"ನಾನು ರಾಜಕೀಯದಲ್ಲಿರದಿದ್ದರೆ ಅವರ ನಾಲಿಗೆಯನ್ನು ಸೀಳುತ್ತಿದ್ದೆ"

ಬಿಜೆಪಿಯವರೆಲ್ಲರೂ ಕಳ್ಳರು ಎಂದು ಆರೋಪಿಸಿದ ಮಮತಾ ಬ್ಯಾನರ್ಜೀ ತಾವು ರಾಜಕೀಯದಲ್ಲಿರದಿದ್ದರೆ ಅವರ ನಾಲಿಗೆಯನ್ನು ಸಿಳುತ್ತಿರುವುದಾಗಿ ಎಂದು ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

Written by - Zee Kannada News Desk | Last Updated : Aug 29, 2022, 06:23 PM IST
  • ಬಿಜೆಪಿಯವರು ನಮ್ಮನ್ನೆಲ್ಲಾ ಕಳ್ಳರು, ತಾವೆಲ್ಲಾ ಪವಿತ್ರ ಎಂದು ಬಿಂಬಿಸುತ್ತಿದ್ದಾರೆ, ಒಂದು ವೇಳೆ ನಾನು ರಾಜಕೀಯದಲ್ಲಿ ಇರದೇ ಇದ್ದಿದ್ದರೆ ಅವರ ನಾಲಿಗೆಯನ್ನು ಸೀಳುತ್ತಿದ್ದೆ ಎಂದು ಅವರು ಗುಡುಗಿದ್ದಾರೆ.
"ನಾನು ರಾಜಕೀಯದಲ್ಲಿರದಿದ್ದರೆ ಅವರ ನಾಲಿಗೆಯನ್ನು ಸೀಳುತ್ತಿದ್ದೆ" title=

ನವದೆಹಲಿ: ಬಿಜೆಪಿಯವರೆಲ್ಲರೂ ಕಳ್ಳರು ಎಂದು ಆರೋಪಿಸಿದ ಮಮತಾ ಬ್ಯಾನರ್ಜೀ ತಾವು ರಾಜಕೀಯದಲ್ಲಿರದಿದ್ದರೆ ಅವರ ನಾಲಿಗೆಯನ್ನು ಸಿಳುತ್ತಿರುವುದಾಗಿ ಎಂದು ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

ಟಿಎಂಸಿ ಪಕ್ಷದ ವಿದ್ಯಾರ್ಥಿ ಘಟಕದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜೀ, ಕೇಸರಿ ಪಾಳಯವನ್ನು ವಿರೋಧಿಸುವ ಪಕ್ಷಗಳ ಚುನಾಯಿತ ರಾಜ್ಯ ಸರ್ಕಾರಗಳನ್ನು ಕಿತ್ತೊಗೆಯಲು ಕೇಂದ್ರೀಯ ಸಂಸ್ಥೆಗಳು ಮತ್ತು ಅಕ್ರಮ ಹಣವನ್ನು ಬಳಸಲಾಗುತ್ತಿದೆ ಎಂದು ಹೇಳಿದರು. 2024ರ ಲೋಕಸಭೆ ಚುನಾವಣೆಯಲ್ಲಿ ಕೇಸರಿ ಪಕ್ಷವನ್ನು ಸೋಲಿಸುವುದಾಗಿಯೂ ಮಮತಾ ಶಪಥ ಮಾಡಿದ್ದಾರೆ.

ಇದನ್ನೂ ಓದಿ: ಚಾಮರಾಜನಗರದ ಹಲವೆಡೆ ಮಳೆ ಅವಾಂತರ: ಕೋಡಿ ಬಿದ್ದಿವೆ ಹಲವು ಕೆರೆ

ಬಿಜೆಪಿಯವರು ನಮ್ಮನ್ನೆಲ್ಲಾ ಕಳ್ಳರು, ತಾವೆಲ್ಲಾ ಪವಿತ್ರ ಎಂದು ಬಿಂಬಿಸುತ್ತಿದ್ದಾರೆ, ಒಂದು ವೇಳೆ ನಾನು ರಾಜಕೀಯದಲ್ಲಿ ಇರದೇ ಇದ್ದಿದ್ದರೆ ಅವರ ನಾಲಿಗೆಯನ್ನು ಸೀಳುತ್ತಿದ್ದೆ ಎಂದು ಅವರು ಗುಡುಗಿದ್ದಾರೆ. ಇದೆ ವೇಳೆ ಫಿರ್ಹಾದ್ ಹಕೀಮ್ ಮತ್ತು ಅಭಿಷೇಕ್ ಬ್ಯಾನರ್ಜಿ ಸೇರಿದಂತೆ ಹಿರಿಯ ಟಿಎಂಸಿ ನಾಯಕರ ವಿರುದ್ಧ "ದುರುದ್ದೇಶಪೂರಿತ ಅಭಿಯಾನ" ನಡೆಸಲಾಗಿದೆ ಎಂದು ಮಮತಾ ಬ್ಯಾನರ್ಜೀ ಆರೋಪಿಸಿದ್ದಾರೆ.

ಇದನ್ನೂ ಓದಿ: Talikoti : ಮಹಾಗಣಪತಿ ಪ್ರತಿಷ್ಠಾಪನೆ ಸ್ಥಳದ ಭೂಮಿಪೂಜಾದಲ್ಲಿ ಸಾವರ್ಕರ್ ಪೋಟೋ!

ಹಕೀಮ್ ಅವರನ್ನು ಇತ್ತೀಚೆಗೆ ಕೇಂದ್ರ ಏಜೆನ್ಸಿಗಳು ಕರೆಸಿದ್ದರಿಂದ ಅವರನ್ನು ಬಂಧಿಸಬಹುದು ಎಂದು ಆತಂಕ ವ್ಯಕ್ತಪಡಿಸಿದ ಬ್ಯಾನರ್ಜಿ "ಅವನನ್ನು ಬಂಧಿಸಿದರೆ ಕೇವಲ ಕಿರುಕುಳಕ್ಕಾಗಿ ಹೀಗಾಗಿ ಅದನ್ನು ನೀವು ನಕಲಿ ಕೇಸ್ ಎಂದು ನೀವು ಖಚಿತವಾಗಿ ಹೇಳಬಹುದು" ಎಂದು ಅವರು ಹೇಳಿದ್ದಾರೆ.

"ಅವರು ಟಿಎಂಸಿ ನಾಯಕರ ಬಳಿ ಹಣದ ಬಗ್ಗೆ ಮಾತನಾಡುತ್ತಿದ್ದಾರೆ. ಮಹಾರಾಷ್ಟ್ರ ಮಾದರಿಯಲ್ಲಿ ಚುನಾಯಿತ ರಾಜ್ಯ ಸರ್ಕಾರಗಳನ್ನು ಕಿತ್ತೊಗೆಯಲು ಬಿಜೆಪಿಗೆ ಸಾವಿರ ಕೋಟಿ ಎಲ್ಲಿಂದ ಬರುತ್ತಿದೆ. ಬಿಜೆಪಿ ಹವಾಲಾ ಮೂಲಕ ವಿದೇಶದಲ್ಲಿ ಹಣ ಇಡುತ್ತಿದೆ.2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು,"ಎಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News