2024ರ ಟಿ20 ವಿಶ್ವಕಪ್’ನಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಯಾರಾಗಬಹುದು? ಕಡೆಗೂ ಉತ್ತರ ನೀಡಿದ ಸೌರವ್ ಗಂಗೂಲಿ

T20 World Cup 2024, Sourav Ganguly: ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ವಿಶ್ವಕಪ್‌’ನಲ್ಲಿ ಭಾರತ ತಂಡದ ವಿಕೆಟ್‌ ಕೀಪರ್ ಯಾರಾಗಬಹುದು ಎಂದು ಹೇಳಿದ್ದಾರೆ.

Written by - Bhavishya Shetty | Last Updated : Apr 26, 2024, 09:39 PM IST
    • T20 ವಿಶ್ವಕಪ್ 2024ನ್ನು ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿಯಾಗಿ ಆಯೋಜಿಸಲಿದೆ
    • ವಿಕೆಟ್‌ ಕೀಪರ್ ಪಾತ್ರವನ್ನು ಯಾರು ನಿರ್ವಹಿಸುತ್ತಾರೆ ಎಂಬ ಬಗ್ಗೆ ನಿರಂತರ ಊಹಾಪೋಹ
    • ಐಪಿಎಲ್ 2024ರಲ್ಲಿ ರಿಷಬ್ ಪಂತ್ ಪ್ರದರ್ಶನ ಅತ್ಯುತ್ತಮವಾಗಿದೆ
2024ರ ಟಿ20 ವಿಶ್ವಕಪ್’ನಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಯಾರಾಗಬಹುದು? ಕಡೆಗೂ ಉತ್ತರ ನೀಡಿದ ಸೌರವ್ ಗಂಗೂಲಿ title=
Sourav Ganguly

T20 World Cup 2024, Sourav Ganguly: T20 ವಿಶ್ವಕಪ್ 2024 ಅನ್ನು ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿಯಾಗಿ ಆಯೋಜಿಸಲಿದ್ದು, ಈ ಬಾರಿ 20 ತಂಡಗಳು ಟೂರ್ನಿಯಲ್ಲಿ ಸೆಣಸಾಡಲಿವೆ. ಅಂದಹಾಗೆ ಟೀಂ ಇಂಡಿಯಾ ಇನ್ನೂ ಪ್ರಕಟವಾಗಿಲ್ಲ. ಇದರ ಬೆನ್ನಲ್ಲೇ, ವಿಶ್ವಕಪ್‌’ನಲ್ಲಿ ಭಾರತದ ಆರಂಭಿಕ ಜೋಡಿ ಯಾವುದು ಮತ್ತು ವಿಕೆಟ್‌ ಕೀಪರ್ ಪಾತ್ರವನ್ನು ಯಾರು ನಿರ್ವಹಿಸುತ್ತಾರೆ ಎಂಬ ಬಗ್ಗೆ ನಿರಂತರ ಊಹಾಪೋಹಗಳು ನಡೆಯುತ್ತಿವೆ.

ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗ ವಿರಾಟ್ ಅಲ್ಲ! ಅಗ್ರಸ್ಥಾನದಲ್ಲಿರೋದು ಬೇರಾರು ಅಲ್ಲ, ಕೊಹ್ಲಿಯ ಜೀವದ ಗೆಳೆಯನೇ

ಈ ಮಧ್ಯೆ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ವಿಶ್ವಕಪ್‌’ನಲ್ಲಿ ಭಾರತ ತಂಡದ ವಿಕೆಟ್‌ ಕೀಪರ್ ಯಾರಾಗಬಹುದು ಎಂದು ಹೇಳಿದ್ದಾರೆ.

2024ರ ಟಿ20 ವಿಶ್ವಕಪ್‌’ನಲ್ಲಿ ರಿಷಬ್ ಪಂತ್ ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿರುತ್ತಾರೆ ಎಂದು ದಾದಾ ಇತ್ತೀಚೆಗೆ ಹೇಳಿದ್ದರು. ಆದರೆ, ಈಗ ಯುಟರ್ನ್ ಹೊಡೆದಿರುವ ದಾದಾ, ಪಂತ್ ಪರ ವಕಾಲತ್ತು ವಹಿಸಿದ್ದಾರೆ. "ನನಗೆ ಸಂಜು ಸ್ಯಾಮ್ಸನ್ ಇಷ್ಟ, ಜೊತೆಗೆ ರಿಷಬ್ ಪಂತ್ ಕೂಡ ಇಷ್ಟ. ರಿಷಬ್ ಪಂತ್ ಟಿ20 ವಿಶ್ವಕಪ್‌’ಗೆ ಹೋಗಲಿದ್ದಾರೆ. ಸಂಜು ಕೂಡ ಹೋಗಬಹುದು, ಸಂಜು ಸ್ಯಾಮ್ಸನ್ ಹೋಗಬಾರದು ಎಂದು ನಾನು ಹೇಳುತ್ತಿಲ್ಲ. ಅವರು ಇತರ ಆಟಗಾರರಂತೆ ಉತ್ತಮ ಆಟಗಾರ. ಚೆನ್ನಾಗಿ ಬ್ಯಾಟ್ ಮಾಡುತ್ತಾರೆ. ಇಬ್ಬರೂ ಆಟಗಾರರು ವಿಶ್ವಕಪ್‌ಗೆ ಹೋಗಬಹುದು” ಎಂದಿದ್ದಾರೆ.

ಇದನ್ನೂ ಓದಿ: ಬೇಸಿಗೆಯಲ್ಲಿ ಬೆವರಿನ ದುರ್ವಾಸನೆ ಹೋಗಲಾಡಿಸಲು ಈ ಮನೆಮದ್ದು ಬಳಸಿ! ದಿನಪೂರ್ತಿ ಫ್ರೆಶ್ ಆಗಿರುವಿರಿ

ಐಪಿಎಲ್ 2024ರಲ್ಲಿ ರಿಷಬ್ ಪಂತ್ ಪ್ರದರ್ಶನ ಅತ್ಯುತ್ತಮವಾಗಿದೆ. ಇದುವರೆಗೆ ಆಡಿರುವ 9 ಪಂದ್ಯಗಳಲ್ಲಿ 342 ರನ್ ಗಳಿಸಿದ್ದಾರೆ. ಅವರ ಸರಾಸರಿ 48.85 ಮತ್ತು ಸ್ಟ್ರೈಕ್ ರೇಟ್ 161.32 ಆಗಿತ್ತು. ಐಪಿಎಲ್ 17ನೇ ಋತುವಿನಲ್ಲಿ ಪಂತ್ ಔಟಾಗದೆ 88 ರನ್ ಗಳಿಸಿದ್ದು ಗರಿಷ್ಠ ಸ್ಕೋರ್ ಆಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

Trending News