Operation Ganga: ಯುದ್ಧಪೀಡಿತ ಉಕ್ರೇನ್‌ನಿಂದ ಬೆಂಗಳೂರಿಗೆ ಆಗಮಿಸಿದ 12 ಜನ ವಿದ್ಯಾರ್ಥಿಗಳು

ಯುದ್ಧ ಪೀಡಿತ ಉಕ್ರೇನ್ ನಿಂದ ಸುರಕ್ಷಿತವಾಗಿ ರಾಜ್ಯದ 12 ಜನ ವಿದ್ಯಾರ್ಥಿಗಳು ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(Kempegowda International Airport Bengaluru)ಕ್ಕೆ ಭಾನುವಾರ ಬೆಳಗ್ಗೆ ಆಗಮಿಸಿದರು. ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಅವರು ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡರು.

Written by - Zee Kannada News Desk | Last Updated : Feb 27, 2022, 12:37 PM IST
  • ಯುದ್ಧ ಪೀಡಿತ ಉಕ್ರೇನ್ ನಿಂದ ಸುರಕ್ಷಿತವಾಗಿ ಬೆಂಗಳೂರಿಗೆ ಬಂದ ರಾಜ್ಯದ 12 ಜನ ವಿದ್ಯಾರ್ಥಿಗಳು
  • ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ & ಕಂದಾಯ ಸಚಿವ ಆರ್.ಅಶೋಕ್
  • ‘Operation Ganga’ ಮೂಲಕ ಭಾರತೀಯರನ್ನು ಕರೆತರುವ ಕೆಲಸ ಮಾಡುತ್ತಿರುವ ಕೇಂದ್ರ ಸರ್ಕಾರ
Operation Ganga: ಯುದ್ಧಪೀಡಿತ ಉಕ್ರೇನ್‌ನಿಂದ ಬೆಂಗಳೂರಿಗೆ ಆಗಮಿಸಿದ 12 ಜನ ವಿದ್ಯಾರ್ಥಿಗಳು title=
ಬೆಂಗಳೂರಿಗೆ ಬಂದ ರಾಜ್ಯದ 12 ಜನ ವಿದ್ಯಾರ್ಥಿಗಳು  

ಬೆಂಗಳೂರು: ಯುದ್ಧ ಪೀಡಿತ ಉಕ್ರೇನ್ ನಿಂದ ಸುರಕ್ಷಿತವಾಗಿ ರಾಜ್ಯದ 12 ಜನ ವಿದ್ಯಾರ್ಥಿಗಳು ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(Kempegowda International Airport Bengaluru)ಕ್ಕೆ ಭಾನುವಾರ ಬೆಳಗ್ಗೆ ಆಗಮಿಸಿದರು. ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಅವರು ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ಉಕ್ರೇನ್(Russia Ukraine War)ನಿಂದ ಮೊದಲು ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿದ್ಯಾರ್ಥಿಗಳು ಅಲ್ಲಿಂದ ಏರ್ ವಿಸ್ತಾರದಲ್ಲಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣ ತಲಪಿದರು. ದೆಹಲಿಯಿಂದ 7 ಗಂಟೆಗೆ ಹೊರಟಿದ್ದ ವಿಮಾನವು ಬೆಳಗ್ಗೆ 8.50ಕ್ಕೆ ಬೆಂಗಳೂರು ತಲುಪಿತು. ದೇವನಹಳ್ಳಿಯ ವಿಮಾನ ನಿಲ್ದಾಣಕ್ಕೆ‌ ಬಂದ ವಿದ್ಯಾರ್ಥಿಗಳು ರಾಷ್ಟ್ರಧ್ವಜವನ್ನು ಹಿಡಿದು ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ: Russia Ukraine War: ಎಲ್ಲಾ ದಿಕ್ಕುಗಳಿಂದಲೂ ಉಕ್ರೇನ್ ನ್ನು ಆಕ್ರಮಿಸಿದ ರಷ್ಯಾ ಸೈನ್ಯ...!

ನಬಾಯಿಸ್ ಹೂಡಾ, ಸೈಯದ್ ಹಬೀಬ್, ಪೂಜಾ ಕುಮಾರಿ ಯಾದವ್, ಸಂಪಂಗಿ ರಾಮರೆಡ್ಡಿ, ಮೋನಿಕಾ, ಉದಯ್ ಕೆ.ವಿ, ಮಹಮ್ಮದ್ ಹಬೀದ್, ಶೌಕಾತ್ ಅಲಿ, ಇಂಚರಾರಾಜ್ ಶಿವರಾಜ್, ತುಷಾರು ಮಧು, ವಿಜಯಲಕ್ಷ್ಮಿ ಚಕ್ರವರ್ತಿ, ಶ್ರೇಯಾ ಚಂದ್ರಶೇಖರ್ & ರಿಯಾ ಕುಮಾರಿ ಉಕ್ರೇನ್ ನಿಂದ ಕರುನಾಡಿಗೆ(Bengaluru airport) ಸುರಕ್ಷಿತವಾಗಿ ಆಗಮಿಸಿದ್ದಾರೆ.

ಇದೇ ವೇಳೆ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಬರಮಾಡಿಕೊಂಡ ಏರ್ಪೋರ್ಟ್ ಸಿಬ್ಬಂದಿ, ಪೋಷಕರು ಮತ್ತು ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರವು ಏರ್ ಲಿಫ್ಟ್(Operation Ganga) ಮೂಲಕ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದೆ. ಯುದ್ಧ ಭೂಮಿಯಿಂದ ವಿದ್ಯಾರ್ಥಿಗಳು ತಾಯ್ನಾಡಿಗೆ ವಾಪಸ್ಸು ಬಂದಿರುವುದು ಖುಷಿ ತಂದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ತಿಳಿಸಿದ್ದಾರೆ.

ಇದನ್ನೂ ಓದಿ: Ukraine Russia War: ವಿಶ್ವಸಂಸ್ಥೆಯಲ್ಲಿ ಭಾರತದ ನಡೆಯನ್ನು ಶ್ಲಾಘಿಸಿದ ರಷ್ಯಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News