ಮುಂಬೈನಲ್ಲಿ 2.7 ತೀವ್ರತೆಯ ಭೂಕಂಪ

12 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ ಸತತ ಎರಡನೇ ಭಾರೀ ಭೂಮಿ ಕಂಪಿಸಿದ್ದು ಉತ್ತರ ಮುಂಬೈನಲ್ಲಿ ಶನಿವಾರ ಬೆಳಿಗ್ಗೆ ಭೂಕಂಪನ ಸಂಭವಿಸಿದೆ. ಇದರ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 2.7 ಕ್ಕೆ ಅಳೆಯಲಾಯಿತು.

Last Updated : Sep 5, 2020, 11:13 AM IST
  • ಮಹಾರಾಷ್ಟ್ರದಲ್ಲಿ 12 ಗಂಟೆಗಳಲ್ಲಿ ಸತತ ಎರಡನೇ ಬಾರಿಗೆ ಭೂಕಂಪ ಸಂಭವಿಸಿದೆ.
  • ಉತ್ತರ ಮುಂಬೈನಲ್ಲಿ ಶನಿವಾರ ಬೆಳಿಗ್ಗೆ ಭೂಕಂಪನ ಸಂಭವಿಸಿದೆ.
  • ಈ ಮೊದಲು ಮಹಾರಾಷ್ಟ್ರದ ನಾಸಿಕ್‌ನಲ್ಲಿ ರಾತ್ರಿ ಹನ್ನೆರಡು ಗಂಟೆಗೆ ಎರಡು ಭೂಕಂಪದ ಆಘಾತಗಳು ಸಂಭವಿಸಿವೆ.
ಮುಂಬೈನಲ್ಲಿ 2.7 ತೀವ್ರತೆಯ ಭೂಕಂಪ title=

ಮುಂಬೈ: ಮಹಾರಾಷ್ಟ್ರದಲ್ಲಿ 12 ಗಂಟೆಗಳಲ್ಲಿ ಸತತ ಎರಡನೇ ಬಾರಿಗೆ ಭೂಕಂಪ ಸಂಭವಿಸಿದೆ. ಉತ್ತರ ಮುಂಬೈನಲ್ಲಿ ಶನಿವಾರ ಬೆಳಿಗ್ಗೆ ಭೂಕಂಪನ ಸಂಭವಿಸಿದೆ. ಇದರಿಂದಾಗಿ ಗಾಬರಿಗೊಂಡ  ಜನರು ಮನೆಗಳಿಂದ ಹೊರಬಂದಿರುವ ಘಟನೆ ನಡೆದಿದೆ. ಇದರ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 2.7 ಎಂದು ಅಳೆಯಲಾಯಿತು. 

ಈ ಮೊದಲು ಮಹಾರಾಷ್ಟ್ರದ ನಾಸಿಕ್‌ನಲ್ಲಿ ರಾತ್ರಿ ಹನ್ನೆರಡು ಗಂಟೆಗೆ ಎರಡು ಭೂಕಂಪದ (Earthquake) ಆಘಾತಗಳು ಸಂಭವಿಸಿವೆ. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆಯನ್ನು ಅಳೆಯಲಾಯಿತು. ಸತತ ಎರಡು ಭೂಕಂಪ ಕಂಪನಗಳು ನಾಸಿಕ್ ಜನರನ್ನು ಭಯಭೀತಿಗೊಳಿಸಿತ್ತು.

ಈ ಮೊದಲು ಮಹಾರಾಷ್ಟ್ರದ ನಾಸಿಕ್‌ನಲ್ಲಿ ರಾತ್ರಿ ಹನ್ನೆರಡು ಗಂಟೆಗೆ ಎರಡು ಭೂಕಂಪದ ಆಘಾತಗಳು ಸಂಭವಿಸಿವೆ. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆಯನ್ನು 4 ರಷ್ಟಿದೆ. ಕಳೆದ 12 ಗಂಟೆಗಳಲ್ಲಿ ಸತತ 3 ಭೂಕಂಪನವು ಮಹಾರಾಷ್ಟ್ರದ ಜನರನ್ನು ಹೆದರಿಸಿದೆ. 

ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ ಕಳೆದ ತಿಂಗಳು ಮಹಾರಾಷ್ಟ್ರದ ಪಾಲ್ಘರ್ನಲ್ಲಿ ಸೌಮ್ಯ ನಡುಕ ಉಂಟಾಗಿದೆ. ಅದರ ತೀವ್ರತೆಯನ್ನು 2.8ರಷ್ಟಿತ್ತು ಎನ್ನಲಾಗಿದೆ. ಆದಾಗ್ಯೂ ಆ ಭೂಕಂಪದಲ್ಲಿ ಯಾವುದೇ ಸಾವುನೋವು ಅಥವಾ ಹಾನಿ ಸಂಭವಿಸಿಲ್ಲ.

ಮುಂಬೈನಲ್ಲಿ ಭೂಕಂಪದ ನಂತರ ಸೋಷಿಯಲ್ ಮೀಡಿಯಾದಲ್ಲಿ ತಮಾಷೆಯ ಮೇಮ್ಸ್ ಮತ್ತು ಕಾಮೆಂಟ್ಗಳ ಮಹಾಪೂರವೇ ಹರಿದು ಬರುತ್ತದೆ. ನಾನು ಇಲ್ಲಿ ಬದುಕುಳಿಯುವುದಿಲ್ಲ ಎಂದು ಬಳಕೆದಾರರ ಸಾಹಿಲ್ ಚಿತ್ರದ ಹಾಕುವ ಮೂಲಕ ಪ್ರತಿಕ್ರಿಯಿಸಿದ್ದಾರೆ.
 

Trending News