ಅಡುಗೆ ಮನೆಯಲ್ಲಿ ಮಾಡುವ ಈ ತಪ್ಪೇ ನಿಮ್ಮ ಬಡತನಕ್ಕೆ ಕಾರಣವಾಗಬಹುದು !

Grocery Items Should Never Run Out:ಈ ಪದಾರ್ಥಗಳು ಖಾಲಿಯಾದರೆ ದಾರಿದ್ರ್ಯ ಎದುರಾಗುತ್ತದೆ ಎದ್ನು ಹೇಳಲಾಗುತ್ತದೆ.ಮಾತ್ರವಲ್ಲ   ವಾಸ್ತು ದೋಷ ಕೂಡಾ ಕಾಡುತ್ತದೆಯಂತೆ.    

Written by - Ranjitha R K | Last Updated : May 20, 2024, 01:01 PM IST
  • ಅಡುಗೆಮನೆಯಲ್ಲಿ ಕೆಲವು ವಸ್ತುಗಳು ಯಾವತ್ತೂ ಖಾಲಿಯಾಗಬಾರದು.
  • ಈ ವಸ್ತುಗಳು ಮುಗಿಯುವ ಮುನ್ನವೇ ಅದನ್ನು ಖರೀದಿಸಬೇಕು
  • ಇಲ್ಲವಾದರೆ ವಾಸ್ತು ದೋಷ ಕಾಡುತ್ತದೆಯಂತೆ
ಅಡುಗೆ ಮನೆಯಲ್ಲಿ ಮಾಡುವ ಈ ತಪ್ಪೇ ನಿಮ್ಮ ಬಡತನಕ್ಕೆ ಕಾರಣವಾಗಬಹುದು !  title=

Grocery Items Should Never Run Out: ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಅಡುಗೆಮನೆಯಲ್ಲಿ ಕೆಲವು ವಸ್ತುಗಳು ಯಾವತ್ತೂ ಖಾಲಿಯಾಗಬಾರದು.ಅಂದರೆ ಈ ವಸ್ತುಗಳು ಮುಗಿಯುವ ಮುನ್ನವೇ ಅದನ್ನು ಖರೀದಿಸಿ ತರಬೇಕು.ಅಡುಗೆ ಮನೆಯಲ್ಲಿ ಕೆಲವೊಂದು ವಸ್ತುಗಳು ಖಾಲಿಯಾಗುವುದೇ ಅಪಶಕುನ ಎಂದು ಹೇಳಲಾಗುತ್ತದೆ.ಈ ಪದಾರ್ಥಗಳು ಖಾಲಿಯಾದರೆ ದಾರಿದ್ರ್ಯ ಎದುರಾಗುತ್ತದೆ ಎದ್ನು ಹೇಳಲಾಗುತ್ತದೆ.ಮಾತ್ರವಲ್ಲ   ವಾಸ್ತು ದೋಷ ಕೂಡಾ ಕಾಡುತ್ತದೆಯಂತೆ.  

ಈ ಪದಾರ್ಥಗಳು ಅಡುಗೆ ಮನೆಯಲ್ಲಿ ಖಾಲಿಯಾಗಲೇ ಬಾರದು : 
ಉಪ್ಪು :

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಅಡುಗೆ ಮನೆಯಲ್ಲಿ ಉಪ್ಪಿನ ಕೊರತೆ ಇರಬಾರದು.ಉಪ್ಪು ಖಾಲಿಯಾದರೆ ನಕಾರಾತ್ಮಕ ಶಕ್ತಿ ಮನೆಯನ್ನು ಪ್ರವೇಶಿಸುತ್ತದೆಯಂತೆ. ಉಪ್ಪಿಲ್ಲದ ಆಹಾರದಲ್ಲಿ ಹೇಗೆ ರುಚಿ ಇರುವುದಿಲ್ಲವೋ ಅದೇ ರೀತಿ ಉಪ್ಪಿಲ್ಲದೆ ಜೀವನದಲ್ಲೂ ರುಚಿ ಇರುವುದಿಲ್ಲ ಎನ್ನಲಾಗುತ್ತದೆ.

ಇದನ್ನೂ ಓದಿ : Weekly Horoscope: ನಾಲ್ಕು ರಾಶಿಯವರಿಗೆ ಈ ವಾರ ಮಿಶ್ರ ಫಲ, ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ!

ಅರಶಿನ :
ಅರಶಿನವು ಆಹಾರಕ್ಕೆ ಸುಂದರ ಬಣ್ಣವನ್ನು ನೀಡುತ್ತದೆ.ಅಲ್ಲದೆ ನಮ್ಮ ಆರೋಗ್ಯವನ್ನು ಕೂಡಾ ಕಾಪಾಡುತ್ತದೆ.ಅರಶಿನವು ಗುರು ಗ್ರಹದೊಂದಿಗೆ ಸಂಬಂಧ ಹೊಂದಿದೆ.ಆದ್ದರಿಂದ,ಅಡುಗೆಮನೆಯಲ್ಲಿ ಎಂದಿಗೂ ಅರಶಿನ ಖಾಲಿಯಾಗಲೇಬಾರದು. ಖಾಲಿಯಾಗುವುದಕ್ಕೆ ಮುನ್ನವೇ ಅರಶಿನವನ್ನು ಖರೀದಿಸಿ ಬಿಡಬೇಕು.ಇಲ್ಲದಿದ್ದರೆ ಗುರುದೋಷ ಎದುರಿಸಬೇಕಾಗಬಹುದು. ಅಲ್ಲದೆ,ಶುಭ ಕಾರ್ಯಗಳಲ್ಲಿ ಅಡೆತಡೆಗಳು ಉಂಟಾಗಬಹುದು.

ಗೋಧಿ ಹಿಟ್ಟು : 
ಅಡುಗೆಮನೆಯಲ್ಲಿ ಹಿಟ್ಟು ಖಾಲಿಯಾಗಲೇಬಾರದು.ಒಂದು ವೇಳೆ ಮನೆಯಲ್ಲಿ ಗೋಧಿ ಹಿಟ್ಟು ಖಾಲಿಯಾದರೆ ಕುಟುಂಬದ ಸದಸ್ಯರ ಘನತೆ ಗೌರವಕ್ಕೆ ಧಕ್ಕೆಯಾಗಬಹುದು.

ಇದನ್ನೂ ಓದಿ: Shani Sadesati: ಮುಂದಿನ ವರ್ಷ ಈ ರಾಶಿಯವರಿಗೆ ಶನಿ ಸಾಡೇಸಾತಿ ಆರಂಭ, ಜೀವನದಲ್ಲಿ ಸಾಕಷ್ಟು ಏರಿಳಿತ

ಅಕ್ಕಿ : 
ಅಕ್ಕಿ ಶುಕ್ರ ಗ್ರಹಕ್ಕೆ ಸಂಬಂಧಿಸಿದೆ.ಅಡುಗೆಮನೆಯಲ್ಲಿ ಯಾವಾಗಲೂ ಅಕ್ಕಿ ಖಾಲಿಯಾಗಲು ಬಿಡಲೇಬಾರದು.ಅಕ್ಕಿ ಖಾಲಿಯಾದರೆ ಶುಕ್ರ ದೋಷ ಎದುರಾಗುತ್ತದೆ.ಇದರಿಂದ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಸಾಸಿವೆ ಎಣ್ಣೆ :
ಸಾಸಿವೆ ಎಣ್ಣೆಯು ಶನಿ ದೇವನೊಂದಿಗೆ ಸಂಬಂಧ ಹೊಂದಿದೆ.ಆದ್ದರಿಂದ, ಅಡುಗೆಮನೆಯಿಂದ ಸಾಸಿವೆ ಎಣ್ಣೆ ಖಾಲಿಯಗಾಬಾರದು.ಸಾಸಿವೆ ಎಣ್ಣೆ ಮುಗಿದರೆ ಶನಿ ದೋಷ ಕಾಡುತ್ತದೆಯಂತೆ.

(ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ.ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News