ಜೈಲಿನಲ್ಲಿಯೇ ಗರ್ಭಿಣಿಯಾಗುತ್ತಿರುವ ಮಹಿಳೆಯರು !196 ಮಕ್ಕಳ ಜನನ :ವರದಿ ಕೇಳಿದ ಹೈಕೋರ್ಟ್

West Bengal News: ಜೈಲುಗಳನ್ನು ಪರಿಶೀಲಿಸಿ ಅಲ್ಲಿನ ಸ್ಥಿತಿಗತಿಗಳ ಕುರಿತು ವರದಿ ನೀಡುವಂತೆ ಭಾಂಜಾಗೆ ನ್ಯಾಯಾಲಯ ಸೂಚಿಸಿದೆ. ಕೋಲ್ಕತ್ತಾ  ಹೈಕೋರ್ಟ್ ಪ್ರಕರಣವನ್ನು ಕ್ರಿಮಿನಲ್ ಪೀಠಕ್ಕೆ ವರ್ಗಾಯಿಸಲು ಆದೇಶಿಸಿದೆ. ಈ ಪ್ರಕರಣವನ್ನು ಹೈಕೋರ್ಟ್ ಸೋಮವಾರ ವಿಚಾರಣೆ ನಡೆಸಲಿದೆ.

Written by - Ranjitha R K | Last Updated : Feb 9, 2024, 01:09 PM IST
  • ಪಶ್ಚಿಮ ಬಂಗಾಳದ ಜೈಲುಗಳಲ್ಲಿ ಬಂಧಿಯಾಗಿರುವ ಮಹಿಳೆಯರು ಗರ್ಭಿಣಿಯಾಗುತ್ತಿದ್ದಾರೆ
  • ಇದು ಹೇಗೆ ಎನ್ನುವುದೇ ಸದ್ಯಕ್ಕೆ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ.
  • ಅಮಿಕಸ್ ಕ್ಯೂರಿ ತಪಸ್ ಭಂಜಾ ಹೈಕೋರ್ಟ್‌ಗೆ ಈ ಬಗ್ಗೆ ವರದಿ ಸಲ್ಲಿಸಿದ್ದಾರೆ.
ಜೈಲಿನಲ್ಲಿಯೇ ಗರ್ಭಿಣಿಯಾಗುತ್ತಿರುವ ಮಹಿಳೆಯರು !196 ಮಕ್ಕಳ ಜನನ :ವರದಿ ಕೇಳಿದ ಹೈಕೋರ್ಟ್  title=

West Bengal News : ಪಶ್ಚಿಮ ಬಂಗಾಳದ ಜೈಲುಗಳಲ್ಲಿ ಬಂಧಿಯಾಗಿರುವ ಮಹಿಳೆಯರು ಗರ್ಭಿಣಿಯಾಗುತ್ತಿದ್ದಾರೆ. ಇದು ಹೇಗೆ ಎನ್ನುವುದೇ ಸದ್ಯಕ್ಕೆ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ.  ಅಮಿಕಸ್ ಕ್ಯೂರಿ ತಪಸ್ ಭಂಜಾ ಅವರು ಗುರುವಾರ ಕೊಲ್ಕತಾ ಹೈಕೋರ್ಟ್‌ಗೆ ಈ ಬಗ್ಗೆ  ವರದಿ ಸಲ್ಲಿಸಿದ್ದಾರೆ. ಅವರ ಪ್ರಕಾರ, 196 ಮಕ್ಕಳು ಜೈಲುಗಳಲ್ಲಿ ವಾಸಿಸುತ್ತಿದ್ದಾರೆ. ಮಹಿಳೆಯರು ಯಾವ ಸಮಯದಲ್ಲಿ ಗರ್ಭಿಣಿಯಾದರು ಎನ್ನುವುದು ಈ ವರದಿಯಲ್ಲಿ ಸ್ಪಷ್ಟವಾಗಿಲ್ಲ. ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಶಿವಗಣನಂ ಅವರ ವಿಭಾಗೀಯ ಪೀಠದ ಮುಂದೆ, ಮಹಿಳಾ ಕೈದಿಗಳ ಸೆಲ್‌ಗಳಲ್ಲಿ ಪುರುಷ ಜೈಲು ಸಿಬ್ಬಂದಿಯ ಪ್ರವೇಶವನ್ನು ನಿಷೇಧಿಸಬೇಕು ಎಂದು ಭಂಜಾ ಸಲಹೆ ನೀಡಿದ್ದಾರೆ. ಜೈಲುಗಳನ್ನು ಪರಿಶೀಲಿಸಿ ಅಲ್ಲಿನ ಸ್ಥಿತಿಗತಿಗಳ ಕುರಿತು ವರದಿ ನೀಡುವಂತೆ ಭಾಂಜಾಗೆ ನ್ಯಾಯಾಲಯ ಸೂಚಿಸಿದೆ. ಕೋಲ್ಕತ್ತಾ  ಹೈಕೋರ್ಟ್ ಪ್ರಕರಣವನ್ನು ಕ್ರಿಮಿನಲ್ ಪೀಠಕ್ಕೆ ವರ್ಗಾಯಿಸಲು ಆದೇಶಿಸಿದೆ. ಈ ಪ್ರಕರಣವನ್ನು ಹೈಕೋರ್ಟ್ ಸೋಮವಾರ ವಿಚಾರಣೆ ನಡೆಸಲಿದೆ.

ಜೈಲಿಗೆ ಪ್ರವೇಶ ಮುನ್ನವೇ ಮಹಿಳೆಯರ ಗರ್ಭಧಾರಣೆ ಪರೀಕ್ಷೆ :
ಅಮಿಕಸ್ ಕ್ಯೂರಿಯವರು ಸಲ್ಲಿಸಿರುವ ವರದಿಯಲ್ಲಿ ಸುಮಾರು 196 ಮಕ್ಕಳು ಪಶ್ಚಿಮ ಬಂಗಾಳದ ವಿವಿಧ ಜೈಲುಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಭಂಜಾ ಅವರು ಅಲಿಪುರದ ಮಹಿಳಾ ಸುಧಾರಣಾ ಗೃಹದಲ್ಲಿ 15 ಮಕ್ಕಳು ಪತ್ತೆಯಾಗಿರುವುದಾಗಿ ಹೇಳಿದ್ದಾರೆ. ಈ ಪೈಕಿ 10 ಹುಡುಗರು ಮತ್ತು 5 ಹುಡುಗಿಯರು. ಕೆಲವರಿಗೆ ಸುಧಾರಣಾ ಗೃಹದಲ್ಲಿ ಹೆರಿಗೆ ಮಾಡಿಸಲಾಗಿದೆ ಎನ್ನುವ ಅಂಶ ಕೈದಿಗಳೊಂದಿಗಿನ ಮಾತುಕತೆ ವೇಳೆ ಬೆಳಕಿಗೆ ಬಂದಿದೆ ಎನ್ನುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.ಬಂಗಾಳದ ಜೈಲುಗಳಲ್ಲಿ ಇದಕ್ಕೆ ಸೂಕ್ತ ವೈದ್ಯಕೀಯ ಮೂಲಸೌಕರ್ಯಗಳಿಲ್ಲ ಎಂದು ಅಮಿಕಸ್ ಕ್ಯೂರಿ ವರದಿ ಹೇಳುತ್ತದೆ.  ಜೈಲು ಪ್ರವೇಶಿಸುವ ಮೊದಲು ಎಲ್ಲಾ ಮಹಿಳೆಯರ ಗರ್ಭಧಾರಣೆಯ ಪರೀಕ್ಷೆಯನ್ನು ಮಾಡಿಸಬೇಕು ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ. ಚೀಫ್ ಜ್ಯುಡಿಸ್ಟ್ರೀಯಲ್ ಮ್ಯಾಜಿಸ್ಟ್ರೇಟ್ ಈ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಬೇಕು. 
 ಎಂದಿದ್ದಾರೆ. 

ಇದನ್ನೂ ಓದಿ : Abhishek Ghosalkar Murder: ಫೇಸ್‌ಬುಕ್ ಲೈವ್‌ನಲ್ಲಿ ಶಿವಸೇನೆ ನಾಯಕ ಅಭಿಷೇಕ್ ಘೋಷಾಲ್ಕರ್ನ ಬರ್ಬರ ಹತ್ಯೆ

ಸಾಮರ್ಥ್ಯಕ್ಕಿಂತ ಹೆಚ್ಚು ಮಹಿಳಾ ಕೈದಿಗಳು: 
ಹೈಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ, ಬಂಗಾಳದಲ್ಲಿ ವಾರ್ಡ್‌ಗಳ ಸಾಮರ್ಥ್ಯವನ್ನು ಮೀರಿ ಅದರಲ್ಲಿ ಮಹಿಳಾ ಕೈದಿಗಳನ್ನು ತುಂಬಲಾಗಿದೆ ಎಂದು ಭಂಜಾ ಹೇಳಿದ್ದಾರೆ. ಧಂ ಧಂ  ಸೆಂಟ್ರಲ್ ಕರೆಕ್ಷನಲ್ ಹೋಮ್‌ನಲ್ಲಿ 400 ಮಹಿಳಾ ಕೈದಿಗಳು ಪತ್ತೆಯಾಗಿದ್ದಾರೆ ಎಂದು  ಹೇಳಿದ್ದಾರೆ. ಜನದಟ್ಟಣೆಯಿಂದಾಗಿ ಅಲಿಪುರ್ ಕರೆಕ್ಷನಲ್ ಹೋಮ್‌ನಿಂದ 90 ಕೈದಿಗಳ ವರ್ಗಾವಣೆಯನ್ನು ಅಮಿಕಸ್ ಕ್ಯೂರಿ ಉಲ್ಲೇಖಿಸಿದ್ದಾರೆ. ವಕೀಲ ತಪಸ್ ಕುಮಾರ್ ಭಂಜಾ ಅವರನ್ನು 2018 ರಲ್ಲಿ ಹೈಕೋರ್ಟ್ ಅಮಿಕಸ್ ಕ್ಯೂರಿಯಾಗಿ ನೇಮಿಸಲಾಗಿತ್ತು.

ಇದನ್ನೂ ಓದಿ : ಬ್ಯಾಂಕ್ ಆಫ್ ಬರೋಡದಲ್ಲಿ ಉದ್ಯೋಗವಕಾಶ! ಇಂದೇ ಅರ್ಜಿ ಸಲ್ಲಿಸಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News