ಒಂದು ಕಾಲದಲ್ಲಿ ಕುಟುಂಬ ನಿರ್ವಹಣೆಗೆ ಮೀಸಲಾಗಿದ್ದ ಮಹಿಳೆ ಇಂದು 800 ಕೋಟಿ ವ್ಯವಹಾರದ ಒಡತಿ ! ಇವರೇ ಎಂ ಎಸ್ ಧೋನಿ ಅತ್ತೆ ಶೀಲಾ ಸಿಂಗ್!

ಧೋನಿ ಎಂಟರ್‌ಟೈನ್‌ಮೆಂಟ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮೂಲಕ ಅವರು ಕಂಪನಿಯನ್ನು  ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ

Written by - Ranjitha R K | Last Updated : Apr 26, 2024, 02:52 PM IST
  • ಮನೆ ನಿರ್ವಹಣೆಯೇ ಮುಖ್ಯ ಕೆಲಸವಾಗಿತ್ತು
  • ದೊಡ್ಡ ಸಾಧನೆಗಳನ್ನು ಸಾಧಿಸಿರುವ ಕಂಪನಿ
  • ಇಂದು ಕಂಪನಿಯ ಸಿಇಓ ಶೀಲಾ ಸಿಂಗ್
ಒಂದು ಕಾಲದಲ್ಲಿ ಕುಟುಂಬ ನಿರ್ವಹಣೆಗೆ ಮೀಸಲಾಗಿದ್ದ ಮಹಿಳೆ ಇಂದು 800 ಕೋಟಿ ವ್ಯವಹಾರದ ಒಡತಿ ! ಇವರೇ ಎಂ ಎಸ್ ಧೋನಿ ಅತ್ತೆ ಶೀಲಾ ಸಿಂಗ್! title=

MS Dhoni Net Worth : ಹಿರಿಯ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರ ಪತ್ನಿ ಸಾಕ್ಷಿ ಸಿಂಗ್ ಧೋನಿ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ.ಆದರೆ ಅವರ  ಅತ್ತೆ ಅಂದರೆ ಸಾಕ್ಷಿ ತಾಯಿ ಶೀಲಾ ಸಿಂಗ್ ಬಗ್ಗೆ ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಶೀಲಾ ಸಿಂಗ್ ಕುಟುಂಬ ನಿರ್ವಹಣೆ ಜೊತೆಗೆ ಎಂಎಸ್ ಧೋನಿ ಅವರ ಉದ್ಯಮದ ಜವಾಬ್ದಾರಿಗಳನ್ನು ಸಹ ನಿಭಾಯಿಸುತ್ತಾರೆ.ಧೋನಿ ಎಂಟರ್‌ಟೈನ್‌ಮೆಂಟ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮೂಲಕ ಅವರು ಕಂಪನಿಯನ್ನು  ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ.

ದೊಡ್ಡ ಸಾಧನೆಗಳನ್ನು ಸಾಧಿಸಿರುವ ಕಂಪನಿ : 
ಕುಟುಂಬದೊಳಗೆ ಬಿಸಿನೆಸ್ ಜವಾಬ್ದಾರಿಗಳನ್ನು ಇಟ್ಟುಕೊಳ್ಳುವ ಆಲೋಚನೆಯೊಂದಿಗೆ, ಮಹೇಂದ್ರ ಸಿಂಗ್ ಧೋನಿ 2020 ರಲ್ಲಿ ಸಾಕ್ಷಿ ಧೋನಿ ಮತ್ತು ಅವರ ತಾಯಿ ಶೀಲಾ ಸಿಂಗ್ ಅವರನ್ನು 'ಧೋನಿ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್'ನ ಸಿಇಒ ಮಾಡಿದರು.ಈ ನಿರ್ಧಾರದ ಪರಿಣಾಮ ವ್ಯಾಪಾರದ ಮೇಲೂ ಕಂಡುಬಂದಿದೆ. ಸಾಕ್ಷಿ ಮತ್ತು ಅವರ ತಾಯಿಯ ಪರಿಶ್ರಮದಿಂದ ಪ್ರೊಡಕ್ಷನ್ ಕಂಪನಿ ಸಾಕಷ್ಟು ಪ್ರಗತಿ ಸಾಧಿಸುತ್ತಿದೆ.ಅವರ ಸಾರಥ್ಯದಲ್ಲಿ ಕಂಪನಿಯು ಅನೇಕ ಉತ್ತಮ ಸಾಧನೆಗಳನ್ನು ಸಾಧಿಸಿದೆ. 

ಇದನ್ನೂ ಓದಿ : DGCA ಜಾರಿಗೊಳಿಸಿದ ಈ ನಿಯಮದಿಂದಾಗಿ ಇನ್ನು ಅಗ್ಗವಾಗಲಿದೆ ವಿಮಾನ ಯಾನ !

ಸಾಕ್ಷಿ ಮತ್ತು ಧೋನಿ ಮದುವೆಗೆ ಮುನ್ನ ಶೀಲಾ ಸಿಂಗ್ ಮನೆ ನಿರ್ವಹಣೆ  ಮಾತ್ರ ಮಾಡುತ್ತಿದ್ದರು. ಶೀಲಾ ಸಿಂಗ್ ಪತಿ ಆರ್‌.ಕೆ ಸಿಂಗ್ ಮಹೇಂದ್ರ ಸಿಂಗ್ ಧೋನಿ ಅವರ ತಂದೆಯೊಂದಿಗೆ ಕನೋಯ್ ಗ್ರೂಪ್‌ನ 'Binaguri Tea Company'ಯಲ್ಲಿ ಕೆಲಸ ಮಾಡುತ್ತಿದ್ದರು. ಹೋಮ್ ಮೇಕರ್ ನಿಂದ ಸಿಇಒ ಆಗಿ ಬದಲಾಗುವ ಜವಾಬ್ದಾರಿಯನ್ನು ಶೀಲಾ ಸಿಂಗ್ ಚೆನ್ನಾಗಿ ನಿಭಾಯಿಸಿದ್ದಾರೆ. 

ಶೀಲಾ ಸಿಂಗ್ ಮತ್ತು ಸಾಕ್ಷಿ ಧೋನಿ ಅವರ ಡೈನಾಮಿಕ್ ನಾಯಕತ್ವದಲ್ಲಿ,ಧೋನಿ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ನ ಆಸ್ತಿ ನಾಲ್ಕು ವರ್ಷಗಳಲ್ಲಿ 800 ಕೋಟಿ ರೂ.ಗಿಂತ ಹೆಚ್ಚಾಗಿದೆ.ಸಾಕ್ಷಿ ಧೋನಿ ಪ್ರೊಡಕ್ಷನ್ ಹೌಸ್‌ನಲ್ಲಿ ಬಹುಪಾಲು ಹೊಂದಿದ್ದು, ಈ ವ್ಯವಹಾರದಲ್ಲಿ ಕುಟುಂಬದ ಪಾಲು ಬಲವಾಗಿದೆ. ಧೋನಿ ಎಂಟರ್‌ಟೈನ್‌ಮೆಂಟ್ ಮಹೇಂದ್ರ ಸಿಂಗ್ ಧೋನಿಯವರ ವ್ಯಾಪಾರ ಪೋರ್ಟ್‌ಫೋಲಿಯೊದ ಭಾಗವಾಗಿದೆ.ಈ ಕಂಪನಿಯು ಅವರ 1030 ಕೋಟಿ ರೂಪಾಯಿಗಳ ನಿವ್ವಳ ಮೌಲ್ಯಕ್ಕೆ ಗಣನೀಯ ಕೊಡುಗೆ ನೀಡುತ್ತದೆ.ಶೀಲಾ ಸಿಂಗ್ ಅವರ ನೇತೃತ್ವದಲ್ಲಿ ಕಂಪನಿಯು ನಿರಂತರವಾಗಿ ಬೆಳೆಯುತ್ತಿದೆ.

ಇದನ್ನೂ ಓದಿ : Gold And Silver Price: ಆಭರಣ ಪ್ರಿಯರಿಗೆ ಗುಡ್‌‌ ನ್ಯೂಸ್: ಚಿನ್ನ ಹಾಗೂ ಬೆಳ್ಳಿಯ ಬೆಲೆ ಕುಸಿತ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News