೧೭ನೇ ಭಾರತೀಯ ಸಹಕಾರಿ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ನಾಡಿದ್ದು, ಶನಿವಾರ ದೆಹಲಿಯ ಪ್ರಗತಿ ಮೈದಾನದಲ್ಲಿ ಚಾಲನೆ ನೀಡಲಿದ್ದಾರೆ. “ಅಮೃತ್ಕಾಲ್: ರೋಮಾಂಚಕ ಭಾರತಕ್ಕಾಗಿ ಸಹಕಾರದ ಮೂಲಕ ಸಮೃದ್ಧಿ” ಎಂಬ ಧ್ಯೇಯವಾಕ್ಯದೊಂದಿಗೆ ಭಾರತೀಯ ಸಹಕಾರಿ ಒಕ್ಕೂಟ ಎರಡು ದಿನಗಳ ಈ ಸಮಾವೇಶ ಆಯೋಜಿಸಿದೆ.
ಬಿಜೆಪಿ ಅವ್ರಿಗೆ ಗೊತ್ತಾಗವೇಕು ಯಾರು ಅಕ್ಕಿ ಕೊಟ್ಟಿದ್ದಾರೆ ಅಂತಾ 5 ಕೆಜಿ ಅಕ್ಕಿ ಕೊಡತ್ತಿರುವುದು ಕಾಂಗ್ರೆಸ್ ಜಾರಿಗೆ ಯೋಜನೆಯದ್ದು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಸಚಿವ ಸಂತೋಷ್ ಲಾಡ್ ಹೇಳಿಕೆ ಯಾವುದೇ ಮೋದಿ ಸಾಹೇಬರು ಕೊಡುವ ಯೋಜನೆ ಅಲ್ಲ ಇದು ಆಹಾರ ಭದ್ರತೆ ಕಾನೂನು ಜಾರಿಗೆ ತಂದವರು ಕಾಂಗ್ರೆಸ್ ಸರ್ಕಾರ ಇಡೀ ಭಾರತದಲ್ಲಿ ಬಡವರಿಗೆ ಉಚಿತವಾಗಿ ಏನು ಅಕ್ಕಿ ಕೊಡತಾ ಇರುವುದು ನಮ್ಮದು ಈ ಹಿಂದೆ ಯುಪಿಎ ಸರ್ಕಾರ ಇದ್ದಾಗ ಜಾರಿಗೆ ತಂದ ಯೋಜನೆ ಇದು ನಾವು ಏನು ಹೆಚ್ಚಿಗೆ ಐದು ಕೀಲೋ ಅಕ್ಕಿ ಕೊಡಬೇಕು ಅದನ್ನ ಪ್ರಾಮಾಣಿಕವಾಗಿ ಕೊಡುತ್ತೇವೆ ನ್ಯಾಷನಲ್ ಫುಡ್ ಕಾರ್ಪೋರೇಷನ್ ಅವರು ಕೊಡಬೇಕು ಈಗ ನೋಡೋಣ
ಆರು ದಿನಗಳ ಕಾಲ ಅಮೆರಿಕ ಮತ್ತು ಈಜಿಪ್ಟ್ ಪ್ರವಾಸ ಮುಗಿಸಿದ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಮುಂಜಾನೆ ದೆಹಲಿಗೆ ಆಗಮಿಸಿದರು. ಪಾಲಮ್ ವಿಮಾನ ನಿಲ್ದಾಣದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಮತ್ತು ಹನ್ಸ್ ರಾಜ್ ಹನ್ಸ್ ಮತ್ತು ಗೌತಮ್ ಗಂಭೀರ್ ಸೇರಿದಂತೆ ವಿವಿಧ ಪಕ್ಷದ ಸಂಸದರು ಪ್ರಧಾನಿ ಮೋದಿ ಅವರನ್ನು ಬರಮಾಡಿಕೊಂಡರು.
ಪ್ರಧಾನಿ ಮೋದಿಯವರು ಭಾನುವಾರ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಎಲ್ -ಸಿಸಿ ಅವರನ್ನು ಭೇಟಯಾಗಲಿದ್ದು, ದುಂಡುಮೇಜಿನ ಸಭೆ ನಡೆಸಲಿದ್ದಾರೆ. ನಂತರ ಅವರು ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಲಿದ್ದಾರೆ.
PM Modi Egypt Visit: 26 ವರ್ಷಗಳ ಸುದೀರ್ಘ ಅವಧಿಯ ಬಳಿಕ ಭಾರತದ ಪ್ರಧಾನಿಯೊಬ್ಬರು ಮೊದಲ ದ್ವಿಪಕ್ಷೀಯ ಭೇಟಿಗಾಗಿ ಈಜಿಪ್ಟ್ಗೆ ತಲುಪಿದ್ದಾರೆ. ಈಜಿಪ್ಟ್ ಪ್ರಧಾನಿ ಮುಸ್ತಫಾ ಬದ್ಬೌಲಿ ಅವರು ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದ್ದಾರೆ.
Opposition Leader: ಪಾಟ್ನಾದಲ್ಲಿ ನಡೆದ ವಿರೋಧ ಪಕ್ಷಗಳ ಸಭೆಯ ನಂತರ ನಿತೀಶ್ ಕುಮಾರ್ ಅವರಿಗೆ ಮೆಹಬೂಬಾ ಮುಫ್ತಿ ಧನ್ಯವಾದ ಹೇಳಿದ್ದಾರೆ. ಇದರೊಂದಿಗೆ ಮೆಹಬೂಬಾ ಮುಫ್ತಿ ಪ್ರಧಾನಿ ಮೋದಿಯನ್ನು ಸಹ ಗುರಿಯಾಗಿಸಿದ್ದಾರೆ.
ಪ್ರಧಾನಿ ಮೋದಿ ಸರ್ಕಾರದಲ್ಲಿ ಅಭಿವೃದ್ಧಿ ಮತ್ತು ಆರ್ಥಿಕ ಬೆಳವಣಿಗೆಗೆ ಒತ್ತು ನೀಡಲಾಗಿದೆ. ಉತ್ತಮ ಆಡಳಿತದಿಂದಾಗಿ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯು ಪಾರದರ್ಶಕ ಮತ್ತು ಸಮಯಕ್ಕೆ ಬದ್ಧವಾಗಿದೆ. ಬಡತನ ಮತ್ತು ಸಾಮಾಜಿಕ-ಆರ್ಥಿಕ ಅಸಮಾನತೆ ಹೋಗಲಾಡಿಸುವುದು ಮೋದಿ ಸರ್ಕಾರದ ಗುರಿಯಾಗಿದೆ. ಮೋದಿ ಸರ್ಕಾರದ ಅಂತ್ಯೋದಯ ಯೋಜನೆಗಳಿಂದ ಸಮಾಜದ ಬಡ ವರ್ಗದವರು ಪ್ರಯೋಜನ ಪಡೆದಿದ್ದಾರೆ ಎಂದು ಗಡ್ಕರಿ ಹೇಳಿದ್ದಾರೆ.
Modi Government Plan: ಭಾರತದಲ್ಲಿ ತಯಾರಾದ ಮೊದಲ ಸೆಮಿಕಂಡಕ್ಟರ್ ಚಿಪ್ ಮುಂದಿನ ವರ್ಷ ಡಿಸೆಂಬರ್ ವೇಳೆಗೆ ಸಿದ್ಧಗೊಳ್ಳಲಿದೆ ಎಂದು ಕೇಂದ್ರ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಶುಕ್ರವಾರ ಹೇಳಿದ್ದಾರೆ.
PM Modi Joe Biden: ನಮ್ಮಿಬ್ಬರಲ್ಲಿ ಯಾರೂ ಡ್ರಿಂಕ್ ಮಾಡುವುದಿಲ್ಲ ಇದು ಒಳ್ಳೆಯ ಸಂಗತಿಯಾಗಿದೆ ಎಂದು ಜೋ ಬೀಡೆನ್ ಹೇಳಿದ್ದಾರೆ. ಆದರೆ ಪ್ರಧಾನಿ ಮೋದಿ ಕೈಯಲ್ಲಿ ಪಾನೀಯ ಹಿಡಿದು ಅಧ್ಯಕ್ಷ ಬೀಡೆನ್ ಗೆ ಚಿಯರ್ಸ್ ಹೇಳುವಾಗ ಆ ಪಾನೀಯ ಯಾವುದು ಎಂಬ ಪ್ರಶ್ನೆ ಹಲವರ ಮನದಲ್ಲಿ ಮೂಡಿರಬಹುದು.
4 ದಿನದ ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು 2ನೇ ದಿನದ ಕಾರ್ಯಕ್ರಮವಾಗಿ ವಾಷಿಂಗ್ಟನ್ಗೆ ಬಂದಿಳಿದಿದ್ದಾರೆ. ಮೋದಿಗಾಗಿ ಶ್ವೇತಭವನದಲ್ಲಿ ಭಾರೀ ಭೋಜನಗಳ ತಯಾರಿಯಾಗಿದೆ. ಶ್ವೇತಭವನಕ್ಕೆ ಆಗಮಿಸುವ ಅತಿಥಿಗಳಿಗೆಂದೇ ಅಡುಗೆ ತಯಾರಿಸೋ ತಂಡವೇ ಇದೆ. ನೀನಾ ಕುರ್ಟಿಸ್ ಹಾಗೂ ಇತರ ತಂಡ ಇದರ ಹೊಣೆ ಹೊತ್ತುಕೊಂಡಿದೆ. ಈ ತಂಡ ಮೋದಿ ಅವರಿಗೆ ಆತಿಥ್ಯ ನೀಡಲು ವೇದಿಕೆ ಅಣಿಗೊಳಿಸಿದೆ. ಈ ವರ್ಷ ಭಾರತವು ಸಿರಿಧಾನ್ಯದ ಅಂತರಾಷ್ಟ್ರೀಯ ವರ್ಷವನ್ನು ಘೋಷಿಸಿದೆ. ಈ ಕಾರಣದಿಂದ ಮೋದಿ ಅವರ ಮೆನುವಿನಲ್ಲಿ ಸಿರಿಧಾನ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ.. ಇನ್ನು ಮೋದಿಗೆ ತಯಾರಿಸಿದ್ದ ಭಕ್ಷ್ಯಗಳನ್ನು ಮಾಧ್ಯಮಗಳ ಎದುರು ಪ್ರದರ್ಶಿಸಲಾಯಿತು.
ಯುಎಸ್ ರಾಯಭಾರಿ ಕಚೇರಿಯು ಬೆಂಗಳೂರಿನಲ್ಲಿ ಕಾರ್ಯಾರಂಭಿಸಲು, ಕಾರಣೀಕರ್ತರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಗುರುವಾರ ಧನ್ಯವಾದ ಅರ್ಪಿಸಿದರು.
Star Link Entry To India: ಇದೀಗ ಮತ್ತೊಮ್ಮೆ ಎಲೋನ್ ಮಸ್ಕ್ ಅವರ ಸ್ಟಾರ್ ಲಿಂಕ್ ಕಂಪನಿ ಭಾರತದಲ್ಲಿ ಅಬ್ಬರ ಸೃಷ್ಟಿಸಲು ಸಿದ್ಧವಾಗಿದೆ. ಕಂಪನಿ 2021ರಲ್ಲಿ ಭಾರತದಲ್ಲಿ ಸ್ಟಾರ್ ಲಿಂಕ್ ಇಂಟರ್ನೆಟ್ ಸೌಲಭ್ಯವನ್ನು ಕಲ್ಪಸುವ ಕುರಿತು ಹೇಳಿಕೆ ನೀಡಿತ್ತು. ಆದರೆ, ಆ ಸಮಯದಲ್ಲಿ ತಾಂತ್ರಿಕ ಅಡಚನೆಗಳ ಕಾರಣ ಅದು ಸಾಧ್ಯವಾರಿಯಲಿಲ್ಲ. ಆದರೆ, ಈ ಬಾರಿ ಸ್ಟಾರ್ ಲಿಂಕ್ ಭಾರತ ಪ್ರವೇಶ ದೃಢಪಡಿಸಲಾಗಿದೆ.
PM Modi In US: ಪ್ರಧಾನಿ ಮೋದಿ ಅವರು ಯುಎಸ್ ಕಾಂಗ್ರೆಸ್ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆದರೆ, ಇಬ್ಬರು ಯುಎಸ್ ಸಂಸದರು ಪ್ರಧಾನಿ ಮೋದಿ ಭಾಷಣವನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಇವರಲ್ಲಿ ರಶೀದಾ ತ್ಲೈಬ್ ಮತ್ತು ಇಲ್ಹಾನ್ ಒಮರ್ ಶಾಮೀಲಾಗಿದ್ದಾರೆ. ಪ್ರಧಾನಿಯವರು ಅಲ್ಪಸಂಖ್ಯಾತರ ದಮನ ಮಾಡಿದ್ದಾರೆ ಎಂದು ಇಬ್ಬರೂ ಸಂಸದರು ಆರೋಪಿಸಿದ್ದಾರೆ. ಅವರ ಆರೋಪಕ್ಕೆ ಭಾರತದ ಮುಸ್ಲಿಂ ನಾಯಕರೂಬ್ಬರು ಪ್ರತಿಕ್ರಿಯಿಸಿದ್ದಾರೆ.
ಅಮೆರಿಕದ ನ್ಯೂಯಾರ್ಕ್ನಲ್ಲಿ ವಿಶ್ವ ಸಂಸ್ಥೆಯ ಆವರಣದಲ್ಲಿ ನಡೆಯುತ್ತಿರುವ ಯೋಗ ದಿನಾಚರಣೆ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ೧೮೦ ದೇಶಗಳ ಪ್ರತಿನಿಧಿಗಳು, ಅಪಾರ ಸಂಖ್ಯೆಯ ಜನರು ಪಾಲ್ಗೊಂಡಿದ್ದಾರೆ. ಇದು ಜಾಗತಿಕ ಮಟ್ಟದಲ್ಲಿ ಹೊಸ ದಾಖಲೆಯಾಗಿದೆ.
PM Modi In USA: ಪ್ರಧಾನಿ ಮೋದಿಯವರು ಹೊಸ ಕಂಪನಿಗಳನ್ನು ಬೆಂಬಲಿಸಬಯಸುತ್ತಾರೆ. ಭಾರತವು ಸೋಲಾರ್ ಪವರ್ನಲ್ಲಿ ಹೂಡಿಕೆ ಮಾಡಲು ಉತ್ತಮ ದೇಶವಾಗಿದೆ. ಭಾರತದ ಬಗ್ಗೆ ಮೋದಿಯವರು ಉತ್ತಮ ಯೋಜನೆಗಳನ್ನು ಹೊಂದಿದ್ದಾರೆ ಎಂದು ಮಸ್ಕ್ ಹೇಳಿದರು.
Elon Musk Met Narendra Modi: ಪ್ರಧಾನಿ ಮೋದಿ ಭೇಟಿಯಾದ ಬಳಿಕ ಮಾತನಾಡಿದ ಎಲಾನ್ ಮಸ್ಕ್, ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವ ಯೋಜನೆ ಇದೆ. ಆದಷ್ಟು ಬೇಗ ಟೆಸ್ಲಾ ಭಾರತದಲ್ಲಿ ಕಾರ್ಯಾಚರಣೆ ಆರಂಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿಯವರ ಬೆಂಬಲಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ ಅಂತಾ ಇದೇ ವೇಳೆ ಅವರು ಹೇಳಿದ್ದಾರೆ.
PM Modi US Visit: ಈ ಹಿಂದೆ, 2015 ರಲ್ಲಿ ಕ್ಯಾಲಿಫೋರ್ನಿಯಾದ ಟೆಸ್ಲಾ ಮೋಟಾರ್ಸ್ ಕಂಪನಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎಲೋನ್ ಮಸ್ಕ್ ಭೇಟಿಯಾಗಿದ್ದರು ಮತ್ತು ಆಗ ಟೆಸ್ಲಾ ಮುಖ್ಯಸ್ಥರು ಟ್ವಿಟರ್ನ ಮಾಲೀಕರಾಗಿರಲಿಲ್ಲ.
PM Modi Visit To US:ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸಕ್ಕೆ ತೆರಳುತ್ತಿದ್ದು, ಅಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದು, ಅಧ್ಯಕ್ಷ ಜೋ ಬಿಡನ್ ಅವರನ್ನು ಭೇಟಿ ಮಾಡಲಿದ್ದಾರೆ.
PM Modi US visit: ಸುದ್ದಿ ಸಂಸ್ಥೆ ANI ಪೋಸ್ಟ್ ಮಾಡಿದ ವೀಡಿಯೊದಲ್ಲಿ “ಯುಎಸ್ ನಾದ್ಯಂತ 20 ಪ್ರಮುಖ ನಗರಗಳಲ್ಲಿ ಮೆರವಣಿಗೆಯನ್ನು ಆಯೋಜಿಸಿದ ಭಾರತೀಯ ಅಮೆರಿಕನ್ನರು ‘ಮೋದಿ ಮೋದಿ', 'ವಂದೇ ಮಾತರಂ' ಮತ್ತು 'ವಂದೇ ಅಮೇರಿಕಾ' ಎಂದು ಘೋಷಣೆ ಕೂಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.