ಈ ಬಾರಿ ವಿಶ್ವಕಪ್‌ನಲ್ಲಿ ಬೇರೆ ತಂಡಗಳ ಪರ ಆಡುತ್ತಿರುವ ಭಾರತ ಮೂಲದ ಆಟಗಾರರು ಇವರು.!

Indian Origin Players In World Cup 2023 : 2023 ರ ವಿಶ್ವಕಪ್ ಇಲ್ಲಿಯವರೆಗೆ ಅನೇಕ ರೋಮಾಂಚಕ ಪಂದ್ಯಗಳನ್ನು ನೋಡಿದ್ದೀರಿ. ಈ ಬಾರಿ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲುವ ಕನಸ್ನ್ನು ಸಹ ಹೊಂದಿದೆ. ಇದಲ್ಲದೇ ODI ವಿಶ್ವಕಪ್ 2023 ರಲ್ಲಿ ವಿವಿಧ ರಾಷ್ಟ್ರಗಳ ಪರವಾಗಿ ಆಡುತ್ತಿರುವ ಅನೇಕ ಭಾರತೀಯ ಆಟಗಾರರಿದ್ದಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews  

1 /6

ವಿಕ್ರಮಜಿತ್ ಸಿಂಗ್: ನೆದರ್ಲ್ಯಾಂಡ್ಸ್ ಮೂಲದ ಕ್ರಿಕೆಟಿಗ ವಿಕ್ರಮಜಿತ್ ಸಿಂಗ್ ಅವರು ಭಾರತದ ಪಂಜಾಬ್‌ನ ಚೀಮಾ ಖುರ್ದ್‌ನಲ್ಲಿ ಪಂಜಾಬಿ ಕುಟುಂಬದಲ್ಲಿ ಜನಿಸಿದರು. ಅವರ ಅಜ್ಜ, ಖುಷಿ ಚೀಮಾ, 1984 ರ ಸಿಖ್ ವಿರೋಧಿ ದಂಗೆಯ ನಂತರ ನೆದರ್ಲ್ಯಾಂಡ್ಸ್‌ಗೆ ಹೋದರು.  

2 /6

ತೇಜ ನಿಡಮನೂರು: ಭಾರತದ ವಿಜಯವಾಡದಲ್ಲಿ ಜನಿಸಿದ ತೇಜ ನಿಡಮನೂರು ನೆದರ್ಲೆಂಡ್ಸ್ ಕ್ರಿಕೆಟ್ ತಂಡದಲ್ಲಿ ಆಡುತ್ತಾರೆ. ಅವರು ಡಚ್ ತಂಡದ ನಿರ್ಣಾಯಕ ಸದಸ್ಯರಾಗಿದ್ದಾರೆ.    

3 /6

ರಚಿನ್ ರವೀಂದ್ರ: ರಚಿನ್ ಪೋಷಕರು  ಭಾರತೀಯ ಮೂಲದವರು. ವೆಲ್ಲಿಂಗ್ಟನ್‌ನಲ್ಲಿ ಜನಿಸಿದರು ಆದರೆ ರಚಿನ್ ಮೂಲತಃ ಬೆಂಗಳೂರಿನವರು. ತಂದೆ 1997 ರಲ್ಲಿ ನ್ಯೂಜಿಲೆಂಡ್‌ಗೆ ಶಿಫ್ಟ್‌ ಆದರು. ಬೆಂಗಳೂರಿನಲ್ಲಿ ಕ್ಲಬ್ ಮಟ್ಟದ ಕ್ರಿಕೆಟಿಗರಾಗಿದ್ದರು.   

4 /6

ಕೇಶವ ಮಹಾರಾಜ್: ದಕ್ಷಿಣ ಆಫ್ರಿಕಾ ಮೂಲದ ಸ್ಪಿನ್ನರ್ ಕೇಶವ್ ಮಹಾರಾಜ್ ಭಾರತೀಯ ಪೋಷಕರಾದ ಆತ್ಮಾನಂದ ಮಹಾರಾಜ್ ಮತ್ತು ಕಾಂಚನ್ ಮಾಲಾ ಅವರ ಪುತ್ರ. ಭಾರತದ ಉತ್ತರ ಪ್ರದೇಶದ ಸುಲ್ತಾನ್‌ಪುರ ಇವರ ಮೂಲ. ಅವರ ಮುತ್ತಜ್ಜ ಅಲ್ಲಿ ವಾಸಿಸುತ್ತಿದ್ದರು.   

5 /6

ಇಶ್ ಸೋಧಿ: ನ್ಯೂಜಿಲೆಂಡ್‌ನ ಸ್ಪಿನ್ನರ್ ಇಶ್ ಸೋಧಿ ಭಾರತೀಯ ಪಂಜಾಬಿ ಮೂಲದವರು. ಅವರು ಲುಧಿಯಾನದಲ್ಲಿ ಸಿಖ್ ಕುಟುಂಬದಲ್ಲಿ ಜನಿಸಿದರು. ಅವರು ನಾಲ್ಕು ವರ್ಷದವರಾಗಿದ್ದಾಗ ತಮ್ಮ ಕುಟುಂಬದೊಂದಿಗೆ ನ್ಯೂಜಿಲೆಂಡ್‌ಗೆ ಸ್ಥಳಾಂತರಗೊಂಡರು.   

6 /6

ಆರ್ಯನ್ ದತ್: ಹೇಗ್‌ನಲ್ಲಿ ಹುಟ್ಟಿ ಆಮ್‌ಸ್ಟರ್‌ಡ್ಯಾಮ್‌ನಲ್ಲಿ ಬೆಳೆದ ಆರ್ಯನ್ ದತ್ ನೆದರ್‌ಲ್ಯಾಂಡ್ಸ್ ತಂಡಕ್ಕಾಗಿ ಆಡುವ ಭಾರತೀಯ ಮೂಲದ ಆಟಗಾರ. ಬಲಗೈ-ಆಫ್ ಸ್ಪಿನ್ನರ್ ಆಗಿ, ಅವರು ಸೊಗಸಾದ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಅವರ ತಂದೆ ಭಾರತದ ಪಂಜಾಬ್‌ನ ಹೋಶಿಯಾರ್‌ಪುರದವರು.