ಲ್ಯಾಂಡ್ ಆಗುವ ಮುನ್ನ ಚಂಡಮಾರುತಕ್ಕೆ ಸಿಲುಕಿದ ವಿಮಾನದೊಳಗಿನ ದೃಶ್ಯ, ಬೆಚ್ಚಿ ಬೀಳಿಸುತ್ತದೆ ಈ ವಿಡಿಯೋ

ದುರ್ಗಾಪುರ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಸಮಯದಲ್ಲಿ ಅಪಘಾತ ಸಂಭವಿಸಿದೆ. ಅಪಘಾತದ ಸಮಯದಲ್ಲಿನ ಸ್ಪೈಸ್‌ಜೆಟ್ ವಿಮಾನದೊಳಗೆ ವೀಡಿಯೊವೊಂದು  ಇದೀಗ ಹೊರ ಬಿದ್ದಿದೆ. ಅಪಘಾತ ಸಂದರ್ಭದಲ್ಲಿ ವಿಮಾನದಲ್ಲಿದ್ದ ಪ್ರಯಾಣಿಕರೂ ಭಯಭೀತರಾಗಿರುವುದು ಈ ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ  

Written by - Ranjitha R K | Last Updated : May 2, 2022, 02:18 PM IST
  • ಲ್ಯಾಂಡಿಂಗ್ ವೇಳೆ ವಿಮಾನ ಅಪಘಾತ
  • ಹೊರಬಿದ್ದಿದೆ ವಿಮಾನದ ಒಳಗಿನ ವಿಡಿಯೋ
  • ವಿಮಾನದೊಳಗೆ ಸಾಮಾನುಗಳೆಲ್ಲಾ ಅಲ್ಲೋಲ ಕಲ್ಲೋಲ
ಲ್ಯಾಂಡ್ ಆಗುವ ಮುನ್ನ ಚಂಡಮಾರುತಕ್ಕೆ ಸಿಲುಕಿದ ವಿಮಾನದೊಳಗಿನ ದೃಶ್ಯ, ಬೆಚ್ಚಿ ಬೀಳಿಸುತ್ತದೆ ಈ ವಿಡಿಯೋ   title=
Inside Video of SpiceJet Flight after Turbulence (file photo)

ನವದೆಹಲಿ : ಭಾನುವಾರದಂದು ಸ್ಪೈಸ್‌ಜೆಟ್‌ನ ಮುಂಬೈ-ದುರ್ಗಾಪುರ ವಿಮಾನವು ಲ್ಯಾಂಡಿಂಗ್ ವೇಳೆ ತೀವ್ರ ಪ್ರತಿಕೂಲ ಹವಾಮಾನವನ್ನು ಎದುರಿಸಿತು. ಈ ಕಾರಣದಿಂದಾಗಿ ವಿಮಾನದಲ್ಲಿದ್ದ ಕನಿಷ್ಠ 12 ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಪಘಾತದ ವೇಳೆ ಸ್ಪೈಸ್ ಜೆಟ್ ವಿಮಾನದೊಳಗಿದ್ದ ಪ್ರಯಾಣಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.

ಹೊರಬಿದ್ದಿದೆ ವಿಮಾನದ ಒಳಗಿನ ವಿಡಿಯೋ :
ದುರ್ಗಾಪುರ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಸಮಯದಲ್ಲಿ ಅಪಘಾತ ಸಂಭವಿಸಿದೆ. ಅಪಘಾತದ ಸಮಯದಲ್ಲಿನ ಸ್ಪೈಸ್‌ಜೆಟ್ ವಿಮಾನದೊಳಗೆ ವೀಡಿಯೊವೊಂದು  ಇದೀಗ ಹೊರ ಬಿದ್ದಿದೆ. ಅಪಘಾತ ಸಂದರ್ಭದಲ್ಲಿ ವಿಮಾನದಲ್ಲಿದ್ದ ಪ್ರಯಾಣಿಕರೂ ಭಯಭೀತರಾಗಿರುವುದು ಈ ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ವಿಮಾನದೊಳಗಿದ್ದ ಪ್ರಯಾಣಿಕರೊಬ್ಬರು  42 ಸೆಕೆಂಡ್‌ಗಳ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ ಎನ್ನಲಾಗಿದೆ. ಆದರೆ, ಈ ವೀಡಿಯೋ ಅಪಘಾತಕ್ಕೀಡಾದ ಸ್ಪೈಸ್‌ಜೆಟ್ ವಿಮಾನದ ಒಳಗಿನ ವಿಡಿಯೋ ಎಂಬುದು ಇನ್ನೂ ದೃಢಪಟ್ಟಿಲ್ಲ.

ಇದನ್ನೂ ಓದಿ : Viral Video: ಅಬ್ಬಾ... ವೃದ್ಧ ದಂಪತಿಯ ಈ ಡ್ಯಾನ್ಸ್‌ ನೋಡಿದ್ರೆ ಫಿದಾ ಆಗ್ತೀರಾ...

ವಿಮಾನದೊಳಗೆ ಸಾಮಾನುಗಳೆಲ್ಲಾ ಅಲ್ಲೋಲ ಕಲ್ಲೋಲ : 
ವೀಡಿಯೊದಲ್ಲಿ, ಸ್ಪೈಸ್‌ಜೆಟ್ ವಿಮಾನದ ನೆಲದ ಮೇಲೆ ಕಪ್‌ಗಳು, ಬಾಟಲಿಗಳು ಮತ್ತು ಇತರ ಹಲವು ವಸ್ತುಗಳನ್ನು ಹರಡಿಕೊಂಡಿರುವುದು ಕಂಡುಬರುತ್ತದೆ. ಆಕ್ಸಿಜನ್ ಮಾಸ್ಕ್‌ಗಳು ನೇತಾಡುತ್ತಿರುವುದು ಮತ್ತು ಕ್ಯಾಬಿನ್ ಸಾಮಾನುಗಳು ಸಹ ಪ್ರಯಾಣಿಕರ ಮೇಲೆ ಬಿದ್ದಿರುವುದನ್ನು ವೀಡಿಯೊದಲ್ಲಿ ಸ್ಪಷ್ಟವಾಗಿ ಕಾಣಬಹುದು. ಇದರೊಂದಿಗೆ ಗಗನಸಖಿಯರು ಪ್ರಯಾಣಿಕರಿಗೆ ಧೈರ್ಯ ತುಂಬಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.

 

ಅಪಘಾತದ ಕುರಿತು ಸ್ಪೈಸ್ ಜೆಟ್ ನೀಡಿರುವ ಹೇಳಿಕೆ : 
ಮೇ 1 ರಂದು, ಸ್ಪೈಸ್‌ಜೆಟ್‌ನ ವಿಮಾನವು ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿದ್ದ ವೇಳೆ, ಪ್ರತಿಕೂಲ ಹವಾಮಾನವನ್ನು ಎದುರಿಸುವಂತಾಯಿತು. ಈ ಕಾರಣದಿಂದಾಗಿ ದುರದೃಷ್ಟವಶಾತ್ ಕೆಲವು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು,  ಅಪಘಾತದ ನಂತರ, ಸ್ಪೈಸ್‌ಜೆಟ್ ವಕ್ತಾರರು, ತಿಳಿಸಿದ್ದಾರೆ.  ದುರ್ಗಾಪುರದಲ್ಲಿ ವಿಮಾನ ಲ್ಯಾಂಡ್ ಆದ ತಕ್ಷಣ ಗಾಯಾಳುಗಳಿಗೆ ವೈದ್ಯಕೀಯ ನೆರವು ನೀಡಲಾಯಿತು ಎಂದು ವಕ್ತಾರರು ತಿಳಿಸಿದ್ದಾರೆ. "ಈ ದುರದೃಷ್ಟಕರ ಘಟನೆಗೆ ಸ್ಪೈಸ್ ಜೆಟ್ ವಿಷಾದ ವ್ಯಕ್ತಪಡಿಸಿದೆ. 

ಇದನ್ನೂ ಓದಿ :  ಸೂಪರ್‌ ಸಿಂಗರ್‌ ಗ್ಲೋಬಲ್‌ʼ: ಜಿಕೆ ಎಂಟರ್‌ಪ್ರೈಸಸ್‌ ಮೂಲಕ ವಿದೇಶದಲ್ಲಿ ಪಸರಿಸಿದ ದೇಶೀ ಕಂಪು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News