Advocate Sourabh Kripal: ದೇಶದ ಮೊದಲ ಸಲಿಂಗಿ ನ್ಯಾಯಾಧೀಶರಾಗಲಿದ್ದಾರೆ ಸೌರಭ್ ಕೃಪಾಲ್

Supreme Court Collegium Approved First Gay Judge Of India - ಈ ಹಿಂದೆ, ಅಂದಿನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ನೇತೃತ್ವದ ದೆಹಲಿ ಹೈಕೋರ್ಟ್‌ನ (ಎಚ್‌ಸಿ) ಕೊಲಿಜಿಯಂ ಸೌರಭ್ ಕೃಪಾಲ್ ಅವರನ್ನು 13 ಅಕ್ಟೋಬರ್ 2017 ರಂದು ಬಡ್ತಿ ನೀಡುವಂತೆ ಶಿಫಾರಸು ಮಾಡಿತ್ತು.

Written by - Nitin Tabib | Last Updated : Nov 16, 2021, 12:16 PM IST
  • ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಿಂದ ಪದವಿ
  • 2 ದಶಕಗಳ ಕಾಲ ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿದ್ದರು
  • ವಿದೇಶಿ ವಿಶ್ವವಿದ್ಯಾಲಯದಲ್ಲಿ ಕಾನೂನು ಅಧ್ಯಯನ ಮಾಡಿದ್ದಾರೆ.
Advocate Sourabh Kripal: ದೇಶದ ಮೊದಲ ಸಲಿಂಗಿ ನ್ಯಾಯಾಧೀಶರಾಗಲಿದ್ದಾರೆ ಸೌರಭ್ ಕೃಪಾಲ್ title=
Supreme Court Collegium Approved First Gay Judge Of India (File Photo)

ನವದೆಹಲಿ: Supreme Court Collegium Approved First Gay Judge Of India - ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್. ವಿ.ರಾಮನ್ (CJI NV Ramana) ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ ದೆಹಲಿ ಹೈಕೋರ್ಟ್‌ನ ನ್ಯಾಯಾಧೀಶರಾಗಿ ವಕೀಲ ಸೌರಭ್ ಕೃಪಾಲ್ (Sourabh Kripal) ಅವರನ್ನು ನೇಮಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಇಲ್ಲಿ ಮಹತ್ವದ ವಿಷಯವೆಂದರೆ ಅವರು ದೇಶದ ಮೊದಲ ಸಲಿಂಗಿ ನ್ಯಾಯಾಧೀಶರಾಗಬಹುದು. ದೆಹಲಿ ಹೈಕೋರ್ಟ್‌ನ (Delhi High Court) ನ್ಯಾಯಾಧೀಶರಾಗಿ ಕೃಪಾಲ್ ಅವರ ಪ್ರಸ್ತಾವಿತ ನೇಮಕಾತಿಯು ಅವರ ಲೈಂಗಿಕ ಆಸಕ್ತಿಯ ಕಾರಣ ವಿವಾದದ ವಿಷಯವಾಗಿ ಪರಿಣಮಿಸಿತ್ತು.

ಶಿಫಾರಸಿನ ವಿವಾದ (Delhi HC Gay Judge)
13 ಅಕ್ಟೋಬರ್ 2017 ರಂದು, ಆಗಿನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಅವರ ಅಡಿಯಲ್ಲಿ ದೆಹಲಿ ಹೈಕೋರ್ಟ್‌ನ ಕೊಲಿಜಿಯಂ ಬಡ್ತಿಗಾಗಿ ಕೃಪಾಲ್ ಅವರನ್ನು ಶಿಫಾರಸು ಮಾಡಿತ್ತು. ಇದಾದ ಬಳಿಕ ಸುಪ್ರೀಂ ಕೋರ್ಟ್ ಕೊಲಿಜಿಯಂ ಕೂಡ ಈ ಪ್ರಸ್ತಾವನೆಗೆ ಅನುಮೋದನೆ ನೀಡಿತ್ತು. ಆದರೆ, ಕೃಪಾಲ್ ಅವರ ಲೈಂಗಿಕ ಆಸಕ್ತಿಯನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರವು ಅವರ ಶಿಫಾರಸಿಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಹೀಗಾಗಿ ಕೇಂದ್ರದ ಆಕ್ಷೇಪಣೆಯ ಹಿನ್ನೆಲೆ ಕಳೆದ ನಾಲ್ಕು ವರ್ಷಗಳಲ್ಲಿ ಹಲವು ಊಹಾಪೋಹಗಳು ಕೇಳಿಬಂದಿದ್ದವು. 

ಈ ಸಂಬಂಧ ವಿವಾದ ಉಂಟಾಗಿತ್ತು (Delhi High Court Judgement)
ಈ ಹಿಂದೆ, ಕೃಪಾಲ್ ಅವರನ್ನು ಹೈಕೋರ್ಟ್ ನ್ಯಾಯಾಧೀಶರನ್ನಾಗಿ ಮಾಡಲು ಶಿಫಾರಸು ಮಾಡಿದಾಗ, ಅವರ ಸಹಪಾಟಿ ಮತ್ತು ಸ್ವಿಸ್ ಮಾನವ ಹಕ್ಕುಗಳ ಕಾರ್ಯಕರ್ತ ನಿಕೋಲಸ್ ಜರ್ಮೈನ್ ಬ್ಯಾಚ್‌ಮನ್ (Nicolas Germain Bachmann) ಅವರೊಂದಿಗೆ ಅವರು ನಿಕಟವಾಗಿರುವುದನ್ನು ಕೇಂದ್ರ ಸರ್ಕಾರ ಆಕ್ಷೇಪಿಸಿತ್ತು.

ಸಿಜೆಐ ಎನ್‌ವಿ ರಮಣ ಅವರನ್ನು ಹೊರತುಪಡಿಸಿ, ನ್ಯಾಯಮೂರ್ತಿ ಯು ಯು ಲಲಿತ್ ಮತ್ತು ನ್ಯಾಯಮೂರ್ತಿ ಎಎಂ ಖಾನ್ವಿಲ್ಕರ್ ಅವರು ಹೈಕೋರ್ಟ್‌ನಲ್ಲಿ ನ್ಯಾಯಾಧೀಶರ ನೇಮಕಾತಿ ಮತ್ತು ವರ್ಗಾವಣೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ವ್ಯವಹರಿಸುವ ಮೂವರು ಸದಸ್ಯರ ಕೊಲಿಜಿಯಂನ ಭಾಗವಾಗಿದ್ದಾರೆ.

ಇದನ್ನೂ ಓದಿ-Hardik Pandya: 5 ಕೋಟಿ ರೂ. ಬೆಲೆಯ ವಾಚ್‌ಗಳು ವಶಕ್ಕೆ, ಹಾರ್ದಿಕ್ ಪಾಂಡ್ಯ ಹೇಳಿದ್ದೇನು..?

ಸೌರಭ್ ಕೃಪಾಲ್ ಸಾರ್ವಜನಿಕವಾಗಿ ತನ್ನನ್ನು ತಾನು ಸಲಿಂಗಿ ಎಂದು ಹೇಳಿಕೊಂಡಿದ್ದಾರೆ ಮತ್ತು ಸಲಿಂಗಕಾಮಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರಮುಖವಾಗಿ ಕೈಗೆತ್ತಿಕೊಳ್ಳುತ್ತಾರೆ. ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಪದವಿ ಪಡೆದ ಸೌರಭ್ ಕೃಪಾಲ್, ಮಾಜಿ ಸಿಜೆಐ ಬಿಎನ್ ಕೃಪಾಲ್ ಅವರ ಪುತ್ರರಾಗಿದ್ದಾರೆ.  ಇದರ ಜೊತೆಗೆ ಅವರು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದಾರೆ. ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ತಮ್ಮ ಸ್ನಾತಕೋತ್ತರ ಪದವಿ (ಕಾನೂನು) ಕೂಡ ಪಡೆದಿದ್ದಾರೆ.

ಇದನ್ನೂ ಓದಿ-T20 World Cup 2022: ಈ 7 ನಗರಗಳಲ್ಲಿ ನಡೆಯಲಿವೆ T20 ವಿಶ್ವಕಪ್ 2022 ಪಂದ್ಯಗಳು; ಯಾವಾಗ? ಎಲ್ಲಿ?

ಅವರು ಎರಡು ದಶಕಗಳಿಂದ ಸುಪ್ರೀಂ ಕೋರ್ಟ್‌ನಲ್ಲಿ ಪ್ರ್ಯಾಕ್ಟಿಸ್ ನಡೆಸಿದ್ದಾರೆ. ಸೌರಭ್ ಅವರ ಜನಪ್ರಿಯತೆಯು 'ನವತೇಜ್ ಸಿಂಗ್ ಜೋಹರ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ' ಪ್ರಕರಣದಲ್ಲಿ ತಿಳಿದಿದೆ, ವಾಸ್ತವವಾಗಿ ಅವರು ಸೆಕ್ಷನ್ 377 ರ ತೆಗೆದುಹಾಕುವಿಕೆಗಾಗಿ ಅರ್ಜಿದಾರರ ವಕೀಲರಾಗಿದ್ದರು. ಸೆಪ್ಟೆಂಬರ್ 2018 ರಲ್ಲಿ, ಸೆಕ್ಷನ್ 377 ರ ಕಾನೂನನ್ನು ಸುಪ್ರೀಂ ಕೋರ್ಟ್ ಹೊಡೆದು ಹಾಕಿದೆ. 

ಇದನ್ನೂ ಓದಿ-IPL 2022 ದೊಡ್ಡ ಭವಿಷ್ಯ!: ವಿರಾಟ್ ನಂತರ ಈ ಆಟಗಾರ RCBಗೆ ಹೊಸ ನಾಯಕ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News