IPLನಲ್ಲಿ ಧೋನಿಗೆ ಎದುರಾಗಲಿದೆ ಸಮಸ್ಯೆ.. ಇದೇ ಆ ಸವಾಲು! ಸೀಸನ್ ಆರಂಭಕ್ಕೂ ಮುನ್ನ ಇರ್ಫಾನ್ ಪಠಾಣ್ ಭವಿಷ್ಯ

Irfan Pathan's statement on MS Dhoni: ಕಳೆದ ಋತುವಿನಲ್ಲಿ, ಮತಿಶಾ ಪತಿರಾನ, ಶಿವಂ ದುಬೆ ಮತ್ತು ಅಜಿಂಕ್ಯ ರಹಾನೆ ಅವರಂತಹ ಆಟಗಾರರಿಗೆ ಧೋನಿ ಅವಕಾಶ ನೀಡಿದ್ದರು. ಅಂತೆಯೇ ಈ ಆಟಗಾರರು ಅವರ ನಿರೀಕ್ಷೆಗೆ ತಕ್ಕಂತೆ ಆಟವಾಡಿದ್ದರು. ಆದರೆ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಪ್ರಕಾರ, ಧೋನಿಗೆ ಈ ಸೀಸನ್ ಸವಾಲಿನಿಂದ ಕೂಡಿರಲಿದೆ.

Written by - Bhavishya Shetty | Last Updated : Mar 15, 2024, 12:35 PM IST
    • ಎಂಎಸ್ ಧೋನಿ ವಿಶ್ವದ ಶ್ರೇಷ್ಠ ನಾಯಕರಲ್ಲಿ ಒಬ್ಬರು
    • ಅವರು ಪಳಗಿಸಿದ ಪ್ರತೀ ಆಟಗಾರನೂ ಇಂದು ಸ್ಟಾರ್ ಆಗಿ ಹೊರಹೊಮ್ಮಿರುವುದು ವಿಶೇಷ
    • ಸ್ಟಾರ್ ಸ್ಪೋರ್ಟ್ಸ್‌’ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಇರ್ಫಾನ್ ಪಠಾಣ್
IPLನಲ್ಲಿ ಧೋನಿಗೆ ಎದುರಾಗಲಿದೆ ಸಮಸ್ಯೆ.. ಇದೇ ಆ ಸವಾಲು! ಸೀಸನ್ ಆರಂಭಕ್ಕೂ ಮುನ್ನ ಇರ್ಫಾನ್ ಪಠಾಣ್ ಭವಿಷ್ಯ  title=
irfan pathan statement about dhoni

Irfan Pathan's statement on MS Dhoni: ಎಂಎಸ್ ಧೋನಿ ವಿಶ್ವದ ಶ್ರೇಷ್ಠ ನಾಯಕರಲ್ಲಿ ಒಬ್ಬರು. ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 5 ಬಾರಿ ಐಪಿಎಲ್ ಪ್ರಶಸ್ತಿ ಗೆಲ್ಲಲು ಸಹಾಯ ಮಾಡಿದ್ದು ಮಾತ್ರವಲ್ಲದೆ, ಅವರು ಪಳಗಿಸಿದ ಪ್ರತೀ ಆಟಗಾರನೂ ಇಂದು ಸ್ಟಾರ್ ಆಗಿ ಹೊರಹೊಮ್ಮಿರುವುದು ವಿಶೇಷ.

ಕಳೆದ ಋತುವಿನಲ್ಲಿ, ಮತಿಶಾ ಪತಿರಾನ, ಶಿವಂ ದುಬೆ ಮತ್ತು ಅಜಿಂಕ್ಯ ರಹಾನೆ ಅವರಂತಹ ಆಟಗಾರರಿಗೆ ಧೋನಿ ಅವಕಾಶ ನೀಡಿದ್ದರು. ಅಂತೆಯೇ ಈ ಆಟಗಾರರು ಅವರ ನಿರೀಕ್ಷೆಗೆ ತಕ್ಕಂತೆ ಆಟವಾಡಿದ್ದರು. ಆದರೆ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಪ್ರಕಾರ, ಧೋನಿಗೆ ಈ ಸೀಸನ್ ಸವಾಲಿನಿಂದ ಕೂಡಿರಲಿದೆ.

ಇದನ್ನೂ ಓದಿ: ನಾವು ಟಿವಿಯಲ್ಲೇ ಮ್ಯಾಚ್ ನೋಡ್ತೇವೆ! IPL ಟಿಕೆಟ್ ಬೆಲೆ ನೋಡಿ ಹೀಗಂತಿದ್ದಾರೆ ಕ್ರಿಕೆಟ್ ಫ್ಯಾನ್ಸ್

ಕಳೆದ ಋತುವಿನಲ್ಲಿ ಶ್ರೀಲಂಕಾದ ವೇಗದ ಬೌಲರ್ ಮತಿಶಾ ಪತಿರಾನ ಸಾಕಷ್ಟು ಸುದ್ದಿ ಮಾಡಿದ್ದರು. ತಂಡವು ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಕೊಡುಗೆ ನೀಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಪತಿರಾನ ಫಾರ್ಮ್’ನಲ್ಲಿ ಇಲ್ಲ. ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಲ್ಲಿ ವಿಶೇಷ ಸಾಧನೆ ಏನೂ ಮಾಡಿರಲಿಲ್ಲ. ಈ ಬಗ್ಗೆಯೂ ಇರ್ಫಾನ್ ಪಠಾಣ್ ಕಳವಳ ವ್ಯಕ್ತಪಡಿಸಿದ್ದಾರೆ.

ಇರ್ಫಾನ್ ಪಠಾಣ್ ಹೇಳಿದ್ದೇನು?

ಸ್ಟಾರ್ ಸ್ಪೋರ್ಟ್ಸ್‌’ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಇರ್ಫಾನ್ ಪಠಾಣ್, “ದೀಪಕ್ ಚಹಾರ್ ಗಾಯದಿಂದ ಚೇತರಿಸಿಕೊಂಡು ಕಂಬ್ಯಾಕ್ ಮಾಡುತ್ತಿದ್ದಾರೆ. ಪತಿರಾನ ಅವರ ಪ್ರದರ್ಶನ ಶ್ರೀಲಂಕಾಕ್ಕೆ ವಿಶೇಷವೇನಲ್ಲ. ಪ್ರಸ್ತುತ ಕೆಟ್ಟ ಫಾರ್ಮ್‌’ನೊಂದಿಗೆ ಹೋರಾಡುತ್ತಿದ್ದಾರೆ. ಕಾನ್ವೇ ಕೂಡ ಗಾಯಗೊಂಡಿದ್ದಾರೆ. ಈಗ ಮೂರ್ನಾಲ್ಕು ಆಟಗಾರರು ಗಾಯಗೊಂಡರೆ ಅಥವಾ ಫಾರ್ಮ್‌ನಲ್ಲಿ ಇಲ್ಲದಿದ್ದರೆ. ಅಂತಹ ಪರಿಸ್ಥಿತಿಯಲ್ಲಿ, ತಂಡದ ನಿರ್ವಹಣೆಗೆ ಪರಿಸ್ಥಿತಿಯು ಸಾಕಷ್ಟು ಜಟಿಲವಾಗಬಹುದು. ಹೀಗಾಗಿ ಈ ಋತುವಿನಲ್ಲಿ ಧೋನಿಗೆ ಸವಾಲು ಎದುರಾಗಿದೆ. ನಮಗೆ ಧೋನಿ ಮಾಸ್ಟರ್ ಮೈಂಡ್ ಎಂದು ತಿಳಿದಿದೆ. ಅವರು ಏನನ್ನಾದರೂ ಮಾಡಿ ನಿರ್ವಹಿಸಬಹುದು” ಎಂದಿದ್ದಾರೆ.

ಇದನ್ನೂ ಓದಿ:  ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸಹೋದರ ಯಾರು? ಏನ್ಮಾಡ್ತಾರೆ ಎಲ್ಲಿರ್ತಾರೆ ಗೊತ್ತೇ!  

ಮೊಹಮ್ಮದ್ ಕೈಫ್ ಕೂಡ ಧೋನಿ ಸಾಮರ್ಥ್ಯದ ಬಗ್ಗೆ ಮಾತನಾಡಿದ್ದು, “ಯಾವ ಆಟಗಾರನಾದರೂ ಸರಿ, ಚೆನ್ನೈ ತಂಡಕ್ಕೆ ಸೇರಿಕೊಂಡ ಬಳಿಕ ಅವರ ಪ್ರದರ್ಶನ ತಾನಾಗಿಯೇ ಸುಧಾರಿಸುತ್ತದೆ. ತುಷಾರ್ ದೇಶಪಾಂಡೆ ಆಟ… ಫೈನಲ್‌’ನಲ್ಲಿ ಅಜಿಂಕ್ಯ ರಹಾನೆ ಪ್ರದರ್ಶನ... ಇವರು ಐಪಿಎಲ್‌’ನಲ್ಲಿ ಉತ್ತಮ ದಾಖಲೆಯನ್ನು ಹೊಂದಿಲ್ಲದ ಆಟಗಾರರು. ಆದರೆ ಧೋನಿ ಜೊತೆ  ಸೇರಿಕೊಂಡ ಬಳಿಕ ಆಡಿದ ರೀತಿ ನೋಡಿ ನನಗೆ ಆಶ್ಚರ್ಯವಾಯಿತು” ಎಂದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News