Online Aadhar Service:ಆಧಾರ್ ಕಾರ್ಡ್ ಕಳೆದು ಹೋಗಿದ್ದರೆ ಏನು ಮಾಡಬೇಕು? ಹೊಸ ಆಧಾರ್ ಕೈ ಸೇರಲು ಎಷ್ಟು ದಿನ ಬೇಕು ?

E Aadhaar Card:ಆಧಾರ್ ಕಾರ್ಡ್ ಕಳೆದುಹೋದರೆ ಅಥವಾ ಹಾನಿಗೊಳಗಾದರೆ,ಸರ್ಕಾರಿ ಸೇವೆಗಳನ್ನು ಪಡೆಯುವಲ್ಲಿ ತೊಂದರೆಯನ್ನು ಎದುರಿಸಬೇಕಾಗುತ್ತದೆ.ಆದರೆ ಈಗ ಈ ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ.

Written by - Ranjitha R K | Last Updated : May 6, 2024, 03:37 PM IST
  • ಆಧಾರ್ ಕಾರ್ಡ್ ಭಾರತೀಯ ನಾಗರಿಕರಿಗೆ ಪ್ರಮುಖ ಗುರುತಿನ ದಾಖಲೆ
  • ಸರ್ಕಾರಿ ಯೋಜನೆಗಳು ಮತ್ತು ಇತರ ಪ್ರಯೋಜನಗಳನ್ನು ಪಡೆಯಲು ಬಳಸಲಾಗುತ್ತದೆ
  • UIDAI ಕಾರ್ಡ್‌ದಾರರಿಗೆ ಮತ್ತೆ ಆಧಾರ್ ಮಾಡಲು ಸೌಲಭ್ಯವನ್ನು ಒದಗಿಸುತ್ತದೆ.
Online Aadhar Service:ಆಧಾರ್ ಕಾರ್ಡ್ ಕಳೆದು ಹೋಗಿದ್ದರೆ ಏನು ಮಾಡಬೇಕು? ಹೊಸ ಆಧಾರ್ ಕೈ ಸೇರಲು ಎಷ್ಟು ದಿನ ಬೇಕು ?  title=

E Aadhaar Card : ಆಧಾರ್ ಕಾರ್ಡ್ ಭಾರತೀಯ ನಾಗರಿಕರಿಗೆ ಪ್ರಮುಖ ಗುರುತಿನ ದಾಖಲೆಯಾಗಿದೆ.ಸರ್ಕಾರಿ ಯೋಜನೆಗಳು ಮತ್ತು ಇತರ ಪ್ರಯೋಜನಗಳನ್ನು ಪಡೆಯಲು ಡಿಜಿಟಲ್ ಗುರುತಿನ ಪುರಾವೆಯಾಗಿಯೂ ಇದನ್ನು ಬಳಸಲಾಗುತ್ತದೆ.ಅಂತಹ ಆಧಾರ್ ಕಾರ್ಡ್ ಕಳೆದುಹೋದರೆ ಅಥವಾ ಹಾನಿಗೊಳಗಾದರೆ,ಸರ್ಕಾರಿ ಸೇವೆಗಳನ್ನು ಪಡೆಯುವಲ್ಲಿ ತೊಂದರೆಯನ್ನು ಎದುರಿಸಬೇಕಾಗುತ್ತದೆ.ಆದರೆ ಈಗ ಈ ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ. UIDAI ಕಾರ್ಡ್‌ದಾರರಿಗೆ ಮತ್ತೆ ಆಧಾರ್ ಮಾಡಲು ಸೌಲಭ್ಯವನ್ನು ಒದಗಿಸುತ್ತದೆ. 

ಇ-ಆಧಾರ್ ಪಡೆಯುವುದು ಹೇಗೆ? :
ತನ್ನ ಆಧಾರ್ ಸಂಖ್ಯೆಯನ್ನು ತಿಳಿದಿರುವ ಯಾವುದೇ ವ್ಯಕ್ತಿ ಇ-ಆಧಾರ್ ಅನ್ನು ನೇರವಾಗಿ UIDAI ವೆಬ್‌ಸೈಟ್ ಅಥವಾ mAadhaar ಅಪ್ಲಿಕೇಶನ್‌ನಿಂದ ಡೌನ್‌ಲೋಡ್ ಮಾಡಬಹುದು.

ಇದನ್ನೂ ಓದಿ : Amazon Summer Sale 2024: ಕಿಚನ್ ಅಪ್ಲೈನ್ಸಾಸ್ ಮೇಲೆ ಬಂಪರ್ ರಿಯಾಯಿತಿ! ಏನೆಲ್ಲಾ ಇದೆ ಆಫರ್ ಗೊತ್ತಾ ?

೧.ಇದಕ್ಕಾಗಿ UIDAI ವೆಬ್‌ಸೈಟ್ myaadhaar.uidai.gov.in/ ಗೆ ಹೋಗಿ.
೨.'ಡೌನ್‌ಲೋಡ್ ಆಧಾರ್' ಮೇಲೆ ಕ್ಲಿಕ್ ಮಾಡಿ.
೩.ನಿಮ್ಮ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾವನ್ನು ನಮೂದಿಸಿ.
೪.ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುವ 4 ಅಂಕಿಯ OTP ಅನ್ನು ನಮೂದಿಸಿ. 
೫.OTP ನಮೂದಿಸಿದ ಬಳಿಕ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.
೬. ನಿಮ್ಮ ಇ-ಆಧಾರ್ ಅನ್ನು PDF ಫಾರ್ಮ್ಯಾಟ್‌ನಲ್ಲಿ ಡೌನ್‌ಲೋಡ್ ಮಾಡಿ ಕೊಳ್ಳಬಹುದು. 
೭.ಭವಿಷ್ಯದ ಬಳಕೆಗಾಗಿ PDF ಫೈಲ್ ಅನ್ನು  ಸೇವ್ ಮಾಡಿಕೊಳ್ಳಿ. 

PVC ಆಧಾರ್ ಕಾರ್ಡ್ ಅನ್ನು ಆರ್ಡರ್ ಮಾಡುವುದು ಹೇಗೆ? :
ಈಗ ತಮ್ಮ ಆಧಾರ್ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಪಿವಿಸಿ ಕಾರ್ಡ್‌ಗೆ ಪರಿವರ್ತಿಸಬಹುದು.UIDAI ವೆಬ್‌ಸೈಟ್‌ಗೆ ಭೇಟಿ ನೀಡಿ 50 ರೂಪಾಯಿ ಶುಲ್ಕವನ್ನು ಪಾವತಿಸುವ ಮೂಲಕ PVC ಆಧಾರ್ ಕಾರ್ಡ್ ಅನ್ನು ಆರ್ಡರ್ ಮಾಡಬಹುದು.

ಇದನ್ನೂ ಓದಿ ATM Card Trap Scam: ಏನಿದು ಎಟಿಎಂ ಕಾರ್ಡ್ ಟ್ರ್ಯಾಪ್ ಸ್ಕ್ಯಾಮ್? ಈ ಬಗ್ಗೆ ಇರಲಿ ಎಚ್ಚರ

UIDAI ವೆಬ್‌ಸೈಟ್ atuidai.gov.in/ ಗೆ ಹೋಗಿ ಮತ್ತು ನನ್ನ ಆಧಾರ್ ಟ್ಯಾಬ್ ಕ್ಲಿಕ್ ಮಾಡಿ. ನಂತರ ಆರ್ಡರ್ ಆಧಾರ್ ಪಿವಿಸಿ ಕಾರ್ಡ್ ಅನ್ನು ಕ್ಲಿಕ್ ಮಾಡುವ ಮೂಲಕ ಆರ್ಡರ್ ಮಾಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News