1,25,000 ವರ್ಷಗಳ ಬಳಿಕ ಮಿತಿ ಮೀರಿದ ತಾಪಮಾನ! ಜೂನ್-ಜುಲೈ ತಿಂಗಳಲ್ಲೂ ಭೂಮಿ ಸುಡಲು ಕಾರಣವೇನು?

Global Temperature high: ಇಡೀ ಪ್ರಪಂಚದ ತಾಪಮಾನವು ಸಾಧ್ಯವಾದಷ್ಟು ವೇಗವಾಗಿ ಹೆಚ್ಚಾಗಿದೆ. ವಿಶ್ವಸಂಸ್ಥೆ (UN) ಮತ್ತು ಯುರೋಪಿಯನ್ ಯೂನಿಯನ್ (EU) ನಂತಹ ಸಂಸ್ಥೆಗಳ ಹವಾಮಾನ ತಜ್ಞರು ಇದನ್ನು ದೃಢಪಡಿಸಿದ್ದಾರೆ.

Written by - Bhavishya Shetty | Last Updated : Jul 28, 2023, 12:22 PM IST
    • ಸಾವಿರಾರು ವರ್ಷಗಳಿಂದ ತಂಪಾಗಿದ್ದ ನಮ್ಮ ಭೂಮಿಯನ್ನು ಮತ್ತೆ ಕುದಿಯುವಂತೆ ಮಾಡಿದೆ.
    • ಬರೋಬ್ಬರಿ 1.25 ಲಕ್ಷ ವರ್ಷಗಳ ಬಳಿಕ ಇಂತಹ ಪರಿಸ್ಥಿತಿ ಉದ್ಭವಿಸುವಂತರಾಗಿದೆ.
    • ಮನುಷ್ಯ ಮಾಡಿದ ತಪ್ಪಿಗೆ ಇದೀಗ ಪ್ರಕೃತಿ ಕೂಡ ಮನುಷ್ಯರನ್ನು ಬಿಡುವ ಮನಸ್ಥಿತಿಯಲ್ಲಿಲ್ಲ.
1,25,000 ವರ್ಷಗಳ ಬಳಿಕ ಮಿತಿ ಮೀರಿದ ತಾಪಮಾನ! ಜೂನ್-ಜುಲೈ ತಿಂಗಳಲ್ಲೂ ಭೂಮಿ ಸುಡಲು ಕಾರಣವೇನು? title=
Global Temperature high

Global Temperature high: ಜಾಗತಿಕ ತಾಪಮಾನವು ಸಾವಿರಾರು ವರ್ಷಗಳಿಂದ ತಂಪಾಗಿದ್ದ ನಮ್ಮ ಭೂಮಿಯನ್ನು ಮತ್ತೆ ಕುದಿಯುವಂತೆ ಮಾಡಿದೆ. ಪ್ರಕೃತಿಯ ವಿನಾಶ ಉತ್ತುಂಗದಲ್ಲಿದೆ. ಆದರೂ ಮನುಷ್ಯ ಎಚ್ಚೆತ್ತುಕೊಳ್ಳದಿರುವುದು ವಿಷಾದಕಾರಿ ಸಂಗತಿ. ಜಾಗತಿಕ ತಾಪಮಾನದ ಪರಿಣಾಮ ಎಷ್ಟರ ಮಟ್ಟಿಗೆ ಇದೆ ಎಂದರೆ, ಬರೋಬ್ಬರಿ 1.25 ಲಕ್ಷ ವರ್ಷಗಳ ಬಳಿಕ ಇಂತಹ ಪರಿಸ್ಥಿತಿ ಉದ್ಭವಿಸುವಂತರಾಗಿದೆ. ಮನುಷ್ಯ ಮಾಡಿದ ತಪ್ಪಿಗೆ ಇದೀಗ ಪ್ರಕೃತಿ ಕೂಡ ಮನುಷ್ಯರನ್ನು ಬಿಡುವ ಮನಸ್ಥಿತಿಯಲ್ಲಿಲ್ಲ.

ಇದನ್ನೂ ಓದಿ: ಮತ್ತೇ ಬೋಲ್ಡ್‌ ಲುಕ್‌ನಲ್ಲಿ ಮಿಂಚಿದ ಮಿಲ್ಕಿ ಬ್ಯೂಟಿ ತಮನ್ನಾ : ಫೋಟೋಸ್‌ ನೋಡಿ

ಭೂಮಿಯು ಕುದಿಯಲು ಪ್ರಾರಂಭಿಸುತ್ತಿದೆಯೇ?

ಇಡೀ ಪ್ರಪಂಚದ ತಾಪಮಾನವು ಸಾಧ್ಯವಾದಷ್ಟು ವೇಗವಾಗಿ ಹೆಚ್ಚಾಗಿದೆ. ವಿಶ್ವಸಂಸ್ಥೆ (UN) ಮತ್ತು ಯುರೋಪಿಯನ್ ಯೂನಿಯನ್ (EU) ನಂತಹ ಸಂಸ್ಥೆಗಳ ಹವಾಮಾನ ತಜ್ಞರು ಇದನ್ನು ದೃಢಪಡಿಸಿದ್ದಾರೆ. ವಿದೇಶಿ ಹವಾಮಾನ ಇಲಾಖೆಯು ಜುಲೈ ತಿಂಗಳು ಹಲವಾರು ಲಕ್ಷ ವರ್ಷಗಳ ಬಳಿಕ ಅತ್ಯಂತ ಬಿಸಿ ತಿಂಗಳು ಇದಾಗಿದೆ ಎಂದು ಹೇಳಿದೆ. ಮತ್ತೊಂದೆಡೆ, ಯುಎನ್ ಮುಖ್ಯಸ್ಥರ ಪ್ರಕಾರ, ಈಗ ಭೂಮಿಯು ಕುದಿಯಲು ಪ್ರಾರಂಭಿಸಿದೆ.

ಹಲವಾರು ಲಕ್ಷ ವರ್ಷಗಳ ನಂತರ ಈ ತಿಂಗಳಲ್ಲಿ ಮಿತಿ ಮೀರಿದ ತಾಪಮಾನ ದಾಖಲಾಗಿದೆ ಎಂದು ಇತ್ತೀಚಿನ ಅಧ್ಯಯನವೊಂದು ಹೇಳಿದೆ. ಕಳೆದ 27 ದಿನಗಳ ಲೆಕ್ಕಾಚಾರದ ಪ್ರಕಾರ, ಜುಲೈ ತಿಂಗಳಲ್ಲಿ ಭೂಮಿಯ ಮೇಲೆ ಅತೀ ಹೆಚ್ಚು ಬಿಸಿ ಪ್ರಮಾಣ ದಾಖಲಾಗಿದೆ. ಯುರೋಪ್, ಉತ್ತರ ಅಮೆರಿಕಾ ಮತ್ತು ಚೀನಾದಲ್ಲಿ ಭೀಕರವಾದ ಶಾಖದಿಂದಾಗಿ ಪರಿಸ್ಥಿತಿಯನ್ನು ನಿಯಂತ್ರಿಸಲಾಗುತ್ತಿಲ್ಲ. ಮತ್ತೊಂದೆಡೆ ಭೂಮಿಯ ಮೇಲಿನ ಶಾಖ ಇಷ್ಟೊಂದು ಪ್ರಮಾಣದಲ್ಲಿ ಹಿಂದೆಂದೂ ಸಂಭವಿಸಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಇದನ್ನೂ ಓದಿ: ಮಿಸೈಲ್ ಮ್ಯಾನ್ ಆಫ್ ಇಂಡಿಯಾ' ಡಾ. ಎಪಿಜೆ ಅಬ್ದುಲ್ ಕಲಾಂ ಅವರ 10 ಸ್ಫೂರ್ತಿದಾಯಕ ನುಡಿಗಳು

ಹವಾಮಾನ ಇಲಾಖೆ (WMO) ಮತ್ತು EU ನ ಹವಾಮಾನ ಬದಲಾವಣೆ ಇಲಾಖೆ ಪ್ರಕಾರ, 2023 ರ ಈ ತಿಂಗಳು ಅನಿರೀಕ್ಷಿತವಾಗಿ ಹೊಸ ಶಾಖದ ದಾಖಲೆಯನ್ನು ಸೃಷ್ಟಿಸಿವೆ. ವಿಜ್ಞಾನಿಗಳ ಪ್ರಕಾರ, ಈ ತಾಪಮಾನವು ಸುಮಾರು 1.25 ಲಕ್ಷ ವರ್ಷಗಳಲ್ಲಿ ಭೂಮಿಯ ಮೇಲೆ ಅನುಭವಿಸಿದ ಗರಿಷ್ಠ ತಾಪಮಾನವಾಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News