Fate Line Palmistry: ಇಂತಹ ಜನರು ಅಪಾರ ಸಂಪತ್ತಿನ ಒಡೆಯರಾಗುತ್ತಾರೆ!

ಪ್ರತಿಯೊಬ್ಬ ವ್ಯಕ್ತಿಯ ಅಂಗೈ ವಿಭಿನ್ನವಾಗಿರುತ್ತದೆ. ಕೆಲವು ಯೋಗಗಳು ಅಂಗೈಯಲ್ಲಿರುವ ಚಿಹ್ನೆಗಳಿಂದ ರೂಪುಗೊಳ್ಳುತ್ತವೆ. ಇದು ಹಣದ ಪ್ರಯೋಜನಗಳ ಬಗ್ಗೆ ಹೇಳುತ್ತದೆ. ಇದರೊಂದಿಗೆ ಈ ಯೋಗಗಳು ಅದೃಷ್ಟವನ್ನು ಸಹ ಸೂಚಿಸುತ್ತವೆ.

Written by - Puttaraj K Alur | Last Updated : Mar 2, 2022, 08:25 PM IST
  • ಅಂಗೈನ ಜೀವನ ರೇಖೆಯು ಅದೃಷ್ಟ ರೇಖೆಯಿಂದ ದೂರವಿದ್ದರೆ ಧನಪತಿ ಯೋಗವು ರೂಪುಗೊಳ್ಳುತ್ತದೆ
  • ಶುಕ್ರನ ಪರ್ವತದ ಮೇಲೆ ಕಮಲದ ಗುರುತು ಹೊಂದುವ ಮೂಲಕ ಲಕ್ಷ್ಮಿ ಯೋಗವು ರೂಪುಗೊಳ್ಳುತ್ತದೆ
  • ಅಂಗೈನ ಶುಕ್ರ, ಚಂದ್ರ, ಬುಧ, ಸೂರ್ಯ ಮತ್ತು ಗುರು ಪರ್ವತವು ಬಲಿಷ್ಠವಾಗಿದ್ದರೆ ರಾಜಲಕ್ಷ್ಮಿ ಯೋಗ ರೂಪುಗೊಳ್ಳುತ್ತದೆ
Fate Line Palmistry: ಇಂತಹ ಜನರು ಅಪಾರ ಸಂಪತ್ತಿನ ಒಡೆಯರಾಗುತ್ತಾರೆ! title=
ಹಣ ಯೋಗ ಮತ್ತು ಧನಲಾಭದ ರೇಖೆಗಳ ಬಗ್ಗೆ ತಿಳಿದುಕೊಳ್ಳಿರಿ

ನವದೆಹಲಿ: ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಅಂಗೈಯಲ್ಲಿರುವ ರೇಖೆಗಳು ಮತ್ತು ಚಿಹ್ನೆಗಳು ಜೀವನದ ಪ್ರತಿಯೊಂದು ಅಂಶವನ್ನು ಹೇಳುತ್ತವೆ. ಈ ರೇಖೆಗಳು ಭವಿಷ್ಯವನ್ನು ಮಾತ್ರ ತೋರಿಸುವುದಿಲ್ಲ, ಜೀವನದಲ್ಲಿನ ಹಣದ ಸ್ಥಿತಿಯನ್ನು ಸಹ ಹೇಳುತ್ತವೆ. ಹಸ್ತಸಾಮುದ್ರಿಕ ಶಾಸ್ತ್ರ(Palmistry)ದಲ್ಲಿ ಸಂಪತ್ತಿನ ಯೋಗದ ಬಗ್ಗೆ ಹೇಳುವ ಅಂಗೈನ ಕೆಲವು ಚಿಹ್ನೆಗಳ ಬಗ್ಗೆ ಉಲ್ಲೇಖಿಸಲಾಗಿದೆ. ಹಣದ ಯೋಗ ಮತ್ತು ಧನಲಾಭದ ಬಗ್ಗೆ ಅಂಗೈಯಲ್ಲಿರುವ ಯಾವ ಗುರುತುಗಳು ಹೇಳುತ್ತವೆ ಎಂಬುದರ ಬಗ್ಗೆ ತಿಳಿದುಕೊಳ್ಳಿರಿ.

ಗಜಲಕ್ಷ್ಮಿ ಯೋಗ

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯಲ್ಲಿನ ಮಾಪಕ(Scales)ಗಳ ಗುರುತು ಬಹಳ ಮಂಗಳಕರವಾಗಿದೆ. ಈ ರೇಖೆಯಿಂದ ಗಜಲಕ್ಷ್ಮಿ ಯೋಗ(Gajalakshmi Yoga)ವು ರೂಪುಗೊಳ್ಳುತ್ತದೆ. ಯಾರ ಅಂಗೈಯಲ್ಲಿ ಈ ಗುರುತು ಇದೆಯೋ, ಅವರು ಪ್ರತಿ ಕ್ಷಣವೂ ಅದೃಷ್ಟದ ಬೆಂಬಲವನ್ನು ಪಡೆಯುತ್ತಾರೆ. ಇದರೊಂದಿಗೆ ಮಾತೆ ಲಕ್ಷ್ಮಿದೇವಿಯ ಕೃಪೆಯೂ ದೊರೆಯುತ್ತದೆ. ಇಂತಹ ಜನರು ಜೀವನದಲ್ಲಿ ಎಂದಿಗೂ ಹಣದ ಕೊರತೆಯನ್ನು ಎದುರಿಸುವುದಿಲ್ಲ.

ಇದನ್ನೂ ಓದಿ: ಈ ರಾಶಿಯವರು ಇಂದು ನಂಬಿಕೆಗೆ ಧಕ್ಕೆ ಆಗದಂತೆ ನಡೆದುಕೊಳ್ಳಿ

ಧನಪತಿ ಯೋಗ

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯ ಜೀವನ ರೇಖೆಯು ಅದೃಷ್ಟ ರೇಖೆ(Fate Line Palmistry)ಯಿಂದ ದೂರವಿದ್ದರೆ ಆಗ ಧನಪತಿ ಯೋಗವು ರೂಪುಗೊಳ್ಳುತ್ತದೆ. ಯಾರ ಅಂಗೈಯಲ್ಲಿ ಈ ರೇಖೆಗಳಿವೆಯೋ, ಅವರನ್ನು ತುಂಬಾ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಇಂತಹ ಜನರಿಗೆ ಸಂಪತ್ತಿನ ಆಗಮನದ ಬಾಗಿಲು ಎಲ್ಲಾ ಕಡೆಯಿಂದಲೂ ತೆರೆದಿರುತ್ತದೆ. ಇದಲ್ಲದೇ ಇಂತಹವರು ಅಪಾರ ಸಂಪತ್ತಿನ ಒಡೆಯರಾಗುತ್ತಾರೆ.

ಲಕ್ಷ್ಮೀ ಯೋಗ

ಶುಕ್ರನ ಪರ್ವತದ ಮೇಲೆ ಕಮಲದ ಗುರುತನ್ನು ಹೊಂದುವ ಮೂಲಕ ಲಕ್ಷ್ಮಿ ಯೋಗ(Lakshmi Yoga)ವು ರೂಪುಗೊಳ್ಳುತ್ತದೆ. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಇಂತಹ ಯೋಗ ಹೊಂದಿರುವ ಜನರು ತುಂಬಾ ಶ್ರೀಮಂತರಾಗುತ್ತಾರೆ. ಜೊತೆಗೆ ಇವರೊಂದಿಗೆ ಸಂಪರ್ಕದಲ್ಲಿರುವವರ ಅದೃಷ್ಟವೂ ಸಹ ಪ್ರಕಾಶಿಸುತ್ತದೆ. ಇಂತಹ ಯೋಗವಿರುವ ಜನರು ತಮ್ಮ ಅದೃಷ್ಟದ ಮೇಲೆ ಲಕ್ಷ್ಮಿದೇವಿಯ ಅನುಗ್ರಹವನ್ನು ಇರಿಸಿಕೊಳ್ಳಲು ಲಕ್ಷ್ಮಿ ಮತ್ತು ಭಗವಾನ್ ವಿಷ್ಣುವನ್ನು ಪೂಜಿಸಬೇಕು.

ಇದನ್ನೂ ಓದಿ: ಜಾತಕದಲ್ಲಿ ಈ ಯೋಗವಿದ್ದರೆ ಆಯುಷ್ಯಕ್ಕೆ ಕಂಟಕ..!

ರಾಜಲಕ್ಷ್ಮಿ ಯೋಗ

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಅಂಗೈಯ ಶುಕ್ರ, ಚಂದ್ರ, ಬುಧ, ಸೂರ್ಯ ಮತ್ತು ಗುರು ಪರ್ವತವು ಬಲಿಷ್ಠವಾಗಿದ್ದರೆ ರಾಜಲಕ್ಷ್ಮಿ ಯೋಗ(Rajalakshmi Yoga) ಉಂಟಾಗುತ್ತದೆ. ಇಂತಹವರ ಆದಾಯ ಕೋಟಿಗಟ್ಟಲೆ ಇರುತ್ತದೆ. ಇದಲ್ಲದೆ ಇಂತಹ ಜನರು ವ್ಯವಹಾರದಲ್ಲಿ ಅದ್ಭುತ ಪ್ರಗತಿಯನ್ನು ಸಾಧಿಸುತ್ತಾರೆ ಜೊತೆಗೆ ಇವರ ಮೇಲೆ ಲಕ್ಷ್ಮಿಯ ಕೃಪೆಯೂ ಇರುತ್ತದೆ.   

(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News