ಶ್ರೀಲಂಕಾ ವಿರುದ್ದದ ಪಂದ್ಯದಿಂದ ಈ ಆಟಗಾರ ಔಟ್ ! ಎಂಟ್ರಿ ಕೊಡಲಿದ್ದಾರೆ ಮ್ಯಾಚ್ ವಿನ್ನರ್

India Probable Playing 11 vs Sri Lanka:  ಇಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗುತ್ತಿರುವ ಈ ಆಟಗಾರ ತಂಡದಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ. ಬದಲಿಗೆ ಈ ಮ್ಯಾಚ್ ವಿನ್ನರ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. 

Written by - Ranjitha R K | Last Updated : Nov 2, 2023, 10:58 AM IST
  • ಭಾರತ ಮತ್ತು ಶ್ರೀಲಂಕಾ ನಡುವೆ ವಿಶ್ವಕಪ್ ಪಂದ್ಯ ನಡೆಯಲಿದೆ.
  • ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಹಣಾಹಣಿ
  • ಈ ಆಟಗಾರನು ಟೀಂನಿಂದ ಔಟ್
ಶ್ರೀಲಂಕಾ ವಿರುದ್ದದ ಪಂದ್ಯದಿಂದ ಈ ಆಟಗಾರ ಔಟ್ ! ಎಂಟ್ರಿ ಕೊಡಲಿದ್ದಾರೆ  ಮ್ಯಾಚ್ ವಿನ್ನರ್   title=

India Probable Playing 11 vs Sri Lanka : ಇಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ವಿಶ್ವಕಪ್ ಪಂದ್ಯ ನಡೆಯಲಿದೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ದೊಡ್ಡ ಬದಲಾವಣೆ ಮಾಡಲಿದ್ದಾರೆ ಎನ್ನಲಾಗಿದೆ.   ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗುತ್ತಿರುವ ಈ ಆಟಗಾರ ತಂಡದಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ. ಬದಲಿಗೆ ಈ ಮ್ಯಾಚ್ ವಿನ್ನರ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಗಾಯಗೊಂಡು ತಂಡದಿಂದ ಹೊರಗೆ ಉಳಿದಿರುವ ಹಾರ್ದಿಕ್ ಪಾಂಡ್ಯ ಈ ಪಂದ್ಯದಲ್ಲಿ ಮೈದಾನಕ್ಕೆ ಇಳಿಯಲು ಕೂಡಾ ಸಂಪೂರ್ಣವಾಗಿ ಫಿಟ್ ಆಗಿಲ್ಲ.  

ಈ ಆಟಗಾರನು  ಟೀಂನಿಂದ  ಔಟ್ : 
ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ದೊಡ್ಡ ಬದಲಾವಣೆ ಮಾಡಬಹುದು. ಶ್ರೇಯಸ್ ಅಯ್ಯರ್ ಅವರನ್ನು ಪಂದ್ಯದಿಂದ ಹಿರಗಿಡುವ ಸಾಧ್ಯತೆ ಇದೆ ಎನ್ನಲಾಗಿದೆ. ಅಯ್ಯರ್ ಈ ವಿಶ್ವಕಪ್‌ನಲ್ಲಿ  ದೊಡ್ಡ ಮಟ್ಟದ ರನ್ ಗಳಿಸುವಲ್ಲಿ ವಿಫಲರಾಗಿದ್ದಾರೆ. ಒಂದು ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದು ಬಿಟ್ಟರೆ ಉಳಿದ ಪಂದ್ಯದಲ್ಲಿ ನಿರಾಸೆ ಮೂಡಿಸಿದ್ದಾರೆ. ಅಯ್ಯರ್ 6 ಪಂದ್ಯಗಳಲ್ಲಿ ಕೇವಲ 134 ರನ್ ಗಳಿಸಿದ್ದಾರೆ.  ಒಂದು ಪಂದ್ಯದಲ್ಲಿ ಖಾತೆ ತೆರೆಯದೆ ಪೆವಿಲಿಯನ್ ಗೆ ಮರಳಿದ್ದರು. ಅಂತಹ ಪರಿಸ್ಥಿತಿಯಲ್ಲಿ,  ಇಂದಿನ ಪ್ಲೇಯಿಂಗ್-11 ರಲ್ಲಿ  ಈ ಮ್ಯಾಚ್ ವಿನ್ನರ್ ತಂಡ ಪ್ರವೇಶಿಸಬಹುದು.

ಇದನ್ನೂ ಓದಿ : ನನ್ನ ನೆಚ್ಚಿನ ಕ್ರಿಕೆಟಿಗ ಕೆಎಲ್ ರಾಹುಲ್ ಅಲ್ಲ, ಈ ಚೇಸ್ ಮಾಸ್ಟರ್ ಎಂದ ಸುನೀಲ್ ಶೆಟ್ಟಿ

ಎಂಟ್ರಿ ಕೊಡಲಿದ್ದಾರೆ ಈ ಮ್ಯಾಚ್ ವಿನ್ನರ್ :
ಶ್ರೇಯಸ್ ಅಯ್ಯರ್ ಬದಲಿಗೆ ಇಶಾನ್ ಕಿಶನ್ ಗೆ ತಂಡದಲ್ಲಿ ಅವಕಾಶ ನೀಡಬಹುದು. ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಟೀಂ ಇಂಡಿಯಾ ಪರ ಆಡುವಾಗ ಹಲವು ಮಹತ್ವದ ಇನ್ನಿಂಗ್ಸ್ ಗಳನ್ನು ಆಡಿದ್ದಾರೆ. ಏಕಾಂಗಿಯಾಗಿ ಪಂದ್ಯದ ಗತಿಯನ್ನೇ ಬದಲಿಸ ಬಲ್ಲ. ಅವರೊಬ್ಬ ಅತ್ಯುತ್ತಮ ವಿಕೆಟ್ ಕೀಪರ್ ಕೂಡಾ. ಇಂತಹ ಪರಿಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ತಂಡದ ಪರ ಬ್ಯಾಟಿಂಗ್ ಮಾಡುವಾಗ ಒಂದಷ್ಟು ಹೆಚ್ಚುವರಿ ರನ್ ಸೇರಿಸಬಹುದು. ಚೇಸಿಂಗ್ ಮಾಡುವಾಗಲೂ ಪ್ರಮುಖ ಪಾತ್ರವನ್ನು ವಹಿಸಬಲ್ಲ. 

ಟಾಪ್ 4 ರಲ್ಲಿ ಸ್ಥಾನ ಗಳಿಸುವ ಗುರಿ : 
ಶ್ರೀಲಂಕಾ ವಿರುದ್ಧದ ಗೆಲುವೂ ಸಾಧಿಸಲೇ ಬೇಕು ಎನ್ನುವ ಹಠ ಟೀಂ ಇಂಡಿಯಾದ್ದಾಗಿದೆ. ವ ಈ ಮೂಲಕ ಟಾಪ್ -4ರಲ್ಲಿ ಸ್ಥಾನ ಪಡೆಯುವ ತವಕದಲ್ಲಿದೆ ಭಾರತ ತಂಡ. ಈ ವಿಶ್ವಕಪ್‌ನಲ್ಲಿ ಇಲ್ಲಿಯವರೆಗೆ ಒಂದೇ ಒಂದು ಪಂದ್ಯವನ್ನು ಸೋತಿಲ್ಲದ ಏಕೈಕ ತಂಡ ಭಾರತ. 6 ಪಂದ್ಯಗಳಲ್ಲಿ ಜಯ ಸಾಧಿಸಿರುವ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ 12 ಅಂಕ ಹೊಂದಿದೆ.  ಇನ್ನು  ಸೆಮಿಫೈನಲ್ ರೇಸ್‌ನಲ್ಲಿ ಉಳಿಯಲು ಶ್ರೀಲಂಕಾಕ್ಕೆ ಈ ಪಂದ್ಯದಲ್ಲಿ ಗೆಲುವು ಬಹಳ ಮುಖ್ಯವಾಗಿದೆ. ಶ್ರೀಲಂಕಾ ಇದುವರೆಗೆ ಆಡಿರುವ 6 ಪಂದ್ಯಗಳಲ್ಲಿ 2ರಲ್ಲಿ ಮಾತ್ರ ಗೆದ್ದು 4 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ. ಶ್ರೀಲಂಕಾ ವಿರುದ್ಧದ ಗೆಲುವಿನೊಂದಿಗೆ ಭಾರತ ತಂಡವು ಪಾಯಿಂಟ್ ಪಟ್ಟಿಯಲ್ಲಿ ನಂಬರ್ 1 ಆಗಲಿದ್ದು, ಸೆಮಿಫೈನಲ್‌ಗೆ ಲಗ್ಗೆ ಇಡಲಿದೆ.

ಇದನ್ನೂ ಓದಿ : ICC Cricket World Cup 2023: ಹರಿಣಗಳ ಆರ್ಭಟಕ್ಕೆ ನಲುಗಿದ ಕೀವಿಸ್ ಪಡೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News