ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರ: ಸದನದಲ್ಲಿ ಮೊಳಗಿತು ಜೈ ಶ್ರೀರಾಮ್ ಘೋಷಣೆ!

ಇಂದು ವಿಧಾನಸಭೆಯಲ್ಲ 'ಗೋ ಹತ್ಯೆ ನಿಷೇಧ ವಿಧೇಯಕ’ ಮಂಡನೆ

Last Updated : Dec 9, 2020, 08:27 PM IST
  • ಇಂದು ವಿಧಾನಸಭೆಯಲ್ಲ 'ಗೋ ಹತ್ಯೆ ನಿಷೇಧ ವಿಧೇಯಕ’ ಮಂಡನೆ
  • ಮಸೂದೆಗೆ ಅಂಗೀಕಾರ ದೊರೆತಿರುವುದನ್ನು ಸ್ವಾಗತಿಸಿದ ಬಿಜೆಪಿ ಸದಸ್ಯರು, ಜೈ ಶ್ರೀರಾಮ್ ಹಾಗೂ ಭಾರತ್ ಮಾತಾ ಕೀ ಜೈ ಘೋಷಣೆಗಳನ್ನು ಕೂಗಿ ಸಂತಸ
  • ಆಡಳಿತ ಪಕ್ಷ ಇಷ್ಟ ಬಂದ ಹಾಗೆ ಸದನ ನಡೆಸುತ್ತಿದ್ದು, ಇನ್ನು ಮುಂದೆ ಸದನವನ್ನು ಬಹಿಷ್ಕಾರ ಮಾಡುವುದಾಗಿ ಎಚ್ಚರಿಸಿದರು- ಸಿದ್ದರಾಮಯ್ಯ,
ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರ: ಸದನದಲ್ಲಿ ಮೊಳಗಿತು ಜೈ ಶ್ರೀರಾಮ್ ಘೋಷಣೆ! title=

ಬೆಂಗಳೂರು: ಸಿಎಂ ಬಿ.ಎಸ್ ಯಡಿಯೂರಪ್ಪ ಈ ಬಾರಿಯ ಸದನದಲ್ಲಿ 'ಗೋ ಹತ್ಯೆ ನಿಷೇಧ ವಿಧೇಯಕ ಮಂಡಿಸುವುದಾಗಿ ತಿಳಿಸಿದ್ದರು. ಅದರಂತೆಯೇ ಇಂದು ವಿಧಾನಸಭೆಯಲ್ಲಿ ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾನ್ ಮಂಡಿಸಿದ್ದಾರೆ. ಇಂತಹ ಮಸೂದೆ ಮಂಡನೆಗೆ ಪ್ರತಿಪಕ್ಷಗಳಾದಂತ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ತೀವ್ರ ವಿರೋಧ ವ್ಯಕ್ತ ಪಡಿಸಿದ್ದವು. ಇದರ ಮಧ್ಯೆಯೂ ವಿಧಾನಸಭೆಯಲ್ಲಿ ಗೋ ಹತ್ಯೆ ನಿಷೇಧ ಮಸೂದೆ ಅಂಗೀಕಾರಗೊಂಡಿದೆ.

ಮಸೂದೆಗೆ ಅಂಗೀಕಾರ ದೊರೆತಿರುವುದನ್ನು ಸ್ವಾಗತಿಸಿದ ಬಿಜೆಪಿ(BJP) ಸದಸ್ಯರು, ಜೈ ಶ್ರೀರಾಮ್ ಹಾಗೂ ಭಾರತ್ ಮಾತಾ ಕೀ ಜೈ ಘೋಷಣೆಗಳನ್ನು ಕೂಗಿ ಸಂತಸ ವ್ಯಕ್ತಪಡಿಸಿದರು. ಅಲ್ಲದೇ ಮಸೂದೆಗೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್‌ನ್ನು ಹಿಂದೂ ವಿರೋಧಿ ಎಂದು ಜರಿಯಲಾಯಿತು.

ಪಿಎಂ ಸಿಎಂ ಸ್ಥಾನಕ್ಕೆ ನಾವೇನು ಅರ್ಜಿ ಹಾಕಿರಲಿಲ್ಲ- ಡಿಕೆಶಿಗೆ ಟಾಂಗ್ ನೀಡಿದ ಹೆಚ್ ಡಿಕೆ!

ಆದರೆ ಮಸೂದೆ ಅಂಗೀಕಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ವಿಪಕ್ಷ ಸದಸ್ಯರು, ಯಾವುದೇ ಚರ್ಚೆಗೂ ಅನುಮತಿ ನೀಡದೇ ತರಾತುರಿಯಲ್ಲಿ ಮಸೂದೆಗೆ ಅಂಗೀಕಾರ ಪಡೆಯಲಾಗಿದೆ ಎಂದು ಆರೋಪಿಸಿದರು.

ಪ್ರತಿಭಟನೆಯ ನಡುವೆ ರಾಜ್ಯ ಸರ್ಕಾರದಿಂದ ರೈತರಿಗೆ 'ಶುಭ ಸುದ್ದಿ'

ಈ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಆಡಳಿತ ಪಕ್ಷ ಇಷ್ಟ ಬಂದ ಹಾಗೆ ಸದನ ನಡೆಸುತ್ತಿದ್ದು, ಇನ್ನು ಮುಂದೆ ಸದನವನ್ನು ಬಹಿಷ್ಕಾರ ಮಾಡುವುದಾಗಿ ಎಚ್ಚರಿಸಿದರು.

ಗ್ರಾಮ ಪಂಚಾಯತಿ ಚುನಾವಣೆ ಬಳಿಕ ‘ಹೊಸ ರೇಶನ್‌ ಕಾರ್ಡ್’

 

Trending News