ತಂದೆ ಮಾತ್ರವಲ್ಲ ತಾಯಿಯ Surname ಕೂಡಾ ಮಕ್ಕಳು ಬಳಸಬಹುದು -ದೆಹಲಿ ಹೈಕೋರ್ಟ್ ತೀರ್ಪು

ಬಾಲಕಿಯ ತಂದೆಯೊಬ್ಬರು, ದಾಖಲೆಗಳಲ್ಲಿ ತನ್ನ ಮಗಳ ಉಪನಾಮವಾಗಿ (surname) ತಮ್ಮ ಹೆಸರು ಸೇರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಕೋರ್ಟ್ ಮೆಟ್ಟಿಲೇರಿದ್ದರು.   

Written by - Ranjitha R K | Last Updated : Aug 6, 2021, 08:37 PM IST
  • ಮಕ್ಕಳು ತಾಯಿಯ ಉಪನಾಮವನ್ನು ಬಳಸಬಹುದು
  • ಯಾವ ಉಪನಾಮ ಬಳಸಬೇಕು ಎಂದು ಒತ್ತಡ ಹೇರುವಂತಿಲ್ಲ
  • ದೆಹಲಿ ಹೈಕೋರ್ಟ್ ನೀಡಿರುವ ಮಹತ್ವದ ತೀರ್ಪು
ತಂದೆ ಮಾತ್ರವಲ್ಲ ತಾಯಿಯ Surname ಕೂಡಾ ಮಕ್ಕಳು ಬಳಸಬಹುದು -ದೆಹಲಿ ಹೈಕೋರ್ಟ್ ತೀರ್ಪು  title=
ಮಕ್ಕಳು ತಾಯಿಯ ಉಪನಾಮವನ್ನು ಬಳಸಬಹುದು (photo zee news)

ನವದೆಹಲಿ : ದೆಹಲಿ ಹೈ ಕೋರ್ಟ್ ಶಕ್ರವಾರ ಮಹತ್ವದ ತೀರ್ಪು ಪ್ರಕಟಿಸಿದೆ. ತನ್ನ ಹೆಸರಿನ ಜೊತೆಯಲ್ಲಿ ಯಾವ ಸರ್ ನೇಮ್ ಬಳಸಬೇಕು ಎಂದು ಮಕ್ಕಳ ಮೇಲೆ ಒತ್ತಡ ಹೇರುವ ಅಧಿಕಾರ ತಂದೆಗೆ ಇಲ್ಲ ಎಂದು ಕೋರ್ಟ್ (delhi high court) ಹೇಳಿದೆ.  ತನ್ನ ತಾಯಿಯ ಉಪನಾಮವನ್ನು ಬಳಸುವ  ಸಂಪೂರ್ಣ ಹಕ್ಕು ಪ್ರತಿ ಮಗುವಿಗೂ ಇದೆ ಎಂದು ಕೋರ್ಟ್ ಹೇಳಿದೆ. ಬಾಲಕಿಯ ತಂದೆಯೊಬ್ಬರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ, ಕೋರ್ಟ್ ಈ ತೀರ್ಪು ನೀಡಿದೆ. ಬಾಲಕಿಯ ತಂದೆಯೊಬ್ಬರು, ದಾಖಲೆಗಳಲ್ಲಿ ತನ್ನ ಮಗಳ ಉಪನಾಮವಾಗಿ (surname) ತಮ್ಮ ಹೆಸರು ಸೇರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. 

'ಮಕ್ಕಳು ತಾಯಿಯ ಉಪನಾಮವನ್ನು (Surname) ಬಳಸಬಹುದು':
ತಂದೆ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ, ನ್ಯಾಯಮೂರ್ತಿ ರೇಖಾ ಪಲ್ಲಿ,  'ಮಗಳು ಯಾವ ಸರ್ ನೇಮ್ ಬಳಸಬೇಕು ಎಂದು ನಿರ್ಧಾರ ಮಾಡುವ ಹಕ್ಕು ತಂದೆಗೆ ಇಲ್ಲ. ಈ ಬಗ್ಗೆ ಮಕ್ಕಳ ಮೇಲೆ ಯಾವುದೇ ಕಾರಣಕ್ಕೂ ಒತ್ತಡ ಹೇರುವಂತಿಲ್ಲ ಎಂದು ತೀರ್ಪು ಪ್ರಕಟಿಸಿದ್ದಾರೆ. ಅಲ್ಲದೆ,  ತನ್ನ ಉಪನಾಮದಿಂದ (surname) ಬಾಲಕಿ  ಸಂತೋಷವಾಗಿದ್ದಾಳೆ ಎಂದ ಮೇಲೆ ಸಮಸ್ಯೆ ಏನು ಎಂದು ಕೋರ್ಟ್ (Delhi high court) ಪ್ರಶ್ನಿಸಿದೆ. ತನ್ನ ತಾಯಿಯ ಉಪನಾಮವನ್ನು ಬಳಸುವ ಹಕ್ಕು ಪ್ರತಿ ಮಗುವಿಗೂ ಇದೆ ಎಂದು ನ್ಯಾಯಾಲಯ ಹೇಳಿದೆ. 

ಇದನ್ನೂ ಓದಿ : Encounter in Rajouri: ಜಮ್ಮು-ಕಾಶ್ಮೀರದಲ್ಲಿ ಇಬ್ಬರು ಉಗ್ರರನ್ನು ಹತ್ಯೆಗೈದ ಭದ್ರತಾ ಪಡೆ

ಅರ್ಜಿ ವಜಾಗೊಳಿಸಿದ ನ್ಯಾಯಾಲಯ : 
ಅರ್ಜಿದಾರರ ಪರ ವಕೀಲರು ಮಗುವಿನ ಉಪನಾಮವನ್ನು ಅವರ ಪತ್ನಿ ಬದಲಾಯಿಸಿದ್ದಾರೆ ಎಂದು ಅರ್ಜಿ ಸಲ್ಲಿಸಿದ್ದರು. ಹೆಸರಿನ ಬದಲಾವಣೆಯಿಂದಾಗಿ, ವಿಮಾ ಸಂಸ್ಥೆಯಿಂದ (insurance company) ವಿಮಾ ಸೇವೆಗಳನ್ನು ಪಡೆಯಲು ಕಷ್ಟವಾಗುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.  ಯಾಕೆಂದರೆ, ತಂದೆಯ ಉಪನಾಮದೊಂದಿಗೆ ಹುಡುಗಿಯ ಹೆಸರಿನಲ್ಲಿ ಪಾಲಿಸಿಯನ್ನು ತೆಗೆದುಕೊಳ್ಳಲಾಗಿದೆ ಎಂಬುದು ಅರ್ಜಿದಾರರ ವಾದವಾಗಿತ್ತು. ಆದರೆ, ನ್ಯಾಯಾಲಯವು (court) ಈ ಅರ್ಜಿಯನ್ನು ವಜಾಗೊಳಿಸಿತು. 

ಇದನ್ನೂ ಓದಿ : PM ಕಿಸಾನ್ 9ನೇ ಕಂತಿನ ಹಣ ಮುಂದಿನ ವಾರ ಖಾತೆಗೆ : ಈ ತಪ್ಪುಗಳನ್ನ ಆದಷ್ಟೂ ಬೇಗ ಸರಿಪಡಿಸಿ! 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News