ಹಸ್ತದಲ್ಲಿ ಈ ರೇಖೆ ಇದ್ದರೆ ಜೀವನದಲ್ಲಿ ಆಗುವುದು ಸಿರಿವಂತ ಸಂಗಾತಿಯ ಪ್ರವೇಶ ! ಅತ್ತೆ ಮನೆಯಿಂದ ಸಿಗುವುದು ಭರ್ಜರಿ ಆಸ್ತಿ

ಅಂಗೈಯಲ್ಲಿರುವ ಮದುವೆ ರೇಖೆಯಿಂದ ನಿಮ್ಮ ಜೀವನ ಸಂಗಾತಿ ಹೇಗಿರುತ್ತಾರೆ. ಅವರ ಆರ್ಥಿಕ ಸ್ಥಿತಿ ಹೇಗಿರುತ್ತದೆ ? ನಿಮ್ಮ ದಾಂಪತ್ಯ ಜೀವನ ಹೇಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳಬಹುದು.    

Written by - Ranjitha R K | Last Updated : Jul 6, 2023, 02:39 PM IST
  • ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಮದುವೆ ರೇಖೆಗೆ ಹೆಚ್ಚಿನ ಪ್ರಾಮುಖ್ಯತೆ
  • ಮದುವೆಯ ನಂತರ ಜೀವನವು ಸಂಪೂರ್ಣವಾಗಿ ಬದಲಾಗುತ್ತದೆ.
  • ಮದುವೆಯ ರೇಖೆ ಮತ್ತು ಅದರ ಪ್ರಮುಖ ಚಿಹ್ನೆಗಳು
ಹಸ್ತದಲ್ಲಿ ಈ ರೇಖೆ ಇದ್ದರೆ ಜೀವನದಲ್ಲಿ ಆಗುವುದು ಸಿರಿವಂತ ಸಂಗಾತಿಯ ಪ್ರವೇಶ ! ಅತ್ತೆ ಮನೆಯಿಂದ ಸಿಗುವುದು ಭರ್ಜರಿ ಆಸ್ತಿ  title=

ಬೆಂಗಳೂರು : ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಮದುವೆ ರೇಖೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ವಿವಾಹ ರೇಖೆಯು ಮಂಗಳಕರವಾಗಿದ್ದರೆ  ಜೀವನದಲ್ಲಿ ಉತ್ತಮ ಜೀವನ ಸಂಗಾತಿಯ ಪ್ರವೇಶವಾಗುತ್ತದೆ. ವೈವಾಹಿಕ ಜೀವನ ಸುಖಮಯ ಮತ್ತು ನೆಮ್ಮದಿಯಿಂದ ಕೂಡಿರುತ್ತದೆ. ಕೆಲವೊಮ್ಮೆ ಮದುವೆಯ ನಂತರ ಜೀವನವು ಸಂಪೂರ್ಣವಾಗಿ ಬದಲಾಗುತ್ತದೆ. ಇದರ ಹಿಂದಿನ ಕಾರಣ ಜೀವನ ಸಂಗಾತಿ. ಅಂಗೈಯಲ್ಲಿರುವ ವಿವಾಹ ರೇಖೆಯಿಂದ ನಿಮ್ಮ ಜೀವನ ಸಂಗಾತಿ ಹೇಗಿರುತ್ತಾರೆ. ಅವರ ಆರ್ಥಿಕ ಸ್ಥಿತಿ ಹೇಗಿರುತ್ತದೆ ? ನಿಮ್ಮ ದಾಂಪತ್ಯ ಜೀವನ ಹೇಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳಬಹುದು.  ಇಂದು ನಾವಿಲ್ಲಿ ಹಸ್ತದಲ್ಲಿರುವ ಮದುವೆಯ ರೇಖೆಯ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.  

ವಿವಾಹ​ ರೇಖೆ ಮತ್ತು ಅದರ ಪ್ರಮುಖ ಚಿಹ್ನೆಗಳು  : 
ವಿವಾಹ ರೇಖೆಯು ಅಂಗೈಯಲ್ಲಿ ಕಿರು ಬೆರಳಿನ ಕೆಳಗಿರುತ್ತದೆ. ಕಿರು ಬೆರಳಿನ ಕೆಳಗೆ  ಇರುವ ಅಡ್ಡ ರೇಖೆಗಳು ಮದುವೆಯ ರೇಖೆಗಳು. ಇದು ಅಂಗೈಯಲ್ಲಿ ಹೊರಗಿನಿಂದ ಒಳಕ್ಕೆ ಬರುವಂತೆ ಇರುತ್ತದೆ. ಈ ರೇಖೆಗಳು ಹೃದಯ ರೇಖೆಯ ಮೇಲಿರುತ್ತವೆ. ಈ ವಿವಾಹದ ರೇಖೆ  ವೈವಾಹಿಕ ಜೀವನ ಮತ್ತು ಜೀವನ ಸಂಗಾತಿ ಹೇಗೆ ಇರುತ್ತವೆ ಎಂಬುದನ್ನು ತಿಳಿಸುತ್ತದೆ. 

ಇದನ್ನೂ ಓದಿ : ಈ ನಾಲ್ಕು ರಾಶಿಯಲ್ಲಿ ನವಪಂಚಮ ರಾಜಯೋಗ ! ಕೈ ಸೇರುವುದು ಭಾರೀ ಧನ ಸಂಪತ್ತು

- ವಿವಾಹ ರೇಖೆಯು ಕೇವಲ ಒಂದೇ ಇದ್ದು ಸ್ಪಷ್ಟವಾಗಿದ್ದು, ಚಂದ್ರ ಪರ್ವತದಿಂದ ಬರುವ ಇನ್ನೊಂದು ರೇಖೆಯೊಂದಿಗೆ ಸೇರಿಕೊಂಡರೆ ಅಂಥಹ ಜನರು ಮದುವೆಯ ವಿಷಯದಲ್ಲಿ ತುಂಬಾ ಅದೃಷ್ಟವಂತರು.  ಇವರು ಶ್ರೀಮಂತ ಜೀವನ ಸಂಗಾತಿಯನ್ನು ಪಡೆಯುತ್ತಾರೆ. ಮಾತ್ರವಲ್ಲ ಅತ್ತೆ ಮನೆಯಿಂದ ಸಾಕಷ್ಟು ಪ್ರಮಾಣದ ಆಸ್ತಿ ಕೂಡಾ ಅವರ ಕೈ ಸೇರುತ್ತದೆಯಂತೆ. 

- ವಿವಾಹ ರೇಖೆ ಮತ್ತು ಚಂದ್ರ ಪರ್ವತದಿಂದ ಹೊರಬರುವ ರೇಖೆಯು ಒಟ್ಟಿಗೆ ಮುಂದೆ ಸಾಗಿದರೆ, ಅಂತಹ ವ್ಯಕ್ತಿಯ ಜೀವನ ಸಂಗಾತಿಯ ತುಂಬಾ ಪ್ರೀತಿಸುತ್ತಾರೆ ಎಂದರ್ಥ. ಹೀಗಾಗಿ ಅವರ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. 

ಇದನ್ನೂ ಓದಿ : Mangal Gochar 2023: ಸೂರ್ಯನ ರಾಶಿಯಲ್ಲಿ ಮಂಗಳನ ಪ್ರವೇಶ, ಹೊಳೆಯಲಿದೆ ಈ 4 ರಾಶಿಯವರ ಅದೃಷ್ಟ

- ವಿವಾಹ ರೇಖೆಯು ಮಂದವಾಗಿದ್ದರೆ ಅಂಥಹ ಜನರು ತಮ್ಮ ಜೀವನ ಸಂಗಾತಿಯ ಬಗ್ಗೆ ಹೆಚ್ಚು ಗಂಭೀರವಾಗಿರುವುದಿಲ್ಲ. ಈ ಜನರು ಒಂದಕ್ಕಿಂತ ಹೆಚ್ಚು ಸಂಬಂಧಗಳನ್ನು ಹೊಂದಿರುತ್ತಾರೆ. ಮದುವೆಯ ನಂತರವೂ  ಆ ಜನರು ಸಂಬಂಧವನ್ನು ಮುಂದುವರೆಸಿಕೊಂಡು ಹೋಗುವ ಪ್ರಯತ್ನದಲ್ಲಿಯೇ ಇರುತ್ತಾರೆ. 

ಅದೇ ವೇಳೆ 2 ವಿವಾಹ ರೇಖೆಗಳು 2 ಮದುವೆಗಳನ್ನು ಹೊಂದಿರುವ ಸಂಕೇತವಾಗಿದೆ. ಅಂತಹ ವ್ಯಕ್ತಿ ಎರಡು ಮದುವೆಯಾಗುವ ಸಾಧ್ಯತೆಗಳಿವೆ. ಒಂದು ರೇಖೆಯು ತುಲನಾತ್ಮಕವಾಗಿ ಮಂದವಾಗಿದ್ದರೆ ಅಂಥಹ ವ್ಯಕ್ತಿಯು  ಒಂದೇ ಮದುವೆಯಾಗುತ್ತಾನೆ. ಆದರೆ ಮತ್ತೊಬ್ಬ ಪ್ರೇಮಿಯನ್ನು ಹೊಂದಿರುತ್ತಾನೆ. 

ಇದನ್ನೂ ಓದಿ : Astro Tips: ಹಳೆಯ ಪೊರಕೆ ಎಸೆಯುವ ಮೊದಲು ಈ ವಿಷಯ ತಿಳಿದುಕೊಳ್ಳಿರಿ!

ಮತ್ತೊಂದೆಡೆ, ಅಸ್ಪಷ್ಟ ಮತ್ತು ಮಧ್ಯೆ ಕತ್ತರಿಸಿದ ರೀತಿಯಲ್ಲಿ ವಿವಾಹ ರೇಖೆ ಇದ್ದರೆ ಏಕಾಂಗಿ ಜೀವನ ಅಥವಾ ಸಂಗಾತಿಯ ಕಳಪೆ ಆರೋಗ್ಯವನ್ನು ಸೂಚಿಸುತ್ತದೆ. 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News