Pralhad Joshi : 'ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆಯಿಲ್ಲ'

2023 ರವೆಗೂ ಬಸವರಾಜ ಬೊಮ್ಮಾಯಿವರೇ ಸಿಎಂ ಆಗಿ ಇರ್ತಾರೆ. ಇವತ್ತಿನ ನನ್ನ ಸಿಎಂ ಭೇಟಿಯಲ್ಲಿ ವಿಶೇಷತೆ ಇಲ್ಲ. ಇಬ್ಬರು ಒಂದೇ ಪಕ್ಷದ ನಾಯಕರು ಸಾಮಾನ್ಯವಾಗಿ ಭೇಟಿ ಆಗುತ್ತಿರುತ್ತೇವೆ. ನಾನೇನು ಅವರನ್ನ ಏರ್ಪೋರ್ಟ್ ಕರೆಯಿಸಿಲ್ಲ, ಅವರೇ ಬಂದಿದ್ದಾರೆ ಎಂದರು. 

Written by - Zee Kannada News Desk | Last Updated : May 7, 2022, 09:41 PM IST
  • ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆಯಿಲ್ಲ
  • ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ.
  • ಸಂಪುಟ ವಿಸ್ತರಣೆ ನನ್ನ ಬಳಿ ಯಾವುದೇ ಮಾಹಿತಿ ಇಲ್ಲ
Pralhad Joshi : 'ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆಯಿಲ್ಲ' title=

ಹುಬ್ಬಳ್ಳಿ : ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆಯಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಪ್ರಹ್ಲಾದ್ ಜೋಶಿ, 2023 ರವೆಗೂ ಬಸವರಾಜ ಬೊಮ್ಮಾಯಿವರೇ ಸಿಎಂ ಆಗಿ ಇರ್ತಾರೆ. ಇವತ್ತಿನ ನನ್ನ ಸಿಎಂ ಭೇಟಿಯಲ್ಲಿ ವಿಶೇಷತೆ ಇಲ್ಲ. ಇಬ್ಬರು ಒಂದೇ ಪಕ್ಷದ ನಾಯಕರು ಸಾಮಾನ್ಯವಾಗಿ ಭೇಟಿ ಆಗುತ್ತಿರುತ್ತೇವೆ. ನಾನೇನು ಅವರನ್ನ ಏರ್ಪೋರ್ಟ್ ಕರೆಯಿಸಿಲ್ಲ, ಅವರೇ ಬಂದಿದ್ದಾರೆ ಎಂದರು. 

ಇದನ್ನೂ ಓದಿ : ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕಾಂ

ಸಂಪುಟ ವಿಸ್ತರಣೆಯ ಬಗ್ಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರು ಹೈಕಮಾಂಡ್ ನಿರ್ಧರಿಸುತ್ತೆ. ಸಂಪುಟ ವಿಸ್ತರಣೆ ನನ್ನ ಬಳಿ ಯಾವುದೇ ಮಾಹಿತಿ ಇಲ್ಲ. ನೀವೇ ನಾಯಕತ್ವ ಬದಲಾವಣೆ ಬಗ್ಗೆ ಹೇಳುತ್ತಿದ್ದರಿ. ಆದ್ರೆ ಅದ್ಯಾವದು ನಮ್ಮ ಪಕ್ಷದಲ್ಲಿಲ್ಲ. ದಯವಿಟ್ಟು ಯಾರು ಉಹಾಪೋಹಗಳನ್ನ ನಂಬಬೇಡಿ ಎಂದು ಹೇಳಿದರು. 

ಸಿಎಂ ಖುರ್ಚಿಗೆ 2500 ಕೋಟಿ ಕೇಳಿದ್ದಾರೆ ಎನ್ನುವ ಶಾಸಕ ಯತ್ನಾಳ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಅವರೇ ಇಂದು ಸ್ಪಷ್ಟನೆ ನೀಡಿದ್ದಾರೆ. ನಮ್ಮ ಪಾರ್ಟಿಯಲ್ಲಿ ಅಲ್ಲ ಕಾಂಗ್ರೆಸ್ ಅಂತ ಎಂದರು.

ಪಿಎಸ್ ಐ ನೇಮಕಾತಿ ಹಗರಣ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ನವರು ತನಿಖಾ ಸಂಸ್ಥೆಗಳಿಂದ ತನಿಖೆ ಬೇಡ ನ್ಯಾಯಂಗ ತನಿಖೆ ಬೇಕು ಅಂತಾರೆ. ನ್ಯಾಯಂಗ ತನಿಖೆಯಾದ್ರೆ ಯಾರು ಜೈಲಿಗೆ ಹೋಗಲ್ಲ. ಸುಮ್ಮನೆ ಎಲ್ಲರೂ ಕಾಲಹರಣ ಮಾಡಿದ್ರಾಯಿತು ಅಂತ‌ ಅನ್ಕೊಂಡಿದ್ದಾರೆ. ಪ್ರಿಯಾಂಕ್ ಅವರ ಮನೆಯಲ್ಲಿ ಬ್ಲ್ಯಾಕ್ ಕಾಂಗ್ರೆಸ್ ಅದ್ಯಕ್ಷ ಅವರ ಸಹೋದರ ಇರ್ತಿದ್ರು. ಯಾಕೆ ಅವರು ನೋಟಿಸ್ ನೀಡಿದ್ರು ಉತ್ತರ ನೀಡ್ತಿಲ್ಲ. ಸಿಐಡಿ ನೋಟಿಸ್ ನೀಡಿದ್ರು ಅಟೆಂಡ್ ಆಗ್ತಿಲ್ಲ. ಅವರ ಹತ್ತಿರ ಮಾಹಿತಿ ಇದ್ರೆ, ಅದನ್ನ ಜವಬ್ದಾರಿ ವ್ಯಕ್ತಿಯಾಗಿ ನೀಡೋದು ಅವರ ಕರ್ತವ್ಯ ಎಂದು ಹೇಳಿದರು. 

ಇದನ್ನೂ ಓದಿ : ಪರಿಹಾರ ತಪ್ಪಿಸಲು ಬಿಜೆಪಿ ಸರ್ಕಾರದಿಂದ ಸಾವಿನ ಸುಳ್ಳು ಹೇಳಿ ಮೋಸ: ಸಿದ್ದರಾಮಯ್ಯ

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News