ಏಷ್ಯನ್ ಗೇಮ್ಸ್ ಜಾವೆಲಿನ್ ಥ್ರೋನಲ್ಲಿ ಭಾರತಕ್ಕೆ ಚಿನ್ನ-ಬೆಳ್ಳಿ! ನೀರಜ್ ಚೋಪ್ರಾ ಚಿನ್ನದ ಬೇಟೆ, ಬೆಳ್ಳಿಗೆ ಮುತ್ತಿಟ್ಟ ಕಿಶೋರ್

Asian Games 2023: ಒಲಿಂಪಿಕ್ ಸ್ಪೋರ್ಟ್ಸ್ ಪಾರ್ಕ್ ಮುಖ್ಯ ಕ್ರೀಡಾಂಗಣದಲ್ಲಿ ನಡೆದ ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದರೆ, ಕಿಶೋರ್ ಕುಮಾರ್ ಜೆನಾ ಬೆಳ್ಳಿ ಪದಕ ಗೆದ್ದಿದ್ದಾರೆ.

Written by - Bhavishya Shetty | Last Updated : Oct 4, 2023, 07:21 PM IST
    • ಇಂದು ಏಷ್ಯನ್ ಗೇಮ್ಸ್ 2023ರ ಪುರುಷರ ಜಾವೆಲಿನ್ ಥ್ರೋ ಫೈನಲ್‌
    • ಜಾವೆಲಿನ್ ಥ್ರೋ ಫೈನಲ್‌’ನಲ್ಲಿ ಭಾರತಕ್ಕೆ ಚಿನ್ನ ಮತ್ತು ಬೆಳ್ಳಿ
    • ಚಿನ್ನ ಗೆದ್ದ ನೀರಜ್ ಚೋಪ್ರಾ, ಬೆಳ್ಳಿ ಪದಕ ಗೆದ್ದ ಕಿಶೋರ್ ಕುಮಾರ್ ಜೆನಾ
ಏಷ್ಯನ್ ಗೇಮ್ಸ್ ಜಾವೆಲಿನ್ ಥ್ರೋನಲ್ಲಿ ಭಾರತಕ್ಕೆ ಚಿನ್ನ-ಬೆಳ್ಳಿ! ನೀರಜ್ ಚೋಪ್ರಾ ಚಿನ್ನದ ಬೇಟೆ, ಬೆಳ್ಳಿಗೆ ಮುತ್ತಿಟ್ಟ ಕಿಶೋರ್ title=
Neeraj Chopra Javelin Throw

Asian Games 2023: ಏಷ್ಯನ್ ಗೇಮ್ಸ್ 2023ರಲ್ಲಿ ಇಂದು ನಡೆದ ಪುರುಷರ ಜಾವೆಲಿನ್ ಥ್ರೋ ಫೈನಲ್‌’ನಲ್ಲಿ ಭಾರತ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿದೆ. ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಹ್ಯಾಂಗ್‌’ಝೌನಲ್ಲಿರುವ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಈ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ:ವಿಶ್ವಕಪ್’ಗೆ ಖಲಿಸ್ತಾನಿ ಬೆದರಿಕೆ! ಧರ್ಮಶಾಲಾ ಕಟ್ಟಡದ ಗೋಡೆಗಳಲ್ಲಿ ಪ್ರಚೋದನಾಕಾರಿ ಬರಹ

ಒಲಿಂಪಿಕ್ ಸ್ಪೋರ್ಟ್ಸ್ ಪಾರ್ಕ್ ಮುಖ್ಯ ಕ್ರೀಡಾಂಗಣದಲ್ಲಿ ನಡೆದ ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದರೆ, ಕಿಶೋರ್ ಕುಮಾರ್ ಜೆನಾ ಬೆಳ್ಳಿ ಪದಕ ಗೆದ್ದಿದ್ದಾರೆ.

ನೀರಜ್ ಚೋಪ್ರಾ ಅವರ ಮೊದಲ ಎಸೆತವನ್ನು ತಾಂತ್ರಿಕ ಸಮಸ್ಯೆಗಳಿಂದಾಗಿ ರದ್ದುಗೊಳಿಸಲಾಯಿತು. ಹಾಗಾಗಿ ಮತ್ತೊಮ್ಮೆ ತಮ್ಮ ಮೊದಲ ಎಸೆತವನ್ನು ಎಸೆದರು. ಇನ್ನು ತಮ್ಮ ನಾಲ್ಕನೇ ಪ್ರಯತ್ನದಲ್ಲಿ 88.88 ಮೀಟರ್‌’ಗಳ ಅತ್ಯುತ್ತಮ ಎಸೆತದೊಂದಿಗೆ ಹೊಸ ದಾಖಲೆಯನ್ನು ಸೃಷ್ಟಿ ಮಾಡಿದ್ದಾರೆ ನೀರಜ್.

ಇದನ್ನೂ ಓದಿ: 30 ವರ್ಷಗಳ ಬಳಿಕ ವೈಧೃತಿ ಯೋಗ: ಈ ರಾಶಿಗೆ ಸುಖದ ಸುಪ್ಪತ್ತಿಗೆ ತರಲಿದೆ ನವರಾತ್ರಿ- ಹೆಜ್ಜೆಹೆಜ್ಜೆಗೂ ಗೆಲುವಿನ ಮಹಾಪೂರ

ಇನ್ನೊಂದೆಡೆ, ಕಿಶೋರ್ ಕುಮಾರ್ ಬೆಳ್ಳಿ ಗೆದ್ದಿದ್ದು, ಭಾರತಕ್ಕೆ ಒಂದೇ ಪಂದ್ಯದಲ್ಲಿ ಎರಡು ಪದಕ ಲಭಿಸಿದೆ. ಇನ್ನು ಈ ಕ್ರೀಡಾಳು ಒಂದೇ ದಿನದಲ್ಲಿ ಒಂದಲ್ಲ ಎರಡು ಬಾರಿ ತನ್ನ ವೈಯಕ್ತಿಕ ಅತ್ಯುತ್ತಮ ಸಾಧನೆಯನ್ನೂ ಮಾಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News