ರಾಹುಲ್ ಗಾಂಧಿಗೆ ನಿಲ್ಲಾಕ್ ಒಂದ್ ಜಾಗ ಇಲ್ಲ: ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಲೇವಡಿ

ವಯನಾಡ್ (Wayanad) ಅಲ್ಲಿ ಮುಸ್ಲಿಂ ಮತಗಳೇ ಹೆಚ್ಚಿದ್ದು, ತಮ್ಮ ಕೈ ಹಿಡಿದರೆ ಮುಸ್ಲಿಂ ಸಮುದಾಯವೇ ಸೈ ಎಂಬ ಲೆಕ್ಕಾಚಾರದಲ್ಲಿ ರಾಹುಲ್ ಗಾಂಧಿ (Rahul Gandhi) ಅಲ್ಲಿ ಸ್ಪರ್ಧಿಸಿದ್ದಾರೆ. ದೇಶದಲ್ಲಿ ಅಷ್ಟರ ಮಟ್ಟಿಗೆ ಹಿಂದೂ ವಿರೋಧಿಯಾಗಿ ನಡೆದುಕೊಂಡಿದ್ದಾರೆ ಎಂದು ಹೇಳಿದರು.

Written by - Yashaswini V | Last Updated : Apr 4, 2024, 04:41 PM IST
  • ರಾಹುಲ್ ಗಾಂಧಿ ಸ್ಪರ್ಧಿಸಲು ಒಂದು ಸರಿಯಾದ ಕ್ಷೇತ್ರ ಸಿಗದೇ ತಡಕಾಡಿದರು.
  • ಕೊನೆಗೆ ಹೋಗಿ ಕಮ್ಯುನಿಸ್ಟ್ ಪ್ರಭಾವ ಇರುವ, ವಯನಾಡ್ ಅಲ್ಲಿ ನಿಂತಿದ್ದಾರೆ
ರಾಹುಲ್ ಗಾಂಧಿಗೆ ನಿಲ್ಲಾಕ್ ಒಂದ್ ಜಾಗ ಇಲ್ಲ:  ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಲೇವಡಿ title=

ಹುಬ್ಬಳ್ಳಿ: ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿಗೆ ನಿಲ್ಲಾಕ್ ಒಂದ್ ಜಾಗ ಇಲ್ಲ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ (Union Parliamentary Minister Prahlada Joshi) ಲೇವಡಿ ಮಾಡಿದರು.

ಹುಬ್ಬಳ್ಳಿಯಲ್ಲಿ ಇಂದು ಕಾಂಗ್ರೆಸ್  ತೊರೆದು ಬಂದ ಮುಖಂಡರು ಮತ್ತು ಕಾರ್ಯಕರ್ತರನ್ನು ಬಿಜೆಪಿಗೆ ಬರಮಾಡಿಕೊಂಡು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ (Union Minister Prahlada Joshi), ರಾಹುಲ್ ಗಾಂಧಿ ಸ್ಪರ್ಧಿಸಲು ಒಂದು ಸರಿಯಾದ ಕ್ಷೇತ್ರ ಸಿಗದೇ ತಡಕಾಡಿದರು. ಕೊನೆಗೆ ಹೋಗಿ ಕಮ್ಯುನಿಸ್ಟ್ ಪ್ರಭಾವ ಇರುವ, ವಯನಾಡ್ ಅಲ್ಲಿ ನಿಂತಿದ್ದಾರೆ ಎಂದು ಗೇಲಿ ಮಾಡಿದರು.

ವಯನಾಡ್ (Wayanad) ಅಲ್ಲಿ ಮುಸ್ಲಿಂ ಮತಗಳೇ ಹೆಚ್ಚಿದ್ದು, ತಮ್ಮ ಕೈ ಹಿಡಿದರೆ ಮುಸ್ಲಿಂ ಸಮುದಾಯವೇ ಸೈ ಎಂಬ ಲೆಕ್ಕಾಚಾರದಲ್ಲಿ ರಾಹುಲ್ ಗಾಂಧಿ (Rahul Gandhi) ಅಲ್ಲಿ ಸ್ಪರ್ಧಿಸಿದ್ದಾರೆ. ದೇಶದಲ್ಲಿ ಅಷ್ಟರ ಮಟ್ಟಿಗೆ ಹಿಂದೂ ವಿರೋಧಿಯಾಗಿ ನಡೆದುಕೊಂಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ- ಚಿತ್ರದುರ್ಗ ಕಾಂಗ್ರೆಸ್ ಪಕ್ಷದ ಭದ್ರ ಕೋಟೆ. ನಮ್ಮ ಅಭ್ಯರ್ಥಿ ಚಂದ್ರಪ್ಪ 2 ಲಕ್ಷಕ್ಕೂ ಹೆಚ್ಚು ಅಂತರದಿಂದ ಗೆಲ್ತಾರೆ: ಸಿಎಂ

ಇಂಡಿಯಾ ಅಲ್ಲ ಇಂಡಿ: 
ಕಾಂಗ್ರೆಸ್ ಮೈತ್ರಿಕೂಟ (Congress Alliance) ಇಂಡಿಯಾ ಅಲ್ಲ. ಅದರ ನಿಜವಾದ ಹೆಸರು ಇಂಡಿ. ಘಟಬಂಧನ್ ರಚಿಸಿಕೊಂಡು ಅಧಿಕಾರದ ಕನಸು ಕಾಣುತ್ತಿದ್ದ ಕಾಂಗ್ರೆಸ್ ರಾಹುಲ್ ಗಾಂಧಿಗೇ ಕಣಕ್ಕಿಳಿಯಲು ಸರಿಯಾದ ಜಾಗ ಸಿಗಲಿಲ್ಲ ಎಂದು ಜೋಶಿ ಹೇಳಿದರು.

ದೇಶದ ಸಾರ್ವಭೌಮತ್ವ ಪ್ರಶ್ನೆಸಿತ್ತು: 
ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 (Article 370 in Jammu and Kashmir) ಕಿತ್ತೆಸೆದಿದ್ದಕ್ಕೆ ದೇಶದ ಸಾರ್ವಭೌಮತ್ವವವನ್ನೇ ಪ್ರಶ್ನಿಸಿದ ಕಾಂಗ್ರೆಸ್ ತಾನು ಅಧಿಕಾರಕ್ಕೆ ಬಂದ್ರೆ ಆರ್ಟಿಕಲ್ 370 ವಾಪಾಸ್ ತರುವುದಾಗಿ ಹೇಳಿದೆ. ನಿಜಕ್ಕೂ ಇವರಿಗೆ ಭಾರತೀಯ ಮುಸ್ಲಿಮರ ಮೇಲೆ ಕಾಳಜಿ ಇದೆಯೇ? ಎಂದು ಸಚಿವ ಜೋಶಿ ಪ್ರಶ್ನಿಸಿದರು.

ಭಾರತೀಯ ಮುಸ್ಲಿಂರ ರಕ್ಷಣೆ ಬೇಕಿಲ್ಲ ಇವರಿಗೆ: 
ಕಾಶ್ಮೀರಿ ಪಂಡಿತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿತ್ತು. ಹಿಂದೂ ಮಹಿಳೆಯರು ಅತ್ಯಾಚಾರ, ಅನಾಚಾರಕ್ಕೆ ಒಳಗಾಗಿದ್ದರು. ಭಯೋತ್ಪಾದನೆ (Terrorism) ತಾಂಡವವಾಡುತ್ತಿತ್ತು. ಕಾನೂನು ಸುವ್ಯವಸ್ಥೆ ಇರಲಿಲ್ಲ. ಇಡೀ ಕಾಶ್ಮೀರ ಹಿಂಸಾಚಾರದಿಂದ ನರಳುತ್ತಿತ್ತು. ಇದ್ಯಾವುದು ಕಾಂಗ್ರೆಸ್ ಗಣನೆಗೆ ಬರಲಿಲ್ಲ. ಅಲ್ಲಿದ್ದ ಭಾರತೀಯ ಪರ ಮುಸ್ಲಿಂರ ಬಗ್ಗೆ ಕನಿಷ್ಠ ಕಾಳಜಿ ಸಹ ಇಲ್ಲದಂತೆ ನಡೆದುಕೊಂಡಿತು ಎಂದು ಸಚಿವ ಜೋಶಿ ತೀವ್ರ ಬೇಸರದಿಂದ ಹೇಳಿದರು.

ಇದನ್ನೂ ಓದಿ- "ನನ್ನನ್ನು ರಾಷ್ಟ್ರಪತಿ, ಪ್ರಧಾನಮಂತ್ರಿ ಮಾಡ್ತೀನಿ ಅಂದ್ರೂ ನಾನು ಬಿಜೆಪಿ ಕಡೆ ತಲೆ ಹಾಕಲ್ಲ"

ಭಾರತವನ್ನು ಪ್ರೀತಿಸುವ ಮತ್ತು ನಿಜವಾದ ರಾಷ್ಟ್ರಾಭಿಮಾನ ಇರುವ ಪ್ರತಿಯೊಬ್ಬರೂ ಒಂದಿಲ್ಲೊಂದು ರೀತಿಯಲ್ಲಿ ಬಿಜೆಪಿಯಲ್ಲಿ ಗುರುತಿಸಿಕೊಳ್ಳುತ್ತಾರೆ ಎಂದರು.

ಬಿಜೆಪಿ ಸೇರ್ಪಡೆ: 
ಪ್ರಕಾಶ್ ಬುರಬುರೆ ಮತ್ತು ಅವರ ನೂರಾರು ಬೆಂಬಲಿಗರು ಇಂದು ಕಾಂಗ್ರೆಸ್ ತೊರೆದು ಸಚಿವ ಪ್ರಹ್ಲಾದ ಜೋಶಿ ಅವರ ಸಮ್ಮುಖದಲ್ಲಿ ಬಿಜೆಪಿ ಧ್ವಜ ಹಿಡಿದು ಪಕ್ಷ ಸೇರ್ಪಡೆಗೊಂಡರು. ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಮತ್ತು ಸಚಿವ ಪ್ರಹ್ಲಾದ ಜೋಶಿ ಅವರ ಅಭಿವೃದ್ಧಿ ಕಾರ್ಯಕ್ಕೆ ಕೈ ಜೋಡಿಸಲು ನಾವೆಲ್ಲ ಬಿಜೆಪಿ ಸೇರಿದ್ದಾಗಿ ಪ್ರಕಾಶ ಬುರಬುರೆ ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಮಹೇಶ್ ಟೆಂಗಿನಕಾಯಿ, ಬಿಜೆಪಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಪಕ್ಷದ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News