ಟಿಕೆಟ್ ಬುಕಿಂಗ್ ನಿಲ್ಲಿಸಿ, ವಿಮಾನ ಹಾರಾಟ ಪ್ರಾರಂಭಿಸುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಇಲ್ಲ: DGCA

ವಾಯುಯಾನ ನಿಯಂತ್ರಕವು ಎಲ್ಲಾ ಬುಕಿಂಗ್‌ಗಳನ್ನು ನಿಲ್ಲಿಸುವಂತೆ ವಿಮಾನಯಾನ ಸಂಸ್ಥೆಗಳನ್ನು ಕೇಳಿದೆ ಮತ್ತು ಕಾರ್ಯಾಚರಣೆಯನ್ನು ಪ್ರಾರಂಭಿಸುವ ಬಗ್ಗೆ ಸರಿಯಾದ ಸಮಯಕ್ಕೆ ಸೂಚನೆಗಳನ್ನು ನೀಡಲಾಗುವುದು ಎಂದು ತಿಳಿಸಿದೆ.

Last Updated : Apr 20, 2020, 06:09 AM IST
ಟಿಕೆಟ್ ಬುಕಿಂಗ್ ನಿಲ್ಲಿಸಿ, ವಿಮಾನ ಹಾರಾಟ ಪ್ರಾರಂಭಿಸುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಇಲ್ಲ: DGCA title=

ನವದೆಹಲಿ: ಸರ್ಕಾರವು ಲಾಕ್‌ಡೌನ್ ನಿರ್ಬಂಧಗಳನ್ನು ರದ್ದುಪಡಿಸಿದ ನಂತರ ಮೇ 4ರಿಂದ ವಿಮಾನ ಹಾರಾಟವನ್ನು ಪುನರಾರಂಭಿಸಲು ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ಹೀಗಾಗಿ ವಿಮಾನಯಾನ ಸಂಸ್ಥೆಗಳು ಯಾವುದೇ ಹೊಸ ಬುಕಿಂಗ್ ತೆಗೆದುಕೊಳ್ಳುವುದನ್ನು ತಡೆಯಬೇಕು ಎಂದು ಏವಿಯೇಷನ್ ರೆಗ್ಯುಲೇಟರ್ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA) ಭಾನುವಾರ (ಏಪ್ರಿಲ್ 19) ತಿಳಿಸಿದೆ.  

ಡಿಜಿಸಿಎ ಹೊರಡಿಸಿರುವ ಹೇಳಿಕೆಯಲ್ಲಿ 2020ರ ಮೇ 4ರಂದು ವಿಮಾನಯಾನ ಸಂಸ್ಥೆಗಳಿಗೆ ಪ್ರಯಾಣದ ಟಿಕೆಟ್ ಕಾಯ್ದಿರಿಸುವಿಕೆಯನ್ನು ಪ್ರಾರಂಭಿಸಲು ಯಾವುದೇ ನಿರ್ದೇಶನ / ಕ್ಲಿಯರೆನ್ಸ್ ಇರಲಿಲ್ಲ. ಈ ನಿಟ್ಟಿನಲ್ಲಿ ದೇಶೀಯ / ಅಂತರರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ ಎಂದು ಸಂಬಂಧಪಟ್ಟ ಎಲ್ಲರ ಗಮನಕ್ಕೆ ತರಲಾಗಿದೆ. ಆದಾಗ್ಯೂ ವಿಮಾನಯಾನ ಸಂಸ್ಥೆಗಳು ಪ್ರಯಾಣಕ್ಕಾಗಿ ಟಿಕೆಟ್ ಕಾಯ್ದಿರಿಸಲು ಪ್ರಾರಂಭಿಸಿವೆ ಎಂದು ಗಮನಿಸಲಾಗಿದೆ. 

ಈ ಹಿನ್ನೆಲೆಯಲ್ಲಿ ಎಲ್ಲಾ ವಿಮಾನಯಾನ ಸಂಸ್ಥೆಗಳು ಮೇಲೆ ವಿವರಿಸಿದಂತೆ ಟಿಕೆಟ್ ಕಾಯ್ದಿರಿಸುವುದನ್ನು ತಪ್ಪಿಸಲು ನಿರ್ದೇಶಿಸಲಾಗಿದೆ. ಕಾರ್ಯಾಚರಣೆಯನ್ನು ಪುನರಾರಂಭಿಸಲು ಅವರಿಗೆ ಸಾಕಷ್ಟು ಸೂಚನೆ ಮತ್ತು ಸಮಯವನ್ನು ನೀಡಲಾಗುವುದು ಎಂದು ವಿಮಾನಯಾನ ಸಂಸ್ಥೆಗಳು ಗಮನಿಸಬಹುದು ಎಂದು ಅದು ಹೇಳಿದೆ.

ನಿಯಂತ್ರಕವು ಎಲ್ಲಾ ವಿಮಾನಯಾನ ಸಂಸ್ಥೆಗಳಿಂದ ಕಟ್ಟುನಿಟ್ಟಿನ ಈ ಸೂಚನೆಗಳನ್ನು ಅನುಸರಿಸುವಂತೆ ಆದೇಶಿಸಿದೆ.

ಲಾಕ್‌ಡೌನ್ (Lockdown) ಜಾರಿಗೆ ಬಂದ ಬಳಿಕ ಮಾರ್ಚ್ 25ರಿಂದ ಪ್ರಯಾಣಿಕರ ವಿಮಾನ ಹಾರಾಟವನ್ನು ನಿಷೇಧಿಸಲಾಯಿತು. ದೇಶದಲ್ಲಿ ಪ್ರಯಾಣಿಕರ ಹಾರಾಟವನ್ನು ಪುನರಾರಂಭಿಸಲು ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಈ ಹಿಂದೆ ಟ್ವೀಟ್ ಮಾಡಿದ್ದರು.

ಇದಕ್ಕೂ ಮೊದಲು ಖಾಸಗಿ ಭಾರತೀಯ ವಿಮಾನಯಾನ ಸಂಸ್ಥೆಗಳು ಮೇ 4ರಿಂದ ಆಯ್ದ ವಿಮಾನಗಳಲ್ಲಿ ಭಾನುವಾರ ಬುಕಿಂಗ್ ತೆಗೆದುಕೊಳ್ಳುತ್ತಿದ್ದವು.

ಪ್ರಯಾಣಿಕರಿಗಾಗಿ ರೈಲು ಅಥವಾ ವಿಮಾನಯಾನ ಸೇವೆಗಳನ್ನು ಪ್ರಾರಂಭಿಸುವ ಬಗ್ಗೆ ಕೇಂದ್ರ ಸರ್ಕಾರ ಇಲ್ಲಿಯವರೆಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಭಾನುವಾರ ಸ್ಪಷ್ಟಪಡಿಸಿದ್ದು ಈ ಕುರಿತು ಯಾವುದೇ ಚರ್ಚೆ ವ್ಯರ್ಥವಾಗಿದೆ ಎಂದು ಪ್ರತಿಪಾದಿಸಿದರು.

Trending News