Be Careful.! ಕ್ರೆಡಿಟ್ ಕಾರ್ಡ್ ಪ್ರಾಬ್ಲಂ ಅನ್ನೋರೇ ಈ ನಯವಂಚಕರ ಟಾರ್ಗೆಟ್!

ಇಷ್ಟು ದಿನ‌ ಒಟಿಪಿ, ವಿಡಿಯೋ ಕಾಲ್ ಎಂದು ಜನರನ್ನು ಯಾಮಾರಿಸಿದ್ದ ಇವರು ಇದೀಗ ಕಸ್ಟಮರ್ ಕೇರ್ (Customer Care) ಅಧಿಕಾರಿ ಸೋಗಿನಲ್ಲಿ ವಂಚಿಸುತ್ತಿದ್ದಾರೆ. 

Edited by - Zee Kannada News Desk | Last Updated : Jan 24, 2022, 03:05 PM IST
  • ದಿನೆ ದಿನೇ ಹೆಚ್ಚಾಗುತ್ತಲೇ ಇದೆ ಸೈಬರ್ ಕಳ್ಳರ ಹಾವಳಿ
  • ಸೀಸನ್ ಗೆ ಒಂದೊಂದು ಐಡಿಯಾ ಯೂಸ್ ಮಾಡ್ತಿದ್ದಾರೆ ಖದೀಮರು
  • ಕಸ್ಟಮರ್ ಕೇರ್ ಅಧಿಕಾರಿ ಸೋಗಿನಲ್ಲಿ ವಂಚನೆ
Be Careful.! ಕ್ರೆಡಿಟ್ ಕಾರ್ಡ್ ಪ್ರಾಬ್ಲಂ ಅನ್ನೋರೇ ಈ ನಯವಂಚಕರ ಟಾರ್ಗೆಟ್!  title=
ಸೈಬರ್ ಕಳ್ಳ

ಬೆಂಗಳೂರು: ನಗರದಲ್ಲಿ ದಿನೆ ದಿನೇ ಸೈಬರ್ ಕಳ್ಳರ (Cyber Crime) ಹಾವಳಿ ಹೆಚ್ಚಾಗುತ್ತಲೇ ಇದೆ. ಸೀಸನ್ ಗೆ ಒಂದೊಂದು ‌ತರಹದ ಐಡಿಯಾ ಯೂಸ್ ಮಾಡ್ತಿದ್ದಾರೆ ಸೈಬರ್ ಖದೀಮರು.

ಇಷ್ಟು ದಿನ‌ ಒಟಿಪಿ, ವಿಡಿಯೋ ಕಾಲ್ ಎಂದು ಜನರನ್ನು ಯಾಮಾರಿಸಿದ್ದ ಇವರು ಇದೀಗ ಕಸ್ಟಮರ್ ಕೇರ್ (Customer Care) ಅಧಿಕಾರಿ ಸೋಗಿನಲ್ಲಿ ವಂಚಿಸುತ್ತಿದ್ದಾರೆ. 

ಕ್ರೆಡಿಟ್ ಕಾರ್ಡ್ ಪ್ರಾಬ್ಲಂ ಅನ್ನೋರೇ ಇವರ ಟಾರ್ಗೆಟ್: 

ಕ್ರೆಡಿಟ್ ಕಾರ್ಡ್ (Credit Card) ಪ್ರಾಬ್ಲಂ ಎಂದು ಕಸ್ಟಮರ್ ಕೇರ್ ಗೆ ಕಾಲ್ ಮಾಡುವ ಜನರನ್ನೇ ಟಾರ್ಗೆಟ್ ಮಾಡಿಕೊಂಡಿದ್ದಾರೆ ಈ ಸೈಬರ್ ಕಳ್ಳರು. ಕಸ್ಟಮರ್ ಕೇರ್ ಗೆ ಕಾಲ್ ಮಾಡುವವರ ನಂಬರ್ ಕಲೆ ಹಾಕುವ ಇವರು, ಪಕ್ಕಾ ಪ್ಲಾನ್ ಮಾಡಿ ನಿಮ್ಮ ಹಣವನ್ನು ಕದಿಯುತ್ತಾರೆ. 

ಇದನ್ನೂ ಓದಿ: ಬೆಂಗಳೂರು: ಪ್ರತಿಷ್ಟಿತ ಕಾಲೇಜಿನ ಬಳಿ ಡ್ರಗ್ಸ್ ಮಾರಾಟ ಮಾಡುತ್ತಿದ್ದವನ ಬಂಧನ

ಈಗ ಕಾಲ್ ಮಾಡಿದ್ರಲ್ಲ, ನಿಮ್ಮ ಸಮಸ್ಯೆ ಏನು ಎಂದು ಮಾತು ಶುರು ಮಾಡುತ್ತಾರೆ ಈ ನಯವಂಚಕರು. ಯಾರ ಕ್ರೆಡಿಟ್ ಲಿಮಿಟ್ಸ್ (Credit Limits) ಒಂದು ಲಕ್ಷ ಇದೆಯೋ ಅವರಿಗೆ ಮೊದಲು ಬಲೆ ಹಾಕುತ್ತಾರೆ. 

ಕಳೆದ 15 ದಿನದಲ್ಲಿ ಹೆಚ್ಚಾಯ್ತು ವಂಚನೆ ಕೇಸ್:

ಕಳೆದ 15 ದಿನದಲ್ಲಿ ಈ ಬಗ್ಗೆ 85 ಎಫ್ಐಆರ್ ಗಳು (FIR) ಸೈಬರ್ ಠಾಣೆಗಳಲ್ಲಿ ದಾಖಲಾಗಿವೆ. ಸದ್ಯ ಎಲ್ಲಾ ಫೋನ್‌ ಕಾಲ್ ಗಳು ಉತ್ತರ ಭಾರತದ ಕಡೆಯಿಂದ ಬಂದಿರುವುದಾಗಿ ಪೊಲೀಸರು ಪತ್ತೆ ಹಚ್ಚಿದ್ದಾರೆ. 

ಹೇಗೆ ಬಲೆ ಹೆಣೆಯುತ್ತಾರೆ ಈ ಸೈಬರ್ ಕಳ್ಳರು?

ಮೊದಲಿಗೆ ಕ್ರೆಡಿಟ್ ಕಾರ್ಡ್ ಸಮಸ್ಯೆ ಇರುವವರ ನಂಬರ್ ಕಲೆಕ್ಟ್ ಮಾಡುತ್ತಾರೆ. ನಂತರ ಅವರಿಗೆ ಕಾಲ್ ಮಾಡಿ ಕಸ್ಟಮರ್ ಕೇರ್ ಅಧಿಕಾರಿಗಳು ಅಂತ ಪರಿಚಯ ಮಾಡಿಕೊಳ್ಳುತ್ತಾರೆ. ಇದನ್ನು ನಂಬಿದ ಜನರು ಅವರ ಬಳಿ ತಮ್ಮ ಸಮಸ್ಯೆಯನ್ನು ಹಂಚಿಕೊಳ್ಳುತ್ತಾರೆ. 

ಸಮಸ್ಯೆ ಎಲ್ಲಾ ಕೇಳಿದ ಬಳಿಕ‌ ನಿಮ್ಮ ಕ್ರೆಡಿಟ್ ಕಾರ್ಡ್ ನಂಬರ್ ಹೇಳಿ ಎನ್ನುತ್ತಾರೆ. ಬಳಿಕ ನಿಮಗೆ ಒಂದು ನಂಬರ್ ಬಂದಿದೆ ಅದನ್ನು ಹೇಳಿ ಅಂತಾರೆ. ನೀವು ನಂಬರ್ ತಿಳಿಸಿದ ಬಳಿಕ ಧನ್ಯವಾದ ನಿಮ್ಮ ಸಮಸ್ಯೆ ಕೆಲವೇ ಗಂಟೆಗಳಲ್ಲಿ ಸರಿಯಾಗುತ್ತೆ ಎಂದು ಹೇಳಿ ಕಾಲ್ ಕಟ್ ಮಾಡುತ್ತಾರೆ. 

ಸಮಸ್ಯೆ ಸರಿಯಾಗುತ್ತೆ ಅಂದ ಕೆಲವೇ ನಿಮಿಷಗಳಲ್ಲಿ ಕ್ರೆಡಿಟ್ ಕಾರ್ಡ್ ನಲ್ಲಿ ದುಡ್ಡು ಕಟ್ ಆದ ಮೆಸೇಜ್ ಬರುತ್ತದೆ. ಯಾವುದಾದ್ರೂ ವಸ್ತು ಪರ್ಚೇಸ್ ಮಾಡೋದು ಅಥವಾ ಪೆಂಡಿಂಗ್ ಇರೋ ಬಿಲ್ ಕಟ್ಟೋದು ಮಾಡಿ ನಿಮ್ಮ ಹಣ ಲಪಟಾಯಿಸುತ್ತಾರೆ.

ಇದನ್ನೂ ಓದಿ: Redmi Note 10S: ಕೇವಲ 500 ರೂ.ಗೆ Redmi ಸ್ಮಾರ್ಟ್‌ಫೋನ್ ಖರೀದಿಸಿ, ಹೇಗೆಂದು ತಿಳಿಯಿರಿ

ಕಳೆದ 15 ದಿನಗಳಲ್ಲಿ 85 ಪ್ರಕರಣಗಳಲ್ಲಿ ಒಂದು ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ. ಸದ್ಯ ಸೈಬರ್ ಪೊಲೀಸರು ಕ್ರೆಡಿಟ್ ಕಾರ್ಡ್ ವಂಚಕರ ಪತ್ತೆಗೆ ವಿಶೇಷ ತಂಡ ರಚನೆ ಮಾಡಿದ್ದು, ತನಿಖೆ ಮುಂದುವರೆದಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News