Balasore Train Mishap Update: ರೇಲ್ವೆ ವಿಭಾಗದ ಮೂವರು ಸಿಬ್ಬಂದಿಗಳನ್ನು ಬಂಧಿಸಿದ ಸಿಬಿಐ

Balasore Train Accident Update: ಒಡಿಶಾದ ಬಾಲಸೋರ್‌ನಲ್ಲಿ ನಡೆದ ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ಸಿಬಿಐ ಶುಕ್ರವಾರ (ಜುಲೈ 7) ಮೂವರು ರೈಲ್ವೆ ಉದ್ಯೋಗಿಗಳನ್ನು ಐಪಿಸಿ ಸೆಕ್ಷನ್ 304 ಮತ್ತು 201 ರ ಅಡಿಯಲ್ಲಿ ಬಂಧಿಸಿದೆ.  

Written by - Nitin Tabib | Last Updated : Jul 7, 2023, 07:05 PM IST
  • ಮಹಂತೋ, ಖಾನ್ ಮತ್ತು ಪಪ್ಪು ಅವರನ್ನು ಐಪಿಸಿ ಸೆಕ್ಷನ್ 304 (ಕೊಲೆಗೆ ಸಮವಲ್ಲದ ಅಪರಾಧಿ ನರಹತ್ಯೆ) ಮತ್ತು
  • 201 (ಸಾಕ್ಷ್ಯ ನಾಶಕ್ಕೆ ಯತ್ನ) ಅಡಿಯಲ್ಲಿ ಬಂಧಿಸಲಾಗಿದೆ, ವಾಸ್ತವವಾಗಿ, ಜೂನ್ 2 ರಂದು ಸಂಜೆ 7 ಗಂಟೆಯ ಸುಮಾರಿಗೆ ಕೋರಮಂಡಲ್ ಎಕ್ಸ್‌ಪ್ರೆಸ್‌ ರೈಲು
  • ಬಹನಾಗಾ ಬಜಾರ್ ರೈಲು ನಿಲ್ದಾಣದ ಬಳಿ ತಂಗಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು.
Balasore Train Mishap Update: ರೇಲ್ವೆ ವಿಭಾಗದ ಮೂವರು ಸಿಬ್ಬಂದಿಗಳನ್ನು ಬಂಧಿಸಿದ ಸಿಬಿಐ title=

Odisha Train Accident: ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ ಮೂವರು ರೈಲ್ವೆ ಉದ್ಯೋಗಿಗಳನ್ನು ಸಿಬಿಐ ಇಂದು ತನ್ನ ವಶಕ್ಕೆ ಪಡೆದುಕೊಂಡಿದೆ. ಈ ಮೂವರ ಹೆಸರುಗಳು ಹಿರಿಯ ಸೆಕ್ಷನ್ ಇಂಜಿನಿಯರ್ ಅರುಣ್ ಕುಮಾರ್ ಮಹಂತೋ, ಹಿರಿಯ ಸೆಕ್ಷನ್ ಇಂಜಿನಿಯರ್ ಮೊಹಮ್ಮದ್ ಅಮೀರ್ ಖಾನ್ ಮತ್ತು ತಂತ್ರಜ್ಞ ಪಪ್ಪು ಕುಮಾರ್ ಎಂದು ಹೇಳಲಾಗಿದೆ.

ಮಹಂತೋ, ಖಾನ್ ಮತ್ತು ಪಪ್ಪು ಅವರನ್ನು ಐಪಿಸಿ ಸೆಕ್ಷನ್ 304 (ಕೊಲೆಗೆ ಸಮವಲ್ಲದ ಅಪರಾಧಿ ನರಹತ್ಯೆ) ಮತ್ತು 201 (ಸಾಕ್ಷ್ಯ ನಾಶಕ್ಕೆ ಯತ್ನ) ಅಡಿಯಲ್ಲಿ ಬಂಧಿಸಲಾಗಿದೆ, ವಾಸ್ತವವಾಗಿ, ಜೂನ್ 2 ರಂದು ಸಂಜೆ 7 ಗಂಟೆಯ ಸುಮಾರಿಗೆ ಕೋರಮಂಡಲ್ ಎಕ್ಸ್‌ಪ್ರೆಸ್‌ ರೈಲು ಬಹನಾಗಾ ಬಜಾರ್ ರೈಲು ನಿಲ್ದಾಣದ ಬಳಿ ತಂಗಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು. 

ಇದರ ನಂತರ, ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಕೂಡ ಅಪಘಾತದ ಪ್ರಭಾವಕ್ಕೆ ಒಳಗಾಗಿತ್ತು. ಈ ರೈಲು ಅಪಘಾತದಲ್ಲಿ 292 ಜನರು ಸಾವನ್ನಪ್ಪಿದ್ದರು ಮತ್ತು 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಇದನ್ನೂ ಓದಿ-Uniform Civil Code: 'ಅನುಮಾನಾಸ್ಪದ ಮೌನ ಮೊಸಕ್ಕೆ ಸಮಾನ' ಎಂದು ಕೇರಳ ಮುಖ್ಯಮಂತ್ರಿ ಹೇಳಿದ್ದೇಕೆ?

ರೈಲ್ವೆ ವರದಿ ಹೇಳಿದ್ದೇನು?
ಭೀಕರ ರೈಲು ಅಪಘಾತದ ನಂತರ ತನಿಖೆ ನಡೆಸಲು ರೈಲ್ವೆ ಸಮಿತಿಯನ್ನು ರಚಿಸಿತ್ತು. ಇದರೊಂದಿಗೆ ಇಡೀ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ಅಪಘಾತಕ್ಕೆ ಮುಖ್ಯ ಕಾರಣ ‘ತಪ್ಪು ಸಿಗ್ನಲ್’ ಎಂಬುದನ್ನು ಈ ಸಮಿತಿ ಹೇಳಿತ್ತು.

ಇದನ್ನೂ ಓದಿ-NCP Crisis: 'ನಾನೇ ಪಕ್ಷದ ಅಧ್ಯಕ್ಷ' ಪಕ್ಷದ ಸಭೆಯಲ್ಲಿ ಅಜಿತ್ ಪವಾರ್ ಗೆ ಶರದ್ ಪವಾರ್ ನೇರ ಚಾಲೆಂಜ್

ಸಿಗ್ನಲಿಂಗ್ ಕಾರ್ಯದಲ್ಲಿ ಲೋಪಗಳಿದ್ದರೂ, ಅಪಘಾತದ ಸ್ಥಳವಾದ ಬಹಂಗಾ ಬಜಾರ್‌ನಲ್ಲಿನ ಸ್ಟೇಷನ್ ಮ್ಯಾನೇಜರ್, ಎಸ್ & ಟಿ ಸಿಬ್ಬಂದಿಗೆ ಎರಡು ಸಮಾನಾಂತರ ಸಂಪರ್ಕದ ಸ್ವಿಚ್‌ಗಳನ್ನು ಅಳವಡಿಸಲು ಸೂಚನೆ ನೀಡಿದ್ದರು ಎಂದು ರೈಲ್ವೆ ಸುರಕ್ಷತಾ ಆಯೋಗ (ಸಿಆರ್‌ಎಸ್) ರೈಲ್ವೆ ಮಂಡಳಿಗೆ ಸಲ್ಲಿಸಿದ ವರದಿಯಲ್ಲಿ ಹೇಳಿದೆ. 'ಅಸಹಜ ನಡವಳಿಕೆ'ಯನ್ನು ಪದೇ ಪದೇ ವರದಿ ಮಾಡಿದ್ದರೆ, ಅವರು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬಹುದಿತ್ತು ಎಂದು ವರದಿ ಹೇಳಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News