WhatsAppನಂತೆಯೇ Instagramನಲ್ಲೂ ಬಂತು ಹೊಸ ವೈಶಿಷ್ಟ್ಯ !ಇದು ಬಹಳ ಬೇಡಿಕೆಯ feature

Instagram edit message feature : ಈ ವೈಶಿಷ್ಟ್ಯ ಬೇಕು ಎನ್ನುವುದು ಬಳಕೆದಾರರ ಬಹು ದಿನಗಳ ಬೇಡಿಕೆಯಾಗಿತ್ತು. ಇದೀಗ ಅಂತಿಮವಾಗಿ Instagram ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಿದೆ. 

Written by - Ranjitha R K | Last Updated : Mar 5, 2024, 02:19 PM IST
  • Instagram ನಲ್ಲಿ ಕಳುಹಿಸಿದ ಸಂದೇಶಗಳನ್ನು ಕೂಡಾ ಎಡಿಟ್ ಮಾಡಬಹುದು.
  • Instagramನಲ್ಲಿ ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಲಾಗಿದೆ
  • 15 ನಿಮಿಷಗಳ ಒಳಗೆ ಎಡಿಟ್ ಮಾಡಬೇಕು
WhatsAppನಂತೆಯೇ  Instagramನಲ್ಲೂ ಬಂತು ಹೊಸ ವೈಶಿಷ್ಟ್ಯ !ಇದು ಬಹಳ ಬೇಡಿಕೆಯ feature  title=

Instagram New Feature : ಈಗ ನೀವು Instagram ನಲ್ಲಿ ಕಳುಹಿಸಿದ ಸಂದೇಶಗಳನ್ನು ಕೂಡಾ ಎಡಿಟ್ ಮಾಡಬಹುದು. ಈ ವೈಶಿಷ್ಟ್ಯ ಬೇಕು ಎನ್ನುವುದು ಬಳಕೆದಾರರ ಬಹು ದಿನಗಳ ಬೇಡಿಕೆಯಾಗಿತ್ತು. ಇದೀಗ ಅಂತಿಮವಾಗಿ Instagram ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಿದೆ (Instagram New Feature). ಈ ಮೊದಲು ವಾಟ್ಸಾಪ್‌ನಲ್ಲಿ ಈ ಫೀಚರ್ ಲಭ್ಯವಿತ್ತು. ಈಗ ಇನ್‌ಸ್ಟಾಗ್ರಾಮ್‌ನಲ್ಲಿಯೂ ಇದು ಬಂದಿದೆ. ಅಲ್ಲದೆ, Instagram ಶೀಘ್ರದಲ್ಲೇ  WhatsApp ನಂತೆಯೇ ಚಾಟ್‌ಗಳನ್ನು ಪಿನ್ ಮಾಡುವ ವೈಶಿಷ್ಟ್ಯವನ್ನು ಕೂಡಾ ತರಲಿದೆ ಎನ್ನಲಾಗಿದೆ. 

15 ನಿಮಿಷಗಳ ಒಳಗೆ ಎಡಿಟ್ ಮಾಡಬೇಕು : 
ಈಗ ಇನ್‌ಸ್ಟಾಗ್ರಾಮ್‌ನಲ್ಲಿ ಕಳುಹಿಸಿದ ಸಂದೇಶಗಳನ್ನು ಎಡಿಟ್ ಮಾಡಬಹುದು.  ಈ ವೈಶಿಷ್ಟ್ಯ ನಿಜವಾಗಿಯೂ ಗೇಮ್ ಚೇಂಜರ್. ಈ ಹೊಸ ವೈಶಿಷ್ಟ್ಯದ ಸಹಾಯದಿಂದ ಮೆಸೇಜ್ ಕಳುಹಿಸಿದ 15 ನಿಮಿಷಗಳ ಒಳಗೆ ಅದನ್ನು ಎಡಿಟ್ ಮಾಡಬಹುದು. ಇದಕ್ಕೂ ಮೊದಲು ತಪ್ಪಾದ ಮೆಸೇಜ್ ಸೆಂಡ್ ಆಗಿದ್ದರೆ ಅದನ್ನು ಡಿಲೀಟ್ ಮಾಡಬೇಕಿತ್ತು. ಅಥವಾ ಮತ್ತೆ ಕಳುಹಿಸಬೇಕಿತ್ತು. ಆದರೆ ಈಗ ಅದೇ ಮೆಸೇಜ್ ಅನ್ನು ಎಡಿಟ್ ಮಾಡಿ ಪೋಸ್ಟ್ ಮಾಡಬಹುದು. 

ಇದನ್ನೂ ಓದಿ : ಬೆಂಗಳೂರು ಮೂಲದ Gobuds Sports Earbuds ಬಿಡುಗಡೆ : ಈ ಕುರಿತು ಮಾಹಿತಿ ಇಲ್ಲಿದೆ

ಮೆಸೇಜ್ ಕೆಳಗೆ ಎಡಿಟೆಡ್ ಎನ್ನುವುದು ಕಾಣಿಸುತ್ತದೆ : 
Instagram ನಲ್ಲಿ ಕಳುಹಿಸಲಾದ ಸಂದೇಶಗಳನ್ನು ಎಡಿಟ್ ಮಾಡುವುದು ತುಂಬಾ ಸುಲಭ. ನೀವು ಬದಲಾಯಿಸಲು ಬಯಸುವ ಸಂದೇಶವನ್ನು ಸ್ವಲ್ಪ ಸಮಯದವರೆಗೆ  ಪ್ರೆಸ್ ಮಾಡಿ ಹಿಡಿದುಕೊಳ್ಳಬೇಕು. ನಂತರ ಕಾಣಿಸಿಕೊಳ್ಳುವ ಮೆನುವಿನಿಂದ "ಎಡಿಟ್ " ಅನ್ನು ಆಯ್ಕೆಮಾಡಬೇಕು. ವಾಟ್ಸಾಪ್‌ನಂತೆಯೇ, ಎಡಿಟ್ ಮಾಡಿದ ಸಂದೇಶದ ಕೆಳಗೆ 'ಎಡಿಟೆಡ್' ಎನ್ನುವುದು ಕಾಣಿಸುತ್ತದೆ. ಸಂದೇಶವನ್ನು ಎಡಿಟ್ ಮಾಡಲಾಗಿದೆ ಎನ್ನುವುದನ್ನು ಮೆಸೇಜ್ ಕಳುಹಿಸಿದವರಿಗೂ, ಸ್ವೀಕರಿಸಿದವರಿಗೂ ಇದು ತಿಳಿಸುತ್ತದೆ. ಆದರೆ, ಎಷ್ಟು ಬಾರಿ ಮೆಸೇಜ್ ಅನ್ನು ಎಡಿಟ್ ಮಾಡಲಾಗಿದೆ ಎನ್ನುವುದು ತಿಳಿಯುವುದಿಲ್ಲ. 

Instagram ಸಂದೇಶಗಳನ್ನು ಎಡಿಟ್ ಮಾಡುವುದರ ಹೊರತಾಗಿ, ಮತ್ತೊಂದು ವೈಶಿಷ್ಟ್ಯ ಕೂಡಾ ಶೀಘ್ರದಲ್ಲೇ ಬರಲಿದೆ. ಅದೇ ಚಾಟ್‌ಗಳನ್ನು ಪಿನ್ ಮಾಡುವ ಆಯ್ಕೆ. WhatsApp ನಂತೆ, ನೀವು ನಿಮ್ಮ ನೆಚ್ಚಿನ ಚಾಟ್‌ಗಳನ್ನು  Instagram ಇನ್‌ಬಾಕ್ಸ್‌ನ ಮೇಲ್ಭಾಗಕ್ಕೆ ಪಿನ್ ಮಾಡಲು ಸಾಧ್ಯವಾಗುತ್ತದೆ. ಶೀಘ್ರದಲ್ಲೇ ಮೂರು ಗ್ರೂಪ್ ಚಾಟ್‌ ಅಥವಾ ಸಾಮಾನ್ಯ ಚಾಟ್‌ಗಳನ್ನು ಮೇಲಕ್ಕೆ ಪಿನ್ ಮಾಡಲು ಸಾಧ್ಯವಾಗುತ್ತದೆ" ಎಂದು ಅಧಿಕೃತ ಬ್ಲಾಗ್ ಪೋಸ್ಟ್ ನಲ್ಲಿ ಹೇಳಲಾಗಿದೆ. 

ಇದನ್ನೂ ಓದಿ : Tips For Safety Driving: ನೀವೂ ಚಪ್ಪಲ್ ಧರಿಸಿ ಕಾರು ಒಡಸ್ತಿರಾ? ಎಚ್ಚರ..! ಕಾರಣ ಇಲ್ಲಿದೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News