Akshaya Tritiya: ಅಕ್ಷಯ ತೃತೀಯದಂದು ಈ ವಸ್ತುಗಳನ್ನು ದಾನ ಮಾಡಿದರೆ ತುಂಬುತ್ತೆ ಖಜಾನೆ

Akshaya Tritiya Daan: ಧಾರ್ಮಿಕ ನಂಬಿಕೆಗಳ ಪ್ರಕಾರ, ಅಕ್ಷಯ ತೃತೀಯ ದಿನದಂದು ವಸ್ತುಗಳನ್ನು ಕೊಳ್ಳುವುದಷ್ಟೇ ಅಲ್ಲ, ಕೆಲವು ವಸ್ತುಗಳನ್ನು ದಾನ ಮಾಡುವುದರಿಂದಲೂ ಆರ್ಥಿಕ ಸಂಕಷ್ಟಗಳಿಂದ ದೂರ ಉಳಿಯಬಹುದು ಎಂದು ಹೇಳಲಾಗುತ್ತದೆ. 

Written by - Yashaswini V | Last Updated : May 7, 2024, 11:04 AM IST
  • ಅಕ್ಷಯ ತೃತೀಯ ದಿನದಂದು ವಿಶೇಷ ವಸ್ತುಗಳನ್ನು ದಾನ ಮಾಡುವುದರಿಂದ ಜೀವನದಲ್ಲಿ ಎಂದೂ ಹಣಕಾಸಿನ ಕೊರತೆ ಎದುರಾಗುವುದಿಲ್ಲ ಎಂದು ನಂಬಲಾಗಿದೆ.
  • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಕ್ಷಯ ತೃತೀಯ ದಿನದಂದು ಯಾವ ಯಾವ ವಸ್ತುಗಳನ್ನು ದಾನ ಮಾಡುವುದು ಒಳ್ಳೆಯದು ಎಂದು ತಿಳಿಯೋಣ...
Akshaya Tritiya: ಅಕ್ಷಯ ತೃತೀಯದಂದು ಈ ವಸ್ತುಗಳನ್ನು ದಾನ ಮಾಡಿದರೆ ತುಂಬುತ್ತೆ ಖಜಾನೆ  title=

Akshaya Tritiya 2024: ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯ ಹಬ್ಬವನ್ನು ಅತ್ಯಂತ ಮಂಗಳಕರ ಹಬ್ಬಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯಾ ತಿಥಿಯಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಈ ವರ್ಷ ಮೇ 10ರಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತಿದೆ. 

ಅಕ್ಷಯ ತೃತೀಯ ದಿನದಂದು ತಾಯಿ ಲಕ್ಷ್ಮಿಯನ್ನು ಪೂಜಿಸಿ, ಮನೆಗೆ ಚಿನ್ನ-ಬೆಳ್ಳಿ ಸೇರಿದಂತೆ ಕೆಲವು ವಸ್ತುಗಳನ್ನು ಖರೀದಿಸುವುದನ್ನು ಮಂಗಳಕರ ಎಂದು ಹೇಳಲಾಗುತ್ತದೆ. ಇದರಿಂದ ಮನೆಯಲ್ಲಿ ಸುಖ-ಶಾಂತಿ ನೆಲಸುತ್ತದೆ. ಧನಾಗಮನವಾಗುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ಅಕ್ಷಯ ತೃತೀಯ ದಿನದಂದು ಕೆಲವು ವಸ್ತುಗಳನ್ನು ದಾನ ಮಾಡುವುದರಿಂದ ಅಂತಹ ಮನೆಯಲ್ಲಿ ತಾಯಿ ಮಹಾಲಕ್ಷ್ಮಿ ನೆಲೆಸುತ್ತಾಳೆ. ಆರ್ಥಿಕ ಸಂಕಷ್ಟದಿಂದ ಮುಕ್ತಿ ದೊರೆತು ಖಜಾನೆ ತುಂಬುತ್ತದೆ ಎಂದು ಹೇಳಲಾಗುತ್ತದೆ. 

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅಕ್ಷಯ ತೃತೀಯ (Akshaya Trithiya) ದಿನದಂದು ಕೆಲವು ವಸ್ತುಗಳನ್ನು ದಾನ ಮಾಡಿದರೆ ಮನೆಯಲ್ಲಿ ಎಂದಿಗೂ ಹಣಕಾಸಿನ ತೊಂದರೆ ಎದುರಾಗುವುದಿಲ್ಲ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಅಕ್ಷಯ ತೃತೀಯದಂದು ಯಾವ ವಸ್ತುಗಳನ್ನು ದಾನ ಮಾಡುವುದು ಶುಭ ಎಂದು ತಿಳಿಯೋಣ...  

ಇದನ್ನೂ ಓದಿ- Akshaya Tritiya 2024: ಅಕ್ಷಯ ತೃತೀಯದಲ್ಲಿ ಚಿನ್ನವನ್ನು ಖರೀದಿಸುವುದು ಏಕೆ?

ಅಕ್ಷಯ ತೃತೀಯದಂದು ಯಾವ ಫಲಕ್ಕಾಗಿ ಯಾವ ವಸ್ತುವನ್ನು ದಾನ ಮಾಡಬೇಕು? 
ಸುಖ ಸಮೃದ್ದಿಗಾಗಿ: 

ಅಕ್ಷಯ ತೃತೀಯ ದಿನದಂದು ಒಂದು ಮಡಕೆ ನೀರನ್ನು ದಾನ (Daan) ಮಾಡುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ ಎಂದು ನಂಬಲಾಗಿದೆ. 

ಹಣಕಾಸಿನ ಬಿಕ್ಕಟ್ಟು: 
ನೀವು ಹಣಕಾಸಿನ ಬಿಕ್ಕಟ್ಟಿನಿಂದ (Financial Crisis) ತೊಂದರೆಗೊಳಗಾಗಿದ್ದರೆ ಅಕ್ಷಯ ತೃತೀಯ ದಿನದಂದು ವಸ್ತ್ರದಾನ ಮಾಡಿ. ಇದರಿಂದ ಸಾಲಬಾಧೆಯಿಂದ ಮುಕ್ತಿ ದೊರೆತು, ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಬಹುದು ಎಂದು ಹೇಳಲಾಗುತ್ತದೆ. 

ತಾಯಿ ಲಕ್ಷ್ಮಿ ಆಶೀರ್ವಾದಕ್ಕಾಗಿ: 
ನೀವು ಸಂಪತ್ತಿನ ಅಧಿದೇವತೆ ತಾಯಿ ಲಕ್ಷ್ಮಿ ಆಶೀರ್ವಾದವನ್ನು ಬಯಸಿದರೆ ಅಕ್ಷಯ ತೃತೀಯ ದಿನದಂದು ಅಗತ್ಯವಿರುವವರಿಗೆ ಎಳ್ಳು, ತುಪ್ಪ, ಉಪ್ಪು, ಅಕ್ಕಿ, ಬೇಳೆಕಾಳು ಮತ್ತು ಬೆಲ್ಲವನ್ನು ದಾನ ಮಾಡಿ. 

ಇದನ್ನೂ ಓದಿ- Akshaya Tritiya 2023: ಅಕ್ಷಯ ತೃತೀಯದಂದು ತಪ್ಪಾಗಿಯೂ ಈ 5 ಕೆಲಸ ಮಾಡಬೇಡಿ, ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ!

ವೈವಾಹಿಕ ಸಮಸ್ಯೆಗಳಿಂದ ಮುಕ್ತಿಗಾಗಿ: 
ನೀವು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆಗಳನ್ನು ಅನುಭವಿಸುತ್ತಿದ್ದರೆ ಅಕ್ಷಯ ತೃತೀಯ ದಿನದಂದು ಕುಂಕುಮವನ್ನು ದಾನ (Daan On Akshaya Trithiya) ಮಾಡುವುದು ತುಂಬಾ ಶುಭಕರ. ಇದರಿಂದ ವೈವಾಹಿಕ ಜೀವನದಲ್ಲಿ ಎದುರಾಗಿರುವ ಸಂಕಷ್ಟಗಳಿಂದ ಪರಿಹಾರ ದೊರೆತು ಜೀವನದಲ್ಲಿ ಪ್ರೀತಿ ಮರಳುತ್ತದೆ ಎಂದು ನಂಬಲಾಗಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News