2023ರಲ್ಲಿ ವಾಟ್ಸಾಪ್ ನಲ್ಲಿ ಕಾಲ್ ರೆಕಾರ್ಡಿಂಗ್, ಸಂದೇಶ ಎಡಿಟಿಂಗ್ ಎಲ್ಲವೂ ಸಾಧ್ಯ!

WhatsApp Top Features In 2023: 2023ರಲ್ಲಿ ವಾಟ್ಸಾಪ್ ನಿಂದ ಲಭ್ಯವಾಗಬಹುದಾದ ಟಾಪ್ 5 ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ.

WhatsApp Top Features In 2023: ಪ್ರತಿಯೊಬ್ಬರ ಮನೆ ಮಾತಾಗಿರುವ ಜನಪ್ರಿಯ ಮೆಸ್ಸೆಂಜರ್ ಪ್ಲಾಟ್ಫಾರ್ಮ್ ಆಗಿ ಕಾರ್ಯ ನಿರ್ವಹಿಸುತ್ತಿರುವ ವಾಟ್ಸಾಪ್ ಹೊಸ ವರ್ಷದಲ್ಲಿ ತನ್ನ ಬಳಕೆದಾರರಿಗೆ ಅತ್ಯಾಕರ್ಷಕ ಕೊಡುಗೆಗಳನ್ನು ನೀಡಬಹುದು ಎಂದು ನಿರೀಕ್ಷಿಸಲಾಗಿದೆ. ಇವುಗಳಲ್ಲಿ ಬಳಕೆದಾರರ ಬಹು ದಿನಗಳ ಬೇಡಿಕೆಯಾಗಿರುವ ಕಾಲ್ ರೆಕಾರ್ಡಿಂಗ್, ಸಂದೇಶ ಎಡಿಟ್‌ನಂತಹ ಹಲವು ವೈಶಿಷ್ಟ್ಯಗಳನ್ನು ಬಳಸಲು ಸಾಧ್ಯವಾಗುತ್ತದೆ ಎಂದು ನಂಬಲಾಗಿದೆ. 2023ರಲ್ಲಿ ವಾಟ್ಸಾಪ್ ನಿಂದ ಲಭ್ಯವಾಗಬಹುದಾದ ಟಾಪ್ 5 ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ವಾಟ್ಸಾಪ್ ಕಾಲ್ ರೆಕಾರ್ಡಿಂಗ್: ಹೊಸ ವರ್ಷದಲ್ಲಿ ವಾಟ್ಸಾಪ್ ತನ್ನ ಬಳಕೆದಾರರ ಬಹುದಿನದ ಬೇಡಿಕೆ ಆಗಿರುವ ವಾಟ್ಸಾಪ್ ಕಾಲ್ ರೆಕಾರ್ಡಿಂಗ್ ವೈಶಿಷ್ಟ್ಯವನ್ನು ಪರಿಚಯಿಸಬಹುದು ಎಂದು ಹೇಳಲಾಗುತ್ತಿದೆ.

2 /5

ವಾಟ್ಸಾಪ್ ಮೆಸೇಜ್ ಎಡಿಟಿಂಗ್ : ಹಲವು ಬಾರಿ ವಾಟ್ಸಾಪ್ ನಲ್ಲಿ ಏನನ್ನೂ ಕಳುಹಿಸಲು ಹೋಗಿ ತಪ್ಪಾಗಿ ಬೇರೇನೋ ಟೈಪ್ ಆಗಿರುತ್ತದೆ. ಇಂತಹ ಸಂದರ್ಭದಲ್ಲಿ ಅದನ್ನು ಡಿಲೀಟ್ ಮಾಡಿ ಬೇರೆ ಸಂದೇಶ ಕಳುಹಿಸುವುದರ ಹೊರತಾಗಿ ಬೇರೆ ಆಯ್ಕೆಯೇ ಇಲ್ಲ. ಆದರೆ ಹೊಸ ವರ್ಷದಲ್ಲಿ ವಾಟ್ಸಾಪ್ ಇದಕ್ಕಾಗಿ ಮೆಸೇಜ್ ಎಡಿಟಿಂಗ್ ಆಯ್ಕೆಯನ್ನು ಪರಿಚಯಿಸಬಹುದು ಎಂದು ನಿರೀಕ್ಷಿಸಲಾಗಿದೆ.

3 /5

ವಾಟ್ಸಾಪ್ ಶೆಡ್ಯೂಲಿಂಗ್ ಮೆಸೇಜ್: ಹೊಸ ವರ್ಷದಲ್ಲಿ ವಾಟ್ಸಾಪ್ ಪರಿಚಯಿಸಲಿರುವ ಅತ್ಯಾಕರ್ಷಕ ವೈಶಿಷ್ಟ್ಯಗಳಲ್ಲಿ ಇದೂ ಒಂದು. ಇದರ ಸಹಾಯದಿಂದ ಬಳಕೆದಾರರು ಯಾವುದೇ ಸಂದೇಶಗಳನ್ನು ಶೆಡ್ಯೂಲ್ ಮಾಡಿಡಲು ಸಾಧ್ಯವಾಗುತ್ತದೆ.

4 /5

ವಾಟ್ಸಾಪ್ ಅನ್ಸೆಂಡ್ ಸಂದೇಶ: ಕೆಲವೊಮ್ಮೆ ನಾವು ಯಾರಿಗೋ ಕಳುಹಿಸಬೇಕಾದ ಸಂದೇಶವನ್ನು ತಪ್ಪಾಗಿ ಬೇರೆಯವರಿಗೆ ಕಳುಹಿಸಿರುತ್ತೇವೆ. ಪ್ರಸ್ತುತ  ಬಳಕೆದಾರರು ಅದನ್ನು ಡಿಲೀಟ್ ಮಾಡುವ ಆಯ್ಕೆಯನ್ನು ಹೊಂದಿದ್ದಾರೆ. ಆದರೆ ಮೆಸೇಜ್ ಡಿಲೀಟ್ ಮಾಡಿದ ನಂತರ ಎದುರಿಗಿದ್ದ ವ್ಯಕ್ತಿಗೆ ಮೆಸೇಜ್ ಕಳುಹಿಸಿ ಡಿಲೀಟ್ ಮಾಡಿರುವುದು ಗೊತ್ತಾಗುತ್ತದೆ. ಹೊಸ ವೈಶಿಷ್ಟ್ಯವನ್ನು (ವಾಟ್ಸಾಪ್ ಅನ್ಸೆಂಡ್ ಸಂದೇಶ)  ಪರಿಚಯಿಸಿದ ನಂತರ, ಬಳಕೆದಾರರು ಸಂದೇಶವನ್ನು ಕಳುಹಿಸದ ತಕ್ಷಣ, ಸಂದೇಶವು ಮುಂಭಾಗದ ಚಾಟ್‌ನಲ್ಲಿ ಕಣ್ಮರೆಯಾಗುತ್ತದೆ.

5 /5

ವಾಟ್ಸಾಪ್ ವ್ಯಾನಿಶ್ ಮೋಡ್: ಪ್ರಸ್ತುತ ಇನ್ಸ್ಟಾಗ್ರಾಂ ಮತ್ತು ಫೇಸ್ ಬುಕ್ನಲ್ಲಿ ಲಭ್ಯವಿರುವಂತೆಯೇ 2023ರಲ್ಲಿ ವಾಟ್ಸಾಪ್ ನಲ್ಲಿಯೂ ವ್ಯಾನಿಶ್ ಮೋಡ್ ವೈಶಿಷ್ಟ್ಯ ಲಭ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಈ ವೈಶಿಷ್ಟ್ಯದ ಸಹಾಯದಿಂದ ಸಂಭಾಷಣೆಯ ನಂತರ, ಸಂಪೂರ್ಣ ಚಾಟ್ ಅನ್ನು ಅಳಿಸಲಾಗುತ್ತದೆ. ಇದಲ್ಲದೆ, ಇದು ಚಾಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬಹುದು.