Account Restriction Feature: ವಿಶ್ವದ ಖ್ಯಾತ ಕಿರು ಸಂದೇಶ ರವಾನಿಸುವ ಆಪ್ ಆಗಿರುವ ವಾಟ್ಸ್ ಆಪ್ ಹೊಸ ವೈಶಿಷ್ಟ್ಯವೊಂದರ ಮೇಲೆ ಕೆಲಸ ಮಾಡುತ್ತಿದ್ದು. ಇದರಲ್ಲಿ ತಪ್ಪು ಮಾಡುವ ಬಳಕೆದಾರರು ಕೆಲ ಸಮಯದವರೆಗೆ ಸಂದೇಶ ಕಳುಹಿಸಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ. ಯಾವುದೇ ಒಂದು ಖಾತೆಯನ್ನು ನಿರ್ಬಂಧಿಸಿದರೆ ಕೆಲ ಸಮಯದವರೆಗೆ ಆ ಖಾತೆಯಿಂದ ಯಾವುದೇ ಹೊಸ ಸಂದೇಶ ಕಳುಹಿಸಲು ಸಾಧ್ಯವಿಲ್ಲ. ತಪ್ಪು ಮಾಡಿದವರಿಗೆ ಇದು ಒಂದು ರೀತಿಯ ಶಿಕ್ಷೆ ಎಂದರೆ ತಪ್ಪಾಗಲಾರದು.
WhatsApp On Encryption: ದೆಹಲಿ ಹೈಕೋರ್ಟ್ ನಲ್ಲಿ ಮಹತ್ವದ ವಾದ ಮಂಡಿಸಿರುವ ವಾಟ್ಸ್ ಆಪ್, ಒಂದು ವೇಳೆ ಭಾರತ ತನ್ನ ವಾಟ್ಸ್ ಆಪ್ ನ ಎನ್ಕ್ರಿಪ್ಶನ್ ವೈಶಿಷ್ಟ್ಯವನ್ನು ಕೊನೆಗೊಳಿಸಿದ್ದೆ ಆದಲ್ಲಿ, ಭಾರತದಲ್ಲಿ ಅದು ತನ್ನ ವ್ಯವಹಾರ ಸಂಪೂರ್ಣವಾಗಿ ನಿಲ್ಲಿಸುವುದಾಗಿ ಹೇಳಿದೆ.
Whatapp New Update: WhatsApp ನ ಈ ಹೊಸ ವೈಶಿಷ್ಟ್ಯವು ಬಳಕೆದಾರರಿಗೆ ತುಂಬಾ ಉಪಯುಕ್ತವಾಗಿದೆ ಎಂದು ಸಾಬೀತುಪಡಿಸಬಹುದು.ಇದರೊಂದಿಗೆ ಬಳಕೆದಾರರು ತಮ್ಮ ನೆಚ್ಚಿನ ಜನರ ಸ್ಟೇಟಸ್ ಅನ್ನು ಕಳೆದುಕೊಳ್ಳಲು ಸಾಧ್ಯವಾಗುವುದಿಲ್ಲ. "ನಿಮ್ಮ ನೆಚ್ಚಿನ ಸಂಪರ್ಕಗಳಾಗಿರುವ ಜನರ ಸ್ಟೇಟಸ್ ನವೀಕರಣಗಳ ನೋಟಿಫಿಕೆಶನ್ ಅನ್ನು ಬಹುಶಃ ವಾಟ್ಸಾಪ್ ಮೊದಲು ನೀಡುತ್ತದೆ.
WhatsApp: ಜಗತ್ತಿನ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಶೀಘ್ರದಲ್ಲೇ ತನ್ನ ಬಳಕೆದಾರರಿಗೆ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲಿದೆ. ಇದರ ಸಹಾಯದಿಂದ ಬಳಕೆದಾರರಿಗೆ ಫೋಟೋ ಲೈಬ್ರರಿಯನ್ನು ಪ್ರವೇಶಿಸುವುದು ಇನ್ನೂ ಸುಲಭವಾಗಿಲಿದ್ದು, ಮಾಧ್ಯಮ ಫೈಲ್ಗಳನ್ನು ತಮ್ಮ ಸಂಪರ್ಕಗಳಿಗೆ ಕಳುಹಿಸುವ ಪ್ರಕ್ರಿಯೆಯೂ ಸರಳವಾಗಲಿದೆ.
WhatsApp: ಜನವರಿ 1-31 ರ ನಡುವೆ ಮೆಟಾ ಮಾಲೀಕತ್ವದ ಕಂಪನಿ ವಾಟ್ಸಾಪ್ ಭಾರತದಲ್ಲಿ 6,728,000 ಖಾತೆಗಳನ್ನು ನಿಷೇಧಿಸಿತ್ತು. ಇದೀಗ ಫೆಬ್ರವರಿ ತಿಂಗಳಿನಲ್ಲಿ ಸುಮಾರು 76 ಲಕ್ಷಕ್ಕೂ ಹೆಚ್ಚಿನ ಖಾತೆಗಳನ್ನು ವಾಟ್ಸಾಪ್ ಬ್ಯಾನ್ ಮಾಡಿದೆ ಎಂದು ಹೇಳಲಾಗಿದೆ.
Google Chat Workspace: ಗೂಗಲ್ ಚಾಟ್ ತನ್ನ ಬಳಕೆದಾರರಿಗಾಗಿ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಈ ವೈಶಿಷ್ಟ್ಯವು ಬಳಕೆದಾರರಿಗೆ ವಾಟ್ಸಾಪ್ನಂತಹ ಅನುಭವವನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ. ಯಾವುದೀ ಹೊಸ ವೈಶಿಷ್ಟ್ಯ, ಇದರ ಪ್ರಯೋಜನಗಳೇನು ಎಂದು ತಿಳಿಯೋಣ...
International UPI Payments On WhatsApp: ಇತ್ತೀಚಿನ ದಿನಗಳಲ್ಲಿ ಯುಪಿಐ ಪಾವತಿ ತುಂಬಾ ಜನಪ್ರಿಯವಾಗುತ್ತಿದೆ. ಫೋನ್ ಪೇ, ಗೂಗಲ್ ಪೇ ಗೆ ಟಕ್ಕರ್ ನೀಡಲು ಮುಂದಾಗಿರುವ ವಾಟ್ಸಾಪ್ ಶೀಘ್ರದಲ್ಲೇ ತನ್ನ ಬಳಕೆದಾರರಿಗೆ ಅಂತರರಾಷ್ಟ್ರೀಯ ಯುಪಿಐ ಪಾವತಿ ಸೌಲಭ್ಯವನ್ನು ನೀಡಲಿದೆ ಎಂದು ತಿಳಿದುಬಂದಿದೆ.
WhatsApp Feature: ಪ್ರಸಿದ್ದ ಮೆಸೇಜಿಂಗ್ ಪ್ಲಾಟ್ಫಾರ್ಮ್ ಆಗಿರುವ ವಾಟ್ಸಾಪ್ ತನ್ನ ಬಳಕೆದಾರರಿಗಾಗಿ ಹೊಸ ಗೌಪ್ಯತೆ ವೈಶಿಷ್ಟ್ಯವನ್ನು ಹೊರತರಲಿದೆ. ಯಾವುದೀ ಹೊಸ ವೈಶಿಷ್ಟ್ಯ, ಏನಿದರ ಪ್ರಯೋಜನ ಎಂದು ತಿಳಿಯೋಣ...
WhatsApp: ವಾಟ್ಸಾಪ್ ಚಾಟ್ ಪಟ್ಟಿಯಲ್ಲಿ ಇಂಟರ್ಫೇಸ್ ಅನ್ನು ಮರುವಿನ್ಯಾಸಗೊಳಿಸುತ್ತಿದ್ದು, ಶೀಘ್ರದಲ್ಲೇ ಬಳಕೆದಾರರಿಗೆ ಚಾಟ್ ಪಟ್ಟಿಯಲ್ಲಿ ಹೊಸ ಸರ್ಚ್ ಬಾರ್ ಸೌಲಭ್ಯ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ.
WhatsApp UPI QR Code Scan Feature: ಶೀಘ್ರದಲ್ಲಿಯೇ ವಾಟ್ಸ್ ಆಪ್ ಬಳಕೆದಾರರಿಗೆ ಹೊಸ ಸೌಲಭ್ಯ ಲಭಿಸಲಿದೆ. ಇದು ಚಾಟ್ ಪಟ್ಟಿಯಲ್ಲಿ ಬಳಕೆದಾರರಿಗೆ UPI QR ಕೋಡ್ ಅನ್ನು ಸ್ಕ್ಯಾನ್ (Whatsapp upi qr code scan feature android) ಮಾಡಲು ಅನುಮತಿಸಲಿದೆ. ಇದು ಅವರ ಸಮಯವನ್ನು ಉಳಿಸುತ್ತದೆ ಮತ್ತು ಹಣ ಮಾಡುವುದು ಮೊದಲಿಗಿಂತ ಹೆಚ್ಚು ಸುಲಭವಾಗಲಿದೆ (Technology News In Kannada).
WhatsApp app lock feature : ಈ ವೈಶಿಷ್ಟ್ಯವು ಪ್ರಸ್ತುತ Android ಫೋನ್ಗಳನ್ನು ಬಳಸುವವರಿಗೆ ಮಾತ್ರ ಟೆಸ್ಟಿಂಗ್ ಹಂತದಲ್ಲಿದೆ. ಈ ವೈಶಿಷ್ಟ್ಯವನ್ನು ಬಳಸಲು, WhatsAppನ ಇತ್ತೀಚಿನ ಅಪ್ಡೇಟ್ ಅನ್ನು ಡೌನ್ಲೋಡ್ ಮಾಡಬೇಕಾಗುತ್ತದೆ.
WhatsApp Investment Scam: ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ನಲ್ಲಿ ವಂಚನೆಗಳು ನಿರಂತರವಾಗಿ ಹೆಚ್ಚಾಗುತ್ತಿವೆ. ವಾಟ್ಸಾಪ್ನಲ್ಲಿ ಒಂದೆಡೆ ಉಡುಗೊರೆ ಹೆಸರಿನಲ್ಲಿ ವಂಚನೆಗಳು ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಹೂಡಿಕೆ ಹೆಸರಿನಲ್ಲಿಯೂ ವಂಚನೆಗಳು ಹೆಚ್ಚಾಗುತ್ತಿವೆ.
WhatsApp Feature: ಫೋನ್ನಲ್ಲಿ ನಂಬರ್ ಬ್ಲಾಕ್ ಮಾಡುವಂತೆಯೇ ವಾಟ್ಸಾಪ್ನಲ್ಲಿಯೂ ಸಹ ನಂಬರ್ ಬ್ಲಾಕ್ ಮಾಡುವ ಸೌಲಭ್ಯವಿದೆ. ಅಷ್ಟೇ ಅಲ್ಲ, ಯಾರಾದರೂ ನಿಮ್ಮ ವಾಟ್ಸಾಪ್ ನಂಬರ್ ಅನ್ನು ಬ್ಲಾಕ್ ಮಾಡಿದ್ದಾರಾ ಎಂಬುದನ್ನೂ ಕೂಡ ನೀವು ಸುಲಭವಾಗಿ ಪತ್ತೆಹಚ್ಚಬಹುದು.
ಗ್ರಾಮೀಣ ವಾಸಿಗಳು, ಸಾರ್ವಜನಿಕರು ತಮ್ಮ ಸಮಸ್ಯೆ, ಕರೆಗಳಿಗೆ ಕಿವಿ ಆಗಲು ರಾಜ್ಯ ಸರಕಾರ ಇತ್ತಿಚೆಗೆ ಪಂಚಮಿತ್ರ ಹೊಸ ಪೋಸ್ಟರ್ ವಾಟ್ಸ್ಆ್ಯಪ್ ಬಿಡುಗಡೆ ಮಾಡಿದ್ದು, ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಇಂದು ಮಧ್ಯಾಹ್ನ, ಪಂಚಮಿತ್ರ ಕುರಿತ ಪೋಸ್ಟರ್, ಬ್ಯಾನರ್ ಪ್ರಚಾರ ಸಾಮಗ್ರಿಗಳನ್ನು ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ ಬಿಡುಗಡೆ ಮಾಡಿದರು.
WhatsApp New Feature: ಶೀಘ್ರದಲ್ಲಿಯೇ ವಾಟ್ಸ್ ಆಪ್ ಬಳಕೆದಾರರಿಗೆ ಅವರ ನೆಚ್ಚಿನ ವೈಶಿಷ್ಟ್ಯ ಸಿಗಲಿದೆ. ಇದರಿಂದ ಅವರು ತಮ್ಮ ನೆಚ್ಚಿನ ಸಂಪರ್ಕಗಳಿಗೆ ತ್ವರಿತ ಮತ್ತು ಸುಲಭ ಕರೆಗಳನ್ನು ಮಾಡಲು ಸಾಧ್ಯವಾಗಲಿದೆ. ಅರ್ಥಾತ್ ಬಳಕೆದಾರರಿಗೆ Favorite Feature ಸಿಗಲಿದೆ. (Technology News In Kannada)
WhatsApp Trick: ಈ ತಂತ್ರಜ್ಞಾನ ಯುಗದಲ್ಲಿ ಆನ್ಲೈನ್ ವಂಚನೆಗಳ ಪ್ರಕರಣಗಳು ನಿರಂತರವಾಗಿ ಹೆಚ್ಚಾಗುತ್ತಿದೆ. ಇದರೊಂದಿಗೆ ಹ್ಯಾಕಿಂಗ್ ವಂಚನೆ ಪ್ರಕರಣಗಳೂ ಕೂಡ ಆಗಾಗ್ಗೆ ಮುನ್ನಲೆಗೆ ಬರುತ್ತಲೇ ಇರುತ್ತವೆ. ನೀವು ನಿಮ್ಮ ವಾಟ್ಸಾಪ್ ಖಾತೆಯನ್ನು ಹ್ಯಾಕರ್ಗಳಿಂದ ರಕ್ಷಿಸಲು ಒಂದೇ ಒಂದು ಸೆಟ್ಟಿಂಗ್ ಬದಲಾಯಿಸಿದರೆ ಅಷ್ಟೇ ಸಾಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.