Actress Umashree: ಉಮಾಶ್ರೀ ಅವರ ಗಂಡ ಯಾರು? ನಟಿ ತುಂಬು ಗರ್ಭಿಣಿಯಾಗಿದ್ದಾಗ ಬಿಟ್ಟು ಹೋಗಿದ್ದೇಕೆ?

Actress Umashree Husband: ಮಾಲಾಶ್ರೀ.. ಕನ್ನಡದ ಸಿನಿರಂಗದ ಪ್ರಮುಖ ನಟಿಯರಲ್ಲಿ ಒಬ್ಬರು.. ಇವರು 1957 ಮೇ 10ರಂದು ತುಮಕೂರಿನಲ್ಲಿ ಜನಿಸಿದರು.. ಇವರು ಸಿನಿರಂಗದಲ್ಲಿ ಯಶಸ್ಸು ಕಂಡಂತೆ ವೈಯಕ್ತಿಕ ಜೀವನದಲ್ಲಿ ಕಾಣಲಿಲ್ಲ.. ಹಾಗಾದ್ರೆ ನಟಿಯ ಬಗೆಗಿನ ಕೆಲವು ಇಂಟ್ರೆಸ್ಟಿಂಗ್‌ ಮಾಹಿತಿಗಳನ್ನು ಇದೀಗ ತಿಳಿಯೋಣ..

1 /5

ನಟಿ ಉಮಾಶ್ರೀ ಅವರ ಹೆಸರು ಕೇಳುತ್ತಿದ್ದಂತೆಯೇ ಎಲ್ಲರಿಗೂ ನೆನಪಾಗುವುದು ಅವರ ಅಧ್ಬುತ ಅಭಿನಯ ಹಾಗೂ ಮುಗ್ಧ ನಗು.. ಅಷ್ಟು ವಯಸ್ಸಾದರೂ ಈಗಲೂ ಕಿರುತೆರೆಯಲ್ಲಿ ಮಿಂಚುತ್ತಿರುವ ಈ ಹಿರಿತಾರೆಯ ಜೀವನವೂ ಸಾಕಷ್ಟು ಏರುಪೇರುಗಳಿಂದ ಕೂಡಿತ್ತು.. ಆದರೆ ಇವರು ವೈಯಕ್ತಿಕ ಬದುಕಿನಲ್ಲಿ ಅಷ್ಟಾಗಿ ಯಶಸ್ಸನ್ನು ಕಾಣಲಿಲ್ಲ..   

2 /5

ಸಂಗಾತಿಯ ಆಯ್ಕೆಯಲ್ಲಿ ನಿರ್ಧಾರದಲ್ಲಿ ತಪ್ಪು ಹೆಜ್ಜೆ ಇಟ್ಟು ನಟಿ ಅನುಭವಿಸಿದ ನೋವು ಅಷ್ಟಿಷ್ಟಲ್ಲ.. ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿಯನ್ನು ಕಳೆದುಕೊಂಡ ನಟಿ ಉಮಾಶ್ರೀ ಆಶ್ರಯಕ್ಕಾಗಿ ಬೆಂಗಳೂರಿನ ತಮ್ಮ ದೊಡ್ಡಮ್ಮನ ಮನೆಗೆ ಬರುತ್ತಾರೆ..   

3 /5

 ಕಾಲೇಜಿನಲ್ಲಿ ಪ್ರೀತಿ ಪ್ರೇಮ ಎಂಬುದಕ್ಕೆ ಬಲಿಯಾಗಿ ನಟಿ ತಮ್ಮ ಬದುಕನ್ನು ತಾವೇ ಹಾಳುಮಾಡಿಕೊಂಡ ವಿಚಾರವನ್ನು ನಟಿ ಉಮಾಶ್ರೀ ತಾವೇ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.. ಅಲ್ಲದೇ ನಟಿ ಪ್ರೀತಿಸಿದವರಿಗಾಗಿ ಮನೆಬಿಟ್ಟು ಓಡಿಹೋಗಿ ಮದುವೆಯಾಗುತ್ತಾರೆ..   

4 /5

ಆರಂಭಿಕ ದಿನಗಳಲ್ಲಿ ಚೆನ್ನಾಗಿಯೇ ಇದ್ದ ಇವರ ಸುಖ ದಾಂಪತ್ಯದಲ್ಲಿ ಬಿರುಕು ಮೂಡಲು ಪ್ರಾರಂಭಿಸಿದ್ದೇ ಪತಿಯ ದುಶ್ಚಟದಿಂದ.. ದುಡಿಯದ ಗಂಡನಿಂದ ಉಮಾಶ್ರೀ ಕಂಡ ಕಷ್ಟ ಅಷ್ಟಿಷ್ಟಲ್ಲ.. ಗರ್ಭಿಣಿಯಾಗಿದ್ದಾಗ ಅವರ ಗಂಡ ಮತ್ತೊಂದು ಮದುವೆಯಾಗಿ ಆಕೆಯನ್ನು ಮನೆಗೆ ಕರೆತರುತ್ತಾರೆ.. ಆಗ ಉಮಾಶ್ರೀ ದೈಹಿಕ ಹಲ್ಲೆಯನ್ನು ಎದುರಿಸಿದ್ದಾರೆ..   

5 /5

ನಂತರ ಚಿಕ್ಕ ಹೋಟೆಲ್‌ವೊಂದನ್ನು ನಡೆಸುವ ನಿರ್ಧಾರಕ್ಕೆ ಬರುತ್ತಾರೆ..ಆಗಲೇ ನಟಿಯನ್ನು ಕೈ ಬೀಸಿ ಕರೆದಿದ್ದು ಸಿನಿರಂಗ..ಅಲ್ಲಿಂದ ಉಮಾಶ್ರೀ ಇಲ್ಲಿಯವರೆಗೂ ಹಿಂದಿರುಗಿ ನೋಡಿಲ್ಲ..ಸಿನಿ ಜಗತ್ತಿನ ಜೊತೆಗೆ ರಾಜಕೀಯದಲ್ಲೂ ಸಕ್ರಿಯವಾಗಿರುವ ಉಮಾಶ್ರೀ ಈ ಹಿಂದೆ ಸಚಿವೆಯಾಗಿಯೂ ಸಹ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆ ಅವರದ್ದಾಗಿದೆ.ಅಷ್ಟೇ ಅಲ್ಲದೆ ಈಗ ಕಿರುತೆರೆಗೆ ಕಂಬ್ಯಾಕ್‌ ಮಾಡಿದ್ದಾರೆ..ಒಟ್ಟಾರೆ ಹೇಳುವುದಾದರೇ ಸಾಕಷ್ಟು ಕಷ್ಟಗಳನ್ನು ಮೆಟ್ಟಿನಿಂತ ದಿಟ್ಟ ಮಹಿಳೆ ಉಮಾಶ್ರೀ ಎನ್ನಬಹುದು.