ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರಿಗೆ ಕೊರೊನಾ ದೃಢಪಟ್ಟಿದೆ. ಈ ಬಗ್ಗೆ ಟ್ವಿಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಹೆಚ್. ಡಿ. ಕುಮಾರಸ್ವಾಮಿ, ಸಣ್ಣ ಪ್ರಮಾಣದ ಜ್ವರ, ಮೈಕೈ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಾನು ಇಂದು ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದು, ಫಲಿತಾಂಶ ಪಾಸಿಟಿವ್ ಎಂದು ಬಂದಿರುವುದಾಗಿ ಮಾಹಿತಿ ನೀಡಿದ್ದಾರೆ.
ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರಿಗೆ ಕೊರೊನಾ ಧೃಢಪಟ್ಟಿದೆ.ಈಗ ಅವರು ಶಾಂತಿನಿಕೇತನದಲ್ಲಿರುವ ತಮ್ಮ ಮನೆಯಲ್ಲಿ ಕ್ವಾರಂಟೈನ್ ನಲ್ಲಿದ್ದಾರೆ.ಜುಲೈ 1 ರಂದು ಶಾಂತಿನಿಕೇತನದಲ್ಲಿರುವ ಮನೆಗೆ ಆಗಮಿಸಿದಾಗ ಅವರಿಗೆ ಕೊರೊನಾ ಇರುವುದು ಧೃಡಪಟ್ಟಿದೆ.
Corona Vaccine for Children: ಕರೋನಾ ಸಾಂಕ್ರಾಮಿಕದ ಮಧ್ಯೆ, ಚಿಕ್ಕ ಮಕ್ಕಳ ಸುರಕ್ಷತೆಯ ಬಗ್ಗೆ ಚಿಂತಿತರಾಗಿರುವ ಪೋಷಕರ ಆತಂಕ ಕೊಂಚ ಕಡಿಮೆ ಆಗಲಿದೆ. ಭಾರತದ ಡ್ರಗ್ ಕಂಟ್ರೋಲರ್ ಜನರಲ್ (ಡಿಸಿಜಿಐ) ಮಂಗಳವಾರ 7 ರಿಂದ 11 ವರ್ಷದೊಳಗಿನ ಮಕ್ಕಳಿಗೆ ಕರೋನಾ ಲಸಿಕೆಯನ್ನು ಕೆಲವು ಷರತ್ತುಗಳೊಂದಿಗೆ ಹಾಕಲು ಅನುಮೋದನೆ ನೀಡಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಇದುವರೆಗೆ ದೇಶದಲ್ಲಿ ಒಟ್ಟು 4,33,62,294 ಜನರು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ಗುರುವಾರ ದೇಶದಲ್ಲಿ 13,313 ಕೊರೊನಾ ಪ್ರಕರಣಗಳು ವರದಿಯಾಗಿವೆ.
Meningococcal Disease: ಇತ್ತೀಚಿನ ದಿನಗಳಲ್ಲಿ ಅಮೆರಿಕದಲ್ಲಿ ಸಲಿಂಗಕಾಮಿಗಳಲ್ಲಿ ಮಾರಣಾಂತಿಕ ವೈರಸ್ನ ಏಕಾಏಕಿ ಕಂಡುಬರುತ್ತಿದೆ. ಅಮೆರಿಕದ ಆರೋಗ್ಯ ಸಂಸ್ಥೆ ಈಗ ಈ ರೋಗದ ಬಗ್ಗೆ ತನಿಖೆ ನಡೆಸುತ್ತಿದೆ. ಈ ಕಾಯಿಲೆಯಿಂದ ಇದುವರೆಗೆ 6 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
ಪಶ್ಚಿಮ ಬಂಗಾಳದಲ್ಲಿ ಶನಿವಾರದಂದು 139 COVID-19 ಪ್ರಕರಣಗಳು ವರದಿಯಾಗುವ ಮೂಲಕ ಕಳೆದ 24 ಗಂಟೆಗಳಲ್ಲಿ ಹೊಸ ಸೋಂಕುಗಳಲ್ಲಿ ಶೇ 30 ರಷ್ಟು ಹೆಚ್ಚಳವಾಗಿದೆ ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 20,20,173 ಕ್ಕೆ ತಲುಪಿದೆ.
ಶುಕ್ರವಾರ ಮಹಾರಾಷ್ಟ್ರದಲ್ಲಿ 1,134 ಹೊಸ ಕೋವಿಡ್ -19 ಪ್ರಕರಣಗಳು ಪತ್ತೆಯಾಗಿದ್ದು, 3 ಸಾವುಗಳು ವರದಿಯಾಗಿವೆ. ಹೊಸ ಪ್ರಕರಣಗಳ ಪೈಕಿ 763 ಮುಂಬೈನಲ್ಲಿ ಪತ್ತೆಯಾಗಿವೆ ಎಂದು ವರದಿಯಾಗಿದೆ.
Omicron sub-variant BA.4 and BA.5: ಒಮಿಕ್ರಾನ್ನ ಉಪ-ವೇರಿಯಂಟ್ ಬಿಎ.4 ಮತ್ತು ಬಿಎ.5 ಗೆ ಸಂಬಂಧಿಸಿದಂತೆ, ಸೋಂಕನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಅದರ ಪ್ರಕರಣಗಳು ಹೆಚ್ಚಾಗಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
Explainer On Monkeypox - ಯುರೋಪಿನಲ್ಲಿ ಮಂಕಿಪಾಕ್ಸ್ ಅಂದರೆ ಮಂಗನ ಕಾಯಿಲೆಯ ಪ್ರಕರಣಗಳ ಸಂಖ್ಯೆ ವೇಗವಾಗಿ ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಅಡ್ವೈಸರಿ ಕೂಡ ಜಾರಿಗೊಳಿಸಿದೆ. ಹಾಗಾದರೆ, ಏನಿದು ಮಂಕಿಪಾಕ್ಸ್ ಕಾಯಿಲೆ? ನಿಜಕ್ಕೂ ಇದು ಕೊವಿಡ್ -19 ಗಿಂತ ಅಪಾಯಕಾರಿಯಾಗಿದೆಯಾ? ಇದಕ್ಕೆ ಲಸಿಕೆ ಅಥವಾ ಚಿಕಿತ್ಸೆಯೇ ಇಲ್ಲವೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವೇ ಈ Zee Kannada Explainer,
ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನೆಗಳಿಂದಾಗಿ ಜನರಿಗೆ ಹಲವು ಬಗೆಯ ಜ್ವರಗಳ ಬಗ್ಗೆ ಮಾಹಿತಿ ಇದೆ. ಜ್ವರ, ವೈರಲ್ ಜ್ವರ ಮತ್ತು ಜಪಾನೀಸ್ ಜ್ವರದ ಬಗ್ಗೆಯೂ ನೀವು ಕೇಳಿರಬಹುದು. ಇಂತಹ ಪರಿಸ್ಥಿತಿಯಲ್ಲಿ ಕೊರೊನಾ ವೈರಸ್ನ ಜೊತೆಗೆ ಉತ್ತರ ಕೊರಿಯಾದಲ್ಲಿ ನಿಗೂಢ 'ಜ್ವರ'ವೂ ಕಾಣಿಸಿಕೊಂಡಿದೆ. ಈಗಾಗಲೇ 6 ಮಂದಿ ಜ್ವರದಿಂದ ಸಾವನ್ನಪ್ಪಿದ್ದಾರೆ.
ಕೇರಳದಲ್ಲಿ ಇದುವರೆಗೆ ಐದು ವರ್ಷದೊಳಗಿನ 80ಕ್ಕೂ ಹೆಚ್ಚು ಮಕ್ಕಳಲ್ಲಿ ಟೊಮೇಟೊ ಜ್ವರ ಕಾಣಿಸಿಕೊಂಡಿದೆ. ಸೋಂಕು ತಡೆಗಟ್ಟಲು ಕ್ರಮ ಕೈಗೊಳ್ಳದಿದ್ದರೆ ವೈರಸ್ ಮತ್ತಷ್ಟು ಹರಡಬಹುದು ಎಂದು ಆರೋಗ್ಯ ಅಧಿಕಾರಿಗಳು ಎಚ್ಚರಿಸಿದ್ದಾರೆ.
BA.4 and BA.5 Variant Symptoms: ZOE ಕೋವಿಡ್ ಸ್ಟಡಿ ಅಪ್ಲಿಕೇಶನ್ನ ಮುಖ್ಯಸ್ಥ ಪ್ರೊಫೆಸರ್ ಟಿಮ್ ಸ್ಪೆಕ್ಟರ್, ಓಮಿಕ್ರಾನ್ನ ಉಪ-ವೇರಿಯಂಟ್ಗಳಾದ BA.4 ಮತ್ತು BA.5 ರ ಎರಡು ರೋಗಲಕ್ಷಣಗಳ ಬಗ್ಗೆ ಎಚ್ಚರಿಸಿದ್ದಾರೆ, ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದವರು ತಿಳಿಸಿದ್ದಾರೆ.
ಒಡಿಶಾದ ರಾಯಗಡ ಜಿಲ್ಲೆಯಲ್ಲಿ ಕನಿಷ್ಠ 64 ವಿದ್ಯಾರ್ಥಿಗಳಿಗೆ ಕೊರೊನಾ ಇರುವುದು ಧೃಡಪಟ್ಟಿದೆ.ಎಲ್ಲಾ ಶಾಲಾ ವಿದ್ಯಾರ್ಥಿಗಳು ಎರಡು ಪ್ರತ್ಯೇಕ ಹಾಸ್ಟೆಲ್ಗಳಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.
ಕೋವಿಡ್ ಕಾಯಿಲೆಯಿಂದ ಸತ್ತವರ ಸಂಖ್ಯೆಯನ್ನು ಬಚ್ಚಿಟ್ಟಿರುವ ಕೇಂದ್ರ ಬಿಜೆಪಿ ಸರ್ಕಾರದ ಸುಳ್ಳುಗಳ ಸರಮಾಲೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಬಯಲುಗೊಳಿಸಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.