ಐಪಿಎಲ್ ಗೆ MS Dhoni ನಿವೃತ್ತಿ: ಟೀಂ ಇಂಡಿಯಾ ಕೋಚ್-ನಿರ್ದೇಶಕರಾಗಿ ಹೊಸ ಜವಾಬ್ದಾರಿ!

MS Dhoni: ಐಸಿಸಿ ಪಂದ್ಯಗಳಲ್ಲಿ ಭಾರತದ ವೈಫಲ್ಯಗಳು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು (ಬಿಸಿಸಿಐ) ಚಿಂತಿಸುತ್ತಿವೆ. 2023ರಲ್ಲಿ ಏಕದಿನ ವಿಶ್ವಕಪ್ ಮತ್ತು 2024ರಲ್ಲಿ ಟಿ20 ವಿಶ್ವಕಪ್ ಇದೆ. ಈ ಮೆಗಾ ಟೂರ್ನಿಗಳಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡಲು ಬಿಸಿಸಿಐ ಈಗಾಗಲೇ ಪ್ರಯತ್ನ ಆರಂಭಿಸಿದೆ ಎಂದು ವರದಿಯಾಗಿದೆ.

Written by - Bhavishya Shetty | Last Updated : Nov 15, 2022, 01:30 PM IST
    • ಭಾರತದ ವೈಫಲ್ಯಗಳು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು ಚಿಂತಿಸುತ್ತಿವೆ
    • ಧೋನಿಯನ್ನು ಟೀಂ ಇಂಡಿಯಾ ಕೋಚ್-ನಿರ್ದೇಶಕರಾಗಿ ಮಾಡುವ ಸಾಧ್ಯತೆ
    • ಎಂಎಸ್ ಧೋನಿ ಅವರನ್ನು ನೇಮಿಸಲು ಬಿಸಿಸಿಐ ಮಂಡಳಿ ಯೋಜಿಸುತ್ತಿದೆ
ಐಪಿಎಲ್ ಗೆ MS Dhoni ನಿವೃತ್ತಿ: ಟೀಂ ಇಂಡಿಯಾ ಕೋಚ್-ನಿರ್ದೇಶಕರಾಗಿ ಹೊಸ ಜವಾಬ್ದಾರಿ! title=
MS dhoni

MS Dhoni appointment: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಟಿ20 ವಿಶ್ವಕಪ್ 2022ರ ಸೆಮಿಫೈನಲ್‌ನಲ್ಲಿ ಭಾರತ ಹೀನಾಯ ಸೋಲು ಕಂಡಿದ್ದು ಗೊತ್ತೇ ಇದೆ. ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ಗಳಿಂದ ಸೋತು ಮನೆಗೆ ತೆರಳಿತ್ತು ಟೀಂ ಇಂಡಿಯಾ. ಈ ಬಾರಿ ಹೇಗಾದರೂ ಮಾಡಿ ಕಪ್ ಗೆಲ್ಲುತ್ತೇವೆ ಎಂದುಕೊಂಡಿದ್ದ ಭಾರತಕ್ಕೆ ನಾಕೌಟ್ ಪಂದ್ಯದಲ್ಲಿ ಸೋಲು ಕಂಡಾಗ ಅಭಿಮಾನಿಗಳು ಹಾಗೂ ಮಾಜಿ ಆಟಗಾರರು ಬೆಚ್ಚಿಬಿದ್ದರು. ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ಅಂತಿಮವಾಗಿ 2011 ರಲ್ಲಿ ವಿಶ್ವಕಪ್ ಗೆದ್ದಿತು. 11 ವರ್ಷಗಳ ನಂತರವೂ ಟೀಂ ಇಂಡಿಯಾ ಮತ್ತೊಂದು ವಿಶ್ವಕಪ್ ಗೆದ್ದಿಲ್ಲ.

ಇದನ್ನೂ ಓದಿ: IPL 2023 Retention: IPL 2023 ರಿಟೈನ್ ಲಿಸ್ಟ್ ಇಂದು ಬಿಡುಗಡೆ: ಹರಾಜು ದಿನಾಂಕ ಹೀಗಿದೆ

ಐಸಿಸಿ ಪಂದ್ಯಗಳಲ್ಲಿ ಭಾರತದ ವೈಫಲ್ಯಗಳು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು (ಬಿಸಿಸಿಐ) ಚಿಂತಿಸುತ್ತಿವೆ. 2023ರಲ್ಲಿ ಏಕದಿನ ವಿಶ್ವಕಪ್ ಮತ್ತು 2024ರಲ್ಲಿ ಟಿ20 ವಿಶ್ವಕಪ್ ಇದೆ. ಈ ಮೆಗಾ ಟೂರ್ನಿಗಳಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡಲು ಬಿಸಿಸಿಐ ಈಗಾಗಲೇ ಪ್ರಯತ್ನ ಆರಂಭಿಸಿದೆ ಎಂದು ವರದಿಯಾಗಿದೆ. ಎರಡು ವಿಶ್ವಕಪ್ ಗೆದ್ದಿರುವ ಎಂಎಸ್ ಧೋನಿಯನ್ನು ಉತ್ತಮ ಪ್ರದರ್ಶನಕ್ಕಾಗಿ ಭಾರತ ಕಣಕ್ಕಿಳಿಸಲಿದೆ ಎಂದು 'ದಿ ಟೆಲಿಗ್ರಾಫ್' ತನ್ನ ವರದಿಯಲ್ಲಿ ತಿಳಿಸಿದೆ.

ಭಾರತೀಯ ಕ್ರಿಕೆಟ್‌ನಲ್ಲಿ ಖಾಯಂ ಪಾತ್ರಕ್ಕಾಗಿ ಎಂಎಸ್ ಧೋನಿ ಅವರನ್ನು ನೇಮಿಸಲು ಬಿಸಿಸಿಐ ಮಂಡಳಿ ಯೋಜಿಸುತ್ತಿದೆ ಎಂದು ವರದಿಯಾಗಿದೆ. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಎಲ್ಲಾ ಮೂರು ಸ್ವರೂಪಗಳಲ್ಲಿ ಜವಾಬ್ದಾರಿಗಳನ್ನು ನಿಭಾಯಿಸಲು ತುಂಬಾ ಕಷ್ಟಪಡುತ್ತಿದ್ದಾರೆ ಎಂದು ಬಿಸಿಸಿಐ ಭಾವಿಸಿದೆ. ಅದಕ್ಕಾಗಿಯೇ ಕೋಚ್‌ಗಳ ಪಾತ್ರವನ್ನು ವಿಂಗಡಿಸಲು ಬಿಸಿಸಿಐ ಯೋಜಿಸುತ್ತಿದೆ. ಟಿ20 ಮಾದರಿಯಲ್ಲಿ ಧೋನಿ ಅವರನ್ನು ನೇಮಕ ಮಾಡಲು ಮಂಡಳಿ ಆಸಕ್ತಿ ತೋರಿಸುತ್ತಿದೆ. ಇದಲ್ಲದೆ, ಭಾರತ ಕ್ರಿಕೆಟ್ ತಂಡವು ಮಹಿ ಅವರ ಕೌಶಲ್ಯವನ್ನು ಬಳಸಿಕೊಂಡು ಮಟ್ಟವನ್ನು ಹೆಚ್ಚಿಸಲು ನೋಡುತ್ತಿದೆ.

ಇದನ್ನೂ ಓದಿ: Rohit Sharma ಸ್ಥಾನಕ್ಕೆ ಭಾರೀ ಪೈಪೋಟಿ: ಈ ಮೂವರಲ್ಲಿ ಯಾರಿಗೆ ಸಿಗುತ್ತೆ ನಾಯಕ ಪಟ್ಟ!

ಟಿ20 ಮಾದರಿಯಲ್ಲಿ ಕೋಚ್ ಪಾತ್ರದ ಜೊತೆಗೆ ಎಂಎಸ್ ಧೋನಿ ಅವರನ್ನು ಟೀಂ ಇಂಡಿಯಾದ ನಿರ್ದೇಶಕರನ್ನಾಗಿ ನೇಮಿಸಲು ಬಿಸಿಸಿಐ ಪ್ರಯತ್ನ ನಡೆಸುತ್ತಿದೆಯಂತೆ. ಬಿಸಿಸಿಐ ನಾಯಕರು ಈ ತಿಂಗಳ ಅಂತ್ಯದಲ್ಲಿ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಲಿದ್ದಾರೆ. ಇದೇ ನಿಜವಾದರೆ ಐಪಿಎಲ್‌ಗೆ ಧೋನಿ ನಿವೃತ್ತಿಯಾಗಬೇಕಾಗುತ್ತದೆ. ಮುಂದಿನ ವರ್ಷ ಐಪಿಎಲ್‌ನಲ್ಲಿ ಮಹಿ ಆಡುವುದು ಸಂಶಯವಾಗುತ್ತದೆ. ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್ 2021 ರ ಸಂದರ್ಭದಲ್ಲಿ ಮಹಿ ಭಾರತ ತಂಡದೊಂದಿಗೆ ಕೆಲಸ ಮಾಡಿದ್ದು ಗೊತ್ತೇ ಇದೆ. ಒಟ್ಟಿನಲ್ಲಿ ಧೋನಿಯ ಅನುಭವ ಮತ್ತು ತಾಂತ್ರಿಕ ಕುಶಾಗ್ರಮತಿಯನ್ನು ಬಳಸಿಕೊಳ್ಳಲು ಬಿಸಿಸಿಐ ಮುಂದಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News