ಇದನ್ನೂ ಓದಿ- AC Side Effects: ಬೇಸಿಗೆಯಲ್ಲಿ ದಿನವಿಡೀ ಎಸಿ ಬಳಸುತ್ತಿದ್ದೀರಾ? ಅದರ ಅಡ್ಡಪರಿಣಾಮಗಳ ಬಗ್ಗೆಯೂ ಇರಲಿ ಎಚ್ಚರ!

ಕ್ಯಾರೆಟ್ ಜ್ಯೂಸ್: 
ಕ್ಯಾರೆಟ್ ನಲ್ಲಿರುವ ಬೀಟಾ-ಕ್ಯಾರೋಟಿನ್ ಶಕ್ತಿಯುತ ಉತ್ಕರ್ಷಣ ನಿರೋಧಕವಾಗಿದ್ದು ಇದು ಯಕೃತ್ತಿನ ಉರಿಯೂತವನ್ನು ಕಡಿಮೆ ಮಾಡಲು ತುಂಬಾ ಪ್ರಯೋಜನಕಾರಿ ಆಗಿದೆ. ಆರೋಗ್ಯ ತಜ್ಞರ ಪ್ರಕಾರ, ನಿಯಮಿತವಾಗಿ ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ಯಕೃತ್ ಗೆ ಸಂಬಂಧಿಸಿದ ಹಲವು ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯಬಹುದು ಎಂದು ಹೇಳಲಾಗುತ್ತದೆ. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News