BSNL Prepaid Plans: ಅತ್ಯಂತ ಕಡಿಮೆ ಬೆಲೆಯಲ್ಲಿ ಪ್ರಿಪೇಯ್ಡ್ ಪ್ಲಾನ್ಸ್ ಪರಿಚಯಿಸಿದ ಬಿ‌ಎಸ್‌ಎನ್‌ಎಲ್

BSNL Prepaid Plans: ಭಾರತದ ಸರ್ಕಾರಿ ವಲಯದ ಟೆಲಿಕಾಂ ಸಂಸ್ಥೆ  ಬಿ‌ಎಸ್‌ಎನ್‌ಎಲ್ ತನ್ನ ಗ್ರಾಹಕರಿಗಾಗಿ ಕೈಗೆಟುಕುವ ದರದಲ್ಲಿ ಎರಡು ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. 

Written by - Yashaswini V | Last Updated : May 16, 2024, 12:17 PM IST
  • ತನ್ನ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯಲ್ಲಿ ಎರಡು ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದ ಬಿ‌ಎಸ್‌ಎನ್‌ಎಲ್
  • ಬಿ‌ಎಸ್‌ಎನ್‌ಎಲ್ ನ ಈ ಎರಡೂ ಪ್ರಿಪೇಯ್ಡ್ ಯೋಜನೆಗಳ ಬೆಲೆ 60 ರೂ.ಗಿಂತಲೂ ಕಡಿಮೆ
  • ದುಬಾರಿ ರಿಚಾರ್ಜ್ ಯೋಜನೆಗಳನ್ನು ಖರೀದಿಸಲು ಸಾಧ್ಯವಾಗದ ಗ್ರಾಹಕರಿಗೆ ಈ ಯೋಜನೆ ಲಾಭದಾಯಕ
BSNL Prepaid Plans: ಅತ್ಯಂತ ಕಡಿಮೆ ಬೆಲೆಯಲ್ಲಿ ಪ್ರಿಪೇಯ್ಡ್ ಪ್ಲಾನ್ಸ್ ಪರಿಚಯಿಸಿದ ಬಿ‌ಎಸ್‌ಎನ್‌ಎಲ್  title=

BSNL Affordable Prepaid Plans: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್- ಬಿ‌ಎಸ್‌ಎನ್‌ಎಲ್ ತನ್ನ ಗ್ರಾಹಕರಿಗಾಗಿ ಎರಡು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು (BSNL New Prepaid Plans) ಬಿಡುಗಡೆ ಮಾಡಿದೆ. ಈ ಎರಡು ಹೊಸ ಯೋಜನೆಗಳು ₹ 58 ಮತ್ತು ₹ 59ಕ್ಕೆ ಲಭ್ಯವಾಗುತ್ತದೆ. ಯಾವುದೀ ಯೋಜನೆಗಳು, ಈ ಯೋಜನೆಗಳ ಪ್ರಯೋಜನಗಳೇನು ಎಂದು ತಿಳಿಯೋಣ... 

ಅತ್ಯಂತ ಕಡಿಮೆ ಬೆಲೆಯಲ್ಲಿ ಬಿ‌ಎಸ್‌ಎನ್‌ಎಲ್ ಪ್ರಿಪೇಯ್ಡ್ ಪ್ಲಾನ್ಸ್ (BSNL Prepaid Plans at lowest price)! 
*  ₹58 ಯೋಜನೆಯು ಕೇವಲ ಡೇಟಾ ವೋಚರ್ (Data Voucher) 
* ₹59 ಯೋಜನೆಯು ಸಂಪೂರ್ಣ ಟೆಲಿಕಾಂ ಸೇವೆಯ ವಿಸ್ತೃತ ಮಾನ್ಯತೆಯೊಂದಿಗೆ  ಲಭ್ಯವಿರುವ ಪ್ರಿಪೇಯ್ಡ್ ಯೋಜನೆಯಾಗಿದೆ. 

ಇದನ್ನೂ ಓದಿ- ವಾಟ್ಸಾಪ್‌ನಲ್ಲಿ ಸದ್ಯದಲ್ಲೇ ಬರಲಿದೆ ಆಡಿಯೋ ಕಾಲ್ ಫೀಚರ್: ಏನಿದರ ವಿಶೇಷತೆ!

ಬಿ‌ಎಸ್‌ಎನ್‌ಎಲ್ ₹58 ಪ್ರಿಪೇಯ್ಡ್ ಯೋಜನೆಯ ಪ್ರಯೋಜನಗಳು: 
ಬಿ‌ಎಸ್‌ಎನ್‌ಎಲ್ (BSNL) ಪರಿಚಯಿಸಿರುವ ₹58 ಪ್ರಿಪೇಯ್ಡ್ ಯೋಜನೆಯು ಡೇಟಾ ಟಾಪ್-ಅಪ್ ಪ್ಲಾನ್ ಆಗಿದೆ. ಅರ್ಥಾತ್, ನಿಮ್ಮ ಮೊಬೈಲ್‌ನಲ್ಲಿ ಈಗಾಗಲೇ ಸಕ್ರಿಯವಾಗಿರುವ ಯೋಜನೆಯೊಂದಿಗೆ ನೀವು ಈ ಯೋಜನೆಯನ್ನು ಪಡೆಯಬಹುದು. 
₹58 ಡೇಟಾ ವೋಚರ್ ಯೋಜನೆಯು ಗ್ರಾಹಕರಿಗೆ 7 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತದೆ. ಇದರಲ್ಲಿ, ಪ್ರತಿದಿನ 2ಜಿಬಿ ಡೇಟಾ ಲಭ್ಯವಿದೆ. ಅಷ್ಟೇ ಅಲ್ಲ, ನಿಗದಿತ ಡೇಟಾ ಖಾಲಿಯಾದ ಬಳಿಕ ಇಂಟರ್ನೆಟ್ ವೇಗವು 40 Kbps ಗೆ ಕಡಿಮೆಯಾಗುತ್ತದೆ.

ಇದನ್ನೂ ಓದಿ- BSNL 4G Services: ಬಿ‌ಎಸ್‌ಎನ್‌ಎಲ್ ಗ್ರಾಹಕರಿಗೆ ಗುಡ್ ನ್ಯೂಸ್, ಈ ದಿನದಿಂದ ಸಿಗಲಿದೆ 4G ಸೇವೆ

ಬಿ‌ಎಸ್‌ಎನ್‌ಎಲ್ ₹59 ಪ್ರಿಪೇಯ್ಡ್ ಯೋಜನೆ ಪ್ರಯೋಜನಗಳು: 
ಬಿ‌ಎಸ್‌ಎನ್‌ಎಲ್ ಪರಿಚಯಿಸಿರುವ ಎರಡನೇ ಪ್ರಿಪೇಯ್ಡ್ ಯೋಜನೆ (Prepaid Plan) ಎಂದರೆ ₹59 ಪ್ರಿಪೇಯ್ಡ್ ಯೋಜನೆ. ಇದು ಯೋಜನೆಯು ಸಂಪೂರ್ಣ ಟೆಲಿಕಾಂ ಸೇವೆಯ ವಿಸ್ತೃತ ಮಾನ್ಯತೆಯೊಂದಿಗೆ  ಲಭ್ಯವಿರುವ ಪ್ರಿಪೇಯ್ಡ್ ಯೋಜನೆಯಾಗಿದೆ. ಏಳು ದಿನಗಳ ವ್ಯಾಲಿಡಿಟಿಯೊಂದಿಗೆ ಲಭ್ಯವಿರುವ ಈ ಯೋಜನೆಯಲ್ಲಿ ಗ್ರಾಹಕರು ನಿತ್ಯ 1 ಜಿಬಿ ಡೇಟಾ ಮತ್ತು ಅನ್ಲಿಮಿಟೆಡ್ ಕರೆ ಸೌಲಭ್ಯವನ್ನು ಪಡೆಯಲಿದ್ದಾರೆ. 

ದುಬಾರಿ ರಿಚಾರ್ಜ್ ಯೋಜನೆಗಳನ್ನು ಖರೀದಿಸಲು ಸಾಧ್ಯವಾಗದ ಗ್ರಾಹಕರಿಗೆ ಈ ಪ್ರಿಪೇಯ್ಡ್ ಯೋಜನೆಗಳು ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿವೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=O-hDphMYFMg

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News