IPL 2022: ಐಪಿಎಲ್ ಇತಿಹಾಸದಲ್ಲಿ ಅತಿ ವೇಗದ ಶತಕ, ಟಾಪ್ 5ರಲ್ಲಿ ಒಬ್ಬ ಭಾರತೀಯ

                         

Fastest Centuries in IPL : ಕ್ರಿಸ್ ಗೇಲ್ 2013ರಲ್ಲಿ ಪುಣೆ ವಿರುದ್ಧ ಕೇವಲ 30 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಆ ಇನ್ನಿಂಗ್ಸ್‌ನಲ್ಲಿ ಗೇಲ್ 17 ಸಿಕ್ಸರ್ ಮತ್ತು 13 ಬೌಂಡರಿಗಳ ಸಹಾಯದಿಂದ 175 ರನ್ ಗಳಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ಐಪಿಎಲ್‌ನಲ್ಲಿ ಅತಿ ವೇಗದ ಶತಕಗಳು : ಇಂಡಿಯನ್ ಪ್ರೀಮಿಯರ್ ಲೀಗ್‌ನ 15 ನೇ ಸೀಸನ್ ಮಾರ್ಚ್ 26 ರಿಂದ ಪ್ರಾರಂಭವಾಗಲಿದೆ. ಇದುವರೆಗೆ 14 ಸೀಸನ್‌ಗಳಲ್ಲಿ ಕೆಲವು ಅದ್ಭುತ ಇನ್ನಿಂಗ್ಸ್‌ಗಳನ್ನು ಸಹ ನೋಡಲಾಗಿದೆ. ಈ ಲೀಗ್‌ನಲ್ಲಿ ಅತಿ ವೇಗದ ಶತಕ ಸಿಡಿಸಿದ ಟಾಪ್ 5 ಬ್ಯಾಟ್ಸ್‌ಮನ್‌ಗಳ ಹೆಸರನ್ನು ತಿಳಿಯಿರಿ.  ಫೋಟೋ ಕೃಪೆ: ಐಪಿಎಲ್

2 /6

ಕ್ರಿಸ್ ಗೇಲ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗವಾಗಿ ಶತಕ ಸಿಡಿಸಿದ ಬ್ಯಾಟ್ಸ್‌ಮನ್. 2013ರ ಏಪ್ರಿಲ್ 23ರಂದು ಪುಣೆ ವಾರಿಯರ್ಸ್ ವಿರುದ್ಧ ಕೇವಲ 30 ಎಸೆತಗಳಲ್ಲಿ ಗೇಲ್ ಈ ಸಾಧನೆ ಮಾಡಿದರು.  ಫೋಟೋ ಕೃಪೆ: ಐಪಿಎಲ್

3 /6

37 ಎಸೆತಗಳಲ್ಲಿ ಶತಕ ಸಿಡಿಸಿದ ಯೂಸುಫ್ ಪಠಾಣ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಪಠಾಣ್ 13 ಮಾರ್ಚ್ 2010 ರಂದು ಬ್ರಬೋರ್ನ್ ಸ್ಟೇಡಿಯಂನಲ್ಲಿ RCB ವಿರುದ್ಧ ಈ ಅಬ್ಬರದ ಶತಕವನ್ನು ಗಳಿಸಿದರು.  ಫೋಟೋ ಕೃಪೆ: ಐಪಿಎಲ್

4 /6

ಮೂರನೇ ಶ್ರೇಯಾಂಕದಲ್ಲಿರುವ ಡೇವಿಡ್ ಮಿಲ್ಲರ್ ಇದಕ್ಕಾಗಿ ಇರ್ಫಾನ್ ಪಠಾಣ್ ಗಿಂತ ಕೇವಲ ಒಂದು ಎಸೆತವನ್ನು ಹೆಚ್ಚು ಆಡಬೇಕಾಯಿತು. ಪಂಜಾಬ್ ಪರ ಆಡುತ್ತಿರುವ ಮಿಲ್ಲರ್ 6 ಮೇ 2013 ರಂದು ಕೇವಲ 38 ಎಸೆತಗಳಲ್ಲಿ ಶತಕ ಗಳಿಸಿದರು.  ಫೋಟೋ ಕೃಪೆ: ಐಪಿಎಲ್

5 /6

27 ಏಪ್ರಿಲ್ 2008 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಆಡಮ್ ಗಿಲ್‌ಕ್ರಿಸ್ಟ್ 42 ಎಸೆತಗಳಲ್ಲಿ ಶತಕವನ್ನು ಪೂರ್ಣಗೊಳಿಸಿದರು. ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಆ ಪಂದ್ಯದಲ್ಲಿ ಗಿಲ್‌ಕ್ರಿಸ್ಟ್ ಒಟ್ಟು 109 ರನ್ ಗಳಿಸಿದ್ದರು.  ಫೋಟೋ ಕೃಪೆ: ಐಪಿಎಲ್

6 /6

ಎಬಿ ಡಿವಿಲಿಯರ್ಸ್ 14 ಮೇ 2016 ರಂದು RCB ಪರ ಆಡುವಾಗ 43 ಎಸೆತಗಳಲ್ಲಿ ಶತಕ ಗಳಿಸಿದರು. ಈ ಪಂದ್ಯ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿತ್ತು. ಫೋಟೋ ಕೃಪೆ: ಐಪಿಎಲ್